ಗೌರಿ ಗಣೇಶ ಹಬ್ಬದ ಸಂಭ್ರಮ; ನಾಳೆ ಲಾಂಚ್ ಆಗಲಿದೆ ರಿಲಯನ್ಸ್ ಜಿಯೋ ಏರ್‌ಫೈಬರ್, ಬೆಲೆ ಎಷ್ಟು?
ಭಾರತದಲ್ಲಿ ಗೌರಿ ಗಣೇಶ ಹಬ್ಬ (Gauri Ganesha festival) ವಿಶೇಷವಾದ ದಿನವಾಗಿದೆ. ಈ ದಿನದಂತೆ ಪ್ರಮುಖ ಟೆಲಿಕಾಂ ಸಂಸ್ಥೆ ಆಗಿರುವ ಜಿಯೋ ಈ ಹಿಂದೆ ಘೋಷಣೆ ಮಾಡಿದಂತೆ ಜಿಯೋ ಏರ್ ಫೈಬರ್ (Jio AirFiber) ಅನ್ನು ಲಾಂಚ್ ಮಾಡಲಿದೆ. ಈ ಡಿವೈಸ್ ಬಗ್ಗೆ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) 2023 ರ ಸಂದರ್ಭದಲ್ಲಿಯೇ ಸಂಸ್ಥೆ ಪ್ರಮುಖ ಮಾಹಿತಿಯನ್ನು ನೀಡಿತ್ತು.
ಹೌದು, ಇಡೀ ಭಾರತವೇ ಕಾತುರದಿಂದ ಕಾಯುತ್ತಿದ್ದ ಜಿಯೋ ಏರ್ ಫೈಬರ್ ಅನ್ನು ನಾಳೆ ಲಾಂಚ್ ಮಾಡಲಾಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಘೋಷಿಸಿದಂತೆ, ರಿಲಯನ್ಸ್ ಜಿಯೋವನ್ನು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಆರಂಭಿಸಲಾಗುತ್ತದೆ. ಇದನ್ನು ಸರಳವಾದ ಪ್ಲಗ್-ಅಂಡ್-ಪ್ಲೇ ಪರಿಹಾರವಾಗಿ ವಿನ್ಯಾಸಗೊಳಿಸಲಾಗಿದೆ. ಹಾಗಿದ್ರೆ ಇದು ಹೇಗೆ ಕೆಲಸ ಮಾಡಲಿದೆ?, ಭಾರತದಲ್ಲಿ ಇದರ ಬೆಲೆ ಎಷ್ಟು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಏನಿದು ಜಿಯೋ ಏರ್ ಫೈಬರ್?: ಏನಿದು ಜಿಯೋ ಏರ್ 5G ಎಂಬುದು ಪೋರ್ಟಬಲ್ ವೈರ್‌ಲೆಸ್ ಇಂಟರ್ನೆಟ್ ಸೇವೆಯಾಗಿದ್ದು, ಇದು ಸುಮಾರು 1.5 Gbps ವೇಗದ ಇಂಟರ್ನೆಟ್ ಅನ್ನು ತಲುಪಿಸಲು ವಿನ್ಯಾಸಗೊಳಿಸಲಾಗಿದೆ. ಜಿಯೋ ಏರ್ ಫೈಬರ್ ಸಹಾಯದಿಂದ, ಬಳಕೆದಾರರು ತಡೆರಹಿತ ಸ್ಟ್ರೀಮಿಂಗ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಯಾವುದೇ ವಿಳಂಬವಿಲ್ಲದೆ ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಇಂಟರ್ನೆಟ್ ವೇಗದ ಬಗ್ಗೆ ಚಿಂತಿಸದೆ ಸುಲಭವಾಗಿ ವರ್ಚುವಲ್ ಈವೆಂಟ್‌ಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ಗಳನ್ನು ನಡೆಸಬಹುದಾಗಿದೆ.
ಇದರೊಂದಿಗೆ ಬಳಕೆದಾರ ಸ್ನೇಹಿ ಮತ್ತು ಗ್ರಾಹಕರಿಗೆ ಪ್ರವೇಶಿಸುವಂತೆ ಅನುವು ಮಾಡಿಕೊಡಲಿದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಆಕಾಶ್ ಅಂಬಾನಿ ಮಾಹಿತಿ ನೀಡಿದ್ದಾರೆ. ಇನ್ನು ಈ ಜಿಯೋ ಫೈಬರ್ 1.5 Gbps ವೇಗದ ಇಂಟರ್ನೆಟ್ ಅನ್ನು ನೀಡಲಿದೆ. ಇದರೊಂದಿಗೆ ಸರಿಯಾದ ಅನುಸ್ಥಾಪನೆಯ ಅಗತ್ಯವಿರುವ ಜಿಯೋ ಫೈಬರ್‌ಗಿಂತ ಭಿನ್ನವಾಗಿ ಪ್ಲಗ್ ಮತ್ತು ಪ್ಲೇ ಪ್ರಕ್ರಿಯೆಯ ಮೂಲಕ ಡಿವೈಸ್ ಅನ್ನು ಸರಳವಾಗಿ ಪ್ರವೇಶಿಸಬಹುದಾಗಿದೆ.
ಈ ಡಿವೈಸ್ ವೈ-ಫೈ 6 ಅನ್ನು ಬೆಂಬಲಿಸಲಿದ್ದು, ಯಾರೇ ಆದರೂ ಸಹ ಕಂಟ್ರೋಲ್ ಮಾಡಲು ಅನುಕೂಲ ಮಾಡಿಕೊಡಲಿದೆ. ಇದರೊಂದಿಗೆ ಭದ್ರತಾ ಫೈರ್‌ವಾಲ್‌ನೊಂದಿಗೆ ಇದು ಸಂಯೋಜಿಸಲ್ಪಟ್ಟಿದ್ದು, ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದೆ. ಈ ಡಿವೈಸ್ ಅನ್ನು ನೀವು ಮನೆ ಮತ್ತು ಕಚೇರಿಗಳಲ್ಲಿ ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಈ ಮೂಲಕ ತಡೆರಹಿತ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಜಿಯೋ ಫೈಬರ್ ತನ್ನ ಕವರೇಜ್‌ಗಾಗಿ ವೈರ್ಡ್ ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ಬಳಕೆ ಮಾಡಿಕೊಂಡು ಇಂಟರ್ನೆಟ್ ಸೇವೆ ನೀಡುತ್ತದೆ. ಆದರೆ, ಜಿಯೋ ಏರ್‌ಫೈಬರ್ ಪಾಯಿಂಟ್-ಟು-ಪಾಯಿಂಟ್ ರೇಡಿಯೊ ಲಿಂಕ್‌ಗಳನ್ನು ಬಳಸಿಕೊಳ್ಳುವ ವೈರ್‌ಲೆಸ್ ವಿಧಾನವನ್ನು ಅಳವಡಿಸಿಕೊಂಡಿದೆ. ಇದರರ್ಥ ಜಿಯೋ ಏರ್‌ಫೈಬರ್ ಜಿಯೋ ಟವರ್‌ಗಳನ್ನು ಅವಲಂಭನೆ ಮಾಡಿಕೊಂಡು ಕಾರ್ಯನಿರ್ವಹಿಸಲಿದೆ.
ಅದರಲ್ಲೂ ಜಿಯೋ ಏರ್‌ಫೈಬರ್ 1.5 Gbps ವರೆಗಿನ ಇಂಟರ್ನೆಟ್ ವೇಗವನ್ನು ನೀಡುತ್ತದೆ ಎನ್ನಲಾಗಿದೆ. ಇದು ಇಯೋ ಫೈಬರ್‌ನ 1 Gbps ವೇಗವನ್ನು ಮೀರಿಸುತ್ತದೆ. ಆದಾಗ್ಯೂ, ಜಿಯೋ ಏರ್‌ಫೈಬರ್‌ನ ನಿಜವಾದ ವೇಗವು ಹತ್ತಿರದ ಟವರ್‌ನ ಸಾಮೀಪ್ಯವನ್ನು ಅವಲಂಬಿಸಿ ಎಂದು ಹೇಳಲಾಗುತ್ತಿದೆ. ಜಿಯೋ ಫೈಬರ್ ಅನ್ನು ರಾಷ್ಟ್ರವ್ಯಾಪಿ ಬಳಕೆ ಮಾಡಲು ಕಷ್ಟಕರವಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ, ಜಿಯೋ ಫೈಬರ್‌ನ ವೈರ್‌ಲೆಸ್ ತಂತ್ರಜ್ಞಾನವು ಭೌತಿಕ ಮೂಲಸೌಕರ್ಯ ನಿರ್ಬಂಧಗಳಿಲ್ಲದೆ ವ್ಯಾಪಕ ಶ್ರೇಣಿಯನ್ನು ಒದಗಿಸಲಿದೆ.

ಭಾರತದಲ್ಲಿ ಜಿಯೋ ಏರ್ ಫೈಬರ್ ಬೆಲೆ: ಈ ವಿಶೇಷ ಡಿವೈಸ್ ಬಗ್ಗೆ ನಿಖರವಾದ ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಇದು ಪೋರ್ಟಬಲ್ ಡಿವೈಸ್ ಆಗಿರುವುದರಿಂದ ಜಿಯೋ ಫೈಬರ್‌ಗೆ ಹೋಲಿಸಿದರೆ ಬೆಲೆ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಅಂದರೆ, ಭಾರತದಲ್ಲಿ ಜಿಯೋ ಏರ್‌ಫೈಬರ್‌ನ ನಿರೀಕ್ಷಿತ ಬೆಲೆ 6000 ರೂ. ಹೊಂದಿರಬಹುದು ಎಂದು ಊಹಿಸಲಾಗಿದೆ.


Click it and Unblock the Notifications








