Home
ಸುದ್ದಿಜಾಲ

ಜಿಯೋಗೆ 7ರ ಸಂಭ್ರಮ: ಈ ಏಳು ವರ್ಷಗಳಲ್ಲಿ ಜಿಯೋ ಬೀರಿದ 7 ಪರಿಣಾಮಗಳು ಇವು!

ದೇಶದ ನಂಬರ್ ಒನ್ ಟೆಲಿಕಾಂ ಸಂಸ್ಥೆ ಜಿಯೋ ಇಂದಿಗೆ (ಸೆಪ್ಟೆಂಬರ್ 5, 2023) 7 ವಸಂತಗಳನ್ನು ಪೂರ್ಣಗೊಳಿಸಿದೆ. ಕಳೆದ 7 ವರ್ಷಗಳಲ್ಲಿ ಜಿಯೋ ಟೆಲಿಕಾಂನಿಂದ ದೇಶದಲ್ಲಿ ಸಾಕಷ್ಟು ಬದಲಾಗಿದೆ. ಈ ಏಳು ವರ್ಷಗಳಲ್ಲಿ ಜಿಯೋ ಬೀರಿದ 7 ಪ್ರಮುಖ ಪರಿಣಾಮಗಳೆನು ಎಂಬುದನ್ನು ಇಲ್ಲಿ ಲಿಸ್ಟ್‌ ಮಾಡಲಾಗಿದೆ. ಇವುಗಳ ಬಗ್ಗೆ ಬಳಕೆದಾರರಿಗೂ ತಿಳಿದೆ ಇದೆ. ಅದಾಗ್ಯೂ ಈ ಸಂದರ್ಭದಲ್ಲಿ ಒಮ್ಮೆ ನೆನಪಿಸಿಕೊಳ್ಳೋಣ ಬನ್ನಿ.

ಉಚಿತ ಹೊರಹೋಗುವ ಕರೆಗಳ ಸೌಲಭ್ಯ :
ಸೆಪ್ಟೆಂಬರ್ 5, 2016 ರಂದು ಲಾಂಚ್‌ ಆದ ಮೊದಲ ದಿನ ಜಿಯೋ ದೇಶದಲ್ಲಿ ದುಬಾರಿ ಆಗಿದ್ದ ಔಟ್ ಗೋಯಿಂಗ್ ಕಾಲ್ ಯುಗಕ್ಕೆ ತಿಲಾಂಜಲಿ ಹಾಕಿತು. ಔಟ್ ಗೋಯಿಂಗ್ ಕಾಲ್‌ಗಳನ್ನು ಉಚಿತ ಮಾಡಿದ ಭಾರತದ ಮೊದಲ ಸಂಸ್ಥೆ ಜಿಯೋ ಆಗಿ ಮುಂದುವರಿದಿದೆ.

ಜಿಯೋಗೆ 7ರ ಸಂಭ್ರಮ: ಈ ಏಳು ವರ್ಷಗಳಲ್ಲಿ ಜಿಯೋ ಬೀರಿದ 7 ಪರಿಣಾಮಗಳು ಇವು!

ಕಡಿಮೆಯಾದ ಡೇಟಾ ಮತ್ತು ಮೊಬೈಲ್ ಬಿಲ್‌ಗಳು :
ಡೇಟಾ ಮೊದಲು ದುಬಾರಿ ಬೆಲೆ ಇತ್ತು. ಜಿಯೋ ಸಂಸ್ಥೆಯು ಡೇಟಾ ಬೆಲೆಗಳನ್ನು ಬಹಳ ಕಡಿಮೆ ಮಾಡಿದೆ. ಡೇಟಾವು ಪ್ರತಿ ಜಿಬಿಗೆ 10ರೂ. ಕ್ಕಿಂತ ಕಡಿಮೆ ಲಭ್ಯವಾಯಿತು. ಉಚಿತ ಕರೆ ಮತ್ತು ಕಡಿಮೆ ಡೇಟಾ ಬೆಲೆಗಳಿಂದಾಗಿ, ಮೊಬೈಲ್ ಬಿಲ್‌ಗಳು ಬಹಳ ಕಡಿಮೆಯಾಗಿದೆ. ಜಿಯೋ ಬರುವ ಮೊದಲು, ಡೇಟಾ ಬಳಕೆ ವಿಷಯದಲ್ಲಿ ಭಾರತವು ವಿಶ್ವದಲ್ಲಿ 155ನೇ ಸ್ಥಾನದಲ್ಲಿತ್ತು. ಇಂದು ಭಾರತವು ಮೊದಲ ಎರಡನೇ ಸ್ಥಾನದಲ್ಲಿದೆ.

