ರೆಡ್ಮಿ ಸಂಸ್ಥೆಯಿಂದ ಮತ್ತೊಂದು ಸ್ಮಾರ್ಟ್ ಟಿವಿ ಲಾಂಚ್!..ಬೆಲೆ ಎಷ್ಟಿದೆ?
ಶಿಯೋಮಿ ಕಂಪನಿಯು ಸ್ಮಾರ್ಟ್‌ಫೋನ್ ಜೊತೆಗೆ ಹಲವು ಸ್ಮಾರ್ಟ್ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಆ ಪೈಕಿ ಸ್ಮಾರ್ಟ್ ಟಿವಿ ಮಾಡೆಲ್‌ಗಳು ಸೇರಿವೆ. ಇದೀಗ ರೆಡ್ಮಿ ತನ್ನ ಬಹುನಿರೀಕ್ಷಿತ ಸ್ಮಾರ್ಟ್ ಟಿವಿಯೊಂದನ್ನು ಅನಾವರಣ ಮಾಡಿದ್ದು, ಅದುವೇ ರೆಡ್ಮಿ ಟಿವಿ X43 ಸ್ಮಾರ್ಟ್ ಟಿವಿ. ಈ ಸ್ಮಾರ್ಟ್ ಟಿವಿ ಜೊತೆಗೆ ರೆಡ್ಮಿ ನೋಟ್ 11s ಹಾಗೂ ರೆಡ್ಮಿ ಸ್ಮಾರ್ಟ್ ಬ್ಯಾಂಡ್ ಪ್ರೊ ಡಿವೈಸ್ ಬಿಡುಗಡೆ ಮಾಡಿದೆ.

ಹೌದು, ಟೆಕ್ ದೈತ್ಯ ರೆಡ್ಮಿ ಚಾನಲ್ ಮೂಲಕ ಆನ್‌ಲೈನ್ ಹೊಸದಾಗಿ ರೆಡ್ಮಿ ಟಿವಿ X43 ಅನ್ನು ಬಿಡುಗಡೆ ಮಾಡಿದೆ. G52 MP2 ಜೊತೆಗೆ 64 ಬಿಟ್ ಕ್ವಾಡ್ ಕೋರ್ A55 CPU ಜೊತೆಗೆ ಆಂಡ್ರಾಯ್ಡ್ ಟಿವಿ 10 ನಿಂದ ಚಾಲಿತವಾಗಿದೆ. ಹಾಗೆಯೇ ಈ ಟಿವಿ ಗೂಗಲ್ ಅಸಿಸ್ಟಂಟ್ ಮತ್ತು ಅಂತರ್ನಿರ್ಮಿತ ಕ್ರೋಮ್‌ಕಾಸ್ಟ್ ಅನ್ನು ಸಹ ಹೊಂದಿದೆ. ಇದರೊಂದಿಗೆ ಮಿ ಹೋಮ್ (Mi Home) ಅಪ್ಲಿಕೇಶನ್ ಸೌಲಭ್ಯ ಸಹ ಲಭ್ಯ.
ರೆಡ್ಮಿ ಸ್ಮಾರ್ಟ್ ಟಿವಿ X43 43 ಇಂಚಿನ 4K ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಈ ಸ್ಮಾರ್ಟ್ ಟಿವಿಯು ಸ್ಲಿಮ್ ಬೆಜೆಲ್‌ಗಳನ್ನು ಸಹ ಒಳಗೊಂಡಿದೆ. ರೆಡ್ಮಿ ಸ್ಮಾರ್ಟ್ ಟಿವಿ X43 ಆಂಡ್ರಾಯ್ಡ್ ಟಿವಿ 10 ನಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು TV ಮತ್ತು ಚಲನಚಿತ್ರ ರೇಟಿಂಗ್‌ಗಳಿಗಾಗಿ IMDB ಗಾಗಿ ಸಂಯೋಜಿತ ಬೆಂಬಲದೊಂದಿಗೆ ಕಂಪನಿಯ PatchWall UI ಅನ್ನು ಒಳಗೊಂಡಿದೆ. ಹೊಸ ರೆಡ್ಮಿ ಸ್ಮಾರ್ಟ್ ಟಿವಿ X43 ಡಾಲ್ಬಿ ಆಡಿಯೋ ಬೆಂಬಲ ಮತ್ತು DTS Virtual:X ತಂತ್ರಜ್ಞಾನದೊಂದಿಗೆ 30W ಸ್ಪೀಕರ್‌ಗಳನ್ನು ಹೊಂದಿದೆ.

