Just In
- 1 hr ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 3 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 4 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 4 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- News
Infographics: ಕೇಂದ್ರ ಬಜೆಟ್ನಲ್ಲಿ ಯಾವ ಯೋಜನೆಗಳಿಗೆ ಎಷ್ಟೇಷ್ಟು ಅನುದಾನ ಘೋಷಣೆ ಆಗಿದೆ?
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ 'ರೆಡ್ಮಿ 70 ಇಂಚಿನ' ಸ್ಮಾರ್ಟ್‌ಟಿವಿ ಸ್ವಾಗತಕ್ಕೆ ದಿನಾಂಕ ಫಿಕ್ಸ್!
ಜನಪ್ರಿಯ ಶಿಯೋಮಿ ಕಂಪನಿಯು ಇತ್ತೀಚಿಗೆ ಮೊದಲ ಬಾರಿಗೆ 'ರೆಡ್ಮಿ' ಹೆಸರಿನಡಿ ಹೊಸದಾಗಿ 70 ಇಂಚಿನ ಸ್ಮಾರ್ಟ್‌ಟಿವಿಯೊಂದನ್ನು ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಟಿವಿಯು 4k HDR ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರುವ ಜೊತೆಗೆ ಅಗ್ಗದ ಬೆಲೆಯಲ್ಲಿ ರಿಲೀಸ್ ಆಗಿ ಗ್ರಾಹಕರ ಗಮನ ಸೆಳೆದಿತ್ತು. ಆ ರೆಡ್ಮಿ 70 ಇಂಚಿನ ಹೊಸ ಸ್ಮಾರ್ಟ್‌ಟಿವಿ ಇದೀಗ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ದಿನಾಂಕ ನಿಗದಿ ಮಾಡಿಕೊಂಡಿದೆ.

ಹೌದು, ಶಿಯೋಮಿ ಕಂಪನಿಯ ಇದೇ ಸೆಪ್ಟಂಬರ್ 17ರಂದು ಬೆಂಗಳೂರಿನಲ್ಲಿ ನಡೆಯುವ Smarter Living 2020 ಕಾರ್ಯಕ್ರಮದಲ್ಲಿ ತನ್ನ 'ರೆಡ್ಮಿ 70' ಸ್ಮಾರ್ಟ್‌ಟಿವಿ ಬಿಡುಗಡೆ ಮಾಡಲಿದೆ ಎನ್ನುವ ಬಗ್ಗೆ ಮುನ್ಸೂಚನೆಯನ್ನು ನೀಡಿದೆ. ತೆಳ್ಳನೆಯ ಬೆಜಲ್ ಹೊಂದಿರುವ ಸ್ಮಾರ್ಟ್‌ಟಿವಿ ಜೊತೆಗೆ Smarter Living 2020 ಎಂದು ಬರೆದಿರುವ ಚಿತ್ರವೊಂದನ್ನು ಕಂಪನಿಯು ಟೀಸ್ ಮಾಡಿದ್ದು, ಶಿಯೋಮಿ ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿಸಿದೆ. ಬಹುಶಃ ರೆಡ್ಮಿ 70 ಇಂಚಿನ ಸ್ಮಾರ್ಟ್‌ಟಿವಿಯೇ ಇರಬಹುದು ಎನ್ನಲಾಗಿದೆ.

ರೆಡ್ಮಿಯ ಹೊಸ ಸ್ಮಾರ್ಟ್‌ಟಿವಿಯು 70 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ HDR ಬೆಂಬಲ್, 4K ರೆಸಲ್ಯೂಶನ್, ಕ್ವಾಡ್‌ಕೋರ್ ಪ್ರೊಸೆಸರ್ ಒಳಗೊಂಡಂತೆ ಕಂಪನಿಯ ಪಾಚ್‌ವಾಲ್ ಇಂಟರ್‌ಫೇಸ್ (patchwall interface) ಸೌಲಭ್ಯಗಳನ್ನು ಕಾಣಬಹುದಾಗಿದೆ. ಹಾಗೆಯೇ 2GB RAM ಸಾಮರ್ಥ್ಯವನ್ನು ಪಡೆದಿದ್ದು, ಆಂತರಿಕವಾಗಿ 16GB ಸ್ಟೋರೇಜ್ ಸ್ಥಳಾವಕಾಶವನ್ನು ಸಹ ಪಡೆದುಕೊಂಡಿದೆ.

ರೆಡ್ಮಿಯ ಈ ಟಿವಿಯಲ್ಲಿ ಕಂಪನಿಯು ಡಿಸ್‌ಪ್ಲೇಯೊಂದಿಗೆ ಸೌಂಡ್‌ಗೂ ಹೆಚ್ಚಿನ ಆದ್ಯತೆ ನೀಡಿದ್ದು ಇದರೊಂದಿಗೆ 'ಡಾಲ್ಬಿ ಆಡಿಯೊ' (Dolby Audio) ಮತ್ತು (DTS HD) ಡಿಟಿಎಸ್ ಹೆಚ್‌ಡಿ ಆಡಿಯೊಗಳ ಸೌಲಭ್ಯಗಳ ಬೆಂಬಲ ಒಳಗೊಂಡಿದೆ. ಬ್ಲೂಟೂತ್ ವಾಯಿಸ್ ರಿಮೋಟ್ ಕಂಟ್ರೋಲ್ ಸೌಲಭ್ಯವನ್ನು ಪಡೆದಿದ್ದು, ಜೊತೆಗೆ ವೇಗದ ಪ್ರೊಜೆಕ್ಷನ್‌ಗಾಗಿ ಫೋನ್ ಸ್ಕ್ಯಾನ್‌ಕೋಡ್ ಆಯ್ಕೆಯನ್ನು ನೀಡಲಾಗಿದೆ.

ರೆಡ್ಮಿಯ ಹೊಸ ಸ್ಮಾರ್ಟ್‌ಟಿವಿಯಲ್ಲಿ ಮೂರು ಎಚ್‌ಡಿಎಮ್‌ಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಆಯ್ಕೆಗಳನ್ನು ಕನೆಕ್ಟಿವಿಟಿಗಾಗಿ ನೀಡಲಾಗಿದೆ. ಹಾಗೆಯೇ ಡ್ಯುಯಲ್ ವೈಫೈ ಆಯ್ಕೆ, ಬ್ಲೂಟೂತ್ 4.2 ಕನೆಕ್ಟರ್, AV ಇನ್‌ಪುಟ್ ಸೌಲಭ್ಯಗಳನ್ನು ನೀಡಲಾಗಿದೆ. ಟಿವಿಯನ್ನು ಗ್ರಾಹಕರು ವಾಲ್ ಮೌಂಟೆಡ್ ಮತ್ತು ಟೇಬಲ್‌ಟಾಪ್ ಮಾದರಿಯಲ್ಲಿಯೂ ಇಡಬಹುದಾಗದ ಆಯ್ಕೆಯನ್ನು ಹೊಂದಿದೆ.

ಚೀನಾದಲ್ಲಿ ರೆಡ್ಮಿ 70 ಸ್ಮಾರ್ಟ್‌ಟಿವಿಯ ಬೆಲೆಯು CNY 3,799 ಆಗಿದ್ದು, ಭಾರತದಲ್ಲಿ ಅಂದಾಜು 38,000ರೂ.ಗಳು ಆಗಿರಲಿದೆ. ಇದೇ ಸೆಪ್ಟಂಬರ್ 17 ರಂದು ದೇಶಿಯ ಮಾರುಕಟ್ಟೆಗೆ ಎಂಟ್ರಿಕೊಡಲಿದೆ ಎನ್ನಲಾಗಿದೆ. ಹಾಗೆಯೇ ಶಿಯೋಮಿಯ ಮಿ 4A Pro (49 ಇಂಚಿನ), ಮಿ ಟಿವಿ 4X Pro (55 ಇಂಚಿನ) ಮತ್ತು ಮಿ ಟಿವಿ 4 Pro (55ಇಂಚಿನ) ಸ್ಮಾರ್ಟ್‌ಟಿವಿಗಳು ಅದೇ ಅಕ್ಟೊಬರ್‌ನಲ್ಲಿ ಆಂಡ್ರಾಯ್ಡ್ ಪೈ ಓಎಸ್‌ಗೆ ಅಪ್‌ಗ್ರೇಡ್ ಆಗಲಿವೆ.
There is more to it than what you just see.😮#SmarterLiving 2020 will bring to you what you have been waiting for & more.
— Mi India for #MiFans (@XiaomiIndia) September 5, 2019
Comment with #SmarterLiving and tell us what are we launching on September 17th.🧐
Stay tuned as we drop more hints soon. pic.twitter.com/7unlqMYNo3
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470