ರಿಲಯನ್ಸ್ ಜಿಯೋ 2ಜಿಬಿ/ದಿನ ಡಾಟಾ ಪ್ಯಾಕ್:ಬೆಲೆ, ಲಾಭಗಳು ಮತ್ತು ಇತ್ಯಾದಿ ವಿವರಗಳು
ರಿಲಯನ್ಸ್ ಜಿಯೋ ಸಂಸ್ಥೆ ಜಿಯೋ ಹೆಸರಿನಲ್ಲಿ ಸಾಕಷ್ಟು ವಯರ್ ಲೆಸ್ ಟೆಲಿಕಾಂ ಸೇವೆಗಳನ್ನು ಒದಗಿಸುತ್ತದೆ ಮತ್ತು ವಿಭಿನ್ನ ರೀಚಾರ್ಜ್ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸಿಕೊಡುತ್ತದೆ. ಜಿಯೋ ಸಂಸ್ಥೆ 2ಜಿಬಿ ಹೈ ಸ್ಪೀಡ್ ಡಾಟಾವನ್ನು ಪ್ರತಿದಿನ ಒದಗಿಸುತ್ತದೆ. ರುಪಾಯಿ 198 ರಿಂದ ರುಪಾಯಿ 498 ರ ವರೆಗೆ ರಿಲಯನ್ಸ್ ಜಿಯೋ ಸಂಸ್ಥೆ ಪ್ರತಿದಿನ ಹೈ ಸ್ಪೀಡ್ ಡಾಟಾವನ್ನು 2ಜಿಬಿ ಉಚಿತವಾಗಿ ನೀಡುತ್ತದೆ ಮತ್ತು ಇದರ ವ್ಯಾಲಿಡಿಟಿ 28 ದಿನಗಳಿಂದ ಆರಂಭವಾಗಿ 91 ದಿನಗಳ ವರೆಗೂ ಕೂಡ ಇದೆ.

ಮುಖೇಶ್ ಅಂಬಾನಿಯ ಟೆಲಿಕಾಂ ಸಂಸ್ಥೆ ಭಾರತದಲ್ಲಿರುವ ಹೊಸ ಟೆಲಿಕಾಂ ಸಂಸ್ಥೆ ಆದರೆ ಇಂಡಸ್ಟ್ರಿಯಲ್ಲಿ ವಿಭಿನ್ನವಾಗಿರುವ ರೀಚಾರ್ಜ್ ಪ್ಲಾನ್ ಗಳನ್ನು ಮತ್ತು ಕೈಗೆಟುಕುವ ಬೆಲೆಯ ಪ್ಲಾನ್ ಗಳನ್ನು ಒದಗಿಸಿ ಮಾರುಕಟ್ಟೆಯ ಶೇರ್ ನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ರಿಲಯನ್ಸ್ ಸಂಸ್ಥೆ ಮಾಡಿದೆ.
ರಿಲಯನ್ಸ್ ಜಿಯೋ ರೀಚಾರ್ಜ್ ಪ್ಲಾನ್ ಗಳು -2ಜಿಬಿ/ಡೇ ಆಫರ್ ಗಳು

ರುಪಾಯಿ.198 ರಿಚಾರ್ಜ್ ಪ್ಲಾನ್:
ರುಪಾಯಿ 198 ರ ರೀಚಾರ್ಜ್ ಪ್ಲಾನ್ ನಲ್ಲಿ ಜಿಯೋ ಚಂದಾದಾರರು 2ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಡಾಟಾವನ್ನು 28 ದಿನಗಳ ಅವಧಿಗೆ ಪಡೆದುಕೊಳ್ಳಲಿದ್ದಾರೆ. ಇದರ ಜೊತೆಗೆ ಉಚಿತ ವಾಯ್ಸ್ ಕರೆಗಳು ಮತ್ತು ಅನಿಯಮಿತ ಎಸ್ಎಂಎಸ್ ಗಳು( ಪ್ರತಿದಿನ 100ಎಸ್ಎಂಎಸ್) ಗಳು ಉಚಿತವಾಗಿರುತ್ತದೆ.