ರೆಡ್ಮಿ ಟಿವಿ X43 ಸ್ಮಾರ್ಟ್ ಟಿವಿ ಬೆಲೆಯು 28,999ರೂ. ಆಗಿದೆ. ಈ ಟಿವಿಯ ಮೊದಲ ಮಾರಾಟವು ಇದೇ ಫೆಬ್ರವರಿ 16 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಸ್ಮಾರ್ಟ್ ಟಿವಿ ಮಿ ಹೋಮ್, ಅಮೆಜಾನ್ ತಾಣ ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಅಲ್ಲದೇ ಎಲ್ಲಾ ರೀಟೇಲ್ ಅಂಗಡಿಗಳಲ್ಲಿ ಲಭ್ಯ ಆಗಲಿದೆ. ಇನ್ನು ಕೋಟಾಕ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 1500ರೂ. ಗಳ ತ್ವರಿತ ರಿಯಾಯಿತಿ ದೊರೆಯಲಿದೆ.

ರೆಡ್ಮಿ ಸ್ಮಾರ್ಟ್ ಬ್ಯಾಂಡ್ ಪ್ರೊ ಫೀಚರ್ಸ್
ರೆಡ್ಮಿ ಸ್ಮಾರ್ಟ್ ಬ್ಯಾಂಡ್ ಪ್ರೊ ಸಹ ಬಿಡುಗಡೆ ಆಗಿದೆ. ಈ ಡಿವೈಸ್ 1.47 ಇಂಚಿನ 194 x 368 ಪಿಕ್ಸೆಲ್‌ಗಳು ಸಾಮರ್ಥ್ಯದೊಂದಿಗೆ ಆನ್ವೇಸ್ ಆನ್ AMOLED ಟಚ್ ಡಿಸ್ಪ್ಲೇ ಪಡೆದಿದೆ. ಇದು 282ppi ಪಿಕ್ಸೆಲ್ ಸಾಂದ್ರತೆ, 8 ಬಿಟ್ ಕಲರ್ ಡೆಪ್ತ್ ಮತ್ತು 100 ಪ್ರತಿಶತ NTSC ಕಲರ್ ಗ್ಯಾಮಟ್ ಕವರೇಜ್ ಹೊಂದಿದೆ. ಇನ್ನು ಈ ಬ್ಯಾಂಡ್ 200mAh ಬ್ಯಾಟರಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, 14 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ ಎನ್ನಲಾಗಿದೆ. ಪವರ್ ಸೇವಿಂಗ್ ಮೋಡ್ ನಲ್ಲಿ ಸುಮಾರು 20 ದಿನಗಳ ಬ್ಯಾಕ್‌ಅಪ್ ಒದಗಿಸಲಿದೆ.
ಈ ಫಿಟ್‌ನೆಸ್ ಟ್ರ್ಯಾಕರ್ ಅಪೊಲೊ 3.5 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಲೈಫ್‌ಕ್ಯೂ ಹೆಲ್ತ್ ಟ್ರ್ಯಾಕಿಂಗ್ ಅಲ್ಗಾರಿದಮ್ ಅನ್ನು ಒಳಗೊಂಡಿದೆ ಮತ್ತು PPG ಹೃದಯ ಬಡಿತ ಸಂವೇದಕ, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಆರು-ಆಕ್ಸಿಸ್ ಸೆನ್ಸಾರ್ ಅನ್ನು ಹೊಂದಿದೆ. ಫಿಟ್ನೆಸ್ ಟ್ರ್ಯಾಕರ್ ಬ್ಲೂಟೂತ್ v5.0 ಗೆ ಬೆಂಬಲದೊಂದಿಗೆ ಬರುತ್ತದೆ ಮತ್ತು ಕಂಪನಿಯ ಪ್ರಕಾರ 5ATM (50 ಮೀಟರ್) ವರೆಗೆ ಜಲನಿರೋಧಕವಾಗಿದೆ. ಇನ್ನು ಈ ಡಿವೈಸ್ ಬೆಲೆಯು 3,999ರೂ. ಆಗಿದೆ. ಇದೇ ಫೆ. 14 ರಂದು ಮೊದಲ ಸೇಲ್ ಪ್ರಾರಂಭಿಸಲಿದೆ.


Click it and Unblock the Notifications




