Home
ಸುದ್ದಿಜಾಲ

Jio ಗ್ರಾಹಕರೇ ಗಮನಿಸಿ.. ನಿಮಗಾಗಿ ಎರಡು ಹೊಸ ರೀಚಾರ್ಜ್‌ ಪ್ಲ್ಯಾನ್ ಘೋಷಣೆ!

ಪ್ರಮುಖ ಟೆಲಿಕಾಂ ಸಂಸ್ಥೆ ಆಗಿರುವ ಜಿಯೋ (Jio) ತನ್ನ ಬಳಕೆದಾರರಿಗೆ ವಿವಿಧ ರೀತಿಯ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಸೌಲಭ್ಯ ನೀಡುತ್ತಿದ್ದು, ಈ ಮೂಲಕ ಬಳಕೆದಾರರು ಈ ಜಿಯೋ ಟೆಲಿಕಾಂ ಕಡೆ ಹೆಚ್ಚು ಹೆಚ್ಚಾಗಿ ವಾಲುತ್ತಿದ್ದಾರೆ.

ಹೌದು, ಜಿಯೋ ತನ್ನ ಗ್ರಾಹಕರಿಗೆ ಆಗಾಗ್ಗೆ ಗುಡ್ ನ್ಯೂಸ್‌ ನೀಡುತ್ತಲೇ ಬರುತ್ತಿರುತ್ತದೆ. ಅದರಂತೆ ಈಗ ಎರಡು ಡೇಟಾ ಬೂಸ್ಟರ್‌ ಪ್ಲ್ಯಾನ್ ಪರಿಚಯಿಸಿದ್ದು, ಇವು ಬಳಕೆದಾರರಿಗೆ ಸಾಕಷ್ಟು ಸೌಲಭ್ಯ ನೀಡುತ್ತವೆ. ಹಾಗಿದ್ರೆ, ಈ ಹೊಸ 19ರೂ. ಹಾಗೂ 29 ರೂ.ಗಳ ಪ್ರಿಪೇಯ್ಡ್ ಡೇಟಾ ಬೂಸ್ಟರ್‌ ಪ್ಲ್ಯಾನ್‌ನಲ್ಲಿ ಎಷ್ಟು GB ಇಂಟರ್ನೆಟ್‌ ಲಭ್ಯ,? ಎಷ್ಟು ದಿನಗಳ ಮಾನ್ಯತೆ ಹೊಂದಿರಲಿವೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

Jio ಗ್ರಾಹಕರೇ ಗಮನಿಸಿ.. ನಿಮಗಾಗಿ ಎರಡು ಹೊಸ ರೀಚಾರ್ಜ್‌ ಪ್ಲ್ಯಾನ್ ಘೋಷಣೆ!

ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಈಗ ಈ ಎರಡು ಹೊಸ ಪ್ರಿಪೇಯ್ಡ್ ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿದ್ದು, ಈ ಎರಡು ಹೊಸ ಯೋಜನೆಗಳು 1GB ಅಥವಾ 2GB ಗಿಂತ ಸ್ವಲ್ಪ ಹೆಚ್ಚು ಡೇಟಾವನ್ನು ನೀಡುವ ಯೋಜನೆಗಳೊಂದಿಗೆ ಉತ್ತಮ ಆಯ್ಕೆ ಆಯ್ಕೆ ಆಗಿವೆ. ಇನ್ನು ಗ್ರಾಹಕರನ್ನು ಸೆಳೆಯಲು ಇದು ಕಾರ್ಯತಂತ್ರದ ಕ್ರಮದಂತೆ ತೋರುತ್ತಿದ್ದು, ಈ ಕಾರಣಕ್ಕಾಗಿಯೇ ಜಿಯೋ ಅತ್ಯಂತ ಉತ್ತಮ ಖಾಸಗಿ ಟೆಲಿಕಾಂ ಆಪರೇಟರ್ ಆಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ರಿಲಯನ್ಸ್ ಜಿಯೋದ 19ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌:ರಿಲಯನ್ಸ್ ಜಿಯೋ 19ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಒಟ್ಟಾರೆ 1.5GB ಡೇಟಾವನ್ನು ನೀಡುತ್ತಿದೆ. ಈ ಡೇಟಾ ಪ್ಯಾಕ್‌ನ ಮಾನ್ಯತೆಯು ಬಳಕೆದಾರರ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ಪ್ಲ್ಯಾನ್‌ ಇರುವ ವರೆಗೂ ಇರುತ್ತದೆ. ಅದಾಗ್ಯೂ ಈ ಮೊದಲು 1GB ಡೇಟಾ ನೀಡುವ 15ರೂ.ಗಳ ಪ್ಲ್ಯಾನ್‌ ಸಹ ಇದ್ದು, ಇದು ಹೆಚ್ಚು ಯಶಸ್ವಿ ಆಗುತ್ತಿದ್ದಂತೆ ಈಗ ಈ ಪ್ಲ್ಯಾನ್ ಘೋಷಣೆ ಮಾಡಲಾಗಿದೆ.ಈ ಮೂಲಕ ನೀವು ಹೊಸ ಪ್ಲ್ಯಾನ್‌ನಲ್ಲಿ 500MB ಡೇಟಾ ಹೆಚ್ಚಾಗಿ ಪಡೆಯಬಹುದು.

