Subscribe to Gizbot

ಜಿಯೊ ಗಿಗಾಫೈಬರ್ V/S ಏರ್‌ಟೆಲ್‌ ವಿಫೈಬರ್ V/S ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್: ಯಾವುದು ಉತ್ತಮ?

Written By:

ರಿಲಾಯನ್ಸ್ ಜಿಯೋ ಇಂಟರ್ನೆಟ್ ಆಫರ್ ಒಂದು ಕಡೆಯಾದರೇ, ಇತ್ತ ಇಂಟರ್ನೆಟ್ ಪೂರ್ತಿ ರಿಲಾಯನ್ಸ್ ಜಿಯೋದೆ ಸುದ್ದಿ. ರಿಲಾಯನ್ಸ್ ಜಿಯೋ ಕಂಪನಿ ತನ್ನ ಉಚಿತ ಸೇವೆಯನ್ನು ಈಗ ಬ್ರಾಡ್‌ಬ್ಯಾಂಡ್ ಸರ್ವೀಸ್ -ಜಿಯೋ ಗಿಗಾಫೈಬರ್'ನಲ್ಲಿ ನೀಡಲು ಮುಂದಾಗುತ್ತಿದೆ. ಜಿಯೋದ ಸ್ವಯಂಘೋಷಿತ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು ಈಗಾಗಲೇ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಅತ್ಯಾಕರ್ಷಕ ಕಡಿಮೆ ದರದ ಪ್ಲಾನ್‌ಗಳಾಗಿವೆ.

ಜಿಯೋಗಿಂತ ಏರ್‌ಟೆಲ್‌ ತಾನೇನು ಕಡಿಮೆ ಇಲ್ಲ ಎಂದು ಕಳೆದ ವಾರ ವಿ-ಫೈಬರ್ ಬ್ರಾಡ್‌ಬ್ಯಾಂಡ್‌ನಿಂದ ಸುದ್ದಿಯಲ್ಲಿತ್ತು. ಅಲ್ಲದೇ ಭಾರತದಲ್ಲಿ ಈವರೆಗೆ ಸೂಪರ್‌ಫಾಸ್ಟ್‌ ಎಂಬ ಹೆಸರನ್ನು ಸಹ ಏರ್‌ಟೆಲ್‌ ಟೆಲಿಕಾಂ ಪಡೆದಿದೆ.

ರಿಲಾಯನ್ಸ್ ಜಿಯೋದಿಂದ, 'ಏರ್‌ಟೆಲ್‌, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆ!

ಬಿಸ್‌ಎನ್‌ಎಲ್ ಮಾತ್ರ ನಿಧಾನವಾಗಿ, ತನ್ನ ಆಫರ್‌ಡೇಬಲ್‌ ಪ್ಲಾನ್‌ಗಳ ಮೂಲಕ ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಸ್ಪರ್ಧೆಯ ರೇಸ್‌ಗೆ ಇಳಿಯುತ್ತಲೇ ಇದೆ. ಹಾಗಿದ್ರೆ ಈ ಎಲ್ಲಾ ಬ್ರಾಂಡ್‌ಬ್ಯಾಂಡ್‌ ಸೇವೆಗಳಲ್ಲಿ ಯಾವುದು ಉತ್ತಮ, ಯಾವ ಸರ್ವೀಸ್ ಪ್ರೊವೈಡರ್‌ ಕಡಿಮೆ ಬೆಲೆಯಲ್ಲಿ ಸೇವೆ ನೀಡುತ್ತಿದ್ದಾರೆ ಎಂದು ಹಾಗೆ ಒಮ್ಮೆ ನೋಡಿಕೊಂಡು ಬನ್ನಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸೂಪರ್‌ಫಾಸ್ಟ್‌ ಇಂಟರ್ನೆಟ್ ಟೆಕ್ನಾಲಜಿ

ಸೂಪರ್‌ಫಾಸ್ಟ್‌ ಇಂಟರ್ನೆಟ್ ಟೆಕ್ನಾಲಜಿ

ರಿಲಾಯನ್ಸ್ ಜಿಯೋದ 'ಗಿಗಾಫೈಬರ್' ಸೇವೆ ಮತ್ತು ಏರ್‌ಟೆಲ್‌ನ 'ವಿ-ಫೈಬರ್ ಟೆಕ್ನಾಲಜಿ' ಎರಡು ಸಹ ಭಾರತದಲ್ಲಿ ಸೂಪರ್‌ಫಾಸ್ಟ್ ಇಂಟರ್ನೆಟ್ ಟೆಕ್ನಾಲಜಿಗಳು. ಈ ಎರಡು ಟೆಲಿಕಾಂಗಳು ಸಹ ಸೇವೆಯನ್ನು 100Gbps ವೇಗಗೊಳಿಸಲು, ಪ್ರಯತ್ನಿಸುತ್ತಿವೆ.

