Just In
Don't Miss
- News
Karnataka assembly election 2023: ಮೂಲ ಕಾಂಗ್ರೆಸ್ಸಿಗರನ್ನು ಕಾಯುವುದೇ ನನ್ನ ಕೆಲಸ: ವೀರಪ್ಪ ಮೊಯ್ಲಿ
- Sports
Ind vs Aus Test: ರೋಹಿತ್ ಶರ್ಮಾ ನಾಯಕತ್ವವನ್ನು ನಿರ್ಧರಿಸಲಿವೆ ಮುಂದಿನ 5 ಟೆಸ್ಟ್ ಪಂದ್ಯಗಳು
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಲೀಸ್ ಆಯ್ತು 'ರೆಡ್ಮಿ'ಯ ಹೊಸ 70 ಇಂಚಿನ ಸ್ಮಾರ್ಟ್‌ಟಿವಿ!
ಬಜೆಟ್ ಬೆಲೆಯಲ್ಲಿ ಗ್ಯಾಜೆಟ್ ಉತ್ಪನ್ನಗಳನ್ನು ಪರಿಚಯಿಸಿ ಈಗಾಗಲೇ 'ಶಿಯೋಮಿ' ತನ್ನ ಗ್ರಾಹಕರ ಬಳಗವನ್ನು ಹೆಚ್ಚಿಸಿಕೊಂಡಿದೆ. ಕಂಪನಿಯು ಮೊದಲ ಬಾರಿಗೆ ತನ್ನ 'ರೆಡ್ಮಿ' ಸಬ್‌ಬ್ರ್ಯಾಂಡ್‌ನಡಿ ಹೊಸದಾಗಿ 70 ಇಂಚಿನ ಸ್ಮಾರ್ಟ್‌ಟಿವಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಟಿವಿಯು 4k HDR ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರುವ ಜೊತೆಗೆ ಗ್ರಾಹಕ ಸ್ನೇಹಿಬೆಲೆಯಲ್ಲಿ ಬಿಡುಗಡೆಯಾಗಿದೆ.

ಹೌದು, ಶಿಯೋಮಿ ಕಂಪನಿಯು ತನ್ನ ಬಹುನಿರೀಕ್ಷಿತ 'ರೆಡ್ಮಿ ನೋಟ್ 8', 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್, 'ರೆಡ್ಮಿಬುಕ್ 14' ಲ್ಯಾಪಟಾಪ್ ಮತ್ತು 70 ಇಂಚಿನ 'ರೆಡ್ಮಿ ಸ್ಮಾರ್ಟ್‌ಟಿವಿ'ಯನ್ನು ಇಂದು (ಅಗಷ್ಟ್ 29) ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದೇ ಸೆಪ್ಟಂಬರ್ 3ರಂದು ಚೀನಾದಲ್ಲಿ ಮಾರಾಟ ಆರಂಭಿಸಲಿರುವ ಈ ಸ್ಮಾರ್ಟ್‌ಟಿವಿಯು ದೇಶಿಯ ಗ್ರಾಹಕರಲ್ಲಿಯೂ ಭಾರೀ ಕುತೂಹಲ ಹುಟ್ಟುಹಾಕಿದೆ.

ರೆಡ್ಮಿಯ ಹೊಸ ಸ್ಮಾರ್ಟ್‌ಟಿವಿಯು 70 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ HDR ಬೆಂಬಲ್, 4K ರೆಸಲ್ಯೂಶನ್, ಕ್ವಾಡ್‌ಕೋರ್ ಪ್ರೊಸೆಸರ್ ಒಳಗೊಂಡಂತೆ ಕಂಪನಿಯ ಪಾಚ್‌ವಾಲ್ ಇಂಟರ್‌ಫೇಸ್(patchwall interface) ಸೌಲಭ್ಯಗಳನ್ನು ಕಾಣಬಹುದಾಗಿದೆ. ಹಾಗೆಯೇ 2GB RAM ಸಾಮರ್ಥ್ಯವನ್ನು ಪಡೆದಿದ್ದು, ಆಂತರಿಕವಾಗಿ 16GB ಸ್ಟೋರೇಜ್ ಸ್ಥಳಾವಕಾಶವನ್ನು ಸಹ ಪಡೆದುಕೊಂಡಿದೆ.