ರುಪಾಯಿ. 398 ರಿಚಾರ್ಜ್ ಪ್ಲಾನ್:
398 ರುಪಾಯಿ ರೀಚಾರ್ಜ್ ಮಾಡಿಕೊಳ್ಳುವುದರಿಂದಾಗಿ ಜಿಯೋ ಚಂದಾದಾರರು 2ಜಿಬಿ ಹೈ ಸ್ಪೀಡ್ ಇಂಟರ್ನೆಟ್ ನ್ನು ಪ್ರತಿದಿನ ಪಡೆಯಲಿದ್ದು ಇದರ ಅವಧಿ 70 ದಿನಗಳಾಗಿರುತ್ತದೆ. ಇದರ ಜೊತೆಗೆ ಜಿಯೋ ಚಂದಾದಾರರು ಉಚಿತ ವಾಯ್ಸ್ ಕರೆಗಳು ಮತ್ತು ಅನಿಯಮತಿ ಎಸ್ಎಂಎಸ್ (100ಎಸ್ಎಂಎಸ್) ಪ್ರತಿದಿನ ಉಚಿತವಾಗಿ ಕಳುಹಿಸುವುದಕ್ಕೆ ಅವಕಾಶವಿರುತ್ತದೆ.

ರುಪಾಯಿ. 448 ರಿಚಾರ್ಜ್ ಪ್ಲಾನ್:
ಈ ಪ್ಲಾನಿನ ಅಡಿಯಲ್ಲಿ ಚಂದಾದಾರರು 448 ರುಪಾಯಿ ರೀಚಾರ್ಜ್ ಮಾಡಿಸಿಕೊಂಡರೆ 2ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಪ್ರತಿ ದಿನ ಲಭ್ಯವಿರುತ್ತದೆ ಮತ್ತು ಅದರ ಅವಧಿ 84 ದಿನಗಳಾಗಿರುತ್ತದೆ. ಈ ಅವಧಿಯಲ್ಲಿ ಉಚಿತ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100ಎಸ್ಎಂಎಸ್ ನ್ನು ಉಚಿತವಾಗಿ ಕಳುಹಿಸುವುದಕ್ಕೆ ಅವಕಾಶವಿರುತ್ತದೆ.

ರುಪಾಯಿ. 498 ರಿಚಾರ್ಜ್ ಪ್ಲಾನ್:
498 ರುಪಾಯಿಯ ರೀಚಾರ್ಜ್ ಮಾಡಿಸಿಕೊಂಡಲ್ಲಿ ಗ್ರಾಹಕರು 2ಜಿಬಿ ಡಾಟಾವನ್ನು ಉಚಿತವಾಗಿ 91 ದಿನಗಳ ಅವದಿಗೆ ಪಡೆದುಕೊಳ್ಳಲಿದ್ದಾರೆ ಮತ್ತು ಉಚಿತ ವಾಯ್ಸ್ ಕರೆಗಳು, 100ಎಸ್ಎಂಎಸ್ ಪ್ರತಿದಿನ ಕಳುಹಿಸುವುದಕ್ಕೆ ಅವಕಾಶವಿರುತ್ತದೆ ಎಂದು ಜಿಯೋ.ಕಾಮ್ ತಿಳಿಸುತ್ತದೆ.
ಇದೆಲ್ಲದರ ಜೊತೆಗೆ ಈ ಪ್ಲಾನ್ ಗಳ ಅಡಿಯಲ್ಲಿ ಜಿಯೋ ಮೊಬೈಲ್ ಅಪ್ಲಿಕೇಷನ್ನಿಗೆ ಕಾಂಪ್ಲಿಮೆಂಟರಿ ಚಂದಾದಾರಿಕೆಯು ಲಭ್ಯವಾಗುತ್ತದೆ.


Click it and Unblock the Notifications








