Home
ಸುದ್ದಿಜಾಲ

Reliance AGM 2023: ಗಣೇಶ ಚತುರ್ಥಿಯಂದೇ ಜಿಯೋದ ಈ ಹೊಸ ಸೇವೆ ಆರಂಭ!, ಇದರ ವಿಶೇಷತೆ ಏನು?

ಜಿಯೋ (Jio) ಅಂದಾಕ್ಷಣ ಥಟ್ಟನೆ ನಮ್ಮೆಲ್ಲರಿಗೂ ನೆನಪಾಗುವುದು ಅಗ್ಗದ ದರದಲ್ಲಿ ಹಲವು ಸೇವೆಗಳು ಹಾಗೂ ಡಿವೈಸ್‌ಗಳು ಲಭ್ಯ ಎಂದು. ಈ ನಂಬಿಕೆಯನ್ನು ಇನ್ನಷ್ಟು ಗಟ್ಟಿ ಮಾಡುವ ಕಾರ್ಯದಲ್ಲಿರುವ ಜಿಯೋ ಈಗ ಮತ್ತೊಂದು ಸೌಲಭ್ಯದ ಬಗ್ಗೆ ಘೋಷಣೆ ಮಾಡಿದೆ. ಅದರಲ್ಲೂ ಈ ಸೇವೆ ಭಾರತೀಯರು ನೆಚ್ಚಿನ ಹಬ್ಬದಂದು ಲಾಂಚ್‌ ಆಗುತ್ತಿರುವುದು ವಿಶೇಷ.

ಹೌದು, ವಾರ್ಷಿಕ ಸಾಮಾನ್ಯ ಸಭೆಯಲ್ಲಿ( ಎಜಿಎಂ) ಜಿಯೋ ಮಹತ್ವದ ಘೋಷಣೆ ಮಾಡಿದೆ. ಮುಖೇಶ್ ಅಂಬಾನಿ ಈ ಸಭೆಯಲ್ಲಿ ಭಾಷಣ ಮಾಡುವಾಗ ಜಿಯೋ ಏರ್‌ಫೈಬರ್( Jio AirFiber) ಬಗ್ಗೆ ಸಂತಸದ ಸುದ್ದಿ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಇದನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಹಾಗಿದ್ರೆ, ಏನಿದು ಜಿಯೋ ಏರ್‌ಫೈಬರ್?, ಇದರಿಂದ ಗ್ರಾಹಕರಿಗೆ ಹೇಗೆಲ್ಲಾ ಲಾಭ? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

Reliance AGM 2023: ಗಣೇಶ ಚತುರ್ಥಿಯಂದೇ ಜಿಯೋದ ಈ ಹೊಸ ಸೇವೆ ಆರಂಭ!

ಸೆಪ್ಟೆಂಬರ್ 19 ಕ್ಕೆ ಜಿಯೋ ಏರ್‌ಫೈಬರ್: ರಿಲಯನ್ಸ್ ಜಿಯೋ ತನ್ನ ಹೊಸ ಏರ್‌ಫೈಬರ್ ಸೇವೆಯನ್ನು ಆರಂಭ ಮಾಡುವುದಾಗಿ ಮಾಹಿತಿ ನೀಡಿದೆ. ಇದರೊಂದಿಗೆ ಕಂಪೆನಿಯು ದಿನಕ್ಕೆ 1,50,000 ಸಂಪರ್ಕಗಳನ್ನು ಒದಗಿಸಲು ಮುಂದಾಗಿದ್ದು, ಜಿಯೋ ನೆಟ್‌ವರ್ಕ್ ಅನ್ನು 200 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸುವುದಾಗಿ ಹೇಳಿಕೊಂಡಿದೆ. ಅದರಲ್ಲೂ ಕಂಪನಿಯು ಸುಮಾರು 10 ಮಿಲಿಯನ್ ಜಿಯೋಫೈಬರ್ ಗ್ರಾಹಕರನ್ನು ಹೊಂದಿದ್ದು, ನೆಟ್‌ವರ್ಕ್ 1.5 ಮಿಲಿಯನ್ ಕಿಮೀಗಳಲ್ಲಿ ಹರಡಿದೆ ಎಂದು ಮಾಹಿತಿ ನೀಡಿದೆ.

ಇನ್ನು ಜಿಯೋ ಏರ್‌ಫೈಬರ್ ಕೊನೆಯ ಮೈಲಿ ಫೈಬರ್‌ನ ಅಗತ್ಯವನ್ನು ಬೈಪಾಸ್ ಮಾಡಲು ಪ್ಯಾನ್ ಇಂಡಿಯಾ 5G ನೆಟ್‌ವರ್ಕ್ ಅನ್ನು ಬಳಕೆ ಮಾಡುತ್ತದೆ. ಜಿಯೋ ಏರ್‌ಫೈಬರ್‌ನೊಂದಿಗೆ ನಾವು ದಿನಕ್ಕೆ 150,000 ಸಂಪರ್ಕಗಳಿಗೆ ಇಂಟರ್ನೆಟ್ ವಿಸ್ತರಣೆಯನ್ನು ಸೂಪರ್‌ಚಾರ್ಜ್ ಮಾಡಬಹುದು ಎಂದು ಮುಖೇಶ್ ಅಂಬಾನಿ ತಮ್ಮ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಉಲ್ಲೇಖ ಮಾಡಿದ್ದಾರೆ.

ಇದನ್ನು ಹೊರತುಪಡಿಸಿ, ಕಳೆದ 10 ವರ್ಷಗಳಲ್ಲಿ RIL (Reliance Industries Limited) ಸಂಚಿತವಾಗಿ $150 ಶತಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ ಎಂದು ಹೇಳಿದ್ದು, ಭಾರತವು ಆತ್ಮವಿಶ್ವಾಸದಿಂದ ಇದೆ ಮತ್ತು 2047 ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ರಿಲಯನ್ಸ್ ಉದಯೋನ್ಮುಖ ಹೊಸ ಭಾರತದ ಮುಂಚೂಣಿಯಲ್ಲಿದೆ. ನಾವು ಅಸಾಧ್ಯವೆಂದು ತೋರುವ ಗುರಿಗಳನ್ನು ಹೊಂದಿದ್ದೇವೆ ಹಾಗೂ ಅವುಗಳನ್ನು ಸಾಧಿಸಿದ್ದೇವೆ ಎಂದು ಸಂತಸ ಹೊರಹಾಕಿದ್ದಾರೆ.

ಇನ್ನು RILನ ಏಕೀಕೃತ ಆದಾಯವು ₹9,74,864 ಕೋಟಿಗಳಷ್ಟಿದ್ದರೆ, FY23 ಕ್ಕೆ EBITDA ₹1,53,920 ಕೋಟಿಗಳಷ್ಟಿತ್ತು. ನಿವ್ವಳ ಲಾಭ ₹73,670 ಕೋಟಿ ಆಗಿದೆ ಎಂದು ಮುಖೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ. ಇದರೊಂದಿಗೆ FY23 ರಲ್ಲಿ 2.6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ರಿಲಯನ್ಸ್ ಈ ವಿಭಾಗದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದೆ ಎಂದು ಹೇಳಿದರು.

Reliance AGM 2023: ಗಣೇಶ ಚತುರ್ಥಿಯಂದೇ ಜಿಯೋದ ಈ ಹೊಸ ಸೇವೆ ಆರಂಭ!

ಏನಿದು ಜಿಯೋ ಏರ್‌ಫೈಬರ್?
ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯು ಯಾವುದೇ ವೈರ್‌ಗಳನ್ನು ಬಳಕೆ ಮಾಡದೆ ಗಾಳಿಯ ಮೇಲೆ ಫೈಬರ್ ತರಹದ ವೇಗವನ್ನು ತಲುಪಿಸುವ ಕೆಲಸ ಮಾಡುತ್ತದೆ. ಜಿಯೋ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಡೇಟಾದ ಪ್ರಕಾರ ಜಿಯೋ ಏರ್‌ಪೈಬರ್‌ ಅನ್ನು ಕೇವಲ ಪ್ಲಗ್ ಇನ್ ಮಾಡುವ ಮೂಲಕವೇ ಬಳಕೆ ಮಾಡಬಹುದಂತೆ. ಇದರೊಂದಿಗೆ ಬಳಕೆದಾರರು ತಮ್ಮ ಮನೆಯಲ್ಲಿ ತಮ್ಮದೇ ಆದ ವೈ-ಫೈ ಹಾಟ್‌ಸ್ಪಾಟ್ ಅನ್ನು ಹೊಂದಬಹುದಾಗಿದೆ.

ಅಷ್ಟೇ ಅಲ್ಲದೆ ಈ ಜಿಯೋ ಏರ್‌ ಪೈಬರ್‌ ಅನ್ನು ಟ್ರೂ 5G ಬಳಕೆ ಮಾಡಿಕೊಂಡು ಅಲ್ಟ್ರಾ ಹೈ ಸ್ಪೀಡ್ ಇಂಟರ್ನೆಟ್‌ಗೆ ಸಂಪರ್ಕ ಮಾಡಬಹುದಾಗಿದ್ದು, ಇದರೊಂದಿಗೆ ನಿಮ್ಮ ಮನೆ ಅಥವಾ ಕಚೇರಿಯನ್ನು ಗಿಗಾಬಿಟ್ ವೇಗದ ಇಂಟರ್ನೆಟ್‌ಗೆ ತ್ವರಿತವಾಗಿ ಕನೆಕ್ಟ್ ಮಾಡಲು ಇದು ಸಹಕಾರಿಯಾಗಲಿದೆ. ಇದರಿಂದ ನಿಮ್ಮ ಸ್ಕ್ರೀಮಿಂಗ್ ಅನುಭವವನ್ನು ಇನ್ನಷ್ಟು ವಿಶೇಷವಾಗಿ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Jio made an important announcement at the Annual General Meeting (AGM). Jio AirFiber will be launched on the occasion of Ganesh Chaturthi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+