Home
ಸುದ್ದಿಜಾಲ

ರಿಲಯನ್ಸ್‌ ಮಹತ್ವದ ಹೆಜ್ಜೆ: ಡೇಟಾ ಸೆಂಟರ್ ಅಭಿವೃದ್ಧಿಯಲ್ಲಿ ಹೊಸ ಒಪ್ಪಂದದ ಘೋಷಣೆ!

ಭಾರತದಲ್ಲಿ ಡೇಟಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಸ್ಥಾಪಿಸಲಾದ ತಮ್ಮ ಭಾರತೀಯ ಸ್ಪೆಷಲ್ ಪರ್ಪಸ್ ವೆಹಿಕಲ್ (SPV) ಗಳಲ್ಲಿ ಬ್ರೂಕ್‌ಫೀಲ್ಡ್ ಇನ್‌ಫ್ರಾಸ್ಟ್ರಕ್ಚರ್ ಹಾಗೂ ಡಿಜಿಟಲ್ ರಿಯಾಲ್ಟಿ ಜೊತೆಗೆ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಘೋಷಿಸಿದೆ. ಸಂಸ್ಥೆಯು ಪ್ರತಿ ಭಾರತೀಯ SPV ಗಳಲ್ಲಿ ಶೇ 33.33 ರಷ್ಟು ಪಾಲನ್ನು ಹೊಂದಿರುತ್ತದೆ ಮತ್ತು ಸಮಾನ ಪಾಲುದಾರ ಆಗುತ್ತದೆ ಎಂದಿದೆ.

ಡಿಜಿಟಲ್ ರಿಯಾಲ್ಟಿ ಟ್ರಸ್ಟ್, ಇಂಕ್. ಎಂಬುದು 27 ದೇಶಗಳಾದ್ಯಂತ 300+ ಡೇಟಾ ಕೇಂದ್ರಗಳೊಂದಿಗೆ ಜಾಗತಿಕವಾಗಿ ಕ್ಲೌಡ್ ಮತ್ತು ಕ್ಯಾರಿಯರ್-ನ್ಯೂಟ್ರಲ್ ಡೇಟಾ ಸೆಂಟರ್, ಸಂಪರ್ಕ ಮತ್ತು ಅಂತರ್ ಸಂಪರ್ಕ ಸಲ್ಯೂಷನ್ ಒದಗಿಸುವ ಅತಿದೊಡ್ಡ ಪೂರೈಕೆದಾರ ಆಗಿದೆ. ಅವರು ಬ್ರೂಕ್‌ಫೀಲ್ಡ್ ಇನ್‌ಫ್ರಾಸ್ಟ್ರಕ್ಚರ್‌ನೊಂದಿಗೆ ಜಂಟಿ ಉದ್ಯಮವನ್ನು ಹೊಂದಿದ್ದು, ಅದು ಭಾರತದಲ್ಲಿನ ಉದ್ಯಮಗಳು ಮತ್ತು ಡಿಜಿಟಲ್ ಸೇವೆಗಳ ಸಂಸ್ಥೆಗಳ ನಿರ್ಣಾಯಕ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಲು ಉತ್ತಮ-ಗುಣಮಟ್ಟದ, ಹೆಚ್ಚು-ಸಂಪರ್ಕಿತ, ವ್ಯಾಪಕ ಡೇಟಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ.

ರಿಲಯನ್ಸ್‌ ಮಹತ್ವದ ಹೆಜ್ಜೆ: ಡೇಟಾ ಸೆಂಟರ್ ಅಭಿವೃದ್ಧಿಯಲ್ಲಿ ಹೊಸ ಒಪ್ಪಂದದ ಘೋಷಣೆ!

ಈ ಜಂಟಿ ಉದ್ಯಮವು ಚೆನ್ನೈ ಮತ್ತು ಮುಂಬೈನ ಮಾರ್ಕ್ಯೂ ಪ್ರದೇಶಗಳಲ್ಲಿ ಡೇಟಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಮೊದಲ 20 ಮೆಗಾವಾಟ್ (MW) ಗ್ರೀನ್‌ಫೀಲ್ಡ್ ಡೇಟಾ ಸೆಂಟರ್ (MAA10) ಚೆನ್ನೈನ 100 MW ಕ್ಯಾಂಪಸ್‌ನಲ್ಲಿ 2023 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಈ ಜಂಟಿ ಉದ್ಯಮ 40 ಮೆಗಾವಾಟ್ ಡೇಟಾ ಸೆಂಟರ್ ನಿರ್ಮಿಸಲು ಇತ್ತೀಚೆಗೆ ಮುಂಬೈನಲ್ಲಿ 2.15 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ತಿಳಿಸಿತು.

ದೇಶದಲ್ಲಿ ಡೇಟಾ ಸೆಂಟರ್ ಸಾಮರ್ಥ್ಯವು ಮುಂದಿನ ಕೆಲವು ವರ್ಷಗಳಲ್ಲಿ ಬಹು-ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಜಾಗತಿಕವಾಗಿ ಅತಿ ಹೆಚ್ಚು ಮೊಬೈಲ್ ಡೇಟಾ ಗ್ರಾಹಕರಲ್ಲಿ ಭಾರತೀಯರು ಈಗಾಗಲೇ ಇದ್ದಾರೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಗೇಮಿಂಗ್ ಮತ್ತು ನಡೆಯುತ್ತಿರುವ 5ಜಿ ಜಾರಿಯಂಥ ‌ವಿವಿಧ ಡಿಜಿಟಲ್ ಸೇವೆಗಳಿಗೆ ಸಂಪರ್ಕ ಹೆಚ್ಚಿಸುವುದರೊಂದಿಗೆ ಇದು ಮತ್ತಷ್ಟು ಅಧಿಕವಾಗುತ್ತದೆ. ಉದ್ಯಮಗಳು 5ಜಿ ಬಳಕೆಯ ಪ್ರಕರಣಗಳನ್ನು ಅಳವಡಿಸಿಕೊಳ್ಳುವುದರಿಂದ ಇಂಟರ್ ನೆಟ್ ಆಫ್ ಥಿಂಗ್ಸ್ (IoT) ಮತ್ತು ಕೃತಕ ಬುದ್ಧಿಮತ್ತೆ (AI) ಯಂತಹ ಡೇಟಾ-ವ್ಯಾಪಕ ಬಳಕೆ ತಂತ್ರಜ್ಞಾನಗಳ ಅಳವಡಿಕೆಗೆ ಕಾರಣವಾಗುತ್ತದೆ.

ಜನರೇಟಿವ್ ಕೃತಕ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಆವಿಷ್ಕಾರಗಳನ್ನು ಹಾರ್ಡ್‌ವೇರ್ ಮತ್ತು ಡೇಟಾ ಸೆಂಟರ್ ಮೂಲಸೌಕರ್ಯದಿಂದ ಸಕ್ರಿಯ ಗೊಳಿಸಲಾಗಿದ್ದು, ಇವುಗಳ ಅವಶ್ಯಕತೆಯು ಭಾರೀ ಪ್ರಮಾಣದಲ್ಲಿ ಅಧಿಕವಾಗಲು ಇದನ್ನು ಹೊಂದಿಸಲಾಗಿದೆ. ದೇಶದೊಳಗೆ ವೈಯಕ್ತಿಕ ಡೇಟಾ ಇಲ್ಲೇ ದೊರಕುವುದಕ್ಕೆ ಹೆಚ್ಚಿನ ಒತ್ತು ಒದಗಿಸಲಾಗಿದೆ. ಈ ಡ್ರೈವರ್‌ಗಳು ಡೇಟಾ ಸೆಂಟರ್ ಅನ್ನು ಗಣನೀಯವಾಗಿ ವೃದ್ಧಿಸುತ್ತವೆ ಮತ್ತು ದೇಶದ ಸಾಮರ್ಥ್ಯದ ಅವಶ್ಯಕತೆಗಳನ್ನು ಅಳೆಯುತ್ತವೆ