ಮೊಬೈಲ್‌ನ ಸಣ್ಣ ಸ್ಕ್ರೀನ್‌ನಲ್ಲಿ ಸಂಪೂರ್ಣ ಅಂಗಡಿ :
ಜಿಯೋ ಕಾರಣದಿಂದಾಗಿ ಡೇಟಾ ಅಗ್ಗವಾಯಿತು. ಇದರಿಂದ ಜಗತ್ತು ಕೇವಲ ಸ್ಮಾರ್ಟ್‌ಫೋನ್‌ ನಲ್ಲೇ ಸಿಕ್ಕಿಹೋಯಿತು. ಹೀಗಾಗಿ ಮನರಂಜನೆಯ ವ್ಯಾಖ್ಯಾನವೇ ಬದಲಾಗಿ ಹೋಗಿದೆ. ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮನರಂಜನೆಯು ಕೇವಲ ಒಂದು ಕ್ಲಿಕ್ ಅಷ್ಟೇ ದೂರ. ರೈಲು, ವಿಮಾನ, ಸಿನಿಮಾ ಹೀಗೆ ಎಲ್ಲದರ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಮಾಡಲಾಯಿತು.

ಹೋಟೆಲ್ ಬುಕಿಂಗ್ ಮತ್ತು ಆಹಾರ ಸೈಟ್‌ಗಳು ಮತ್ತು ಆಪ್‌ಗಳು ಹೊಸ ಎತ್ತರ ಕಾಣಲು ಶುರುವಾದವು. ಇ-ಕಾಮರ್ಸ್ ಸಂಸ್ಥೆಗಳು ಇಡೀ ಅಂಗಡಿಯನ್ನು ಮೊಬೈಲ್‌ಗೆ ತಂದಿವೆ. ಆನ್‌ಲೈನ್ ತರಗತಿ ಮತ್ತು ಕಚೇರಿ- ಕೋವಿಡ್‌ನ ಕೆಟ್ಟ ದಿನಗಳನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುತ್ತಾರೆ. ಶಿಕ್ಷಣ ಮತ್ತು ಕಚೇರಿ ಮನೆಯಿಂದಲೇ ನಡೆದವು, ಇಂದಿಗೂ ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಕೈಗೆಟುಕುವ ಬೆಲೆಯಲ್ಲಿ ಡೇಟಾ ಸಿಗದಿದ್ದರೆ ಇದು ಸಾಧ್ಯವಿತ್ತಾ?!

ಡಿಜಿಟಲ್ ಪಾವತಿ ಸೌಲಭ್ಯ :
ಭಾರತ ಸರ್ಕಾರದ ಯುಪಿಐ ಓಪನ್ ಡಿಜಿಟಲ್ ಪಾವತಿ ವ್ಯವಸ್ಥೆಯು ಎಲ್ಲವನ್ನೂ ಬದಲಾಯಿಸಿದೆ. ದೊಡ್ಡ ಮತ್ತು ಸಣ್ಣ ಬ್ಯಾಂಕ್‌ಗಳು, ಪೇಟಿಎಂ (Paytm) ಹಾಗೂ PhonePe (ಫೋನ್ ಪೇ) ನಂತಹ ವ್ಯಾಲೆಟ್ ಸಂಸ್ಥೆಗಳು ಸೇರಿದಂತೆ ಹಣಕಾಸು ದೈತ್ಯ ಸಂಸ್ಥೆಗಳು ಈ ಉಪಕ್ರಮದಲ್ಲಿ ಸೇರಿಕೊಂಡವು. ಪ್ರತಿ ಮೊಬೈಲ್‌ನಲ್ಲಿ ಪಾವತಿ ವ್ಯವಸ್ಥೆಯ ಮೂಲಕ ಹಣದ ವಹಿವಾಟು ನಡೆಸುವುದು ಇದರ ಉದ್ದೇಶವಾಗಿತ್ತು.