ಈ ಟಿವಿಯಲ್ಲಿ ಕಂಪನಿಯು ಡಿಸ್‌ಪ್ಲೇಯೊಂದಿಗೆ ಸೌಂಡ್‌ಗೂ ಹೆಚ್ಚಿನ ಆದ್ಯತೆ ನೀಡಿದ್ದು, ಈ ಸ್ಮಾರ್ಟ್‌ಟಿವಿಯು ಡಾಲ್ಬಿ ಆಡಿಯೊ (Dolby Audio) ಮತ್ತು (DTS HD) ಡಿಟಿಎಸ್ ಹೆಚ್‌ಡಿ ಆಡಿಯೊಗಳ ಬೆಂಬಲ ಒಳಗೊಂಡಿದೆ. ಬ್ಲೂಟೂತ್ ವಾಯಿಸ್ ರಿಮೋಟ್ ಕಂಟ್ರೋಲ್ ಸೌಲಭ್ಯವನ್ನು ಪಡೆದಿದ್ದು, ಜೊತೆಗೆ ವೇಗದ ಪ್ರೊಜೆಕ್ಷನದಗಾಗಿ ಫೋನ್ ಸ್ಕ್ಯಾನ್‌ಕೋಡ್ ಆಯ್ಕೆಯನ್ನು ನೀಡಲಾಗಿದೆ.
ರೆಡ್ಮಿಯ ಹೊಸ ಸ್ಮಾರ್ಟ್‌ಟಿವಿಯು ಮೂರು ಎಚ್‌ಡಿಎಮ್‌ಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಕನೆಕ್ಟಿವಿಟಿಗಾಗಿ ನೀಡಲಾಗಿದ್ದು, ಹಾಗೆಯೇ ಡ್ಯುಯಲ್ ವೈಫೈ ಆಯ್ಕೆ, ಬ್ಲೂಟೂತ್ 4.2 ಕನೆಕ್ಟರ್, AV ಇನ್‌ಪುಟ್ ಸೌಲಭ್ಯಗಳನ್ನು ನೀಡಲಾಗಿದೆ. ಟಿವಿಯನ್ನು ಗ್ರಾಹಕರು ವಾಲ್ ಮೌಂಟೆಡ್ ಮತ್ತು ಟೇಬಲ್‌ಟಾಪ್ ಮಾದರಿಯಲ್ಲಿಯೂ ಇಡಬಹುದಾಗದ ಆಯ್ಕೆಯನ್ನು ಹೊಂದಿದೆ.
ಸದ್ಯ ಚೀನಾದಲ್ಲಿ ರಿಲೀಸ್ ಆಗಿರುವ 70 ಇಂಚಿನ ರೆಡ್ಮಿ ಸ್ಮಾರ್ಟ್‌ಟಿವಿಯ ಬೆಲೆಯು CNY 3,799(ಅಂದಾಜು 38,000ರೂ) ಆಗಿದ್ದು, ಇದೇ ಸೆಪ್ಟಂಬರ್ 3 ರಂದು ಚೀನಾದಲ್ಲಿ ಮೊದಲ ಸೇಲ್ ಶುರುವಾಗಲಿದೆ. ಹಾಗೆಯೇ ಇಂದು ರಿಲೀಸ್ ಆಗಿರುವ ಶಿಯೋಮಿಯ ರೆಡ್ಮಿ ನೋಟ್ 8, ರೆಡ್ಮಿ ನೋಟ್ 8 ಪ್ರೊ ಮತ್ತು ರೆಡ್ಮಿಬುಕ್ ಲ್ಯಾಪಟಾಪ್ ಸಹ ಗ್ರಾಹಕರನ್ನು ಆಕರ್ಷಿಸಿವೆ.

