Home
ಸುದ್ದಿಜಾಲ

Jio: ರಿಲಯನ್ಸ್ ಜಿಯೋದಿಂದ ಜಿಯೋ ಭಾರತ್ ಫೋನ್ ಬಳಕೆದಾರರಿಗೆ ವಿಶೇಷ ಪ್ರಯೋಜನ! ಏನದು?

ಜಿಯೋ (Jio)ಆಗಾಗ್ಗೆ ಹೊಸ ಹೊಸ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಘೋಷಣೆ ಮಾಡುತ್ತಿದ್ದು, ಈ ನಡುವೆ ರಿಲಯನ್ಸ್ ಜಿಯೋ ಈಗಾಗಲೇ ಇರುವ ಪ್ಲ್ಯಾನ್‌ನಲ್ಲಿಹೆಚ್ಚುವರಿ ಸೌಲಭ್ಯವನ್ನು ಘೋಷಣೆ ಮಾಡಿದೆ. ಈ ಪ್ಲ್ಯಾನ್‌ ಮೂಲಕ ಕ್ರಿಕೆಟ್ ಅಭಿಮಾನಿಗಳು ಉತ್ತಮ ಪ್ರಯೋಜನ ಪಡೆಯಬಹುದಾಗಿದೆ.

ಹೌದು, ರಿಲಯನ್ಸ್ ಜಿಯೋ ಜಿಯೋ ಭಾರತ್‌ 4G ಫೋನ್‌ ಬಳಕೆದಾರರಿಗೆ (Jio Bharat 4G Phone) ಈ ಸೌಲಭ್ಯಗಳನ್ನು ಘೋಷಣೆ ಮಾಡಲಾಗಿದೆ. ಈ ಫೋನ್‌ 999 ರೂ.ಗಳಲ್ಲಿ ಸೇಲ್‌ ಆಗುತ್ತಿದ್ದು, ಈ ಫೋನ್‌ ಬಳಕೆದಾರರು ಅದರಲ್ಲೂ ಕ್ರಿಕೆಟ್ ಅಭಿಮಾನಿಗಳು ವಿವಿಧ ರೀತಿಯ ಪ್ರಯೋಜನ ಪಡೆಯಬಹುದಾಗಿದೆ. ಹಾಗಿದ್ರೆ, ಯಾವುದು ಈ ಪ್ಲ್ಯಾನ್‌?, ಇದರಿಂದ ಏನೆಲ್ಲಾ ಸೌಲಭ್ಯ ಲಭ್ಯ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಲಯನ್ಸ್ ಜಿಯೋದಿಂದ ಜಿಯೋ ಭಾರತ್ ಫೋನ್ ಬಳಕೆದಾರರಿಗೆ ವಿಶೇಷ ಪ್ರಯೋಜನ! ಏನದು?

ರಿಲಯನ್ಸ್ ಜಿಯೋ ಕ್ರಿಕೆಟ್ ರೀಚಾರ್ಜ್ ಪ್ಲ್ಯಾನ್: ಹೊಸ/ಎಮ್‌ಎನ್‌ಪಿ ಅಥವಾ ಅಸ್ತಿತ್ವದಲ್ಲಿರುವ ಜಿಯೋಸಿಮ್‌ ನಲ್ಲಿ 2 ತಿಂಗಳ 234 ರೂ.ಗಳ ಪ್ಲ್ಯಾನ್‌ನೊಂದಿಗೆ ಈಗ 2 ತಿಂಗಳ ಉಚಿತ ಯೋಜನೆಯನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಆಫರ್ ಏಪ್ರಿಲ್ 1, 2024 ರಂದು ಅಥವಾ ನಂತರ ಖರೀದಿ ಮಾಡಿದ ಜಿಯೋ ಭಾರತ್‌ ಫೋನ್‌ ಖರೀದಿದಾರರಿಗೆ ಮಾತ್ರ ಅನ್ವಯವಾಗಲಿದೆ.

ಈ ಸೌಲಭ್ಯ ಪಡೆಯುವುದು ಹೇಗೆ?: ಇನ್ನು ಈ ಸೌಲಭ್ಯ ಪಡೆಯಬೇಕು ಎಂದರೆ ಆಸಕ್ತ ಬಳಕೆದಾರರು ಅಂಗಡಿಯಿಂದ ಹೊಸ ಜಿಯೋ ಭಾರತ್‌ ಫೋನ್ ಅನ್ನು ಖರೀದಿಸಬೇಕಾಗುತ್ತದೆ. ನಂತರ ಅವರು ಹೊಸ ಜಿಯೋ ಭಾರತ್‌ ಫೋನ್‌ಗೆ ಜಿಯೋ ಅನ್ನು ಸೇರಿಸಬೇಕಾಗುತ್ತದೆ. ಕಂಪನಿಯ ಪ್ರಕಾರ, ಪೋರ್ಟ್-ಇನ್ (MNP) ಗ್ರಾಹಕರಿಗೂ ಸಹ ಈ ಕೊಡುಗೆ ಅನ್ವಯಿಸುತ್ತದೆ. ಇದನ್ನು ಮಾಡಿದ ನಂತರ, ಬಳಕೆದಾರರು ತಮ್ಮ ಫೋನ್ ಅನ್ನು 234 ರೂ.ಗಳ ಯೋಜನೆಯೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಇದು ದಿನಕ್ಕೆ 0.5GB ಡೇಟಾವನ್ನು ಮತ್ತು 2 ತಿಂಗಳವರೆಗೆ ಅನಿಯಮಿತ ವಾಯ್ಸ್‌ ಕರೆ ಸೌಲಭ್ಯವನ್ನು ನೀಡಲಿದೆ.

ರಿಲಯನ್ಸ್ ಜಿಯೋದಿಂದ ಜಿಯೋ ಭಾರತ್ ಫೋನ್ ಬಳಕೆದಾರರಿಗೆ ವಿಶೇಷ ಪ್ರಯೋಜನ! ಏನದು?

ಆದರೆ ಈಗ ಕಂಪನಿಯು ಈ ಪ್ಯಾಕ್‌ನೊಂದಿಗೆ ಹೆಚ್ಚುವರಿ 2 ತಿಂಗಳ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಸಕ್ರಿಯ ಯೋಜನೆಯ ಅವಧಿ ಮುಗಿದ ಮೇಲೆ ಆಟೋಮ್ಯಾಟಿಕ್‌ ಆಗಿ ಇದು ಸಕ್ರಿಯಗೊಳ್ಳುತ್ತದೆ. ಇಷ್ಟೇ ಅಲ್ಲದೆ ಈ ಕೊಡುಗೆಯನ್ನು ಜಿಯೋಭಾರತ್ ಖರೀದಿದಾರರಿಗೆ ಒಮ್ಮೆ ಮಾತ್ರ ಒದಗಿಸಲಾಗುವುದು ಎಂದು ರಿಲಯನ್ಸ್‌ ಮಾಹಿತಿ ನೀಡಿದೆ.

ಭಾರತ್ ಜಿಪಿಟಿ: ಈ ನಡುವೆ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಇತ್ತೀಚೆಗೆ ಕಂಪನಿಯು ಭಾರತೀಯ ತಂತ್ರಜ್ಞಾನ ಸಂಸ್ಥೆ-ಬಾಂಬೆಯ ಸಹಯೋಗದೊಂದಿಗೆ ಭಾರತ್ ಜಿಪಿಟಿ (Bharat GPT) ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸಂಸ್ಥೆಯ ವಾರ್ಷಿಕ ಟೆಕ್‌ಫೆಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಭಾಷಣದಲ್ಲಿ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ದೃಢವಾದ ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದು, ಜಿಯೋ 2.0 ನ ದೃಷ್ಟಿಯನ್ನು ಸಾಕಾರಗೊಳಿಸುವ ಕಂಪನಿಯ ಬದ್ಧತೆಯನ್ನು ಒತ್ತಿ ಹೇಳಿದ್ದು, ಭಾರತ್ ಜಿಪಿಟಿ ಪ್ರೋಗ್ರಾಂ, 2014 ರಿಂದ ಐಐಟಿ ಬಾಂಬೆಯ ಸಹಯೋಗದೊಂದಿಗೆ ಚಾಟ್‌ಜಿಪಿಟಿಯಂತಹ ದೊಡ್ಡ ಭಾಷಾ ಮಾದರಿಗಳಿಂದ ಸ್ಫೂರ್ತಿ ಪಡೆಯುವ ಜನರೇಟಿವ್ ಎಐ ಅನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ವಿವರಿಸಿದ್ದಾರೆ.

ರಿಲಯನ್ಸ್ ಜಿಯೋದಿಂದ ಜಿಯೋ ಭಾರತ್ ಫೋನ್ ಬಳಕೆದಾರರಿಗೆ ವಿಶೇಷ ಪ್ರಯೋಜನ! ಏನದು?

ಇನ್ನು ಭಾರತ್ ಜಿಪಿಟಿ ಕಾರ್ಯಕ್ರಮದ ಜೊತೆಗೆ, ದೂರದರ್ಶನ ತಂತ್ರಜ್ಞಾನಕ್ಕೆ ಜಿಯೋದ ಮಹತ್ವಾಕಾಂಕ್ಷೆಯ ಸಾಹಸವನ್ನು ಸಹ ಅಂಬಾನಿ ಅನಾವರಣಗೊಳಿಸಿದ್ದಾರೆ. ದೂರದರ್ಶನಗಳಿಗಾಗಿ ತನ್ನದೇ ಆದ ಆಪರೇಟಿಂಗ್ ಸಿಸ್ಟಮ್ (OS) ಅನ್ನು ಅಭಿವೃದ್ಧಿಪಡಿಸುವಲ್ಲಿ ಕಂಪನಿಯು ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಎಲ್ಲಾ ವಲಯಗಳಲ್ಲಿ ಎಐ ಅನ್ನು ಸಂಯೋಜಿಸುವ ಕೆಲಸವನ್ನೂ ಸಹ ಮಾಡಲಾಗುತ್ತಿದೆ.

Best Mobiles in India

English summary
Reliance Jio Announces New Cricket Recharge Plan for jiobharat phone user
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+