Subscribe to Gizbot

ಇಂದು ರಾತ್ರಿ ಮುಖೇಶ್ ಅಂಬಾನಿ ಘೋಷಿಸಲಿರುವ ಹೊಸ ಪ್ಲಾನ್, ಯೋಜನೆ ಏನು,,?

Written By:

ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಮಾಡಿರುವ ಸಾಧನೆಯನ್ನು ಯಾರು ಮರೆಯಲು ಸಾಧ್ಯವೆ ಇಲ್ಲ. ಇದರ ಹಿಂದೆ ಮುಖೇಶ್ ಅಂಬಾನಿ ಶ್ರಮವು ಎದ್ದು ಕಾಣಲಿದೆ. ಇದೇ ಮುಖೇಶ್ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಇಂಡಸ್ಟ್ರಿಸ್ 40ನೇ ವರ್ಷಕ್ಕೆ ಕಾಲಿಟ್ಟಿದ್ದು, ಇದೇ ಸಂದರ್ಭದಲ್ಲಿ ರಿಲಯನ್ಸ್ ಫ್ಯಾಮಿಲಿ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ರಿಲಯನ್ಸ್ ನ ಮುಂದಿನ ಪ್ಲಾನ್ ಕುರಿತಾದ ಮಾಹಿತಿಗಳನ್ನು ನೀಡುವ ಸಾಧ್ಯತೆ ಇದೆ.

ಇಂದು ರಾತ್ರಿ ಮುಖೇಶ್ ಅಂಬಾನಿ ಘೋಷಿಸಲಿರುವ ಹೊಸ ಪ್ಲಾನ್, ಯೋಜನೆ ಏನು,,?

ಓದಿರಿ: ಮೊಬೈಲ್ ಡೇಟಾ ಸಾಲುತ್ತಿಲ್ಲವೇ..? ಈ ಟ್ರಿಕ್ ಬಳಕೆ ಮಾಡಿಕೊಳ್ಳಿ..!

ಈ ರಿಲಯನ್ಸ್ ಫ್ಯಾಮಿಲಿ ಡೇ ಕಾರ್ಯಕ್ರಮದಲ್ಲಿ ಬಾಲಿವುಡ್ ದಂಡೆ ಕಾಣಿಸಿಕೊಳ್ಳಲಿದೆ. ಶಾರುಕ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಮುಂದಾಳತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಲಿಯಾ ಭಟ್, ವರುಣ್ ಧವನ್, ಸೋನು ನಿಗಮ್ ಆಗಮಿಸಲಿದ್ದಾರೆ. ಈ ಕಾರ್ಯಕ್ರಮವು ಭರ್ಜರಿಯಾಗಿ ನಡೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ತಲೆ ಮಾರಿನ ಆಗಮನ:

ಹೊಸ ತಲೆ ಮಾರಿನ ಆಗಮನ:

ಈ ಕಾರ್ಯಕ್ರಮದಲ್ಲಿ ರಿಲಯನ್ಸ್ ಮ್ಯಾನೆಜ್ ಮೆಂಟಿಗೆ ಹೊಸ ತಲೆ ಮಾರಿನ ಅಂಬಾನಿ ಫ್ಯಾಮಿಲಿ ಕಾಲಿಡಲಿದೆ ಎನ್ನಲಾಗಿದೆ. ಮುಖೇಶ್ ಅಂಬಾನಿ ಮಕ್ಕಳು ಮ್ಯಾನೆಜ್ ಮೆಂಟ್ ನಲ್ಲಿ ಸೇರ್ಪಡೆಯಾಗಲಿದ್ದು, ಅಧಿಕಾರವು ಮುಂದಿನ ತಲೆ ಮಾರಿಗೆ ವರ್ಗಾವಣೆ ಆಗಲಿದೆ.

ಹೊಸ ಯೋಜನೆಗಳು:

ಹೊಸ ಯೋಜನೆಗಳು:

ಇದೇ ಸಂದರ್ಭದಲ್ಲಿ ರಿಲಯನ್ಸ್ ನ ಮುಂದಿನ ಪ್ಲಾನ್‌ಗಳ ಬಗ್ಗೆ ಮಾಹಿತಿಯನ್ನು ನೀಡಲು ಮುಖೇಶ್ ಮುಂದಾಗಲಿದ್ದಾರೆ ಎನ್ನಲಾಗಿದೆ. ಜಿಯೋ DHT, ಜಿಯೋ ಫೈಬರ್ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನುವ ಮಾಹಿತಿಯೂ ಲೀಕ್ ಆಗಿದೆ.

ಗ್ರಾಹಕರಿಗೆ ಹೆಚ್ಚಿನ ಲಾಭ:

ಗ್ರಾಹಕರಿಗೆ ಹೆಚ್ಚಿನ ಲಾಭ:

ರಿಲಯನ್ಸ್ ಫ್ಯಾಮಿಲಿ ಡೇ ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡಲು ಮುಂದಾಗಿದ್ದು, ಇದಕ್ಕಾಗಿಯೇ ಹೆಚ್ಚಿನ ಆಧ್ಯತೆಯನ್ನು ನೀಡಲಿದ್ದು, ರಿಲಯನ್ಸ್ ಗ್ರಾಹಕರಿಗೆ ಹೊಸ ಆಫರ್ ಗಳನ್ನು ಜಿಯೋ ಮೂಲಕ ನೀಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Family Day: RIL set to celebrate annual event. to knwo more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot