ರಿಯಲನ್ಸ್ ಡಿಜಿಟಲ್ ಬ್ಲ್ಯಾಕ್ ಫ್ರೈಡೇ ಸೇಲ್: ಈ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್!
ಬಹುನಿರೀಕ್ಷಿತ ರಿಲಯನ್ಸ್ ಡಿಜಿಟಲ್ ನ 'ಬ್ಲ್ಯಾಕ್ ಫ್ರೈಡೇ' ಸೇಲ್ ಈಗ ಪ್ರಾರಂಭ ಆಗಿದೆ. ಈ ಮಾರಾಟದಲ್ಲಿ ಭರ್ಜರಿ ಆಫರ್‌ಗಳು ಗ್ರಾಹಕರಿಗೆ ಕೈಗೆ ಸಿಗುತ್ತದೆ. ನವೆಂಬರ್ 28 ರಿಂದ ಆರಂಭವಾಗಿರುವ ಈ ಮಾರಾಟ ಇದೇ ಡಿಸೆಂಬರ್ 2 ರ ತನಕ ಚಾಲ್ತಿ ಇರಲಿದೆ. ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್ ಟಾಪ್, ಗೃಹೋಪಯೋಗಿ ಉತ್ಪನ್ನಗಳ ಮೇಲೆ ಬೊಂಬಾಟ್ ರಿಯಾಯಿತಿ ದೊರೆಯಲಿವೆ.
ಈ ಸೇಲ್‌ನಲ್ಲಿ ಗ್ರಾಹಕರು ಐಸಿಐಸಿಐ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಮತ್ತು ಒನ್ ಕಾರ್ಡ್ ನಿಂದ ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ 10,000 ರೂ. ಗಳ ಇನ್‌ಸ್ಟಂಟ್ ರಿಯಾಯಿತಿಯನ್ನು ಪಡೆಯಬಹುದು. ಕನ್ಸ್ಯೂಮರ್ ಡ್ಯೂರಬಲ್ಸ್ ಲೋನ್‌ಗಳನ್ನು ಆಯ್ಕೆ ಮಾಡುವವರಿಗೆ, ಫೈನಾನ್ಸ್ ಪಾಲುದಾರರಾದ ಬಜಾಜ್ ಫಿನ್‌ಸರ್ವ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ 22,500ರೂ. ಗಳ ವರೆಗೆ ಕ್ಯಾಶ್‌ಬ್ಯಾಕ್ ಲಭ್ಯವಿದೆ.

ಈ ಬ್ಲ್ಯಾಕ್ ಫ್ರೈಡೇ ಸೀಮಿತ ಸಮಯದ ಕೊಡುಗೆಗಳು ಕೊನೆ ಆಗುವ ಮೊದಲಿಗೆ ಟೆಕ್ನಾಲಜಿಯಲ್ಲಿ ಅತ್ಯುತ್ತಮವಾದದ್ದನ್ನು ಖರೀದಿಸುವುದಕ್ಕೆ ರಿಲಯನ್ಸ್ (Reliance) ಡಿಜಿಟಲ್‌ಗೆ ಭೇಟಿ ನೀಡಿದರೆ ಆಯಿತು. ಆಸಕ್ತ ಖರೀದಿದಾರರು ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ ಹಾಗೂ reliancedigital.in ಮೂಲಕ ಗ್ರಾಹಕರು ಉತ್ಪನ್ನಗಳನ್ನು ಖರೀದಿ ಮಾಡಿಕೊಳ್ಳಬಹುದಾಗಿದೆ.
ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಆಪಲ್ ಉತ್ಪನ್ನಗಳನ್ನು ಖರೀದಿಸಲು ರಿಲಯನ್ಸ್ ಡಿಜಿಟಲ್ ಗ್ರಾಹಕರಿಗೆ ಎಲ್ಲ ಕಾರಣಗಳನ್ನು ನೀಡುತ್ತದೆ. ಐಫೋನ್ 16 ಅನ್ನು ಕೇವಲ ರೂ. 70900ಕ್ಕೆ ನಂಬುವುದಕ್ಕೆ ಸಾಧ್ಯವಾಗದ ಬೆಲೆಯಲ್ಲಿ ಪಡೆಯಬಹುದು. ಐಪ್ಯಾಡ್‌ಗಳನ್ನು ತಿಂಗಳಿಗೆ ರೂ.1371ಗಳಿಂದ ಪ್ರಾರಂಭಿಸಿ ಖರೀದಿಸಬಹುದು. ಇನ್ನು ರಿಲಯನ್ಸ್ ಡಿಜಿಟಲ್‌ನಲ್ಲಿ ಆಪಲ್ ವಾಚ್ ಅನ್ನು ಖರೀದಿಸಿ, ನೀವು ನಡೆದಾಡುವಾಗ ಪಾಯಿಂಟ್ ಗಳನ್ನು ಗಳಿಸಿ ಮತ್ತು ನಿರ್ದಿಷ್ಟ ಮೈಲುಗಲ್ಲನ್ನು ತಲುಪಿದ ನಂತರ ಆಪಲ್ ವಾಚ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು!
ನೆಚ್ಚಿನ ಸೈಡ್-ಬೈ-ಸೈಡ್ ರೆಫ್ರಿಜರೇಟರ್ ಅನ್ನು ಖರೀದಿಸಿ ಮತ್ತು 25000ರೂ. ಗಳ ತನಕ ತಕ್ಷಣದ ರಿಯಾಯಿತಿ ಪಡೆಯಬಹುದು. ಫಿಲಿಪ್ಸ್ ಏರ್ ಫ್ರೈಯರ್ ಮೌಲ್ಯ 8995ರೂ. ಮೌಲ್ಯದ್ದು ಕೇವಲ 1999ರೂ. ಗಳಿಗೆ ಪಡೆಯಬಹುದಾಗಿದೆ. ಫ್ರಂಟ್ ಲೋಡ್ ವಾಷಿಂಗ್ ಮಶೀನ್ ಗಳ ಮೇಲೆ 12000ರೂ. ತನಕ ತಕ್ಷಣದ ರಿಯಾಯಿತಿ ಮತ್ತು ಫಿಲಿಪ್ಸ್ ಏರ್ ಫ್ರೈಯರ್ 8995ರೂ. ಮೌಲ್ಯದ್ದು ಕೇವಲ 1499ರೂ. ಗಳಿಗೆ ದೊರೆಯುತ್ತದೆ.
ಬಿಪಿಎಲ್ 1.5 ಟನ್ 3 ಸ್ಟಾರ್ ಏಸಿ ಕೇವಲ 29990ರೂ. ಗಳಿಗೆ ಸಿಗುತ್ತದೆ. ಸ್ಮಾರ್ಟ್ ಇನ್ವರ್ಟರ್ ಏಸಿಗಳಲ್ಲಿ ಕೆಲವು ಸೂಪರ್-ಕೂಲ್ ಆಫರ್‌ಗಳೂ ಇವೆ. ಶಕ್ತಿಶಾಲಿ ಗೇಮಿಂಗ್ ಲ್ಯಾಪ್‌ಟಾಪ್‌ಗಳೊಂದಿಗೆ ಉನ್ನತ ಶ್ರೇಣಿಯ ಗೇಮಿಂಗ್ ಅನ್ನು ಅತ್ಯುತ್ತಮ ಬೆಲೆಯಲ್ಲಿ ಪಡೆಯಬಹುದು, ಕೇವಲ 46,990ರೂ. ರಿಂದ ಪ್ರಾರಂಭವಾಗುತ್ತದೆ.
ಸಿನಿಮಾ ತರಹದ ದೃಶ್ಯ ಗುಣಮಟ್ಟವನ್ನು ಮನೆಗೆ ತರಲು OLED ಸ್ಮಾರ್ಟ್ ಟಿವಿಗಳ ಮೇಲೆ 26000ರೂ. ತನಕ ತಕ್ಷಣದ ರಿಯಾಯಿತಿ ದೊರೆಯುತ್ತದೆ. ಖರೀದಿ ಮಾಡಿದ ನಂತರ 36990ರೂ. ಗಳ ಮೌಲ್ಯದ ಉಚಿತ ಟಿವಿಯನ್ನು ಅಥವಾ 18990ರೂ. ಮೌಲ್ಯದ ಜೆಬಿಎಲ್ ಸೌಂಡ್ ಬಾರ್ ಪಡೆಯಬಹುದು.
ಸೋನಿ C510 ಟ್ರೂಲಿ ವೈರ್‌ಲೆಸ್ ಇಯರ್ ಬಡ್ಸ್ 8990ರೂ. ಮೌಲ್ಯದ್ದು ಈಗ ಕೇವಲ 3990ರೂ. ಗಳಲ್ಲಿ ಲಭ್ಯವಿದೆ. ಸ್ಯಾಮ್‌ಸಂಗ್ 3.1 ಚಾನೆಲ್ B650D ಸೌಂಡ್ ಬಾರ್ ಈಗ ಕೇವಲ 15990ರೂ. ರಲ್ಲಿ ಸಿಗಲಿದ್ದು, ಶೇ 50ರಷ್ಟು ಉಳಿತಾಯದ ಬೆಲೆ ಇದಾಗಿದೆ.
ಸಣ್ಣ ಮತ್ತು ಗೃಹೋಪಯೋಗಿ ಉಪಕರಣಗಳ ಮೇಲೆ ಇನ್ನಷ್ಟು ಖರೀದಿಸಿ, ಇನ್ನಷ್ಟು ಉಳಿಸಿ' ಆಫರ್ ಇದೆ. ಈ ಮೂಲಕ ಗ್ರಾಹಕರು ತಮ್ಮ ಮನೆ ಮತ್ತು ಅಡುಗೆಮನೆಯನ್ನು ನವೀಕರಿಸಿಕೊಳ್ಳಬಹುದು. 1 ವಸ್ತು ಖರೀದಿಸಿದಲ್ಲಿ ಶೇ 5ರಷ್ಟು ಕಡಿತ ಪಡೆಯಿರಿ, 2 ವಸ್ತುವನ್ನು ಖರೀದಿಸಿದಲ್ಲಿ ಶೇ 10ರ ಕಡಿತ, ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಸ್ತುಗಳ ಖರೀದಿಗೆ ಶೇ 15ರ ಕಡಿತ ಮತ್ತು ಅನಿಯಮಿತ ರಿಯಾಯಿತಿಗಳನ್ನು ಪಡೆಯಬಹುದು.


Click it and Unblock the Notifications








