Subscribe to Gizbot

ಬೆಂಗಳೂರಿನಲ್ಲಿ ಸ್ಮಾರ್ಟ್‌ಫೋನ್‌ಗಾಗಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಕೊಲೆ!!

Written By:

ಕೇವಲ ಒಂದು ಸ್ಮಾರ್ಟ್‌ಫೋನ್‌ಗಾಗಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಂಜುಂಡಸ್ವಾಮಿ ಎಂಬ ಯುವಕನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ!! ಡಿಸೆಂಬರ್‌ 9 ರಂದು ಘಟನೆ ಜರುಗಿದ್ದು, ಪ್ರಕರಣದ ಆರೋಪಿ ವರುಣ್ ಕುಮಾರ್‌ ಎಂಬುವನನ್ನು ಬಂಧಿಸಿಲಾಗಿದೆ.

ಬಂಧಿತ ಆರೋಪಿ ವರುಣ್ ಕುಮಾರ್‌ ನಗರದ ಜಿಮ್‌ ಒಂದರಲ್ಲಿ ಟ್ರೈನರ್ ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ ಬುಕ್ ಮಾಡಿ ಡೆಲಿವರಿ ನೀಡಲು ಜಿಮ್‌ಗೆ ಬಂದಾಗ ಈ ಕೃತ್ಯ ಎಸಗಿದ್ದಾನೆ. ಆರೋಪಿ ಅರುಣ್ ಕುಮಾರ್ ಜಿಮ್‌ ಸೇರಿದ ನಂತರ ಅವನ ಜೊತೆಗಾರರೆಲ್ಲರೂ ಸ್ಮಾರ್ಟ್‌ಫೋನ್‌ ಹೊಂದಿದ್ದರು. ಇದರಿಂದ ತಾನು ಸ್ಮಾರ್ಟ್‌ಫೋನ್‌ ಪಡೆಯಬೇಕು ಎಂದು ತನ್ನ ತಂದೆಯನ್ನು ಕೇಳಿದ್ದಾನೆ. ಇನ್ನು ಆರೋಪಿಯ ತಂದೆ ಇವನಿಗೆ ಸ್ಮಾರ್ಟ್‌ಫೋನ್‌ ಕೊಡಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಸ್ಮಾರ್ಟ್‌ಫೋನ್‌ಗಾಗಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಕೊಲೆ!!

ಭಾರತದ ಎಲ್ಲಾ ಇ-ವಾಲೆಟ್ ಕಂಪೆನಿಗಳು ಸುರಕ್ಷಿತವಲ್ಲ!!

ಇನ್ನು ಹೇಗಾದರೂ ಮಾಡಿ ಸ್ಮಾರ್ಟ್‌ಫೋನ್ ಹೊಂದಲೇ ಬೇಕು ಎಂದು ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್ ಒಂದನ್ನು ಬುಕ್ ಮಾಡಿ, ಜಿಮ್ ಅಡ್ರೆಸ್ ನೀಡಿದ್ದಾನೆ. ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ನಂಜುಂಡಸ್ವಾಮಿ ಸ್ಮಾರ್ಟ್‌ಫೋನ್ ಡೆಲಿವರಿ ನೀಡಲು ಬಂದಾಗ ಅವನನ್ನು ಜಿಮ್ ಒಳಗೆ ಕರೆಸಿ ಕಬ್ಬಿಣದ ರಾಡ್‌ ಮತ್ತು ಹೂವಿನ ಕುಂಡದಲ್ಲಿ ಹೊಡೆದಿದ್ದಾನೆ. ನಂತರ ನಂಜುಂಡಸ್ವಾಮಿ ಜ್ಞಾನಪ್ಪಿದ್ದು, ಅವನ ಕತ್ತು ಹಿಸುಕಿ ನೆಲಮಾಳಿಗೆಗೆ ಎಸೆದು ಡೆಲಿವರಿ ನೀಡಲು ತಂದಿದ್ದ ಸ್ಮಾರ್ಟ್‌ಫೋನ್ ಮತ್ತು ಇತರ ಎಲ್ಲಾ ವಸ್ತುಗಳನ್ನು ತೆಗೆದುಕೊಂಡಿದ್ದಾನೆ.

ಬೆಂಗಳೂರಿನಲ್ಲಿ ಸ್ಮಾರ್ಟ್‌ಫೋನ್‌ಗಾಗಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಕೊಲೆ!!

ಇನ್ನು ಎರಡು ದಿನವಾದರೂ ನಂಜುಂಡಸ್ವಾಮಿ ಮನೆಗೆ ವಾಪಸ್ ಆಗದಿದ್ದಕ್ಕೆ ಅವನ ಮನೆಯವರು ಪೊಲೀಸ್‌ ಕಂಪ್ಲೆಟ್‌ ನೀಡಿದ್ದು, ಪೊಲೀಸರು ನಂಜುಂಡಸ್ವಾಮಿ ಫೋನ್‌ ಟ್ರಾಕ್ ಮಾಡಿ ಮತ್ತು ಫ್ಲಿಪ್‌ಕಾರ್ಟ್ ಕೊನೆಯ ಡೆಲಿವರಿ ಮಾಹಿತಿ ಪಡೆದು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ವರುಣ್ ಕುಮಾರ್‌ ಈ ಬಗ್ಗೆ ಮೊದಲೇ ಪ್ಲಾನ್ ಮಾಡಿದ್ದು, ಸ್ಮಾರ್ಟ್‌ಫೋನ್‌ಗಾಗಿಯೇ ನಂಜುಂಡಸ್ವಾಮಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Varun Kumar, a gym trainer, was arrested for murder of a Flipkart employee's murder in Bengaluru. to Know More visit to Kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot