Home
ಸುದ್ದಿಜಾಲ

ರೂ 500 ಕ್ಕೆ 600 ಜಿಬಿ ಡೇಟಾ ಜಿಯೋ ಆಫರ್

By Shwetha

ಆಗಸ್ಟ್ 31 ರಂದು ಮುಕೇಶ್ ಅಂಬಾನಿ ರಿಲಾಯನ್ಸ್ ಜಿಯೋದ ಯೋಜನೆಗಳನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ರಿಲಾಯನ್ಸ್ ಸದ್ಯದಲ್ಲಿಯೇ ಎಫ್‌ಟಿಟಿಎಚ್ (ಫೈಭರ್ ಟು ದ ಹೋಮ್) ಸೇವೆಯನ್ನು ಲಾಂಚ್ ಮಾಡುವ ಯೋಜನೆಯನ್ನು ಘೋಷಿಸಿದೆ. ಇದು 1 ಜಿಬಿಪಿಎಸ್‌ವರೆಗೆ ಬ್ರಾಡ್‌ಬ್ಯಾಂಡ್ ಸ್ಪೀಡ್ ಅನ್ನು ಒದಗಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಜಿಯೋ ಮೊಬೈಲ್‌ಗೆ ಒದಗಿಸುವ ಡೇಟಾ ಯೋಜನೆಯಂತೆಯೇ ಇದೆ.

ಓದಿರಿ: ನಿಮ್ಮ ಸ್ಥಳದಲ್ಲಿರುವ ರಿಲಾಯನ್ಸ್ ಜಿಯೋ 4ಜಿ ನೆಟ್‌ವರ್ಕ್ ಪರಿಶೀಲನೆ ಹೇಗೆ?

ಒಂದು ವರದಿಯ ಪ್ರಕಾರ, ದೆಹಲಿಮತ್ತು ಮುಂಬೈನಲ್ಲಿ ಎಫ್‌ಟಿಟಿಎಚ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪರೀಕ್ಷಿಸಲು ಆರಂಭಿಸಿದೆ. ವೆಲ್‌ಕಮ್ ಆಫರ್‌ನಂತೆ 90 ದಿನಗಳ ಕಾಲ ಇದು ಸೇವೆ ಸಲ್ಲಿಸಲಿದ್ದು, ಜಿಯೋನ 4ಜಿ ಮೊಬೈಲ್‌ನಲ್ಲಿರುವ ವೆಲ್‌ಕಮ್ ಆಫರ್‌ಗೆ ಸಮಾನವಾಗಿದೆ. 90 ದಿನಗಳ ನಂತರ ಜಿಯೋ ತನ್ನ ಡೇಟಾ ಯೋಜನೆಗಳನ್ನು ಆರಂಭಿಸಲಿದ್ದು ಇದರ ಬೆಲೆ ರೂ 500 ರಿಂದ ಆರಂಭವಾಗಲಿದೆ.

ಫೈಬರ್ ಬ್ರಾಡ್‌ಬ್ಯಾಂಡ್ ಸೇವೆ

ಫೈಬರ್ ಬ್ರಾಡ್‌ಬ್ಯಾಂಡ್ ಸೇವೆ

ರಿಲಾಯನ್ಸ್ ಜಿಯೋದ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯು ಮೂರು ಬೇರೆ ಬೇರೆ ವರ್ಗಗಳಲ್ಲಿ ಡೇಟಾ ಯೋಜನೆಗಳನ್ನು ಒದಗಿಸಲಿದೆ. ಸಿಲ್ವರ್, ಗೋಲ್ಡ್, ಮತ್ತು ಪ್ಲಾಟಿನಮ್ ಎಂಬುದು ಇದರ ಹೆಸರಾಗಿದೆ. ಈ ಯೋಜನೆಗಳು ಹೇಗೆ ಕಾರ್ಯನಿರ್ವಹಿಸಲಿವೆ ಎಂಬುದರ ಮಾಹಿತಿ ಇನ್ನೂ ದೊರೆತಿಲ್ಲ. ವೇಗವನ್ನು ಆಧರಿಸಿ ಈ ಟಾರಿಫ್‌ಗಳಿದ್ದು, ವಾಲ್ಯೂಮ್ ಮತ್ತು ಬೆಲೆಯನ್ನು ನಿಶ್ಚಯಿಸಿ ಬಳಕೆದಾರರು ಇದನ್ನು ಪಡೆದುಕೊಳ್ಳಬಹುದಾಗಿದೆ.

ಸ್ಪೀಡ್ ಆಧಾರಿತ ಮತ್ತು ವಾಲ್ಯೂಮ್ ಆಧಾರಿತ ಟಾರಿಫ್‌

ಸ್ಪೀಡ್ ಆಧಾರಿತ ಮತ್ತು ವಾಲ್ಯೂಮ್ ಆಧಾರಿತ ಟಾರಿಫ್‌

ಸ್ಪೀಡ್ ಆಧಾರಿತ ಮತ್ತು ವಾಲ್ಯೂಮ್ ಆಧಾರಿತ ಟಾರಿಫ್‌ಗಳ ಕುರಿತ ಬೆಲೆಗಳ ಬಗ್ಗೆ ಇನ್ನೂ ಮಾಹಿತಿಯನ್ನು ನೀಡಿಲ್ಲ. "ಸ್ಪೆಶಲ್ ಆಫರ್ ಟಾರಿಫ್ಸ್" ಕನಿಷ್ಟ ಯೋಜನೆಯಾದ ರೂ 500 ಅನ್ನು ಹೊಂದಿದ್ದು, ಕಂಪೆನಿಯು 600 ಜಿಬಿ ಡೇಟಾದ 15Mbps ವೇಗವನ್ನು 30 ದಿನಗಳಿಗೆ ನೀಡಲಿದೆ.

ಏಕೈಕ ಯೋಜನೆ

ಏಕೈಕ ಯೋಜನೆ

ಕಂಪೆನಿಯು ರೂ 400 ರ ಏಕೈಕ ಯೋಜನೆಯನ್ನು ಒದಗಿಸುತ್ತಿದ್ದು ದಿನದಲ್ಲಿ ಇದು ಅನಿಯಮಿತ ಡೇಟಾ ಬಳಕೆಯನ್ನು ಬಳಕೆದಾರರಿಗೆ ನೀಡಲಿದೆ. ರೂ 500 ರ ಇನ್ನೆರಡು ಯೋಜನೆಗಳಿದ್ದು, ಇದು 3.5 ಜಿಬಿಯನ್ನು ದಿನವೊಂದಕ್ಕೆ ಒದಗಿಸಲಿದ್ದು ತಿಂಗಳಿಗೆ ಅನ್ವಯವಾಗಲಿದೆ. ರೂ 500 ರ ಯೋಜನೆಯು ಬಳಕೆದಾರರಿಗೆ 72 ಗಂಟೆಗಳ ಬಳಕೆಯನ್ನು ನೀಡಿದ್ದು, 30 ದಿನಗಳು ಇದನ್ನು ಬಳಸಬಹುದಾಗಿದೆ. ಇದರ ವೇಗ 60Mbps ವರೆಗೆ ತಲುಪಲಿದೆ.

500 ರ ಮೂರು ಯೋಜನೆ

500 ರ ಮೂರು ಯೋಜನೆ

ರೂ 500 ರ ಮೂರು ಯೋಜನೆಗಳಿದ್ದು, ಇದು ಬೇರೆ ಬೇರೆ ಹೆಸರುಗಳಿಂದ ಬಂದಿದೆ ಮತ್ತು ರಿಲಾಯನ್ಸ್ ಈ ಸೇವೆಯನ್ನು ಅಧಿಕೃತವಾಗಿ ಘೋಷಿಸಿದ ನಂತರ ಸೇವೆಯ ಬಗ್ಗೆ ಮಾಹಿತಿಯನ್ನು ನೀಡಲಿದೆ.

ಸ್ಪೀಡ್ ಆಧಾರಿತ ಸೇವೆಗಳು

ಸ್ಪೀಡ್ ಆಧಾರಿತ ಸೇವೆಗಳು

ಸ್ಪೀಡ್ ಆಧಾರಿತ ಸೇವೆಗಳು 50Mbps ನಿಂದ ಆರಂಭವಾಗಿ 600mbps ವರೆಗೆ ಹೋಗಲಿದೆ. 50Mbps ನ ಯೋಜನೆಯು 2000GB ಯಾಗಿದ್ದು ಇದು 300GB ಯಿಂದ 600Mbps ಯೋಜನೆಗೆ ಇಳಿಕೆಯಾಗಲಿದೆ. ಈ ಎಲ್ಲಾ ಯೋಜನೆಗಳು 30 ದಿನಗಳಿಗೆ ಅನ್ವಯವಾಗಲಿದೆ. ಯೋಜನೆಯ ಮೌಲ್ಯವನ್ನು ಆಧರಿಸಿ ಜಿಯೋ ಅಪ್ಲಿಕೇಶನ್ ಬಳಕೆಯು ರೂ 1,500 ರಿಂದ ರೂ 5,500 ಅನ್ನು ತಲುಪಲಿದೆ.

ವಾಲ್ಯೂಮ್ ಆಧಾರಿತ ಟಾರಿಫ್ ಯೋಜನೆ

ವಾಲ್ಯೂಮ್ ಆಧಾರಿತ ಟಾರಿಫ್ ಯೋಜನೆ

ವಾಲ್ಯೂಮ್ ಆಧಾರಿತ ಟಾರಿಫ್ ಯೋಜನೆಗಳು 30 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ. ದಿನದ ಬಳಕೆಗೆ ಆಧರಿಸಿ ಈ ಯೋಜನೆಗಳನ್ನು ವಿಭಜಿಸಲಾಗಿದೆ. ವಾಲ್ಯೂಮ್ ಆಧಾರಿತ ಯೋಜನೆಗಳು ದಿನದಿಂದ 5ಜಿಬಿ ಆರಂಭಿಸಿ 60 ಜಿಬಿಗಳವರೆಗೆ ತಲುಪಲಿದೆ. ಈ ಯೋಜನೆಗಳ ಯಾವುದೇ ಸ್ಪೀಡ್ ಅಥವಾ ಬೆಲೆಗಳನ್ನು ತಿಳಿಸಿಲ್ಲ.

Best Mobiles in India

English summary
The Reliance Jio Fiber broadband service will offer data plans under three different categories: Silver, Gold and Platinum.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+