Home
ಸುದ್ದಿಜಾಲ

Jio Brain ನಿಂದ ಶುರುವಾಗಲಿದೆ AI ಲೋಕ; Jio-AI cloud ನಲ್ಲಿ 100GB ಉಚಿತ ಸ್ಟೋರೇಜ್‌!

ಜಿಯೋ ಬ್ರೈನ್ ನಿಂದ ( Jio Brain ) ಶೀಘ್ರದಲ್ಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 47 ನೇ ವಾರ್ಷಿಕ ಸಾಮಾನ್ಯ ( Reliance AGM 2024 ) ಸಭೆಯಲ್ಲಿ ಗುರುವಾರ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಈ ಮಾಹಿತಿಯನ್ನು ನೀಡಿದ್ದಾರೆ. ಕನೆಕ್ಟೆಡ್ ಇಂಟೆಲಿಜೆನ್ಸ್ ವಿಶ್ವ ದರ್ಜೆಯ ಮೂಲಸೌಕರ್ಯದೊಂದಿಗೆ ಬರುತ್ತದೆ. ಕಂಪನಿಯು 'AI ಎವೆರಿವೇರ್ ಫಾರ್ ಎವರಿಒನ್' ಎಂಬ ಥೀಮ್ ಮೇಲೆ ಇದನ್ನು ಪ್ರಾರಂಭಿಸುತ್ತದೆ.

ಸಂಪೂರ್ಣ AI ಅನ್ನು ಒಳಗೊಂಡಿರುವ ಉಪಕರಣಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಸಮಗ್ರ ಸೂಟ್ ಅನ್ನು ಅಭಿವೃದ್ಧಿಪಡಿಸುತ್ತಿದೆ - ಇದನ್ನು 'ಜಿಯೋ ಬ್ರೈನ್' ( Jio Brain ) ಎಂದು ಕರೆಯಲಾಗುತ್ತದೆ. 'ರಿಲಯನ್ಸ್‌ ಜಿಯೋ ಬ್ರೈನ್ ಅನ್ನು ಗಟ್ಟಿಗೊಳಿಸುವ ಮೂಲಕ ನಾವು ಶಕ್ತಿಯುತ ಎಐ ಸೇವೆಗಳ ಪ್ಲಾಟ್ ಫಾರ್ಮ್ ರೂಪಿಸುತ್ತೇವೆ ಎಂಬುದಾಗಿ ನಾನು ಭಾವಿಸುತ್ತೇನೆ, ಎಂದು ಅಂಬಾನಿ ಹೇಳಿದರು.

Jio Brain ನಿಂದ ಶುರುವಾಗಲಿದೆ AI; Jio-AI cloud ನಲ್ಲಿ 100GB ಉಚಿತ ಸ್ಟೋರೇಜ್‌

ನಾವು ಜಾಮ್‌ನಗರದಲ್ಲಿ ಗಿಗಾವ್ಯಾಟ್-ಪ್ರಮಾಣದ AI- ಸಿದ್ಧ ಡೇಟಾ ಕೇಂದ್ರವನ್ನು ಸ್ಥಾಪಿಸಲು ಯೋಜಿಸಿದ್ದೇವೆ, ಇದು ಸಂಪೂರ್ಣವಾಗಿ ರಿಲಯನ್ಸ್‌ನ ಹಸಿರು ಶಕ್ತಿಯಿಂದ ಚಾಲಿತವಾಗುತ್ತದೆ. ಭಾರತದಲ್ಲಿಯೇ ವಿಶ್ವದ ಅತ್ಯಂತ ಕೈಗೆಟುಕುವ ಎಐ ಇಂಟರ್ ಫೇಸಿಂಗ್ ಸೃಷ್ಟಿಸುವುದು ನಮ್ಮ ಗುರಿಯಾಗಿದೆ. "ಇದು ಭಾರತದಲ್ಲಿ ಎಐ ಅಪ್ಲಿಕೇಷನ್‌ಗಳನ್ನು ಹೆಚ್ಚು ಕೈಗೆಟುಕುವ ಮತ್ತು ಎಲ್ಲರಿಗೂ ಸಂಪರ್ಕ ಸಿಗುವಂತೆ ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಯೋ AI ಕ್ಲೌಡ್ ವೆಲ್ಕಮ್ ಆಫರ್ ಅನ್ನು ಘೋಷಿಸಲಾಯಿತು. ಎಲ್ಲ ಡಿಜಿಟಲ್ ಕಂಟೆಂಟ್ ಮತ್ತು ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಸಂಪರ್ಕಿಸಲು 100 GB ತನಕ ಉಚಿತ ಕ್ಲೌಡ್ ಸಂಗ್ರಹಣೆ ದೊರೆಯಲಿದೆ. ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹಲವಾರು ಹೊಸ AI ಸೇವೆಗಳನ್ನು ಘೋಷಿಸಿದ್ದಾರೆ. ಇದು ಜಿಯೋ ಟಿವಿಒಎಸ್ (Jio TVOS), ಹಲೋ ಜಿಯೋ (Hello Jio), ಜಿಯೋ ಐಒಟಿ ಸಲ್ಯೂಷನ್ (Jio Home IoT), ಜಿಯೋ ಹೋಮ್ (JioHome) ಅಪ್ಲಿಕೇಷನ್ ಮತ್ತು ಜಿಯೋ ಫೋನ್ ಕಾಲ್ ಎಐ (Jio Phonecall AI) ಅನ್ನು ಒಳಗೊಂಡಿದೆ.

Jio TvOS

ಆಕಾಶ್ ಅಂಬಾನಿ ಜಿಯೋ ಟಿವಿಒಎಸ್ ಅನ್ನು ಪರಿಚಯಿಸಿದರು, ಇದು ಜಿಯೋ ಹೋಮ್‌ನೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲ್ಪಟ್ಟಿದೆ. ಇದು ಜಿಯೋ ಸೆಟ್ ಟಾಪ್ ಬಾಕ್ಸ್‌ಗಾಗಿ ಸ್ವದೇಶಿ ಅಭಿವೃದ್ಧಿಪಡಿಸಲಾದ ಆಪರೇಟಿಂಗ್ ಸಿಸ್ಟಮ್ ಎನಸಿದೆ. ಇದು ಅಲ್ಟ್ರಾ HD 4K ವೀಡಿಯೊ, ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್‌ನಂತಹ ಅತ್ಯಾಧುನಿಕ ಮನೆ ಮನರಂಜನಾ ಆಯ್ಕೆಗಳ್ನು Jio TvOS ಬೆಂಬಲಿಸುತ್ತದೆ.

ಇನ್ನು ಇದು ಲೈವ್ ಟಿವಿ, ಆನ್-ಡಿಮಾಂಡ್ ಶೋಗಳು ಮತ್ತು ಆಪ್‌ಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ. JioTV+ ಹೈ ಡೆಫಿನಿಷನ್‌ನಲ್ಲಿ 860 ಲೈವ್ ಟಿವಿ ಚಾನೆಲ್‌ಗಳಿಗೆ ಆಕ್ಸಸ್‌ ಅನ್ನು ಒದಗಿಸುತ್ತದೆ. ಇದರ ಜೊತೆಗೆ ಅಮೆಜಾನ್‌ ಪ್ರೈಮ್‌ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್‌ ನಂತಹ ಆಪ್‌ಗಳಿಂದ ಉತ್ತಮ ಕಂಟೆಂಟ್‌ ಅನ್ನು ಒದಗಿಸುತ್ತದೆ.

Jio Phonecall AI

Jio ಫೋನ್ ಕಾಲ್‌ AI ಯಾವುದೇ ಕರೆಯನ್ನು ಜಿಯೋ ಕ್ಲೌಡ್‌ನಲ್ಲಿ ರೆಕಾರ್ಡ್ ಮಾಡಬಹುದು ಮತ್ತು ಸಂಗ್ರಹಿಸಬಹುದು. ಅಲ್ಲದೇ ಅದನ್ನು ಸ್ವಯಂಚಾಲಿತವಾಗಿ ಟೆಕ್ಸ್ಟ್‌ ಆಗಿ ಮಾಡಬಹುದು. ಇದು ಕರೆಯನ್ನು ಸಾರಾಂಶ ಮಾಡಬಹುದು ಮತ್ತು ಅದನ್ನು ಇನ್ನೊಂದು ಭಾಷೆಗೆ ಸಹ ಅನುವಾದಿಸಬಹುದು.

Best Mobiles in India

English summary
Reliance AGM 2024: Jio announced Jio Brain, Jio TvOS and here's everything announced at the event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+