ಫ್ರಿಡ್ಜ್ ಖರೀದಿ ಮಾಡುವವರಿಗೆ ಇನ್ಮುಂದೆ 'ಕರೆಂಟ್ ಶಾಕ್ '; ಈಗಲೇ ಖರೀದಿಸಿ!
ಈಗಂತೂ ರೆಫ್ರಿಜರೇಟರ್ ಹಳ್ಳಿಗಳಿಗೆಲ್ಲ ತಲುಪಿಬಿಟ್ಟಿವೆ. ಯಾಕೆಂದರೆ ಅತಿಯಾದ ವಾಹನ ಬಳಕೆ ಹಾಗೂ ಪರಿಸರ ನಾಶದಿಂದ ಭಾರತದ ವಾತಾವರಣದಲ್ಲಿ ಭಾರೀ ಏರುಪೇರು ಸಂಭವಿಸುತ್ತವೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ತಣ್ಣಗಿರಬೇಕು ಎಂದರೆ ರೆಫ್ರಿಜರೇಟರ್ ಬಳಕೆ ಅನಿವಾರ್ಯ. ಆದರೆ, ಈ ವರ್ಷದಿಂದ ಈ ರೆಫ್ರಿಜರೇಟರ್ ಬಡವರ ಕೈಗೆಟಕುವ ವಸ್ತುಗಳಾಗಲಿವೆಯೇ ಎನ್ನುವ ಪ್ರಶ್ನೆ ಮೂಡುವಂತಿದೆ.

ಈಗಂತೂ ರೆಫ್ರಿಜರೇಟರ್ ಹಳ್ಳಿಗಳಿಗೆಲ್ಲ ತಲುಪಿಬಿಟ್ಟಿವೆ. ಯಾಕೆಂದರೆ ಅತಿಯಾದ ವಾಹನ ಬಳಕೆ ಹಾಗೂ ಪರಿಸರ ನಾಶದಿಂದ ಭಾರತದ ವಾತಾವರಣದಲ್ಲಿ ಭಾರೀ ಏರುಪೇರು ಸಂಭವಿಸುತ್ತವೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ತಣ್ಣಗಿರಬೇಕು ಎಂದರೆ ರೆಫ್ರಿಜರೇಟರ್ ಬಳಕೆ ಅನಿವಾರ್ಯ. ಆದರೆ, ಈ ವರ್ಷದಿಂದ ಈ ರೆಫ್ರಿಜರೇಟರ್ ಬಡವರ ಕೈಗೆಟಕುವ ವಸ್ತುಗಳಾಗಲಿವೆಯೇ ಎನ್ನುವ ಪ್ರಶ್ನೆ ಮೂಡುವಂತಿದೆ.

ಹೌದು, ಭಾರತದಲ್ಲಿ ರೆಫ್ರಿಜರೇಟರ್ ಸಂಬಂಧ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ. ಈ ಮೂಲಕ ಇವುಗಳನ್ನು ಖರೀದಿ ಮಾಡಬೇಕು ಎಂದರೆ ಹೆಚ್ಚಿನ ಬೆಲೆ ತೆರಬೇಕಿದೆ. ಈ ಬೆಲೆ ಏರಿಕೆಯ ಬಿಸಿ ಖಂಡಿತಾ ಭಾರತೀಯರಿಗೆ ತಟ್ಟಲಿದ್ದು, ಎಷ್ಟು ಶೇಖಡಾವಾರು ಬೆಲೆ ಹೆಚ್ಚಿಗೆ ಮಾಡಲಾಗುತ್ತಿದೆ?, ಯಾವ ಕಾರಣಕ್ಕೆ ಈ ನಿರ್ಧಾರ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ಹೊಸ ವರ್ಷದಿಂದಲೇ ಹೊಸ ನಿಯಮ ಜಾರಿ
ಹೊಸ ರೆಫ್ರಿಜರೇಟರ್ ನಿಯಮಗಳನ್ನು ಜನವರಿ 1, 2023 ರಿಂದ ಜಾರಿಗೆ ತರಲಾಗಿದೆ. ಈ ಮೂಲಕ ರೆಫ್ರಿಜರೇಟರ್ ಬೆಲೆಯಲ್ಲಿ ಶೇಕಡಾ 5ರಷ್ಟು ಹೆಚ್ಚಳವಾಗಬಹುದು ಎಂದು ತಿಳಿದುಬಂದಿದೆ. ಹೀಗಾಗಿ ರೆಫ್ರಿಜರೇಟರ್ ಖರೀದಿ ಮಾಡಬೇಕು ಎಂದುಕೊಂಡವರ ಮನಸ್ಸಲ್ಲಿ ಬೇಸರ ಆಗುವುದಂತೂ ಸತ್ಯ.

ಹೊಸ ಸ್ಟಾರ್ ರೇಟಿಂಗ್
1 ಜನವರಿ 2023 ರಿಂದ ಜಾರಿಗೆ ಬಂದಿರುವ ಹೊಸ ಕಾನೂನಿನ ಪ್ರಕಾರ ಹಾಗೂ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಐಐ) ವರದಿ ಪ್ರಕಾರ, ಉತ್ಪನ್ನಗಳಿಗೆ ಹೊಸ ಸ್ಟಾರ್ ರೇಟಿಂಗ್ ನೀಡಲಾಗುತ್ತದಂತೆ. ಹಾಗೆಯೇ ಗ್ರಾಹಕರು ವಿವಿಧ ಮಾದರಿಗಳ ಪ್ರಕಾರ 2 ರಿಂದ 5 ಪ್ರತಿಶತದಷ್ಟು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಒಒ ಎಲ್ಲಾ ಡಿವೈಸ್‌ಗಳಿಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಈ ಸ್ಟಾರ್ ರೇಟಿಂಗ್ 1 ರಿಂದ 5 ರವರೆಗೆ ಇದ್ದು, ಇವು ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಶಕ್ತಿ ಬಳಕೆ ಮಾಡುತ್ತವೆ ಎಂಬ ವಿವರವನ್ನು ತಿಳಿಸಲಿವೆ.

ಕಟ್ಟುನಿಟ್ಟಿನ ಕ್ರಮ
ಹೊಸ ನಿಯಮಗಳ ಪ್ರಕಾರ, ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (ಬಿಇಇ) ನಿಂದ ಸ್ಟಾರ್ ಲೇಬಲಿಂಗ್ ಅನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಂತೆ. ಫ್ರಾಸ್ಟ್ ಫ್ರೀ ಮಾದರಿಯಲ್ಲಿ ಫ್ರೀಜರ್ ಮತ್ತು ರೆಫ್ರಿಜರೇಟರ್ ಒದಗಿಸುವ ಘಟಕಗಳಿಗೆ ಪ್ರತ್ಯೇಕ ಸ್ಟಾರ್ ಲೇಬಲಿಂಗ್ ಅನ್ನು ಕಡ್ಡಾಯಗೊಳಿಸಲಾಗಿದೆ. ರೆಫ್ರಿಜರೇಟರ್ ಕಂಪೆನಿಗಳು ರೆಫ್ರಿಜರೇಟರ್‌ನಲ್ಲಿ ಎಷ್ಟು ಲೀಟರ್ ಸಾಮರ್ಥ್ಯ ಹೊಂದಿವೆ ಎಂಬುದನ್ನು ಆಧಾರವಾಗಿರಿಸಿಕೊಂಡಿವೆ. ಇದರೊಂದಿಗೆ ಹೊಸ ನಿಯಮಗಳ ಅಡಿಯಲ್ಲಿ ಕೆಲವು ಫ್ರಿಜ್ ಕಂಪ್ರೆಸರ್‌ಗಳನ್ನು ಬದಲಾಯಿಸಬೇಕಾಗಬಹುದು.