ರಿಲಯನ್ಸ್ ಜಿಯೋ 29ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್: ಮತ್ತೊಂದು ಪ್ಲ್ಯಾನ್ ಎಂದರೆ ಅದು 29ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್. ಇದರಲ್ಲಿ ಗ್ರಾಹಕರು 2.5GB ಡೇಟಾ ಪಡೆಯಲಿದ್ದಾರೆ. ಈ ಪ್ಲ್ಯಾನ್ ಸಹ ಬಳಕೆದಾರರ ಸಕ್ರಿಯ ಬೇಸ್ ಪ್ರಿಪೇಯ್ಡ್ ಪ್ಲ್ಯಾನ್‌ನ ಮಾನ್ಯತೆ ದಿನಗಳ ವರೆಗೂ ಇರುತ್ತದೆ. ಈ 25 ರೂ.ಗಳ ಡೇಟಾ ಬೂಸ್ಟರ್ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಲು ಇಷ್ಟಪಡುವ ಬಳಕೆದಾರರಿಗೆ ಈ ಪ್ಲ್ಯಾನ್‌ ಡಿಕೋಯ್ ಎಫೆಕ್ಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಅದರಂತೆ ಜಿಯೋದಿಂದ 25ರೂ.ಗಳ ಪ್ಲ್ಯಾನ್‌ 2GB ಡೇಟಾದೊಂದಿಗೆ ಬರಲಿದ್ದು, ಇನ್ನೂ ಸ್ವಲ್ಪ ಹೆಚ್ಚಿನ ಡೇಟಾ ಬೇಕು ಎಂದಾದರೆ ಕೇವಲ ಕೇವಲ 4 ರೂಗಳನ್ನು ಹೆಚ್ಚಿಗೆ ಪಾವತಿ ಮಾಡುವ ಮೂಲಕ 2.5GB ಅನ್ನು ಪಡೆದುಕೊಳ್ಳಬಹುದು. ಈ ಮೂಲಕ ಕಂಪನಿಯು ತನ್ನ ಸರಾಸರಿ ಆದಾಯವನ್ನು ಪ್ರತಿ ಬಳಕೆದಾರರಿಗೆ (ARPU) ಸಣ್ಣ ಅಂತರದಿಂದ ಹೆಚ್ಚಿಸಲು ಅನುಮತಿಸುತ್ತದೆ. ಈ ವಿಶೇಷ ಪ್ಲ್ಯಾನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಲಿವೆ ಎನ್ನಲಾಗಿದೆ.

ಈ ನಡುವೆ ಜಿಯೋ ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌ ಸಹ ನೀಡಿದೆ. ಅಂದರೆ ಜಿಯೋ ಸೆಕ್ಯೂರಿಟಿ (JioSecurity) ಸೇವೆಯನ್ನು ಸ್ಥಗಿತ ಮಾಡಿದೆ. ಈ ಮೂಲಕ ಇನ್ಮುಂದೆ ರಿಲಯನ್ಸ್ ಜಿಯೋ ತನ್ನ ಎಲ್ಲಾ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಿಂದ ಜಿಯೋ ಸೆಕ್ಯುರಿಟಿಯ ಪ್ರಯೋಜನಗಳು ಕಾಣಿಸಿಕೊಳ್ಳುವುದಿಲ್ಲ. ಈ ಜಿಯೋ ಸೆಕ್ಯುರಿಟಿ ಸೇವೆಯ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದಲೂ ತೆಗೆದುಹಾಕಿದೆ ಎಂದು ತಿಳಿದುಬಂದಿದೆ.

Jio ಗ್ರಾಹಕರೇ ಗಮನಿಸಿ.. ನಿಮಗಾಗಿ ಎರಡು ಹೊಸ ರೀಚಾರ್ಜ್‌ ಪ್ಲ್ಯಾನ್ ಘೋಷಣೆ!

ಏನಿದು ಜಿಯೋ ಸೆಕ್ಯೂರಿಟಿ?: ಈ ಜಿಯೋ ಸೆಕ್ಯೂರಿಟಿ ಜಿಯೋ ಬಳಕೆದಾರರಿಗೆ ಹೆಚ್ಚುವರಿ ಭದ್ರತೆ ಮತ್ತು ಸೈಬರ್ ಬೆದರಿಕೆಗಳು ಮತ್ತು ಆನ್‌ಲೈನ್ ವಂಚನೆಗಳ ವಿರುದ್ಧ ರಕ್ಷಣೆ ನೀಡುವ ಕೆಲಸ ಮಾಡುತ್ತಿತ್ತು. ಆದರೆ ಇದರ ಬಳಕೆ ಕಡಿಮೆ ಆದ ಹಿನ್ನೆಲೆ ಹಾಗೂ ಜಿಯೋ ಗ್ರಾಹಕರು ಈ ಕಡೆ ತಿರುಗಿ ನೋಡದ ಹಿನ್ನೆಲೆ ಇದನ್ನು ಸ್ಥಗಿತಗೊಳಿಸಲಾಗಿದೆ.

Best Mobiles in India

English summary
Jio keeps giving good news to its customers. Accordingly, it has now announced a prepaid data booster plan of Rs 19 and Rs 29.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+