ನಿಮ್ಮ ಸ್ಥಳದಲ್ಲಿರುವ ರಿಲಾಯನ್ಸ್ ಜಿಯೋ 4ಜಿ ನೆಟ್‌ವರ್ಕ್ ಪರಿಶೀಲನೆ ಹೇಗೆ?

By Shwetha
|

ಇತ್ತೀಚೆಗೆ ತಾನೇ ಏರ್‌ಟೆಲ್ ಓಪನ್ ನೆಟ್‌ವರ್ಕ್ ಪ್ಲಾಟ್‌ಫಾರ್ಮ್ ಯೋಜನೆಯೊಂದಿಗೆ ಬಂದಿದ್ದು ಈ ಪ್ರದೇಶದಲ್ಲಿರುವ ನೆಟ್‌ವರ್ಕ್ ಅನ್ನು ಬಳಕೆದಾರರು ಪರಿಶೀಲಿಸಿಕೊಳ್ಳಬಹುದಾಗಿದೆ. ರಿಲಾಯನ್ಸ್ ಜಿಯೋ ಕೂಡ ಇಂತಹುದೇ ಸೇವೆಯೊಂದಿಗೆ ಬಂದಿದ್ದು ಸ್ಮಾರ್ಟ್ ಕವರೇಜ್ ಮ್ಯಾಪ್ ಎಂಬುದಾಗಿ ಇದನ್ನು ಕರೆಯಲಾಗಿದೆ.

ಓದಿರಿ: 2G, 4G ರೋಮಿಂಗ್‌ ಪ್ಯಾಕ್‌ಗೆ ಬಿಎಸ್‌ಎನ್‌ಎಲ್‌ ಮತ್ತು ರಿಲಾಯನ್ಸ್ ಜಿಯೋ ಒಪ್ಪಂದ

ಭಾರತದಾದ್ಯಂತ ಇರುವ 4ಜಿ ಕವರೇಜ್ ನೆಟ್‌ವರ್ಕ್ ಕುರಿತು ಸ್ಮಾರ್ಟ್ ಕವರೇಜ್ ಮ್ಯಾಪ್ ಮಾಹಿತಿಯನ್ನು ತಿಳಿಸಲಿದೆ. ಏರ್‌ಟೆಲ್‌ನ ಓಪನ್ ನೆಟ್‌ವರ್ಕ್ ಯೋಜನೆಯ ಮಾದರಿಲ್ಲಿಯೇ ಇದೂ ಇದೆ. ಸ್ಮಾರ್ಟ್ ಕವರೇಜ್ ಮ್ಯಾಪ್‌ನೊಂದಿಗೆ, ನಿಮ್ಮ ಸ್ಥಳದಲ್ಲಿರುವ ಜಿಯೋ 4ಜಿ ನೆಟ್‌ವರ್ಕ್ ಕವರೇಜ್ ಅನ್ನು ವೀಕ್ಷಿಸಬಹುದಾಗಿದೆ ಮತ್ತು ಬಳಸಲೂ ಇದು ಸುಲಭವಾಗಿದೆ. ಸ್ಮಾರ್ಟ್ ಕವರೇಜ್ ಮ್ಯಾಪ್ ಕುರಿತ ವಿವರಗಳನ್ನು ಕೆಳಗೆ ನಾವು ನೀಡುತ್ತಿದ್ದು ಇದರ ಪ್ರಯೋಜನವನ್ನು ನಿಮಗಿಲ್ಲಿ ಅರಿತುಕೊಳ್ಳಬಹುದಾಗಿದೆ.

ವೆಬ್‌ಸೈಟ್‌ನಿಂದ ಜಿಯೋ ಕವರೇಜ್ ಅನ್ನು ಪರಿಶೀಲಿಸಿಕೊಳ್ಳಿ

ವೆಬ್‌ಸೈಟ್‌ನಿಂದ ಜಿಯೋ ಕವರೇಜ್ ಅನ್ನು ಪರಿಶೀಲಿಸಿಕೊಳ್ಳಿ

ನಿಮ್ಮ ನೋಂದಾಯಿತ ಜಿಯೋ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿ. ಇಲ್ಲಿ ಸ್ಮಾರ್ಟ್ ಕವರೇಜ್ ಮ್ಯಾಪ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಜಿಯೋ ನೆಟ್‌ವರ್ಕ್ ಮಾಹಿತಿಯನ್ನು ಅರಿತುಕೊಳ್ಳಿ

ಜಿಯೋ ನೆಟ್‌ವರ್ಕ್ ಮಾಹಿತಿಯನ್ನು ಅರಿತುಕೊಳ್ಳಿ

ಸ್ಮಾರ್ಟ್ ಕವರೇಜ್ ಮ್ಯಾಪ್ ಜಿಯೋ ನೆಟ್‌ವರ್ಕ್‌ನ ಗುಣಮಟ್ಟ, ಸಿಗ್ನಲ್ ಸಾಮರ್ಥ್ಯ, ಮತ್ತು ಇನ್ನಷ್ಟು ದೃಢೀಕರಣವನ್ನು ಪಡೆದುಕೊಳ್ಳಲು ಬಳಕೆದಾರರಿಗೆ ಪರಿಶೀಲನೆ ಹಂತಗಳನ್ನು ಇದು ತಿಳಿಸಿಕೊಡುತ್ತದೆ.

ಮೂಲ ವಿವರಗಳನ್ನು ಒದಗಿಸಿ

ಮೂಲ ವಿವರಗಳನ್ನು ಒದಗಿಸಿ

ನಿಮ್ಮ ಸ್ಥಳ ಮತ್ತು ಜಿಪಿಎಸ್ ಆನ್ ಮಾಡಿಕೊಂಡು ಜಿಯೋ ಮೊಬೈಲ್ ನೆಟ್‌ವರ್ಕ್ ನಿಮ್ಮ ಸ್ಥಳದಲ್ಲಿ ಲಭ್ಯವಿದೆಯೇ ಎಂಬುದನ್ನು ಕಂಡುಕೊಳ್ಳಿ.

ಔಟ್‌ಡೋರ್ ಮತ್ತು ಇನ್‌ಡೋರ್ ಕವರೇಜ್ ಕುರಿತು ತಿಳಿದುಕೊಳ್ಳಿ

ಔಟ್‌ಡೋರ್ ಮತ್ತು ಇನ್‌ಡೋರ್ ಕವರೇಜ್ ಕುರಿತು ತಿಳಿದುಕೊಳ್ಳಿ

ಜಿಯೋ ಸ್ಮಾರ್ಟ್ ಕವರೇಜ್ ಮ್ಯಾಪ್ ಅನ್ನು ಔಟ್‌ಡೋರ್ ಆನ್ ಏರ್ ಪಡೆದುಕೊಳ್ಳಲು ಸಾರ್ಟ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಪ್ರದೇಶದಲ್ಲಿರುವ ಪೂರ್ಣ ಕಾರ್ಯನಿರತ ನೆಟ್‌ವರ್ಕ್ ಟವರ್‌ಗಳನ್ನು ಇದು ನಿಮಗೆ ತೋರಿಸುತ್ತದೆ. ಇಂಡೋರ್ ಕವರೇಜ್ ಸ್ಮಾಲ್ ಸೆಲ್ಸ್ ಆಫರಿಂಗ್ ಅನ್ನು ನೀಡುತ್ತಿದ್ದು ಕಟ್ಟಡದ ಒಳಭಾಗದಲ್ಲಿ ಸಿಗ್ನಲ್ ದೊರೆಯುವ ಮಾಹಿತಿ ನಿಮಗೆ ಲಭ್ಯವಾಗಲಿದೆ.

ಜಿಯೋ ವೈಫೈ ಹಾಟ್‌ಸ್ಪಾಟ್ ಕವರೇಜ್ ಪರಿಶೀಲಿಸಿ

ಜಿಯೋ ವೈಫೈ ಹಾಟ್‌ಸ್ಪಾಟ್ ಕವರೇಜ್ ಪರಿಶೀಲಿಸಿ

ಔಟ್‌ಡೋರ್ ಆನ್ - ಏರ್ ಮತ್ತು ಇಂಡೋರ್ ಕವರೇಜ್‌ಗೆ ಹೆಚ್ಚುವರಿಯಾಗಿ, ನಿಮ್ಮ ಸ್ಥಳದಲ್ಲಿರುವ ಜಿಯೋ ವೈಫೈ ಹಾಟ್‌ಸ್ಪಾಟ್ ಕವರೇಜ್ ಅನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಪ್ರಸ್ತುತ ಇನ್‌ಸ್ಟಾಲೇಶನ್ ಆಗಿರುವ ನೆಟ್‌ವರ್ಕ್ ಅನ್ನು ಇಲ್ಲಿ ಪರಿಶೀಲನೆ ಮಾಡಬಹುದಾಗಿದೆ.

ನಿಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿ

ನಿಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿ

ವೆಬ್‌ಸೈಟ್‌ನಿಂದ ನಿಮ್ಮ ವಲಯದಲ್ಲಿರುವ ಜಿಯೋ ನೆಟ್‌ವರ್ಕ್ ಪ್ರತಿಕ್ರಿಯೆಯನ್ನು ನಿಮಗೆ ಸಲ್ಲಿಸಬಹುದಾಗಿದೆ. ಸ್ಮಾರ್ಟ್ ಕವರೇಜ್ ಮ್ಯಾಪ್ ಬಳಸಿಕೊಂಡು ಪರಿಶೀಲಿಸಿದ ಬಳಕೆದಾರರ ನೆಟ್‌ವರ್ಕ್ ಫಲಿತಾಂಶಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಪ್ರಸ್ತುತ ಈ ನಕ್ಷೆ ಬೇಟಾ ಸ್ಥಿತಿಯಲ್ಲಿದೆ.

Best Mobiles in India

English summary
Take a look at the features of the Smart Coverage map and what details it helps you with from the content below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X