ಕೈಗೆಟಕುವ ಸೂಪರ್ ಯೋಜನೆಗಳು

ಕೈಗೆಟಕುವ ಸೂಪರ್ ಯೋಜನೆಗಳು

ಆನ್‌ಲೈನ್‌ನಲ್ಲಿ ಲೀಕ್‌ ಆದ ಮಾಹಿತಿ ಪ್ರಕಾರ ರಿಲಾಯನ್ಸ್ ಜಿಯೋ ಗಿಗಾಫೈಬರ್ ಪ್ಲಾನ್‌ ಆರಂಭಿಕ ಬೆಲೆ ರೂ. 500 ಮತ್ತು 5,000 ರೂವರೆಗೂ ಇದೆ. ಈ ಡಾಟಾ ರೇಂಜ್ 50GB-1000GB ವರೆಗೂ ಆಫರ್ ಮಾಡಲಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಸ್ತುತ ಬಿಎಸ್‌ಎನ್‌ಎಲ್‌ ಸಹ ಅತೀ ಕಡಿಮೆ ಬೆಲೆಯ ಪ್ಲಾನ್ ಹೊಂದಿದೆ

ಪ್ರಸ್ತುತ ಬಿಎಸ್‌ಎನ್‌ಎಲ್‌ ಸಹ ಅತೀ ಕಡಿಮೆ ಬೆಲೆಯ ಪ್ಲಾನ್ ಹೊಂದಿದೆ

ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಯಾವ ಪ್ರೊವೈಡರ್ ಅತೀ ಕಡಿಮೆ ಬೆಲೆಯ ಪ್ಲಾನ್ ಆಫರ್ ಮಾಡಿದ್ದಾರೆ ಎಂದು ನೋಡುವುದಾದರೆ, ಬಿಎಸ್ಎನ್‌ಎಲ್‌ ಅತೀ ಕಡಿಮೆ ಬೆಲೆಯ ಕೈಗೆಟಕುವ ಪ್ಲಾನ್‌ಗಳಾದ BB249, BBL 1199, ಆಫರ್ ಪ್ಲಾನ್‌ಗಳನ್ನು ಹೊಂದಿದೆ.

ಗಿಗಾಫೈಬರ್ ಮತ್ತು ವಿ-ಫೈಬರ್‌ಗಳು ವೆಲ್ಕಮ್ ಆಫರ್ ನೀಡುವುದಾಗಿ ಹೇಳಿದ್ದಾರೆ !

ಗಿಗಾಫೈಬರ್ ಮತ್ತು ವಿ-ಫೈಬರ್‌ಗಳು ವೆಲ್ಕಮ್ ಆಫರ್ ನೀಡುವುದಾಗಿ ಹೇಳಿದ್ದಾರೆ !

ರಿಲಾಯನ್ಸ್ ಜಿಯೋ ಬೃಹತ್‌ ಸಮೂಹದ ಫ್ಯಾನ್‌ಗಳನ್ನು ಹೊಂದಿರುವುದೇ ತನ್ನ ವೆಲ್ಕಮ್‌ ಆಫರ್‌ನಿಂದ. ಜಿಯೋ ತನ್ನ ಬ್ರಾಡ್‌ಬ್ಯಾಂಡ್ ಸೇವೆ ಗಿಗಾಫೈಬರ್‌ನಲ್ಲೂ ವೆಲ್ಕಮ್‌ ಆಫರ್ ಮುಂದುವರೆಸಲಿದೆ. ಅದೇ ರೀತಿಯಲ್ಲಿ ಏರ್‌ಟೆಲ್‌ ಸಹ ಈಗ ಒಂದು ತಿಂಗಳು ಉಚಿತ ಸೇವೆ ನೀಡಲು ನಿರ್ಧರಿಸಿದೆ. ಇದಕ್ಕೆ ಕಾರಣ ರಿಲಾಯನ್ಸ್ ಜಿಯೋ ಎಂಬುದನ್ನು ಮರೆಯೋಹಾಗಿಲ್ಲ.

ಬಿಎಸ್‌ಎನ್‌ಎಲ್‌ ನಿಧಾನವಾಗಿ ಅಪ್‌ಗ್ರೇಡ್ ಮಾಡುತ್ತಿದೆ

ಬಿಎಸ್‌ಎನ್‌ಎಲ್‌ ನಿಧಾನವಾಗಿ ಅಪ್‌ಗ್ರೇಡ್ ಮಾಡುತ್ತಿದೆ

ರಿಲಾಯನ್ಸ್ ಜಿಯೋ ಗಿಗಾಫೈಬರ್ ಮತ್ತು ಏರ್‌ಟೆಲ್ ವಿ-ಫೈಬರ್ ಬ್ರಾಡ್‌ಬ್ಯಾಂಡ್‌ಗಳ ಸಮಾಕಾಲಿನ ಆಫರ್‌ ಮತ್ತು ಸೇವೆ ನೀಡಲು ಬಿಎಸ್‌ಎನ್‌ಎಲ್‌ ನಿಧಾನವಾಗಿ ಅಪ್‌ಗ್ರೇಡ್ ಆಗುತ್ತದೆ. ಅಲ್ಲದೇ ಲೇಟೆಸ್ಟ್ ಫೈಬರ್ ಟೆಕ್ನಾಲಜಿ ಅಳವಿಡಿಸುತ್ತಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio GigaFiber vs Airtel V-Fiber vs BSNL Broadband: And the Winner is… To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot