Home
ಸುದ್ದಿಜಾಲ

Redmi: ರೆಡ್ಮಿಯ ಈ ಫೋನ್‌ಗಿದೆ 26% ರಿಯಾಯಿತಿ! 48 MP ಕ್ಯಾಮೆರಾ.. 64 GB ಸ್ಟೋರೇಜ್‌

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ರೆಡ್ಮಿ ಫೋನ್‌ಗಳಲ್ಲಿ (Redmi phones) ಭಿನ್ನ ಫೋನ್‌ಗಳನ್ನು ಕಾಣಬಹುದು. ಈ ಫೋನ್‌ಗಳು ವಿಶೇಷ ಫೀಚರ್ಸ್‌ ಆಯ್ಕೆ ಮೂಲಕ ಗ್ರಾಹಕರಿಗೆ ಭಿನ್ನ ಅನುಕೂಲ ನೀಡುತ್ತಿದ್ದು ,ಈ ನಡುವೆ ರೆಡ್ಮಿಯ ಬಹುಬೇಡಿಕೆಯ ಈ ಫೋನ್‌ಗೆ ಬರೋಬ್ಬರಿ 26% ರಿಯಾಯಿತಿ ನೀಡಲಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ರೆಡ್ಮಿ ಶಿಯೋಮಿ ನೋಟ್ 7 ಪ್ರೊ ಫೋನ್‌ಗೆ (Xiaomi Redmi Note 7 Pro) ಈ ಡಿಸ್ಕೌಂಟ್‌ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹಾಗೂ 64 GB ಇಂಟರ್‌ ಸ್ಟೋರೇಜ್‌ ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಆಫರ್ ವಿವರ ಹಾಗೂ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ನೋಡೋಣ ಬನ್ನಿ.

ರೆಡ್ಮಿಯ ಈ ಫೋನ್‌ಗಿದೆ 26% ರಿಯಾಯಿತಿ! 48 MP ಕ್ಯಾಮೆರಾ..  64 GB ಸ್ಟೋರೇಜ್‌...

ರೆಡ್ಮಿ ಶಿಯೋಮಿ ನೋಟ್ 7 ಪ್ರೊ ಫೋನ್‌ ಆಫರ್ ವಿವರ: ಈ ಸ್ಮಾರ್ಟ್‌ಫೋನ್‌ ಅನ್ನು ಅಮೆಜಾನ್‌ನಲ್ಲಿ (Amazon) ನೀವು 11,799 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ 15,999ರೂ.ಗಳ ಸಾಮಾನ್ಯ ಬೆಲೆ ಇರುವ ಈ ಫೋನ್‌ಗೆ ಅಮೆಜಾನ್ ದೀಪಾವಳಿ ಹಬ್ಬದ ಹಿನ್ನೆಲೆ 26% ರಿಯಾಯಿತಿಯಲ್ಲಿ ನೀಡುತ್ತಿದೆ. ಇಷ್ಟೇ ಅಲ್ಲದೆ ಬ್ಯಾಂಕ್‌ ಆಫರ್ ಹಾಗೂ ವಿನಿಮಯ ಆಫರ್ ಮೂಲಕ ಖರೀದಿ ಮಾಡಿದ್ರೆ 11,200ರೂ.ವರೆಗೂ ಉಳಿತಾಯ ಮಾಡಬಹುದಾಗಿದೆ.

ಬ್ಯಾಂಕ್‌ ವಿಚಾರಕ್ಕೆ ಬಂದರೆ ಹೆಚ್‌ಡಿಎಪ್‌ಸಿ ಬ್ಯಾಂಕ್ ಕಾರ್ಡ್‌ನಲ್ಲಿ 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಇಎಮ್‌ಐ ವ್ಯವಹಾರದಲ್ಲಿ 500ರೂ.ವರೆಗಿನ ತ್ವರಿತ ರಿಯಾಯಿತಿ, ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿ 1000ರೂ. ವರೆಗೆ ಅಥವಾ 10% ತ್ವರಿತ ರಿಯಾಯಿತಿ, ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 750ರೂ. ವರೆಗೆ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಜೆ ಮತ್ತು ಕೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್ಐ ಅಲ್ಲದ ವ್ಯವಹಾರದ ಮೇಲೆ 1000ರೂ. ವರೆಗೆ ಅಥವಾ 10% ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ರೆಡ್ಮಿಯ ಈ ಫೋನ್‌ಗಿದೆ 26% ರಿಯಾಯಿತಿ! 48 MP ಕ್ಯಾಮೆರಾ..  64 GB ಸ್ಟೋರೇಜ್‌...

ರೆಡ್ಮಿ ಶಿಯೋಮಿ ನೋಟ್ 7 ಪ್ರೊ ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.3 ಇಂಚಿನ FHD+ ಡಾಟ್ ನಾಚ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 2340 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಈ ಮೂಲಕ ನೀವು ಗೇಮಿಂಗ್‌ ಸಮಯದಲ್ಲಿ ಅಥವಾ ವಿಡಿಯೋ ವೀಕ್ಷಣೆ ಸಮಯದಲ್ಲಿ ಹೊಸ ಅನುಭವವನ್ನೇ ಪಡೆಯಬಹುದಾಗಿದೆ.

ರೆಡ್ಮಿ ಶಿಯೋಮಿ ನೋಟ್ 7 ಪ್ರೊ ಪ್ರೊಸೆಸೆರ್ ಸಾಮರ್ಥ್ಯ: ಇನ್ನು ಶಕ್ತಿಯುತ 2.0 GHz ಇರುವ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 675 CPU ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲೂ ಸಹ ಚಲನಚಿತ್ರಗಳನ್ನು ನೋಡುವಾಗ ಅಥವಾ ಇಂಟರ್ನೆಟ್ ಬ್ರೌಸ್ ಮಾಡುವಾಗ ನೀವು ಯಾವುದೇ ಅಡೆತಡೆ ಅನುಭವಿಸುವುದಿಲ್ಲ. ಇದರೊಂದಿಗೆ 64 GB ಇಂಟರ್‌ ಸ್ಟೊರೇಜ್‌ ಆಯ್ಕೆ ಇದ್ದು, 4 GB RAM ಮೂಲಕ ಉತ್ತಮವಾಗಿ ಕೆಲಸ ಮಾಡಲಿದೆ.

ರೆಡ್ಮಿ ಶಿಯೋಮಿ ನೋಟ್ 7 ಪ್ರೊ ಕ್ಯಾಮೆರಾ ರಚನೆ: ಇನ್ನು ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದು 48 ಮೆಗಾಪಿಕ್ಸೆಲ್‌ ಹಾಗೂ 5 ಮೆಗಾಪಿಕ್ಸೆಲ್‌ನ ಡ್ಯುಯಲ್-ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲೂ 48 ಮೆಗಾಪಿಕ್ಸೆಲ್‌ ಸೋನಿ IMX586 ಸೆನ್ಸರ್‌ ಇದ್ದು, ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ಮೂಲಕ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ. ಜೊತೆಗೆ 13 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ರೆಡ್ಮಿಯ ಈ ಫೋನ್‌ಗಿದೆ 26% ರಿಯಾಯಿತಿ! 48 MP ಕ್ಯಾಮೆರಾ..  64 GB ಸ್ಟೋರೇಜ್‌...

ರೆಡ್ಮಿ ಶಿಯೋಮಿ ನೋಟ್ 7 ಪ್ರೊ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ 4000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಈ ಬ್ಯಾಟರಿ 18W ವೈರ್ಡ್‌ ಚಾರ್ಜಿಂಗ್‌ ಬೆಂಬಲ ಪಡೆದಿದೆ. ಉಳಿದಂತೆ ಈ ಫೋನ್ ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ ಫೈ-Fi ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಎಫ್‌ಎಮ್‌ ರೇಡಿಯೋ, ಯುಎಸ್‌ಬಿ ಟೈಪ್- ಸಿ 2.0 ಕನೆಕ್ಟಿವಿಟಿ ಬೆಂಬಲದೊಂದಿಗೆ ಕಾಣಿಸಿಕೊಂಡಿದೆ.

Best Mobiles in India

English summary
This discount is given for Xiaomi Redmi Note 7 Pro phone on Amazon. This smartphone will provide good performance with 48 megapixel main camera and 64 GB internal storage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+