Subscribe to Gizbot

ಫಸ್ಟ್ ಬ್ಯಾಡ್ ನ್ಯೂಸ್ ಫಾರ್ ಜಿಯೋ...ಜಿಯೋಗಿಂತ ಏರ್‌ಟೆಲ್, ವೊಡಾಫೊನ್ ಮುಂದೆ!!

Written By:

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಟೆಲಿಕಾಂ ಸಂಸ್ಥೆಗಳ 4ಜಿ ಸ್ಪೀಡ್ ಡೇಟಾ ರೇಟಿಂಗ್ ಬಿಡುಗಡೆ ಮಾಡಿದ್ದು, ಡೇಟಾ ರೇಟಿಂಗ್ ಮಾಹಿತಿ ಪ್ರಕಾರ ರಿಲಯನ್ಸ್ ಜಿಯೋಗಿಂತ ಏರ್‌ಟೆಲ್ 4ಜಿ ಸ್ಪೀಡ್ ಅಧಿಕವಾಗಿದೆ ಎಂದು ತಿಳಿಸಿದೆ.

ಟ್ರಾಯ್ ಬಿಡುಗಡೆ ಮಾಡಿರುವ ಜನವರಿ ತಿಂಗಳ ಅಂಕಿಅಂಶದ ಪ್ರಕಾರ,ರಿಲಯನ್ಸ್ ಜಿಯೋ 4ಜಿ ಡೌನ್‌ಲೋಡ್ ಸ್ಪೀಡ್ 8.345 MBPS ಇದ್ದರೆ, ಏರ್‌ಟೆಲ್ 4ಜಿ ಡೌನ್‌ಲೋಡ್ ಸ್ಪೀಡ್ 11.862 MBPS ಆಗಿದೆ.

 ಫಸ್ಟ್ ಬ್ಯಾಡ್ ನ್ಯೂಸ್ ಫಾರ್ ಜಿಯೋ...ಜಿಯೋಗಿಂತ ಏರ್‌ಟೆಲ್, ವೊಡಾಫೊನ್ ಮುಂದೆ!!

ಸ್ಮಾರ್ಟ್‌ಫೋನ್ "ಹಾನರ್ 6ಎಸ್" ಖರೀದಿಸಲು ಎಲ್ಲೆಲ್ಲೂ ಕ್ಯೂ!! ಏನಿದೆ ಅಂತಹ ಫೀಚರ್?

ಡಿಸೆಂಬರ್‌ನಲ್ಲಿ ಉಳಿದ ಎಲ್ಲಾ ಕಂಪನಿಗಳಿಗಿಂತ ರಿಲಯನ್ಸ್ ಜಿಯೋ 4ಜಿ ಡೌನ್‌ಲೋಡ್ ಸ್ಪೀಡ್ ಹೆಚ್ಚಿದ್ದು, 18.146 MBPS ವೇಗದಲ್ಲಿ ಜನರಿಗೆ 4G ಸೇವೆ ಸಿಗುತ್ತಿತ್ತು, ಆದರೆ, ಜನವರಿಯಲ್ಲಿ ಜಿಯೋ 4ಜಿ ಡೌನ್‌ಲೋಡ್ ಸ್ಪೀಡ್ 8.345 MBPSಗೆ ಇಳಿದಿದೆ ಎಂದು ಟ್ರಾಯ್ ತಿಳಿಸಿದೆ.

 ಫಸ್ಟ್ ಬ್ಯಾಡ್ ನ್ಯೂಸ್ ಫಾರ್ ಜಿಯೋ...ಜಿಯೋಗಿಂತ ಏರ್‌ಟೆಲ್, ವೊಡಾಫೊನ್ ಮುಂದೆ!!

ಇನ್ನು ಜನವರಿ ತಿಂಗಳಲ್ಲಿ ಐಡಿಯಾ ಕಂಪನಿಯ 4ಜಿ ಸ್ಪೀಡ್ 10.562 MBPS ಆಗಿದ್ದರೆ, ಡಿಸೆಂಬರ್ ತಿಂಗಳಲ್ಲಿ ಐಡಿಯಾ 4ಜಿ ಡೌನ್ ಸ್ಪೀಡ್ 5.943 MBPಗೆ ಇಳಿದಿದೆ. ಡಿಸೆಂಬರ್ ತಿಂಗಳಲ್ಲಿ 9.666 MBPS ವೇಗದ 4ಜಿ ಸ್ಪೀಡ್ ಅನ್ನು ಹೆಚ್ಚಿಸಿಕೊಂಡಿರುವ ವೋಡಾಫೋನ್ ಜನವರಿ ತಿಂಗಳಲ್ಲಿ 10.301 MBPS ದಾಖಲಿಸಿದೆ.

English summary
Reliance Jio average 4G download speeds were at 8.345Mbps. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot