Subscribe to Gizbot

ಮೊಬೈಲ್ ನಂಬರ್ ನೀಡದೆ ರೀಚಾರ್ಜ್ ಮಾಡಿಸಬಹುದು.!! ಹೇಗೆ..?

Written By:

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಪರ್ಧೆ ಜೋರಾಗಿದ್ದು, ಈ ಹಿನ್ನಲೆಯಲ್ಲಿ ದರ ಸಮರ ಸೇರಿದಂತೆ ಹೊಸ ಮಾದರಿಯ ಪ್ಲಾನ್ ಗಳನ್ನು ಹಾಗೂ ಸೇವೆಗಳನ್ನು ನೀಡಲು ಮುಂದಾಗಿವೆ. ಇದೇ ಹಾದಿಯಲ್ಲಿ ಸಾಗಿರುವ ವೊಡಾಫೋನ್ ಮಹಿಳಾ ಗ್ರಾಹಕರನ್ನು ಸೆಳೆಯುವ ಸಲುವಾಗಿ ಮತ್ತು ಅವರ ಸುರಕ್ಷೆಯ ದೃಷ್ಠಿಯಿಂದ ಹೊಸದೊಂದು ಸೇವೆಯನ್ನು ನೀಡಲು ಮುಂದಾಗಿದೆ.

ಮೊಬೈಲ್ ನಂಬರ್ ನೀಡದೆ ರೀಚಾರ್ಜ್ ಮಾಡಿಸಬಹುದು.!! ಹೇಗೆ..?

ಓದಿರಿ: ವಿಶ್ವದ ಬೃಹತ್ ಗ್ಯಾಲೆಕ್ಸಿ ಅನೇಷಿಸಿದ ಭಾರತೀಯ ಖಗೋಳಶಾಸ್ತ್ರಜ್ಞರು..!!

ಮಹಿಳೆಯು ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳಲು ಹೊಗುವ ಸಂದರ್ಭದಲ್ಲಿ ಮೊಬೈಲ್ ನಂಬರ್ ನೀಡಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಮೊಬೈಲ್ ಮಿಸ್ ಯೂಸ್ ಆಗುವ ಸಾಧ್ಯತೆ ಹೆಚ್ಚಿರುವ ಸಾಧ್ಯತೆ ಇದೆ. ಇದರಿಂದ ಇನ್ನು ಮುಂದೆ ಮೊಬೈಲ್ ನಂಬರ್ ನೀಡದೇ ರೀಚಾರ್ಜ್ ಮಾಡಿಸಿಕೊಳ್ಳುವ ಹೊಸ ಅಕಾಶವನ್ನು ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೊಡಾಫೋನ್ ಸಖೀ ಆಯ್ಕೆ:

ವೊಡಾಫೋನ್ ಸಖೀ ಆಯ್ಕೆ:

ಮಹಿಳಾ ಸುರಕ್ಷತೆಗಾಗಿಯೇ ವೊಡಾಫೋನ್ ಸಖೀ ಎನ್ನುವ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಮಹಿಳೆಯರುವ ರೀಚಾರ್ಜ್ ಮಾಡಿಸಿಕೊಳ್ಳಬೇಕು ಎನ್ನುವ ಸಂದರ್ಭದಲ್ಲಿ ಪ್ರೈವೆಟ್ ರಿಕಾರ್ಜ್ ಆಯ್ಕೆಯನ್ನು ಬಳಸಿಕೊಳ್ಳಬಹುದಾಗಿದೆ.

12604ಕ್ಕೆ ಮೇಸೆಜ್ ಮಾಡಿ:

12604ಕ್ಕೆ ಮೇಸೆಜ್ ಮಾಡಿ:

ನಿಮ್ಮ ನಂಬರ್ ನಿಂದ 12604ಕ್ಕೆ ‘Private' ಎಂದು ಮೇಸೆಜ್ ಕಳುಹಿಸಿದರೆ ನಿಮ್ಮ ಮೊಬೈಲ್ ಗೆ ಒಂದು OTP ಬರಲಿದೆ. ಅನ್ನು ಅಂಗಡಿಯವರಿಗೆ ನೀಡಿದರೆ ಸಾಕು. ನಿಮ್ಮ ನಂಬರ್ ಗೆ ರೀಚಾರ್ಜ್ ಆಗಲಿದೆ.

ಮಹಿಳಾ ಗ್ರಾಹಕರ ಸಂಖ್ಯೆ ಹೆಚ್ಚಿಸಲು:

ಮಹಿಳಾ ಗ್ರಾಹಕರ ಸಂಖ್ಯೆ ಹೆಚ್ಚಿಸಲು:

ವೊಡಾಫೋನ್ ಮಹಿಳಾ ಗ್ರಾಹಕರನ್ನು ಸೆಳೆಯುವ ಸಲುವಾಗಿ ಈ ಆಯ್ಕೆಯನ್ನು ಬಿಡುಗಡೆ ಮಾಡಿದೆ. ಇದು ಉಚಿತ ಸೇವೆಯಾಗಿದೆ ಎನ್ನಲಾಗಿದೆ.

300 ಮಿಲಿಯನ್ ಮಹಿಳೆಯರ ಬಳಿ ಫೋನ್:

300 ಮಿಲಿಯನ್ ಮಹಿಳೆಯರ ಬಳಿ ಫೋನ್:

ಪ್ರಪಂಚದಲ್ಲಿ ಸುಮಾರು 300 ಮಿಲಿಯನ್ ಮಂದಿ ಮಹಿಳೆಯರು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ ಎನ್ನಲಾಗಿದೆ.

ಸದ್ಯ ಯುಪಿ ಮತ್ತು ಉತ್ತರ ಖಂಡ್ ನಲ್ಲಿ:

ಸದ್ಯ ಯುಪಿ ಮತ್ತು ಉತ್ತರ ಖಂಡ್ ನಲ್ಲಿ:

ಈ ಸೇವೆಯನ್ನು ಮೊದಲಿಗೆ ವೊಡಾಫೋನ್ ಯುಪಿ ಮತ್ತು ಉತ್ತರ ಖಂಡ್ ರಾಜ್ಯಗಳಲ್ಲಿ ಪರೀಕ್ಷೆಯನ್ನು ಮಾಡಲು ಮುಂದಾಗಿದೆ. ಇದಾದ ನಂತರದಲ್ಲಿ ದೇಶದ ವಿವಿಧ ಭಾಗದಲ್ಲಿ ಸೇವೆಯನ್ನು ಆರಂಭಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Vodafone India has come with yet another interesting scheme ‘Vodafone Sakhi Pack’ to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot