ಮತ್ತೇ ಶುರುವಾಗಿ ಜಿಯೋ ಅಬ್ಬರ: ಮಾರುಕಟ್ಟೆಯಲ್ಲಿ ಏರ್‌ಟೆಲ್, ವೊಡೊ ತತ್ತರ..!!
ಈ ಬಾರಿ ಬಿಡುಗಡೆ ಮಾಡಿರುವ ಡೇಟಾದ ಪ್ರಮುಖ ಅಂಶ ಎಂದರೆ 1204.98 ಮಿಲಿಯನ್ ಮಂದಿ ಟೆಲಿಕಾಂ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಟ್ರಾಯ್ ಮೇ ತಿಂಗಳ ಚಂದದಾರರ ಮಾಹಿತಿಯನ್ನು ಬಿಡಯಗಡೆ ಮಾಡಿದೆ. ಮೇ ತಿಂಗಳಿನಲ್ಲಿ ಮತ್ತೆ ಜಿಯೋ ಕುಟುಂಬಕ್ಕೆ ಹೆಚ್ಚಿನ ಚಂದದಾರರನ್ನು ಸೇರಿಸಿಕೊಂಡು ಬೆಳವಣಿಯ ದರವನ್ನು ಹೆಚ್ಚು ಮಾಡಿಕೊಂಡಿದೆ. ಈ ಬಾರಿ ಬಿಡುಗಡೆ ಮಾಡಿರುವ ಡೇಟಾದ ಪ್ರಮುಖ ಅಂಶ ಎಂದರೆ 1204.98 ಮಿಲಿಯನ್ ಮಂದಿ ಟೆಲಿಕಾಂ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಓದಿರಿ: ಮೊಬೈಲ್ ನಂಬರ್ ನೀಡದೆ ರೀಚಾರ್ಜ್ ಮಾಡಿಸಬಹುದು.!! ಹೇಗೆ..?
ದಿನೇ ದಿನೇ ಭಾರತೀಯ ಟೆಲಿಕಾಂ ಲೋಕವನ್ನು ತೀವ್ರಗತಿಯ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಅದರಲ್ಲಿಯೂ ಜಿಯೋ ಸೇವೆಯನ್ನು ಆರಂಭ ಮಾಡಿದ ನಂತರದಲ್ಲಿ ಬೆಳವಣಿಗೆಯೂ ಹೆಚ್ಚಾಗಿದ್ದು, ಗುಣಮಟ್ಟದ ಸೇವೆಯೂ ಗ್ರಾಹಕರಿಗೆ ದೊರೆಯುತ್ತಿದೆ ಎನ್ನಲಾಗಿದೆ.

1204.98 ಮಿಲಿಯನ್ ಮಂದಿ ಬಳಕೆದಾರರು:
ಸದ್ಯ ಭಾರತದಲ್ಲಿ ಟೆಲಿಕಾಂ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ದಿನೇ ದಿನೇ ಅಧಿಕವಾಗುತ್ತಿದೆ. 1204.98 ಮಿಲಿಯನ್ ಮಂದಿ ಟೆಲಿಕಾಂ ಕಂಪನಿಗಳ ಚಂದದಾರರಾಗಿದ್ದಾರೆ. ಇದರದಲ್ಲಿ 1180.82 ಮಿಲಿಯನ್ ಮಂದಿ ವೈರ್‌ಲೈಸ್ ಸೇವೆ ಎಂದರೆ ಮೊಬೈಲ್ ಬಳಕೆದಾರರಾಗಿದ್ದು, 24.16 ಮಿಲಿಯನ್ ಮಂದಿ ವೈರ್ ಲೈನ್ ಸೇವೆಯನ್ನು ಬಳಕೆ ಮಾಡುತ್ತಿದ್ದಾರೆ.

ಜಿಯೋ 4.25 % ಬೆಳವಣಿಗೆ:
ಇದೇ ಮಾದರಿಯಲ್ಲಿ ಮೇ ತಿಂಗಳಿನಲ್ಲಿ ಜಿಯೋ 4.25% ಬೆಳವಣಿಗೆಯ ದರವನ್ನು ಹೊಂದಿದೆ. ಇದೇ ಮಾದರಿಯಲ್ಲಿ BSNL ಶೇ.1.34% ಬೆಳವಣಿಯನ್ನು ಸಾಧಿಸಿದರೆ ಏರ್‌ಟೆಲ್ ಕೇವಲ 0.76 % ಬೆಳವಣಿಗೆಯನ್ನು ಸಾಧಿಸಲು ಶಕ್ತವಾಗಿದೆ.

ಬ್ರಾಡ್ ಬ್ಯಾಂಡ್ ಸೇವೆಯ ಬೆಳವಣಿಗೆ ಸಾಧಿಸಿದೆ:
ಮಾರುಕಟ್ಟೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯ ಬೇಡಿಕೆಯು ಹೆಚ್ಚಾಗಿದ್ದು, ಒಟ್ಟು 291.61 ಮಿಲಿಯನ್ ಮಂದಿ ಬ್ರಾಂಡ್ ಬ್ಯಾಂಡ್ ಚಂದದಾರರಾಗಿದ್ದಾರೆ . ಇದರಲ್ಲಿ 18.23 ಮಿಲಿಯನ್ ಮಂದಿ ವೈರ್ ಲೈನ್ ಸೇವೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ವೈರ್‌ಲೈಸ್ ಬ್ರಾಡ್ ಬ್ಯಾಂಡಿನಲ್ಲೂ ಜಿಯೋ ಮುಂದು:
ಇದಲ್ಲದೇ ವೈರ್‌ಲೈಸ್ ಬ್ರಾಡ್ ಬ್ಯಾಂಡ್ ಸೇವೆ ನೀಡುತ್ತಿರುವುದರಲ್ಲಿ ಜಿಯೋ ಮುಂದಿದೆ. ರಿಲಯನ್ಸ್ ಜಿಯೋ ಒಟ್ಟು 117.34 ಮಿಲಿಯನ್ ಚಂದದಾರರನ್ನು ಹೊಂದಿದ್ದು, ಇದೇ ಮಾದರಿಯಲ್ಲಿ ಏರ್‌ಟೆಲ್ 51.21 ಮಿಲಿಯನ್ ಚಂದದಾರರನ್ನು ಹೊಂದಿದೆ ಹಾಗೂ ಮೂರನೇ ಸ್ಥಾನದಲ್ಲಿರುವ ವೊಡಾಫೋನ್ 40.42 ಮಿಲಿಯನ್ ಚಂದದಾರರನ್ನು ಹೊಂದಿದೆ.

ವೈರ್ ಲೈನಿನ ಬ್ರಾಡ್ ಬ್ಯಾಂಡಿನಲ್ಲಿ BSNL ಮುಂದು:
ಇದೇ ಮಾದರಿಯಲ್ಲಿ ವೈರ್‌ಲೈನ್ ಮಾದರಿಯ ಬ್ರಾಡ್ ಬ್ಯಾಂಡ್ ಸೇವೆಯಲ್ಲಿ BSNL ಮುಂದಿದೆ ಎನ್ನಲಾಗಿದೆ. 9.80 ಮಿಲಿಯನ್ ಮಂದಿ BSNL ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಮಾದರಿಯಲ್ಲಿ ಎರಡನೇ ಸ್ಥಾನದಲ್ಲಿ ಏರ್‌ಟೆಲ್ ಇದ್ದು, 2.09 ಮಿಲಿಯನ್ ಚಂದದಾರರನ್ನು ಹೊಂದಿದೆ. ಜಿಯೋ ಶೀಘ್ರದಲ್ಲಿ ಸೇವೆಯನ್ನು ಆರಂಭಿಸಲಿದ್ದು, ಇಲ್ಲಿಯೂ ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ.


Click it and Unblock the Notifications