ಬೆಲೆ ಇಳಿಕೆ ಕಂಡ 'ನೋಕಿಯಾ 8.1' ಸ್ಮಾರ್ಟ್‌ಫೋನ್!
ವಿಶ್ವದಲ್ಲಿಯೇ ಜನಪ್ರಿಯತೆ ಪಡೆದಿರುವ 'ನೋಕಿಯಾ' ಕಂಪನಿಯ ಆಂಡ್ರಾಯ್ಡ್ ಓಎಸ್ ಮಾದರಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಕಳೆದ ವರ್ಷ ರಿಲೀಸ್ ಮಾಡಿದ್ದ, 'ನೋಕಿಯಾ 8.1' ಭಾರತದ ಮಾರುಕಟ್ಟೆಯಲ್ಲಿ ಅಬ್ಬರಿಸಿತ್ತು. ಈಗ ವಿಷಯ ಏನೆಂದರೆ ದೇಶಿಯ ಮಾರುಕಟ್ಟೆಯಲ್ಲಿ 'ನೋಕಿಯಾ 8.1' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಕುಸಿತ ಆಗಿದ್ದು, ಬಜೆಟ್ ಬೆಲೆಯಲ್ಲಿ ದೊರೆಯಲಿದೆ.
ಹೌದು, ನೋಕಿಯಾ ಕಂಪನಿಯು ಅಧಿಕೃತವಾಗಿ ತನ್ನ 'ನೋಕಿಯಾ 8.1' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಈ ಸ್ಮಾರ್ಟ್‌ಫೋನ್ 4GB RAM + 64GB ಸ್ಟೋರೇಜ್ ವೇರಿಯಂಟ್ ಆರಂಭದಲ್ಲಿ 26,999ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿತ್ತು. ಆದ್ರೆ ಈಗ ಬೆಲೆ ಇಳಿಕೆಯಿಂದಾಗಿ 15,999ರೂ.ಗಳಿಗೆ ಲಭ್ಯವಾಗಲಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಹೊಂದಿದೆ.
ಹಾಗೆಯೇ ಪ್ರೊಸೆಸರ್ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಪಡೆದಿದ್ದು, ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಬಾಹ್ಯ ಮೆಮೊರಿಯನ್ನು 40GB ವರೆಗೂ ವಿಸ್ತರಿಸುವ ಅವಕಾಶವನ್ನು ನೀಡಲಾಗಿದೆ. ಇದೀಗ ಬೆಲೆಯ ಇಳಿಕೆ ಕಂಡಿರುವ ನೋಕಿಯಾ 8.1 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಹಾಗೂ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ನೋಕಿಯಾ 8.1 ಸ್ಮಾರ್ಟ್‌ಫೋನ್ 6.18 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇನನ್ನು ಹೊಂದಿದ್ದು, ಡಿಸ್‌ಪ್ಲೇಯು 1080x2244 ಪಿಕ್ಸಲ್ ರೆಸಲ್ಯೂಶನ್ ಒಳಗೊಂಡಿದೆ. ಡಿಸ್‌ಪ್ಲೇಯ ಅನುಪಾತವು 18.7:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ. 81.5% ಆಗಿದೆ. ಡಿಸ್‌ಪ್ಲೇಯ ಸುತ್ತಲೂ 2.5D ಕರ್ವ್ ರಚನೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ
ನೋಕಿಯಾ 8.1 ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ 2.2GHz ವೇಗದೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಪಡೆದಿದೆ. ಹಾಗೆಯೇ 4GB RAM + 64GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ 400GB ವರೆಗಗೂ ಮೆಮೊರಿ ಹೆಚ್ಚಿಸುವ ಆಯ್ಕೆ ಇದೆ.

ಡ್ಯುಯಲ್ ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಆಯ್ಕೆ ಹೊಂದಿದ್ದು, ಪ್ರಾಥಮಿಕ್ ಕ್ಯಾಮೆರಾವು 12ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೂ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದ್ದು, ಕ್ಯಾಮೆರಾಗಳು Zeiss ಲೆನ್ಸ್ ಬೆಂಬಲದಲ್ಲಿವೆ. ಕ್ಯಾಮೆರಾಗಳು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಒಳಗೊಂಡಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ನೋಕಿಯಾ 8.1 ಸ್ಮಾರ್ಟ್‌ಪೋನ್ 3,500mAh ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಸೌಲಭ್ಯವನ್ನು ಪಡೆದಿದೆ. 4G ವೋಲ್ಟ್, Wi-Fi 802.11ac, VoWiFi, ಬ್ಲೂಟೂತ್ v5.0, GPS/ A-GPS, 3.5mm ಹೆಡ್‌ಫೋನ್ ಜ್ಯಾಕ್, USB Type-C ಪೋರ್ಟ್‌ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಹೊಂದಿದ್ದು, ಜೊತೆಗೆ ಆಂಡ್ರಾಯ್ಡ್ 9 ಪೈ ಓಎಸ್ ಸಪೋರ್ಟ್ ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಿರುವ ನೋಕಿಯಾ 8.1 ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಕೇವಲ 15,999ರೂ.ಗಳಿಗೆ ಲಭ್ಯವಾಗಲಿದೆ. ಗ್ರಾಹಕರು ನೋಕಿಯಾದ ಅಧಿಕೃತ ವೆಬ್‌ತಾಣದಲ್ಲಿ ಫೋನ್ ಖರೀದಿಸಬಹುದಾಗಿದ್ದು, ಹಾಗೆಯೇ ಜನಪ್ರಿಯ ಇ ಕಾಮರ್ಸ್ ತಾಣಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಳಲ್ಲಿಯೂ ಈ ಸ್ಮಾರ್ಟ್‌ಫೋನ್ ಲಭ್ಯವಿದೆ. .
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470