BSNL ನಿಂದ 99 ರೂ.ಗೆ ಅನ್‌ಲಿಮಿಟೆಡ್ ಸ್ಥಳೀಯ, ದೇಶಿಯ ಕರೆ ಮತ್ತು ಡೇಟಾ!!

Written By:

ನೀವು ಬಿಎಸ್‌ಎನ್‌ಎಲ್ ಗ್ರಾಹಕರಾಗಿದ್ದರೆ ನಿಮಗೆ ಆಶ್ಚರ್ಯ ಎನಿಸುವಂತಹ ಸುದ್ದಿ ಇದೆ. ಹೌದು, ಭಾರತ ಸರ್ಕಾರದ ಅಧೀನದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಲ್ ಇದೇ ಶುಕ್ರವಾರ ಹೊಸದೊಂದು ಆಫರ್ ಘೋಷಿಸಿದೆ. ಕೇವಲ 99 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಸ್ಥಳೀಯ ಮತ್ತು ದೇಶಿಯ ಕರೆ ಮಾಡುವ ಸೌಲಭ್ಯವನ್ನು ನೀಡಿದೆ.

ಉಚಿತ ಡೇಟಾ ಮತ್ತು ಕರೆ ಮಾಡುವ ಸೌಲಭ್ಯವನ್ನು ನೀಡುತ್ತಿರುವ ಜಿಯೋ ಎಫೆಕ್ಟ್ ಎಲ್ಲಾ ಟೆಲಾಕಾಂ ಕಂಪೆನಿಗಳ ಮೇಲೂ ಪರಿಣಾಮ ಬೀರಿದೆ. ಆಫರ್‌ಗಳ ಮೇಲೆ ಆಫರ್‌ ನೀಡಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಇನ್ನು ಇದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವದು ಬಿಎಸ್‌ಎನ್‌ಎಲ್‌.

BSNL ನಿಂದ 99 ರೂ.ಗೆ ಅನ್‌ಲಿಮಿಟೆಡ್ ಸ್ಥಳೀಯ, ದೇಶಿಯ ಕರೆ ಮತ್ತು ಡೇಟಾ!!

ಬೆಂಗಳೂರಿನಲ್ಲಿ ಸ್ಮಾರ್ಟ್‌ಫೋನ್‌ಗಾಗಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಕೊಲೆ!!

ಬಿಎಸ್‌ಎನ್‌ಎಲ್‌ ಅತ್ಯಾಕರ್ಶಕ ಎನ್ನುವ ಆಫರ್ ಬಿಡುಗಡೆ ಮಾಡಿದ್ದು, ಕೇವಲ 99 ರೂಪಾಯಿಗಳಿಗೆ BSNL ನಿಂದ BSNLಗೆ ಅನ್‌ಲಿಮಿಟೆಡ್ ಸ್ಥಳೀಯ ಮತ್ತು ದೇಶಿಯ ಕರೆ ಮಾಡುವ ಸೌಲಭ್ಯ ಮತ್ತು 300 MB ಡೇಟಾವನ್ನು ನೀಡಿದೆ. ಇನ್ನು 339 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡರೆ ದೇಶದ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಸ್ಥಳೀಯ ಮತ್ತು ದೇಶಿಯ ಕರೆ ಮಾಡುವ ಸೌಲಭ್ಯ ಮತ್ತು 1GB ಡೇಟಾ ಪಡೆಯಬಹುದಾಗಿದೆ. ಎರಕ್ಕೂ 28 ದಿನಗಳ ವ್ಯಾಲಿಡಿಟಿ ಇದೆ.

BSNL ನಿಂದ 99 ರೂ.ಗೆ ಅನ್‌ಲಿಮಿಟೆಡ್ ಸ್ಥಳೀಯ, ದೇಶಿಯ ಕರೆ ಮತ್ತು ಡೇಟಾ!!

ಬಿಹಾರ, ಜಾರ್ಖಂಡ್, ಅಸ್ಸಾಂ, ಗುಜರಾತ್, ಕೋಲ್ಕತ್ತಾ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಛತ್ತೀಸ್'ಗಡ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದ ನೆಟ್ವರ್ಕ್ಗಳಲ್ಲಿ ಈ ಪ್ಲಾನ್ ಲಭ್ಯವಿದ್ದು, ಇತರ ರಾಜ್ಯದ ಗ್ರಾಹಕರು ಈ ಆಫರ್ ಪಡೆಯಲು 119 ರಿಂದ 149 ರೂ ವ್ಯಯಿಸಬೇಕಾಗುತ್ತದೆ.

BSNL ನಿಂದ 99 ರೂ.ಗೆ ಅನ್‌ಲಿಮಿಟೆಡ್ ಸ್ಥಳೀಯ, ದೇಶಿಯ ಕರೆ ಮತ್ತು ಡೇಟಾ!!

ಇತ್ತೀಚಿಗಷ್ಟೆ ತನ್ನ ದರಗಳನ್ನು ಕಡಿತಗೊಳಿಸಿದ್ದ ಏರ್‌ಟೆಲ್, ಐಡಿಯಾಗೆ ಕಾಂಪಿಟ್ ಮಾಡುವಂತಹ ಆಫರ್‌ ಒಂದನ್ನು ಬಿಎಸ್‌ಎನ್‌ಎಲ್ ಪರಿಚಯಿಸಿದ್ದು, ಟೆಲಿಕಾಂ ಸಂಸ್ಥೆಗಳ ದರಸಮರ ಎಲ್ಲಿಯವರೆಗೂ ಮುಂದುವರೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
State-run BSNL on Friday announced unlimited calling offer for its prepaid customers along with limited free data. To Know More Visit to kannda.Gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot