ಶಾಕಿಂಗ್ ಸುದ್ದಿ..ಏರ್‌ಟೆಲ್‌ಗಿಂತಲೂ ಜಿಯೋ ಇಂಟರ್‌ನೆಟ್‌ ಸ್ಪೀಡ್ ಹೆಚ್ಚು!!

|

ಟೆಲಿಕಾಂ ಮಾರುಕಟ್ಟೆಗೆ ಬಂದ ಕೆಲವು ದಿನಗಳಲ್ಲಿಯೇ ಅಂದರೆ ಅಕ್ಟೊಬರ್ ತಿಂಗಳಿನಲ್ಲಿ ಅತಿ ಕಡಿಮೆ ಡೇಟಾ ನೆಟ್‌ವರ್ಕ್ ನೀಡುತ್ತಿರುವವ ಟೆಲಿಕಾಂ ಎಂದು ಟ್ರಾಯ್‌ನಿಂದ ಕುಖ್ಯಾತ ಹೆಸರು ಪಡೆದಿದ್ದ ಜಿಯೋ ಇದೀಗ ಎಲ್ಲಾ ಟೆಲಿಕಾಂಗಳಿಗೂ ಸೆಡ್ಡು ಹೊಡೆದು ಸ್ಪೀಡ್‌ ಇಂಟರ್‌ನೆಟ್‌ ಸೇವೆ ನೀಡುವ ಟೆಲಿಕಾಂಗಳಲ್ಲಿ ಮೊದಲ ಸ್ಥಾನಕ್ಕೆ ಬಂದು ನಿಂತಿದೆ!!

ಹೌದು, ಕೇವಲ ಎರಡು ತಿಂಗಳ ಅಂತರದಲ್ಲಿಯೇ ಜಿಯೂ ಟೆಲಿಕಾಂ, ಉಳಿದ ಎಲ್ಲಾ ಟೆಲಿಕಾಂಗಳಿಗಿಂತಲೂ ಹೆಚ್ಚು ಸ್ಪಿಡ್‌ ಇಂಟರ್‌ನೆಟ್‌ ನೀಡುವ ಟೆಲಿಕಾಂ ಎಂದು ಟ್ರಾಯ್ ರಿಪೋರ್ಟ್ ಹೇಳಿದೆ! ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸ್ಪೀಡ್‌ ಇಂಟರ್‌ನೆಟ್‌ ಒದಗಿಸುತ್ತಿರುವ ಕೀರ್ತಿ ಜಿಯೋಗೆ ಸಿಕ್ಕಿದೆ.

ಶಾಕಿಂಗ್ ಸುದ್ದಿ..ಏರ್‌ಟೆಲ್‌ಗಿಂತಲೂ ಜಿಯೋ ಇಂಟರ್‌ನೆಟ್‌ ಸ್ಪೀಡ್ ಹೆಚ್ಚು!!

ಕೇಂದ್ರ ಸರ್ಕಾರದಿಂದ ಎಲ್ಲೆಡೆ ಪಬ್ಲಿಕ್‌ ವೈ-ಫೈ ನೆಟ್‌ವರ್ಕ್‌: ಟ್ರಾಯ್‌!!

ಕಳೆದ ಅಕ್ಟೊಬರ್‌ನಲ್ಲಿ. ಕೇವಲ 6.2MBPS ವೇಗದಲ್ಲಿದ್ದ ಜಿಯೋ ಇಂಟರ್‌ನೆಟ್‌ ವೇಗ ಇದೀಗ 9.9 MBPS ವೇಗಕ್ಕೇರಿ ಏರ್‌ಟೆಲ್‌ಗಿಂತಲೂ ಬೆಸ್ಟ್ ನೆಟ್‌ವರ್ಕ್ ಎಂದು ಹೆಸರು ಗಳಿಸಿದೆ. ಡಿಸೆಂಬರ್ 2016 ನೇ ತಿಂಗಳಿನಲ್ಲಿ ಜಿಯೋ ಈ ಸಾಧನೆ ಮಾಡಿದ್ದು, ಈಗಲೂ ಸಹ ಅದೇ ವೆಗವನ್ನು ಉಳಿಸಿಕೊಂಡಿದೆ.

ಶಾಕಿಂಗ್ ಸುದ್ದಿ..ಏರ್‌ಟೆಲ್‌ಗಿಂತಲೂ ಜಿಯೋ ಇಂಟರ್‌ನೆಟ್‌ ಸ್ಪೀಡ್ ಹೆಚ್ಚು!!

ಜಿಯೋ ತನ್ನ ಇಂಟರ್‌ನೆಟ್‌ ವೇಗವನ್ನು ಹೆಚ್ಚಿಸಿಕೊಳ್ಳುವುದಾಗಿ ಹೇಳಿದ್ದು, ಇನ್ನು ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್‌ನಲ್ಲಿ ಕೇವಲ ಒಂದು ಜಿಬಿ ಇಂಟರ್‌ನೆಟ್ ಮಾತ್ರ ಉಚಿತವಾಗಿರುವುದರಿಂದ ಜಿಯೋ ಇಂಟರ್‌ನೆಟ್‌ ಸ್ಪೀಡ್‌ ಇನ್ನು ಹೆಚ್ಚಿನ ಅಂತರವನ್ನು ಕಾಪಾಡಿಕೊಳ್ಳುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.

ಶಾಕಿಂಗ್ ಸುದ್ದಿ..ಏರ್‌ಟೆಲ್‌ಗಿಂತಲೂ ಜಿಯೋ ಇಂಟರ್‌ನೆಟ್‌ ಸ್ಪೀಡ್ ಹೆಚ್ಚು!!

ಏರ್‌ಟೆಲ್ ಇಂಟರ್‌ನೆಟ್‌ ವೇಗವನ್ನು ಮೀರಿಸಿರುವ ಜಿಯೋ ಸೇವೆಗೆ ಗ್ರಾಹಕರು ಕೂಡ ಸಹಮತ ವ್ಯಕ್ತಪಡಿಸುತ್ತಿದ್ದು, ಮೊದಲಿಗಿಂತಲೂ ಜಿಯೋ ಸೇವೆ ಉತ್ತಮವಾಗಿದೆ ಎಂದು ಹೇಳುತ್ತಿದ್ದಾರೆ. ಇದೇ ರೀತಿ ಸರ್ವಿಸ್‌ ನೀಡಿದರೆ ಜಿಯೋ ಉತ್ತಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
ere’s a surprise for all the telecom operators. According to TRAI speed test reports till December 2016, Jio is topping the chart with an average download speed number of 9.9Mbps to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X