Home
ಸುದ್ದಿಜಾಲ

Jio: ಜಿಯೋದಿಂದ ಬೊಂಬಾಟ್ ಸುದ್ದಿ: 20 ಸಾವಿರಕ್ಕೆ ಕ್ಲೌಡ್ ಲ್ಯಾಪ್‌ಟಾಪ್, ಹೆಚ್‌ಪಿ, ಲೆನೊವೊದೊಂದಿಗೆ ಒಪ್ಪಂದ?

ಜಿಯೋ (Jio) ಆಗಾಗ್ಗೆ ಭಾರತೀಯರಿಗೆ ಸಂತಸದ ಸುದ್ದಿ ನೀಡುತ್ತಲೇ ಇರುತ್ತದೆ. ಹೆಚ್ಚುತ್ತಿದ್ದ ರೀಚಾರ್ಜ್‌ ಪ್ಲ್ಯಾನ್‌ಗಳ ಕಾಲದಲ್ಲಿ ಕಡಿಮೆ ದರದ ಆಯ್ಕೆ ನೀಡಿ ಟೆಲಿಕಾಂ ವಿಭಾಗದಲ್ಲಿ ಈಗ ಅಗ್ರಸ್ಥಾನದಲ್ಲಿದೆ. ಹಾಗೆಯೇ ಒಂದು ಸಾವಿರ ರೂ.ಗಳ ಬೆಲೆಯಲ್ಲೇ ಸ್ಮಾರ್ಟ್‌ಫೋನ್‌ನಲ್ಲಿ ಸಿಗುವ ಪ್ರಮುಖ ಫೀಚರ್ಸ್‌ ಅನ್ನು ಕೀಪ್ಯಾಡ್‌ ಫೋನ್‌ಗಳಲ್ಲೇ (Keypad phone) ನೀಡುವ ಮೂಲಕ ಮತ್ತೊಂದು ಕಡೆ ಸದ್ದು ಮಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಈಗ ಕೇವಲ 20 ಸಾವಿರಕ್ಕೆ ಕ್ಲೌಡ್ ಲ್ಯಾಪ್‌ಟಾಪ್ ಪರಿಚಯಿಸಲು ಮುಂದಾಗಿದೆ.

ಹೌದು, ಈ ವಿಷಯ ಕೇಳಿ ನಿಮಗೆ ಅಚ್ಚರಿ ಆಗಿರಬಹುದು. ಯಾಕೆಂದರೆ ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್‌ ಅನ್ನೂ ಸಹ ಈ ಬೆಲೆಗೆ ನೀಡುವುದಿಲ್ಲ. ಇಂತಹ ಸಮಯದಲ್ಲಿ ಕೇವಲ 20 ಸಾವಿರಕ್ಕೆ ಕ್ಲೌಡ್ ಲ್ಯಾಪ್‌ಟಾಪ್ (Jio Cloud Laptop) ಅನ್ನು ಪರಿಚಯಿಸಲು ಜಿಯೋ ಸಜ್ಜಾಗಿದ್ದು, ಈ ಮೂಲಕ ಭಾರತದಲ್ಲಿ ಹೊಸ ಕ್ರಾಂತಿಯನ್ನೇ ಆರಂಭ ಮಾಡಲು ಮುಂದಾಗಿದೆ. ಹಾಗಿದ್ರೆ, ಏನಿದು ಕ್ಲೌಡ್ ಲ್ಯಾಪ್‌ಟಾಪ್?, ಅಷ್ಟಕ್ಕೂ ಇಷ್ಟು ಕಡಿಮೆ ಬೆಲೆ ಯಾಕೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಜಿಯೋದಿಂದ ಬೊಂಬಾಟ್ ಸುದ್ದಿ: 20 ಸಾವಿರಕ್ಕೆ ಕ್ಲೌಡ್ ಲ್ಯಾಪ್‌ಟಾಪ್ ...

ಕ್ಲೌಡ್ ಲ್ಯಾಪ್‌ಟಾಪ್: ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿ ಮಾಡುವುದೇನೋ ನಮಗೆಲ್ಲರಿಗೂ ತಿಳಿದ ವಿಚಾರ. ಆದರೆ, ಒಂದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡಲು ಬಳಕೆ ಮಾಡುವ ಹಣದಲ್ಲೇ ಲ್ಯಾಪ್‌ಟಾಪ್‌ ಖರೀದಿ ಮಾಡಬಹುದು, ಅದರಲ್ಲೂ ಅತ್ಯುತ್ತಮ ಕಾರ್ಯಕ್ಷಮತೆ ಇರುವ ಲ್ಯಾಪ್‌ಟಾಪ್‌ ಖರೀದಿ ಮಾಡಬಹುದು ಎಂದರೆ ನೀವೇ ಅರ್ಥ ಮಾಡಿಕೊಳ್ಳಿ ಜಿಯೋ ಎಂತಹ ಅತ್ಯುತ್ತಮ ಕೆಲಸಕ್ಕೆ ಕೈ ಹಾಕಿದೆ ಎಂದು.

ಜಿಯೋ ಕ್ಲೌಡ್‌ನೊಂದಿಗೆ ಹೊಸ ಶಕ್ತಿಯುತ ಲ್ಯಾಪ್‌ಟಾಪ್‌ಗಳನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ. ಪ್ರಮುಖ ವಿಷಯ ಏನೆಂದರೆ ಈ ಲ್ಯಾಪ್‌ಟಾಪ್ (Laptop) ಅನ್ನು ಮಾಸಿಕ ಚಂದಾದಾರಿಕೆಯ ಆಧಾರದ ಮೇಲೆ ಬಳಕೆ ಮಾಡಬಹುದು ಎಂದು ವರದಿಗಳಿಂದ ತಿಳಿದುಬಂದಿದೆ. ಈ ರೀತಿಯ ಲ್ಯಾಪ್‌ಟಾಪ್ ವಿಭಿನ್ನ ಚಂದಾದಾರಿಕೆ ಯೋಜನೆಗಳೊಂದಿಗೂ ಬಹು ಬಳಕೆದಾರರು ಒಂದೇ ಡಿವೈಸ್ ಅನ್ನು ಬಳಕೆ ಮಾಡಬಹುದು ಎಂದು ಹೇಳಲಾಗಿದೆ.

ಜಿಯೋದಿಂದ ಬೊಂಬಾಟ್ ಸುದ್ದಿ: 20 ಸಾವಿರಕ್ಕೆ ಕ್ಲೌಡ್ ಲ್ಯಾಪ್‌ಟಾಪ್ ...

ಇನ್ನು ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿ ಅಗ್ರ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೆ ಈ ಜಿಯೋ ಇತ್ತೀಚೆಗೆ ಕೈಗೆಟುಕುವ ಬೆಲೆಯ ಲ್ಯಾಪ್‌ಟಾಪ್ ಆದ ಜಿಯೋ ಬುಕ್‌ ಅನ್ನೂ ಸಹ ಲಾಂಚ್‌ ಮಾಡುವ ಮೂಲಕ ಬಹಳ ಸದ್ದು ಮಾಡಿತ್ತು. ಆದರೆ ಈ ಲ್ಯಾಪ್‌ಟಾಪ್‌ಗಳು ಕಡಿಮೆ ಬೆಲೆಯನ್ನಷ್ಟೇ ಹೊಂದಿವೆ ಎಂಬ ಸಂತಸದ ವಿಚಾರ ಬಿಟ್ಟರೆ ಬೇರೆ ಯಾವ ಖುಷಿಯ ವಿಚಾರವೂ ಇರಲಿಲ್ಲ. ಯಾಕೆಂದರೆ ಇವು ಉತ್ತಮ ಕಾರ್ಯಕ್ಷಮತೆ ನೀಡದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿ ಮಾಡಿಲ್ಲ.

ಸಾಮಾನ್ಯವಾಗಿ ಮೊಬೈಲ್ ವಿಷಯಕ್ಕೆ ಬಂದರೆ ಗ್ರಾಹಕರು ಕೈಗೆಟುಕುವ ಬೆಲೆಯಲ್ಲಿ ಅದನ್ನು ರಿಪೇರಿ ಮಾಡಿಸಬಹುದು ಅಥವಾ ಅಪ್‌ಗ್ರೇಡ್‌ ಆಗಬಹುದು. ಆದರೆ, ಲ್ಯಾಪ್‌ಟಾಪ್‌ಗಳ ವಿಷಯಕ್ಕೆ ಬಂದಾಗ ಅದರ ಕಾರ್ಯಕ್ಷಮತೆ ಗ್ರಾಹಕರಲ್ಲಿ ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಈ ಕಾರಣಕ್ಕಾಗಿಯೇ ಈ ಬಾರಿ ಜಿಯೋ ಕ್ಲೌಡ್ ಕಂಪ್ಯೂಟರ್ ಆಗಿರುವ ಕ್ಲೌಡ್ ಲ್ಯಾಪ್‌ಟಾಪ್ ಅನ್ನು ಪರಿಚಯಿಸಲು ಮುಂದಾಗಿರುವುದು ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಏನಿದು ಕ್ಲೌಡ್?: ನೀವು ಈವರೆಗೂ ಈ ಸುದ್ದಿ ಓದಿ ಏನಿದು ಕ್ಲೌಡ್ ಲ್ಯಾಪ್‌ಟಾಪ್‌ ಅಂದುಕೊಂಡಿರಬಹುದು. ಜಿಯೋದ ಕ್ಲೌಡ್ ಲ್ಯಾಪ್‌ಟಾಪ್ ಕೇವಲ ಒಂದು ಡಿವೈಸ್‌ ಮಾತ್ರ, ಎಲ್ಲಾ ರೀತಿಯ ಸಂಸ್ಕರಣೆ ಮತ್ತು ಸ್ಟೋರೇಜ್‌(Processing, Storage) ವಿಷಯದಲ್ಲಿ ಕ್ಲೌಡ್ ಮೂಲಕವೇ ಕಾರ್ಯನಿರ್ವಹಿಸಲಿದೆ. ನಿಮಗೆ ಗೊತ್ತಾ, ಉನ್ನತ-ಕಾರ್ಯಕ್ಷಮತೆಯ ಲ್ಯಾಪ್‌ಟಾಪ್‌ ಅನ್ನು ನಿರ್ಮಿಸುವಾಗ, ಅದರ ಬೆಲೆಯ ಹೆಚ್ಚಿನ ಭಾಗವನ್ನು ಸಂಸ್ಕರಣೆ ಮತ್ತು ಸ್ಟೋರೇಜ್‌ಗಾಗಿ ಖರ್ಚು ಮಾಡಲಾಗುತ್ತದೆ. ಆದ್ದರಿಂದ, ಜಿಯೋ ಈ ಎರಡನ್ನೂ ಕ್ಲೌಡ್ ಮೋಡ್‌ನಲ್ಲಿ ನಿಮಗೆ ಪರಿಚಯಿಸುತ್ತಿದೆ.

ಹೆಚ್‌ಪಿ, ಲೆನೊವೊ, ಏಸರ್‌ನೊಂದಿಗೆ ಸಹಭಾಗಿತ್ವ : ಈ ಕ್ಲೌಡ್ ಕಂಪ್ಯೂಟರ್ ಅನ್ನು ಅಭಿವೃದ್ಧಿಪಡಿಸಲು ಜಿಯೋ ಹೆಚ್‌ಪಿ, ಲೆನೊವೊ, ಏಸರ್‌ನೊಂದಿಗೆ (Jio HP, Lenovo, Acer) ಪ್ರಯೋಗ ಮಾಡುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಜಿಯೋ ಕ್ಲೌಡ್ ಲ್ಯಾಪ್‌ಟಾಪ್ ಚಂದಾದಾರಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ. ಅಂದರೆ ನೀವು ಯಾವುದಾದರೂ ಫೋಟೋಶಾಪ್‌ನಂತಹ ಸಾಫ್ಟ್‌ವೇರ್‌ಗಾಗಿ ಮಾಸಿಕ ಚಂದಾದಾರಿಕೆಯನ್ನು ಬಳಸುವಂತೆಯೇ ಇದರಲ್ಲೂ ಚಂದಾದಾರಿಕೆ ಪ್ಲ್ಯಾನ್‌ (Subscription plan) ಇರುತ್ತವೆ.

ಜಿಯೋದಿಂದ ಬೊಂಬಾಟ್ ಸುದ್ದಿ: 20 ಸಾವಿರಕ್ಕೆ ಕ್ಲೌಡ್ ಲ್ಯಾಪ್‌ಟಾಪ್ ...

ಈ ಲ್ಯಾಪ್‌ಟಾಪ್‌ ಯಾರಿಗೆಲ್ಲಾ ಲಾಭ? : ಈ ವಿಶೇಷ ಲ್ಯಾಪ್‌ಟಾಪ್‌ ಶಿಕ್ಷಣ ಸಂಸ್ಥೆಗಳು ಮತ್ತು ಇಂಟರ್ನೆಟ್ ಕಂಪನಿಗಳಿಗೆ ಅಗತ್ಯವಾಗಿವೆ. ಯಾಕೆಂದರೆ ಈ ಕಂಪೆನಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಚಂದಾದಾರರಾಗಬಹುದು ಮತ್ತು ಬಳಕೆ ಮಾಡಬಹುದು. ಈ ಮೂಲಕ ಯಂತ್ರಾಂಶದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಆದರೆ ಈ ಜಿಯೋ ಕ್ಲೌಡ್ ಲ್ಯಾಪ್‌ಟಾಪ್ ಬಳಸಲು ಉತ್ತಮ ಇಂಟರ್ನೆಟ್ ಸಂಪರ್ಕ (Internet connection) ಅತ್ಯಗತ್ಯ ಅನ್ನೋದು ನಿಮ್ಮ ಗಮನಕ್ಕೆ ಇರಲಿ.

ಜಿಯೋ ತನ್ನ 45 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಈ ಕ್ಲೌಡ್ ಪಿಸಿಯನ್ನು ಪ್ರಸ್ತಾಪಿಸಿದ್ದರೂ ಅಂದಿನಿಂದ ಜಿಯೋ ಕ್ಲೌಡ್-ಚಾಲಿತ ಲ್ಯಾಪ್‌ಟಾಪ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ. ಅಲ್ಲಿವರೆಗೂ ಕಾದು ನೋಡೋಣ.

Best Mobiles in India

English summary
Jio is trying to build new powerful cloud laptops. The important thing is that reports suggest that this laptop can be used on a monthly subscription basis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+