Home
ಸುದ್ದಿಜಾಲ

ಜಗತ್ತಿಗೆ ದೊಡ್ಡ ಮಟ್ಟದಲ್ಲಿ ಕುಡಿಯುವ ನೀರನ್ನು ಉಳಿಸಿದ ಸೆಕೆಂಡ್‌ ಹ್ಯಾಂಡ್‌ಫೋನ್‌ಗಳು: ಅದೇಗೆ ಅಂತೀರಾ!?

ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಕೆಲವು ದಿನಗಳ ಹಿಂದಷ್ಟೇ ಒಂದು ವರದಿ ಬಂದಿದ್ದು, ಈ ವರದಿಯಂತೆ ಭಾರತದಲ್ಲಿ ಸೆಕೆಂಡ್‌ ಹ್ಯಾಂಡ್‌ಫೋನ್‌ಗಳಿಗೆ ಭಾರೀ ಬೇಡಿಕೆ ನಿರ್ಮಾಣ ಆಗಿದೆ. ಈ ಮೂಲಕ ಹಲವಾರು ಗ್ರಾಹಕರು ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡುವ ಬದಲು ಬಳಕೆ ಮಾಡಲಾದ ಅಥವಾ ನವೀಕರಿಸಿದ ಫೋನ್‌ಗಳನ್ನೇ ಹೆಚ್ಚಾಗಿ ಖರೀದಿ ಮಾಡಿದ್ದಾರೆ. ಈ ನಡುವೆ ಈ ಸೆಕೆಂಡ್‌ ಹ್ಯಾಂಡ್‌ ಸ್ಮಾರ್ಟ್‌ಫೋನ್‌ಗಳು ಪರಿಸರ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆ ನೀಡಿವೆ, ನೀಡುತ್ತಿವೆ.

ಹೌದು, ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿದ್ದು, ಇವುಗಳ ಅತಿಯಾದ ಸಾಮೂಹಿಕ ಉತ್ಪಾದನೆಯು ಪರಿಸರಕ್ಕೆ ಭಾರೀ ಹಾನಿ ಉಂಟು ಮಾಡುತ್ತಿವೆ. ಅದರಲ್ಲೂ ಹಸಿರುಮನೆ ಅನಿಲಗಳ ಹೊರಸೂಸುವಿಕೆ, ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಮತ್ತು ಎಲೆಕ್ಟ್ರಾನಿಕ್ ತ್ಯಾಜ್ಯದ ಉತ್ಪಾದನೆಗೆ ಇದು ತನ್ನದೇ ಆದ ಕೊಡುಗೆ ನೀಡಿದರೂ ಸಹ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ. ಆದರೆ, ಹಳೆಯ ಸ್ಮಾರ್ಟ್‌ಫೋನ್‌ ಬಳಕೆಯಿಂದ ಏನೆಲ್ಲಾ ಲಾಭ ಇದೆ ಗೊತ್ತಾ!?.

ಕುಡಿಯುವ ನೀರನ್ನು ಉಳಿಸಿದ ಸೆಕೆಂಡ್‌ ಹ್ಯಾಂಡ್‌ಫೋನ್‌ಗಳು: ಅದೇಗೆ ಅಂತೀರಾ!?

ಹೊಸ ಸ್ಮಾರ್ಟ್‌ಫೋನ್‌ ತಯಾರಿಕೆಯಿಂದ ಆಗುವ ಅನಾನುಕೂಲ: ಹಳೆಯ ಸ್ಮಾರ್ಟ್‌ಫೋನ್‌ಗಳು ಹೇಗೆ ನೈಸರ್ಗಿಕ ಕೊಡುಗೆ ನೀಡುತ್ತವೆ ಎನ್ನುವ ಮೊದಲು ಹೊಸ ಸ್ಮಾರ್ಟ್‌ಫೋನ್‌ಗಳು ಹೇಗೆಲ್ಲಾ ಪರಿಸರಕ್ಕೆ ಹಾನಿ ಉಂಟು ಮಾಡುತ್ತವೆ ಎನ್ನುವ ಬಗ್ಗೆ ತಿಳಿದುಕೊಂಡರೆ ಒಳಿತು. ಹೊಸ ಫೋನ್‌ನ ತಯಾರಿಕೆಯು ಸರಿಸುಮಾರು 13 ಟನ್‌ಗಳಷ್ಟು ನೀರನ್ನು ಬಳಕೆ ಮಾಡುವುದರಿಂದ ಕುಡಿಯುವ ನೀರಿನ ಸಮಸ್ಯೆಗೆ ದೊಡ್ಡ ಹೊಡೆತ ನೀಡುತ್ತದೆ ಎಂಬ ಅಚ್ಚರಿ ಮಾಹಿತಿ ನಿಮಗೆ ತಿಳಿದಿದೆಯಾ?.

ಈ ಬಗ್ಗೆ ಮೊಬೆಕ್ಸ್ ಇಂಡಿಯಾದ ಸಂಸ್ಥಾಪಕ ಕೃನಾಲ್ ಶಾ ಮಾಹಿತಿ ನೀಡಿದ್ದು, ಈ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಬಳಕೆ ಮಾಡುತ್ತಿದ್ದ 434ಮಿಲಿಯನ್ ಲೀಟರ್ ನೀರನ್ನು ಮೊಬೆಕ್ಸ್ ಉಳಿಕೆ ಮಾಡಿದೆ. ಈ ಮೂಲಕ ವರ್ಷಕ್ಕೆ ಸುಮಾರು 4.5ಲಕ್ಷ ಜನರಿಗೆ ಕುಡಿಯುವ ನೀರು ಲಭ್ಯವಾಗುವಂತೆ ಮಾಡಿದೆ ಎಂದಿದ್ದಾರೆ. ಹಾಗೆಯೇ ಈ ಮೊಬೆಕ್ಸ ಬಳಕೆಯಲ್ಲಿಲ್ಲದ ಗ್ಯಾಜೆಟ್‌ಗಳನ್ನು ತಿರಸ್ಕರಿಸಿದಾಗ ಉಂಟಾಗುವ ಎಲೆಕ್ಟ್ರಾನಿಕ್ ತ್ಯಾಜ್ಯದ ಪರಿಸರದ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ನವೀಕರಿಸಿದ ಗ್ಯಾಜೆಟ್‌ಗಳನ್ನು ಖರೀದಿ ಮಾಡುವಂತೆ ಪ್ರೋತ್ಸಾಹಿಸಿದೆ.

ಕುಡಿಯುವ ನೀರನ್ನು ಉಳಿಸಿದ ಸೆಕೆಂಡ್‌ ಹ್ಯಾಂಡ್‌ಫೋನ್‌ಗಳು: ಅದೇಗೆ ಅಂತೀರಾ!?

ಇನ್ನು 2020 ಮತ್ತು 2023ರ ಸಮಯದಲ್ಲಿ ಮೊಬೆಕ್ಸ್ ಸುಮಾರು 544 ಟನ್ ಇ-ತ್ಯಾಜ್ಯ ಡಂಪ್ ಅನ್ನು ತಡೆಗಟ್ಟುವ ಮೂಲಕ ಗಣಿಗಾರಿಕೆಯಿಂದ ಸುಮಾರು 103,171 ಟನ್ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಕುಡಿಯುವ ನೀರನ್ನು ಉಳಿಸಿಕೊಳ್ಳುವಲ್ಲಿ ಗಮನಾರ್ಹ ಪರಿಣಾಮ ಬೀರಿದೆ. ಇದಕ್ಕೆ ಪ್ರಮುಖ ಕಾರಣ ನವೀಕರಿಸಿದ ಸ್ಮಾರ್ಟ್‌ಗ್ಯಾಜೆಟ್‌ಗಳಿಗೆ ಹೆಚ್ಚಿದ ಬೆಂಬಲ.

ಎಷ್ಟು ಸೆಕೆಂಡ್‌ ಹ್ಯಾಂಡ್‌ ಫೋನ್‌ ಮಾರಾಟ ಆಗಿವೆ?: ಐಡಿಸಿ ಮತ್ತು ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ​​(ICEA) ಯ ವರದಿಯಂತೆ, ಸರಿಸುಮಾರು 25ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಸೆಕೆಂಡ್‌ಹ್ಯಾಂಡ್ ಮಾರುಕಟ್ಟೆಯಲ್ಲಿ ಖರೀದಿ ಮಾಡಲಾಗಿದೆ. ಈ ಮೂಲಕ ಅವುಗಳ ಮಾರಾಟವು 2025 ರ ವೇಳೆಗೆ USD 4.6 ಶತಕೋಟಿ ಮೌಲ್ಯದಲ್ಲಿ 51 ಮಿಲಿಯನ್ ಯೂನಿಟ್‌ಗಳಿಗೆ ಏರುವ ನಿರೀಕ್ಷೆ ಇದೆ. ಜೊತೆಗೆ ಈ ನವೀಕರಿಸಿದ ಸ್ಮಾರ್ಟ್‌ಫೋನ್ ಉದ್ಯಮವು 2027ರ ವೇಳೆಗೆ USD10 ಶತಕೋಟಿಯನ್ನು ದಾಟಲಿದೆ.

ಫೋನ್‌ ತಯಾರಿಕೆಯಲ್ಲಿ ನೀರನ್ನು ಯಾಕೆ ಬಳಕೆ ಮಾಡಲಾಗುತ್ತದೆ?: ಸಂಪೂರ್ಣ ಉತ್ಪಾದನಾ ಪ್ರಕ್ರಿಯೆಗೆ ನೀರಿನ ಅಗತ್ಯವಿದ್ದು, ಸ್ಮಾರ್ಟ್‌ಫೋನ್‌ಗಳ ವಿಷಯದಲ್ಲಿ ಮೈಕ್ರೋಚಿಪ್‌ಗಳನ್ನು ಬೇಯಿಸುವುದರಿಂದ, ಲೋಹಗಳು ಮತ್ತು ಇತರ ಕಚ್ಚಾ ವಸ್ತುಗಳನ್ನು ರೂಪಿಸಲು ಹಾಗೂ ತಯಾರಿಸಲು, ಬ್ಯಾಟರಿಗಳನ್ನು ತಯಾರಿಸಲು, ಟಚ್‌ಸ್ಕ್ರೀನ್‌ಗೆ ಹೊಳಪು ನೀಡಲು ಭಾರೀ ನೀರಿನ ಅಗತ್ಯ ಇದೆ.

ಕುಡಿಯುವ ನೀರನ್ನು ಉಳಿಸಿದ ಸೆಕೆಂಡ್‌ ಹ್ಯಾಂಡ್‌ಫೋನ್‌ಗಳು: ಅದೇಗೆ ಅಂತೀರಾ!?

ಯಾವೆಲ್ಲಾ ಸೆಕೆಂಡ್‌ಹ್ಯಾಂಡ್‌ ಫೋನ್‌ಗಳಿಗೆ ಬೇಡಿಕೆ ಇದೆ?: ನವೀಕರಿಸಿದ ಫೋನ್‌ಗಳಲ್ಲಿ ಆಪಲ್‌ನ ಐಫೋನ್‌ಗಳು ಅದರಲ್ಲೂ ಐಫೋನ್‌ 13, ಸ್ಯಾಮ್‌ಸಂಗ್‌ ಗ್ಯಾಲಕ್ಸಿ, ಗೂಗಲ್‌ ಪಿಕ್ಸೆಲ್, ಒನ್‌ಪ್ಲಸ್‌, ಶೀಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ನಿರ್ಮಾಣ ಆಗಿದೆ.ಈ ಫೋನ್‌ಗಳು ನವೀಕರಿಸಿದ್ದವಾದರೂ ಸಹ ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘಬಾಳಿಕೆ, ಉತ್ತಮ ಕ್ಯಾಮೆರಾ ಫೀಚರ್ಸ್‌ಅನ್ನು ಪಡೆದುಕೊಂಡಿವೆ.

Best Mobiles in India

English summary
Smartphones are an integral part of our daily routine and their excessive mass production is causing huge damage to the environment. But the environment will be greatly benefited by second hand phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+