ಕೇಂದ್ರ ಸರ್ಕಾರದಿಂದ ಎಲ್ಲೆಡೆ ಪಬ್ಲಿಕ್‌ ವೈ-ಫೈ ನೆಟ್‌ವರ್ಕ್‌: ಟ್ರಾಯ್‌!!

Written By:

ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಂಗವಾಗಿ ಭಾರತ ಸರ್ಕಾರ ನೀಡುತ್ತಿರುವ ಪಬ್ಲಿಕ್‌ ವೈ-ಫೈ ನೆಟ್‌ವರ್ಕ್‌ ಸ್ಥಾಪಿಸಬೇಕಿರುವ ಜಾಗಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಇನ್ನು 20 ರಿಂದ 25 ದಿನಗಳಲ್ಲಿ ಕಾರ್ಯ ಪೂರ್ಣಗೊಳ್ಳುತ್ತದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್ ಹೇಳಿದೆ.

ಈ ಬಗ್ಗೆ ಮಾತನಾಡಿದ ಟ್ರಾಯ್ ಅಧ್ಯಕ್ಷ ಆರ್‌ ಎಸ್‌ ಶರ್ಮಾ ಪಬ್ಲಕ್‌ ವೈ-ಫೈ ಮೂಲಕ ಕಡಿಮೆ ದರದಲ್ಲಿ ಇಂಟರ್‌ನೆಟ್‌ ಒದಗಿಸುವ ಯೋಜನೆ ಪ್ರಗತಿಯಲ್ಲಿದೆ. ಮತ್ತು ಮಹತ್ವಪೂರ್ಣವಾಗಿದೆ. ಹಾಗಾಗಿ, ನಾವು ಇನ್ನು 20 ರಿಂದ 25 ದಿನಗಳಲ್ಲಿ ವೈ-ಫೈ ನೆಟ್‌ವರ್ಕ್‌ಗಳನ್ನು ಎಲ್ಲಿ ಸ್ಥಾಪಿಸಬೇಕು ಎಂಬ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಎಲ್ಲೆಡೆ ಪಬ್ಲಿಕ್‌ ವೈ-ಫೈ ನೆಟ್‌ವರ್ಕ್‌: ಟ್ರಾಯ್‌!!

10 ದಿವಸಗಳಲ್ಲಿಯೇ 1 ಕೋಟಿ ಡೌನ್‌ಲೋಡ್!.. ಭೀಮ್ ದಾಖಲೆ! ಮೋದಿ ಹೇಳಿದ್ದೇನು?

ಭಾರಿ ಕಡಿಮೆ ದರದಲ್ಲಿ ಸರ್ಕಾರವೇ ವೈ-ಫೈ ನೆಟ್‌ವರ್ಕ್‌ ಹಾಟ್‌ಸ್ಪಾಟ್‌ಗಳನ್ನು ನೀಡುತ್ತಿದ್ದು, ಪ್ರಸ್ತುತ ಅಂತರ್ಜಾಲಕ್ಕೆ ತಗುಲುವ ವೆಚ್ಚಕ್ಕಿಂತ ಶೇ 90 % ಪರ್ಸೆಂಟ್‌ ಡಿಸ್ಕೌಂಟ್‌ನಲ್ಲಿ ಇಂಟರ್‌ನೆಟ್‌ ನೀಡುವುದಾಗಿ ಸರ್ಕಾರ ಹೇಳಿದೆ. ಈ ವೈ-ಫೈ ನೆಟ್‌ವರ್ಕ್‌ ಸ್ಥಾಪಿಸಬೇಕಿರುವ ಕಾರ್ಯ ಸರ್ಕಾರದ ಅಂಗಸಂಸ್ಥೆ ಟ್ರಾಯ್‌ ಹೊಣೆಗಾರಿಕೆಯಾಗಿದೆ.

ಕೇಂದ್ರ ಸರ್ಕಾರದಿಂದ ಎಲ್ಲೆಡೆ ಪಬ್ಲಿಕ್‌ ವೈ-ಫೈ ನೆಟ್‌ವರ್ಕ್‌: ಟ್ರಾಯ್‌!!

ಡಿಜಿಟಲ್ ಇಂಡಿಯಾದ ಮುಖ್ಯ ಗುರಿ, ಎಲ್ಲಾ ವ್ಯವಹಾರವನ್ನು ಹೆಚ್ಚಿಸುವುದಾಗಿದೆ. ಹಾಗಾಗಿ, ಕಡಿಮೆ ದರದಲ್ಲಿ ಇಂಟರ್‌ನೆಟ್ ನೀಡುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಶರ್ಮಾ ಅವರು ತಿಳಿಸಿದ್ದಾರೆ.ಇನ್ನು ಸಂಪೂಣ ಉಚಿತ ವೈ-ಫೈ ನೀಡುವ ಬಗ್ಗೆಯೂ ಮಾತನಾಡಿದ ಅವರು, ಪೂರ್ಣ ಪ್ರಮಾಣದ ಉಚಿತ ಇಂಟರ್‌ನೆಟ್‌ ಸೌಲಭ್ಯ ನೀಡುವುದು ಸಮಂಜಸವಲ್ಲ, ಹಾಗಾಗಿ ಪ್ರಸ್ತುತ ಇಂಟರ್‌ನೆಟ್‌ ದರದಲ್ಲಿ ಕೇವಶ 10% ಮಾತ್ರ ಹಣವನ್ನು ಪಡೆಯಲಾಗುವುದು ಎಂದು ತಿಳಿಸಿದ್ದಾರೆ.English summary
TELECOM regulator Trai on Monday said it will finalise in 20-25 days its road map on 'public wifi networks' to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot