Home
ಸುದ್ದಿಜಾಲ

Redmi SmartTV: ಹೊಸದಾಗಿ ಲಾಂಚ್‌ ಆದ ಈ ರೆಡ್ಮಿ ಸ್ಮಾರ್ಟ್‌ಟಿವಿಗೆ ಜನ ಕ್ಯೂ ನಿಲ್ಲಬಹುದೇನೋ? 32GB ಸ್ಟೋರೇಜ್.. ಬಜೆಟ್ ಬೆಲೆ

ರೆಡ್ಮಿ ಸ್ಮಾರ್ಟ್‌ಫೋನ್‌ಗಳು (Redmi smartphone) ಈಗಾಗಲೇ ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಫೋನ್‌ಗಳಾಗಿವೆ. ಅದರಲ್ಲೂ ಹಲವಾರು ಧರಿಸಬಹುದಾದ ಸ್ಮಾರ್ಟ್‌ ಡಿವೈಸ್‌ಗಳನ್ನು ಈಗಾಗಲೇ ರೆಡ್ಮಿ ಪರಿಚಯಿಸಿದ್ದು, ಈ ಮೂಲಕ ತನ್ನದೇ ಆದ ಗ್ರಾಹಕ ವಲಯವನ್ನು ಪಡೆದುಕೊಂಡಿದೆ. ಈ ನಡುವೆ ರೆಡ್ಮಿ ಸ್ಮಾರ್ಟ್‌ಟಿವಿ (Redmi SmartTV) ಜಾಗತಿಕವಾಗಿ ಬಹಳ ಸದ್ದು ಮಾಡುತ್ತಿದೆ.

ಹೌದು, ರೆಡ್ಮಿ ಆಗಾಗ್ಗೆ ಹೊಸ ಹೊಸ ಸ್ಮಾರ್ಟ್‌ಟಿವಿಗಳನ್ನು ಅತ್ಯುತ್ತಮ ಫೀಚರ್ಸ್‌ನೊಂದಿಗೆ ಲಾಂಚ್‌ ಮಾಡಿಕೊಂಡು ಬರುತ್ತಿದೆ. ಅದರಂತೆ ಈ ವರ್ಷದ ಆರಂಭದಲ್ಲಿ ರೆಡ್ಮಿ ಟಿವಿ A32, A43 ಮತ್ತು A65 ಅನ್ನು ಲಾಂಚ್ ಮಾಡಿತ್ತು. ಬಳಿಕ ಕಳೆದ ಆಗಸ್ಟ್‌ನಲ್ಲಿ ರೆಡ್ಮಿ ಟಿವಿ A50 2024 ಮಾದರಿಯನ್ನು ಬಿಡುಗಡೆ ಮಾಡಿತ್ತು. ಈಗ ರೆಡ್ಮಿ ಟಿವಿ A75 2024 (Redmi TV A75 2024) ಯನ್ನು ಪರಿಚಯಿಸಲಾಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ಬಗ್ಗೆ ತಿಳಿಯೋಣ ಬನ್ನಿ.

ಹೊಸದಾಗಿ ಲಾಂಚ್‌ ಆದ ಈ ರೆಡ್ಮಿ ಸ್ಮಾರ್ಟ್‌ಟಿವಿಗೆ ಜನ ಕ್ಯೂ ನಿಲ್ಲಬಹುದೇನೋ?...

ರೆಡ್ಮಿ ಟಿವಿ A75 2024 ಸ್ಮಾರ್ಟ್‌ಟಿವಿ: ಈ ಸ್ಮಾರ್ಟ್‌ಟಿವಿ ಅಂದರೆ ಈ ಹೊಸ 75 ಇಂಚಿನ 4K ಅಲ್ಟ್ರಾ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್‌, ಹೆಚ್‌ಡಿಆರ್‌ ಬೆಂಬಲ ಮತ್ತು ಉತ್ತಮ ಭದ್ರತಾ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಈ ಸ್ಮಾರ್ಟ್ ಟಿವಿಯ ಡಿಸ್‌ಪ್ಲೇ 1.07 ಬಿಲಿಯನ್ ಬಣ್ಣಗಳನ್ನು ನೀಡಲಿದ್ದು, ಈ ಮೂಲಕ ನೀವು ಥಿಯೇಟರ್ ಅನುಭವವನ್ನು ಪಡೆದುಕೊಳ್ಳಬಹುದು.

ಇದರೊಂದಿಗೆ ಡಾಲ್ಬಿ ಆಡಿಯೊ ಮತ್ತು ಟಿಡಿಎಸ್ ಸೇರಿದಂತೆ ವಿವಿಧ ಆಡಿಯೊ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಇದರಲ್ಲಿರುವ 20 ವ್ಯಾಟ್ ಸ್ಪೀಕರ್‌ ನಿಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗಲಿದೆ. ಅಂದರೆ ನೀವು ಸ್ಮಾರ್ಟ್ ಟಿವಿಯಲ್ಲಿ ಅತ್ಯುತ್ತಮ ಆಡಿಯೋ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಅದೆಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಟಿವಿ ವಿನ್ಯಾಸದಲ್ಲಿ ಬಹಳಷ್ಟು ವಿಶೇಷ ಎನಿಸಿಕೊಂಡಿದೆ.

ಇನ್ನುಳಿದಂತೆ ಈ ಟಿವಿ ಶಕ್ತಿಶಾಲಿ ಕ್ವಾಡ್-ಕೋರ್ A35 ಚಿಪ್‌ (Quad-core A35) ನ ಬಲ ಹೊಂದಿದ್ದು, ಚಿಪ್ ಸುಧಾರಿತ ಕಾರ್ಯಕ್ಷಮತೆಯನ್ನು ನೀಡಲಿದೆ. ಈ ಮೂಲಕ ಗೇಮಿಂಗ್‌ ಪ್ರಿಯರು ಸಹ ಈ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದು. ಗೇಮರ್‌ಗಳಿಗೆ ಅವಶ್ಯಕವಾಗಿರುವ ಹಲವಾರು ಫೀಚರ್ಸ್‌ ಆಯ್ಕೆಯನ್ನು ಈ ಸ್ಮಾರ್ಟ್‌ಟಿವಿ ನೀಡಲಿದೆ. ಹಾಗೆಯೇ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, ಯೂಟ್ಯೂಬ್ ಮತ್ತು ನೆಟ್‌ಫ್ಲಿಕ್ಸ್ (YouTube and Netflix) ಸೇರಿದಂತೆ ವಿವಿಧ ಆಪ್‌ಗಳಿಗೆ ಈ ಟಿವಿ ಬೆಂಬಲ ನೀಡಲಿದೆ.

ಇದೆಲ್ಲಕ್ಕಿಂತ ಮಿಗಿಲಾಗಿ ಈ ಟಿವಿ ವಾಯ್ಸ್‌ ಅಸಿಸ್ಟೆಂಟ್‌, ಕ್ರೋಕ್ಯಾಸ್ಟ್ ಸೇರಿದಂತೆ ಅದ್ಭುತ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಇದರೊಂದಿಗೆ ನೀಡಲಾಗುವ ಸ್ಮಾರ್ಟ್ ರಿಮೋಟ್‌ ಮತ್ತಷ್ಟು ಹೊಸ ಅನುಭವ ನೀಡಲಿದೆ. ಅಂದರೆ ಈ ಸ್ಮಾರ್ಟ್ ರಿಮೋಟ್ ಯೂಟ್ಯೂಬ್‌, ನೆಟ್‌ಫ್ಲಿಕ್ಸ್‌ ಗಾಗಿ ಶಾರ್ಟ್ ಕಟ್ ಕೀ ಆಯ್ಕೆ ನೀಡಲಾಗಿದೆ. ರಿಮೋಟ್ ಕ್ವಿಕ್ ವೇಕ್ ಫೀಚರ್ಸ್‌ ಆಯ್ಕೆ ಸಹ ಇದ್ದು, ಐದು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಟಿವಿಯನ್ನು ಆನ್ ಮಾಡಲು ಇದು ಸಹಾಯ ಮಾಡುತ್ತದೆ.

ಈ ಸ್ಮಾರ್ಟ್‌ಟಿವಿ ವೈರ್‌ಲೆಸ್ ಸಂಪರ್ಕ ಆಯ್ಕೆಗಳನ್ನು ಪಡೆದುಕೊಂಡಿದೆ. ಅಂದರೆ ಡ್ಯುಯಲ್-ಬ್ಯಾಂಡ್ ವೈ ಫೈ ಮತ್ತು ಬ್ಲೂಟೂತ್ ಆವೃತ್ತಿ V5.0 ಅನ್ನು ಹೊಂದಿದ್ದು, ಮಿರರ್‌ ಕಾಸ್ಟ್‌ ಆಪ್‌, ಆಟೋ ಲೋ ಲೇಟೆನ್ಸಿ ಮೋಡ್‌ನಂತಹ ವಿಶೇಷ ಪೀಚರ್ಸ್‌ ಅನ್ನು ಈ ಟಿವಿ ಹೊಂದಿದೆ. ಜೊತೆಗೆ ಹೆಚ್‌ಡಿಎಮ್‌ಐ ಪೋರ್ಟ್, ಎರಡು ಯುಎಸ್‌ಬಿ 2.0, AV, 3.5mm ಹೆಡ್‌ಫೋನ್ ಜ್ಯಾಕ್, ಎಥರ್ನೆಟ್, ಆಂಟೆನಾ ಪೋರ್ಟ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ.

ಹೊಸದಾಗಿ ಲಾಂಚ್‌ ಆದ ಈ ರೆಡ್ಮಿ ಸ್ಮಾರ್ಟ್‌ಟಿವಿಗೆ ಜನ ಕ್ಯೂ ನಿಲ್ಲಬಹುದೇನೋ?...

ರೆಡ್ಮಿ ಟಿವಿ A75 2024 ಸ್ಮಾರ್ಟ್‌ಟಿವಿ ಬೆಲೆ ಹಾಗೂ ಲಭ್ಯತೆ: ಈ ಹೊಸ ರೆಡ್ಮಿ ಸ್ಮಾರ್ಟ್‌ಟಿವಿಗೆ 3099 ಯುವಾನ್ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ಇದಕ್ಕೆ ಭಾರತದಲ್ಲಿ 35,400 ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಇದನ್ನು ಚೀನಾದಲ್ಲಿ ಮಾತ್ರ ಲಾಂಚ್‌ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜಾಗತಿಕವಾಗಿ ಈ ಸ್ಮಾರ್ಟ್‌ಟಿಟಿ ಲಭ್ಯ ಇರಲಿದೆ ಎಂದು ಹೇಳಲಾಗಿದೆ. ಪರಿಣಾಮ ಭಾರತದಲ್ಲಿ ಇದರ ಬೆಲೆಯಲ್ಲಿ ವ್ಯತ್ಯಾಸ ಆಗಬಹುದು.

Best Mobiles in India

English summary
Redmi TV A75 2024 Smart TV has been unveiled. This smart TV has a 75-inch 4K Ultra HD display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+