ಬ್ರೂಕ್‌ಫೀಲ್ಡ್‌ನ (Brookfield) ಅತ್ಯುತ್ತಮ ಜ್ಞಾನವು ಭಾರತೀಯ ಮೂಲಸೌಕರ್ಯ ಮಾರುಕಟ್ಟೆಯೊಂದಿಗೆ, ಭಾರತದಲ್ಲಿ ಜಿಯೋದ ಅಸ್ತಿತ್ವದಲ್ಲಿರುವ ಶೇ 80ರಷ್ಟು ದೊಡ್ಡ ಖಾಸಗಿ ಉದ್ಯಮಗಳ ಗ್ರಾಹಕರ ಜತೆ ಪ್ರಬಲ ಸಂಪರ್ಕ ಮತ್ತು ಡಿಜಿಟಲ್ ಸಂಪರ್ಕ ಪಡೆದಿದೆ.

ಜಿಯೋದ ವಿಶ್ವ ದರ್ಜೆಯ, ಆಲ್-ಐಪಿ, ಪ್ರಬಲ ಡೇಟಾ ಸ್ಟ್ರಾಂಗ್, ಭವಿಷ್ಯದ ಅವಕಾಶ, ಆಳವಾದ ಫೈಬರ್ ಇರುವಿಕೆಯೊಂದಿಗೆ 4ಜಿ ಮತ್ತು 5ಜಿ ಸಂಪರ್ಕ ನೆಟ್‌ವರ್ಕ್, ಭಾರತೀಯ ಜನಸಂಖ್ಯೆಯ ಶೇ 99.5ರಷ್ಟನ್ನು ಒಳಗೊಂಡಿದೆ. ದೇಶದ ಡೇಟಾ ಕೇಂದ್ರಗಳು ಮತ್ತು ಇತರ ಸಂಸ್ಥೆಗಳಿಗೆ ಜಂಟಿ ಉದ್ಯಮವು ಸಂಪರ್ಕವನ್ನು ಕಾರ್ಯತಂತ್ರವಾಗಿ ವಿಸ್ತರಿಸುತ್ತದೆ. ಈ ಸೇವೆಯು ಪ್ಲಾಟ್ಫಾರ್ಮ್ ಡಿಜಿಟಲ್ ವ್ಯಾಪ್ತಿಯನ್ನು ವಿಸ್ತಾರ ಮಾಡುತ್ತದೆ.

ಡಿಜಿಟಲ್ ರಿಯಾಲ್ಟಿಯ ಬೆಸ್ಟ್‌ ಜಾಗತಿಕ ಡೇಟಾ ಸೆಂಟರ್ ಪ್ಲಾಟ್‌ಫಾರ್ಮ್ 300+ ಡೇಟಾ ಸೆಂಟರ್‌ಗಳು, 50+ ಮೆಟ್ರೋಗಳಲ್ಲಿ, 27 ದೇಶಗಳು ಮತ್ತು 6 ಖಂಡಗಳಲ್ಲಿ ಗ್ರಾಹಕರಿಗೆ ಸಂಪರ್ಕಿತ ಡೇಟಾ ಸಮುದಾಯದ ಪಾಲುದಾರಿಕೆ ನೀಡುತ್ತದೆ. ಜೊತೆಗೆ ಪರಿಹಾರಗಳು ಹಾಗೂ ಸೇವೆಗಳು, ಜಿಯೋದ ನೆಟ್‌ವರ್ಕ್, ಕ್ಲೌಡ್ ಸೇರಿದಂತೆ ಇತರ ಸೇವಾ ಪರಿಹಾರಗಳು ಒದಗಿಸುತ್ತವೆ.

Best Mobiles in India

English summary
Reliance Industries partners Brookfield for data centre business in India. all details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+