ಜಿಯೋ ಟೆಲಿಕಾಂನ ಈ ಪ್ಲ್ಯಾನ್‌ಗಳಲ್ಲಿ ಸಿಗುತ್ತೆ ಬಿಗ್ ಡೇಟಾ, ವ್ಯಾಲಿಡಿಟಿ!
ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಲ್ಲಿ ಬಹುಬೇಡಿಕೆಯಲ್ಲಿ ಗುರುತಿಸಿಕೊಂಡಿರುವ ರಿಲಾಯನ್ಸ್ ಜಿಯೋ ಟೆಲಿಕಾಂ ಅತ್ಯುತ್ತಮ ಡೇಟಾ ಪ್ಲ್ಯಾನ್‌ಗಳಿಂದ ಗ್ರಾಹಕನ್ನು ಸೆಳೆದಿದೆ. ಲಾಕ್‌ಡೌನ್ ಅವಧಿಯಲ್ಲಿಯೂ ಜಿಯೋ ತನ್ನ ಗ್ರಾಹಕರಿಗೆ ಆಕರ್ಷಕ ಡೇಟಾ ಯೋಜನೆಗಳನ್ನು ನೀಡಿದೆ. ಅವುಗಳಲ್ಲಿ ಅನಿಯಮಿತ ಡೇಟಾ ಪ್ರಯೋಜನದ ಹಾಗೂ ಅಧಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳು ಹೆಚ್ಚು ಗುರುತಿಸಿಕೊಂಡಿವೆ.

ಹೌದು, ಜಿಯೋ ಸಂಸ್ಥೆಯು ಭಿನ್ನ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವು ಅಲ್ಪಾವಧಿಯ ಪ್ಲ್ಯಾನ್‌ಗಳಿದ್ದು, ಇನ್ನು ಕೆಲವು ದೀರ್ಘಾವಧಿಯ ಯೋಜನೆಗಳಾಗಿವೆ. ಇನ್ನೂ ಕೆಲ ಜಿಯೋ ಯೋಜನೆಗಳು ವಾಯಿಸ್ ಕರೆ ಹಾಗೂ ಡೇಟಾ ಪ್ರಯೋಜನವನ್ನು ಹೊಂದಿದ್ದರೇ, ಮತ್ತೆ ಕೆಲವು ಬರೀ ಡೇಟಾ ವೋಚರ್‌ಗಳಾಗಿವೆ. ಹೀಗಾಗಿ ಜಿಯೋದ ಎಲ್ಲ ಪ್ಲ್ಯಾನ್‌ಗಳು ಭಿನ್ನ ಬೆಲೆಯಲ್ಲಿದ್ದು, ಅಧಿಕ ಡೇಟಾ ಸೌಲಭ್ಯದ ಪ್ಲ್ಯಾನ್‌ಗಳು ಹೆಚ್ಚು ಗಮನ ಸೆಳೆದಿವೆ. ಈ ತಿಂಗಳಿನಲ್ಲಿ (ಜುಲೈ) ಲಭ್ಯ ಇರುವ ಜಿಯೋ ಟೆಲಿಕಾಂನ ಅನ್‌ಲಿಮಿಟೆಡ್ ಡೇಟಾ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಪ್ರಯೋಜನಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಜಿಯೋ 555ರೂ. ಪ್ಲ್ಯಾನ್
ಜಿಯೋ 555ರೂ. ಪ್ರೀಪೇಯ್ಡ್ ಪ್ಲ್ಯಾನ್ ಆಲ್-ಇನ್-ಒನ್ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಇನ್ನು ಇತರೆ ನೆಟವರ್ಕ್ 3000 ನಿಮಿಷಗಳ ವಾಯಿಸ್ ಕರೆಯ ಮಿತಿಯನ್ನು ಒಳಗೊಂಡಿದೆ.

ಜಿಯೋ 599ರೂ. ಪ್ಲ್ಯಾನ್
ಜಿಯೋ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿದ್ದು, ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ 3000 ಉಚಿತ ನಿಮಿಷಗಳ ಮಿತಿ ಹೊಂದಿದೆ.

ಜಿಯೋ 999ರೂ.ಪ್ಲ್ಯಾನ್
ರಿಲಾಯನ್ಸ್ ಜಿಯೋ 999ರೂ.ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, 64Kbps ವೇಗದಲ್ಲಿ ಇಂಟರ್ನೆಟ್ ಇರಲಿದೆ. ಹಾಗೆಯೇ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟವರ್ಕ್ ಕರೆಗಳಿಗೆ 3,000 ನಿಮಿಷಗಳ ಮಿತಿ ಇರಲಿದೆ. ಇದರೊಂದಿಗೆ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗಲಿದೆ ಜೊತೆಗೆ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

ಜಿಯೋ 1299ರೂ. ಪ್ಲ್ಯಾನ್
ಜಿಯೋದ ಈ ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 12000 ನಿಮಿಷಗಳ ಉಚಿತ ಅವಧಿ ಪಡೆದಿದೆ. ಇನ್ನೂ ಜಿಯೋ ಟು ಜಿಯೋ ಕರೆಗಳು ಉಚಿತವಾಗಿರುತ್ತವೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಪೂರ್ಣ ಅವಧಿಗೆ ಒಟ್ಟು 24GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸಿಗುತ್ತವೆ. ಇದೊಂದು ವ್ಯಾಲಿಡಿಟಿ ಯೋಜನವಾಗಿದೆ.

ಜಿಯೋ 2121ರೂ.ಪ್ಲ್ಯಾನ್
ಜಿಯೋ 2121ರೂ.ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಅನಿಯಮಿತ ಜಿಯೋ ಟು ಜಿಯೋ ವಾಯಿಸ್ ಕರೆಗಳು ಲಭ್ಯವಾಗಲಿದ್ದು, ಜಿಯೋದಿಂದ ಇತರೆ ಟೆಲಿಕಾಂ ನೆಟವರ್ಕ್‌ಗಳಿಗೆ ಒಟ್ಟು 12000 ನಿಮಿಷಗಳ ಉಚಿತ ವಾಯಿಸ್ ಕರೆ ಸೌಲಭ್ಯ ದೊರೆಯುತ್ತದೆ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನವನ್ನು ಒಳಗೊಂಡಿದ್ದು, ಇನ್ನು ಈ ಪ್ಲ್ಯಾನ್ 336 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.


Click it and Unblock the Notifications