2G ಯಿಂದ 4G ಅಪ್‌ಗ್ರೇಡ್‌ :
ಜಿಯೋ 2017ರಲ್ಲಿ, ಮಾರುಕಟ್ಟೆಯಲ್ಲಿ ಜಿಯೋ ಫೋನ್ ಅನ್ನು ಬಿಡುಗಡೆ ಮಾಡಿತು. 2G ಗ್ರಾಹಕರನ್ನು 4G ಗೆ ಬದಲಾಯಿಸುವುದು ಇದರ ಉದ್ದೇಶವಾಗಿತ್ತು. ಇದರಿಂದ ಅವರೂ ಡಿಜಿಟಲ್ ಆರ್ಥಿಕತೆಯ ಭಾಗವಾಗಬಲ್ಲರು. 13 ಕೋಟಿಗೂ ಅಧಿಕ ಜಿಯೋಫೋನ್ ಮೊಬೈಲ್‌ಗಳು ಮಾರಾಟವಾಗಿವೆ. ಇದರ ಮುಂದುವರಿದ ಭಾಗವಾಗಿ ಸಂಸ್ಥೆಯು 2ಜಿ ಗ್ರಾಹಕರನ್ನು 4ಜಿ ಗೆ ಕರೆತರಲು ಜಿಯೋಭಾರತ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ.

ಡಿಜಿಟಲ್ ವಿಭಜನೆ ಕಡಿಮೆ ಆಗಿದೆ :
ಮೊದಲು ಶ್ರೀಮಂತರು ಮಾತ್ರ ಡೇಟಾವನ್ನು ಬಳಸಬಹುದಾಗಿತ್ತು, ಅದಕ್ಕೆ ಕಾರಣ ಏನೆಂದರೆ ದುಬಾರಿ ಡೇಟಾ ಬೆಲೆಗಳು. ಶ್ರೀಮಂತ ಮತ್ತು ಬಡವರ ನಡುವಿನ ಈ ಅಂತರವನ್ನು ಜಿಯೋ ಕಡಿಮೆ ಮಾಡಿದೆ. ಈಗ ಪ್ರತಿಯೊಬ್ಬರೂ ಸುಲಭವಾಗಿ ಡೇಟಾವನ್ನು ಬಳಸಬಹುದು. 4ಜಿ ತಂತ್ರಜ್ಞಾನವು ಈಗ ಹಳ್ಳಿಗಳನ್ನು ತಲುಪಿದೆ. ಇದರ ಪರಿಣಾಮ ಈಗ ನಗರವಾಸಿಗಳಂತೆ ಹಳ್ಳಿಗರಿಗೂ ಪ್ರತಿಯೊಂದು ಡಿಜಿಟಲ್ ಸೌಲಭ್ಯ ಲಭ್ಯ.

ಯುನಿಕಾರ್ನ್ ಮಹಾಪೂರ :
$1 ಶತಕೋಟಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸ್ಟಾರ್ಟ್ಅಪ್ ಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಜಿಯೋ ಮಾರುಕಟ್ಟೆಗೆ ಲಗ್ಗೆ ಇಡುವ ಮೊದಲು ದೇಶದಲ್ಲಿ ಕೇವಲ 4-5 ಯುನಿಕಾರ್ನ್‌ಗಳು ಇದ್ದವು ಈಗ 108 ಯುನಿಕಾರ್ನ್‌ಗಳಿಗೆ ಏರಿಕೆಯಾಗಿದೆ.

Best Mobiles in India

English summary
Reliance Jio launches special 7th year anniversary offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+