ಅಣ್ಣನ ಜಿಯೋ DTH ಆರ್ಭಟಕ್ಕೆ ಹೆದರಿದ ತಮ್ಮ: ರಿಲಯನ್ಸ್ ಡಿಜಿಟಲ್ ಟಿವಿ ನ.18ಕ್ಕೆ ಬಂದ್..!

2008ರಲ್ಲಿ ಸೇವೆಯನ್ನು ಆರಂಭಿಸಿದ್ದ ರಿಲಯನ್ಸ್ ಡಿಜಿಟಲ್ ಟಿವಿ, DTH ಲೋಕದಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿತ್ತು. ಬೇರೆಲ್ಲಾ ಕಂಪನಿಗಳ ಲಾಭಕ್ಕೆ ಹೊಡತ ನೀಡಿತ್ತು. ಇಂತಹ ಕಂಪನಿಯೇ ಇಂದು ತನ್ನ ಸೇವೆಯನ್ನು ನಿಲ್ಲುವ ಕ್ರಮಕ್ಕೆ ಮುಂದಾಗಿದೆ ಎನ್ನ

|

ಜಿಯೋ ಟೆಲಿಕಾಂ ಮಾರುಕಟ್ಟೆಯಲ್ಲಿ ಮಾಡಿದಂತಹ ಕ್ರಾಂತಿಕಾರಕ ಬದಾವಣೆಯಿಂದಾಗಿ ಭಾರೀ ಪ್ರಮಾಣದ ಲಾಭದಲ್ಲಿದ್ದ ಟೆಲಿಕಾಂ ಕಂಪನಿಗಳು ನಷ್ಟದ ಹಂತಕ್ಕೆ ತಲುಪಿದೆ. ಇದೇ ಮಾದರಿಯಲ್ಲಿ ಜಿಯೋ DTH ಲೋಕಕ್ಕೂ ಎಂಟ್ರಿ ನೀಡಲಿದೆ ಎನ್ನಲಾಗಿದೆ. ಈ ಸುದ್ದಿಯ ಬೆನ್ನ ಹಿಂದೆಯೇ ರಿಲಯನ್ಸ್ ಕಮ್ಯೂನಿಕೇಷನ್ ತನ್ನ DTH ಸೇವೆಯನ್ನು ನಿಲ್ಲಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಿಲಯನ್ಸ್ ಡಿಜಿಟಲ್ ಟಿವಿ ನ.18ಕ್ಕೆ ಬಂದ್..!

ಓದಿರಿ: ವಿಮಾನದಲ್ಲಿ ಉಚಿತವಾಗಿ ಗ್ಯಾಲೆಕ್ಸಿ ನೋಟ್ 8 ಹಂಚಿದ ಸ್ಯಾಮ್‌ಸಂಗ್: ಯಾಕೆ..?

2008ರಲ್ಲಿ ಸೇವೆಯನ್ನು ಆರಂಭಿಸಿದ್ದ ರಿಲಯನ್ಸ್ ಡಿಜಿಟಲ್ ಟಿವಿ, DTH ಲೋಕದಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿತ್ತು. ಬೇರೆಲ್ಲಾ ಕಂಪನಿಗಳ ಲಾಭಕ್ಕೆ ಹೊಡತ ನೀಡಿತ್ತು. ಇಂತಹ ಕಂಪನಿಯೇ ಇಂದು ತನ್ನ ಸೇವೆಯನ್ನು ನಿಲ್ಲುವ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ನವೆಂಬರ್ 18ಕ್ಕೆ ಕೊನೆ:

ನವೆಂಬರ್ 18ಕ್ಕೆ ಕೊನೆ:

ಈಗಾಗಲೇ DTH ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಟಿರುವ ಹಿನ್ನಲೆಯಲ್ಲಿ ಮತ್ತು ಹೊಸ ಹೊಸ ಕಂಪನಿಗಳು ಬರುತ್ತಿರುವ ಕಾರಣ ರಿಲಯನ್ಸ್ ಡಿಜಿಟಲ್ ಟಿವಿ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಸೇವೆಯಿಂದ ಹಿಂದೆ ಸೆರೆಯಲಿದೆ. ಮೂಲಗಳ ಪ್ರಕಾರ ನವೆಂಬರ್ 18ಕ್ಕೆ ಕೊನೆಯಾಗಲಿದೆ.

ಭಾರತದಾದ್ಯಂತ ಸ್ಥಗಿತ:

ಭಾರತದಾದ್ಯಂತ ಸ್ಥಗಿತ:

ರಿಲಯನ್ಸ್ ಡಿಜಿಟಲ್ ಟಿವಿ ದೇಶದಾದ್ಯಂತ ಸೇವೆಯನ್ನು ನೀಡುತ್ತಿದ್ದು, ಮುಂದಿನ ತಿಂಗಳಿನಿಂದ ದೇಶದಾದ್ಯಂತ ತನ್ನ ಸೇವೆಯನ್ನು ಸ್ಥಗಿತಗೊಳ್ಳಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಲೈಸೆನ್ಸ್ ಮುಕ್ತಾಯ:

ಲೈಸೆನ್ಸ್ ಮುಕ್ತಾಯ:

ದೇಶದಲ್ಲಿ DTH ಸೇವೆಯನ್ನು ನೀಡಲು ಪಡೆದುಕೊಂಡಿದ್ದ ಪರವಾನಗಿಯ ಅವಧಿಯು ಮುಕ್ತಾಯಗೊಂಡಿದ್ದು, ಈ ಹಿನ್ನಲೆಯಲ್ಲಿ ಲೈಸೆಸ್ಸ್ ರಿನ್ಯೂ ಮಾಡಿಸಿಕೊಳ್ಳುವ ಬದಲು ತನ್ನ ಸೇವೆಯನ್ನು ನಿಲ್ಲಿಸಲು ಮುಂದಾಗಿದೆ.

ಬೇರೆ DHT ನೊಂದಿಗೆ ಸೇರ್ಪಡೆ:

ಬೇರೆ DHT ನೊಂದಿಗೆ ಸೇರ್ಪಡೆ:

ಸದ್ಯ ರಿಲಯನ್ಸ್ ಡಿಜಿಟಲ್ ಟಿವಿ ಸೇವೆಯನ್ನು ಪಡೆಯುತ್ತಿರುವ ಗ್ರಾಹಕರನ್ನು ಬೇರೆ DTH ಸೇವೆಯನ್ನು ನೀಡುತ್ತಿರುವ ಕಂಪನಿಗಳೊಂದಿಗೆ ಸೇರ್ಪಡೆ ಮಾಡುವ ಕ್ರಮಕ್ಕೆ ರಿಲಯನ್ಸ್ ಮುಂದಾಗಲಿದೆ.

ಸದ್ಯ ಇರುವ DHT ಕಂಪನಿಗಳು:

ಸದ್ಯ ಇರುವ DHT ಕಂಪನಿಗಳು:

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಜಿ ಒಡೆತದ ಡಿಶ್ ಟಿವಿ, ರಿಲಯನ್ಸ್ ಡಿಜಿಟಲ್ ಟಿವಿ, ಟಾಟಾ ಸ್ಕೈ, ವಿಡಿಯೋಕಾನ್ d2h, ಸನ್ ಡೈರೆಕ್ಟ್, ಏರ್‌ಟೆಲ್ ಡಿಜಿಟಲ್ ಟಿವಿ, ಮತ್ತು ಸರಕಾರಿ ಒಡೆತನದ DD ಡೈರೆಕ್ಟ್ ಪ್ಲಸ್ ಸೇವೆಯನ್ನು ನೀಡುತ್ತಿವೆ.

ಬರಲಿದೆ ಜಿಯೋ:

ಬರಲಿದೆ ಜಿಯೋ:

ಈಗಾಗಲೇ ಮಾರುಕಟ್ಟೆಗೆ ಪ್ರವೇಶ ಪಡೆಯಲು ಜಿಯೋ ತುದಿಗಾಲಿನಲ್ಲಿ ನಿಂತಿದ್ದು, ಜಿಯೋ ಬಂದರೆ ಮಾರುಕಟ್ಟೆಯಲ್ಲಿ ಹವಾ ಖಂಡಿತ ಸೃಷ್ಟಿಯಾಗಲಿದ್ದು, ಇದರಿಂದಾಗಿ ಬೇರೆ ಕಂಪನಿಗಳು ಈಗಾಗಲೇ ಸ್ಪರ್ಧೆಯನ್ನು ಎದುರಿಸಲು ಸಜ್ಜಾಗಿವೆ ಎನ್ನಲಾಗಿದೆ.

Best Mobiles in India

English summary
Reliance Communications to shut down DTH business. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X