ಯಾವಾಗ ಖರೀದಿ ಮಾಡಬೇಕು?
ಈ ಬೆಲೆ ಏರಿಕೆ ಬಿಸಿ ಇನ್ನೂ ರೆಫ್ರಿಜರೇಟರ್ ಮೇಲೆ ಪ್ರಭಾವ ಬೀರಿಲ್ಲ. ಹೀಗಾಗಿ ನೀವೇನಾದರೂ ಹೊಸ ವರ್ಷದ ಹಿನ್ನೆಲೆ ರೆಫ್ರಿಜರೇಟರ್ ಖರೀದಿ ಮಾಡಬೇಕು ಎಂದುಕೊಂಡರೆ ಈ ಸಮಯ ನಿಮಗೆ ಸೂಕ್ತವಾಗಲಿದೆ. ಇದರಿಂದ ಶೇ. 5 ರಷ್ಟು ಹೆಚ್ಚಿನ ಬೆಲೆ ಏರಿಕೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ವರದಿಯ ಆಧಾರದ ಮೇಲೆ ಗೋದ್ರೇಜ್, ಹೈಯರ್ ಮತ್ತು ಪ್ಯಾನಾಸೋನಿಕ್ ಕಂಪೆನಿಗಳು ಫ್ರಿಡ್ಜ್ ಸ್ಟಾಕ್ ಹೊಂದಿದ್ದು, ಶೇ 5 ರಿಂದ 10 ರಷ್ಟು ರಿಯಾಯಿತಿಯಲ್ಲಿಮಾರಾಟ ಮಾಡಲು ಮುಂದಾಗಿದ್ದು, ನೀವೇನಾದರೂ ಈ ಸಮಯದಲ್ಲಿ ಖರೀದಿ ಮಾಡಿದರೆ ಖಂಡಿತಾ ಶೇ.15ರಷ್ಟು ಕಡಿಮೆ ಬೆಲೆಯಲ್ಲಿ ನಿಮ್ಮಿಷ್ಟದ ಫ್ರಿಡ್ಜ್ ನಿಮ್ಮ ಮನೆಯಲ್ಲಿರಲಿದೆ.

ಗೋದ್ರೇಜ್ ಅಪ್ಲೈಯನ್ಸ್‌ನ ವ್ಯವಹಾರ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಕಮಲ್ ನಂದಿ ಈ ಸಂಬಂಧ ಮಾತನಾಡಿದ್ದು, ಈಗ ನಾವು ಎರಡಕ್ಕೂ ಸ್ಟಾರ್ ರೇಟಿಂಗ್ ಅಡಿಯಲ್ಲಿ ಲೇಬಲಿಂಗ್ ಅನ್ನು ಘೋಷಿಸಬೇಕಾಗಿದೆ. ಇದೊಂದು ಹೊಸ ಬದಲಾವಣೆಯಾಗಿದೆ. ಇಂಧನ ದಕ್ಷತೆ ನಿಯಮಗಳನ್ನು ಬಿಗಿಗೊಳಿಸುತ್ತಿರುವ ಹಿನ್ನೆಲೆ ವೆಚ್ಚ ಸ್ವಲ್ಪ ಹೆಚ್ಚಾಗುತ್ತದೆ. ಬೆಲೆಗಳು ಎರಡರಿಂದ ಮೂರು ಪ್ರತಿಶತದಷ್ಟು ಹೆಚ್ಚಾಗಬಹುದು ಮತ್ತು ಇದು ವಿಭಿನ್ನ ಮಾದರಿಗಳು ಮತ್ತು ಸ್ಟಾರ್ ರೇಟಿಂಗ್‌ಗಳನ್ನು ಅವಲಂಬಿಸಿರುತ್ತದೆ ಎಂದು ವಿವರಿಸಿದ್ದಾರೆ.


Click it and Unblock the Notifications








