Subscribe to Gizbot

ಜಿಯೋ ಬಳಕೆದಾರರಿಗೆ ಮಾತ್ರ: ರೂ.398ಕ್ಕೆ ರೀಚಾರ್ಜ್ ಮಾಡಿಸಿ ರೂ.700 ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ..!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ತಾನೇ ನಂ.1 ಪಟ್ಟವನ್ನು ಅಲಂಕರಿಸಿರಬೇಕು ಎಂದು ಜಿಯೋ ತೀರ್ಮಾನಿಸಿದಂತೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದ್ದು, ಈ ಹಿಂದೆ ನೀಡಿದ್ದ ಕ್ಯಾಷ್ ಬ್ಯಾಕ್ ಆಫರ್ ಅನ್ನು ಬದಲಾಯಿಸಿದ್ದು, ಈ ಮೂಲಕ ಶೇ.100% ಗಿಂತಲೂ ಅಧಿಕ ಕ್ಯಾಷ್ ಬ್ಯಾಕ್ ಅನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ.

ರೂ.398ಕ್ಕೆ ರೀಚಾರ್ಜ್ ಮಾಡಿಸಿ ರೂ.700 ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ..!

ರೂ.398 ಅಥಾವ ಅದಕ್ಕಿಂತ ಹೆಚ್ಚಿನ ಬೆಲೆಯ ರೀಚಾರ್ಜ್ ಮಾಡಿಸಿದಲ್ಲಿ ಜಿಯೋ ತನ್ನ ಬಳಕೆದಾರರಿಗೆ ಈ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ನೀಡಿದ್ದ ಕ್ಯಾಷ್ ಬ್ಯಾಕ್ ಆಫರ್ ಅನ್ನು ಬದಲಾಯಿಸಿ, ಬಳಕೆದಾರರಿಗೆ ಬೇಕಾದ ಮಾದರಿಯಲ್ಲಿ ತನ್ನ ಪ್ಲಾನ್ ಅನ್ನು ಬದಲಾಯಿಸಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಪ್ಲಾನ್ ವೈರಲ್ ಆಗಿದೆ.

ಓದಿರಿ: ಶಿಯೋಮಿಗೆ ಸೆಡ್ಡು: ರೂ.5000ಕ್ಕೆ ಆನ್‌ಲೈನಿನಲ್ಲಿ ಮಾತ್ರವೇ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈ ಜಿಯೋ ಆಪ್ ನಲ್ಲಿ 300 ಕ್ಯಾಷ್ ಬ್ಯಾಕ್:

ಮೈ ಜಿಯೋ ಆಪ್ ನಲ್ಲಿ 300 ಕ್ಯಾಷ್ ಬ್ಯಾಕ್:

ಮೈ ಜಿಯೋ ಆಪ್ ನಲ್ಲಿ ರೀಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ಇನ್‌ಸ್ಟೆಂಟ್ ರೂ.400 ಕ್ಯಾಷ್ ಬ್ಯಾಕ್ ನೀಡಲಿದೆ. ಇದು ರೂ.50ರ ಒಟ್ಟು 8 ವೋಚರ್ ಗಳ ಮಾದರಿಯಲ್ಲಿ ಬಂದು ನಿಮ್ಮ ಆಕೌಂಟ್ ಸೇರಲಿದೆ ಎನ್ನಲಾಗಿದೆ.

ಇದಲ್ಲದೇ ವ್ಯಾಲೆಟ್‌ಗಳ ಮೇಲೆ ರೂ.400 ಆಫರ್:

ಇದಲ್ಲದೇ ವ್ಯಾಲೆಟ್‌ಗಳ ಮೇಲೆ ರೂ.400 ಆಫರ್:

ಇದಲ್ಲದೇ ಡಿಜಿಟಲ್ ವ್ಯಾಲೆಟ್ ಗಳ ಮೇಲೆಯೂ ಆಫರ್ ಘೋಷಣೆ ಮಾಡಿದ್ದು, ಅಮೆಜಾನ್ ಪೇ ಮೂಲಕ ಪಾವತಿ ಮಾಡಿದರೆ ರೂ. 50 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದಾದ ಮೇಲೆ ಪೇಟಿಎಂ ನಲ್ಲಿ ರೀಚಾರ್ಜ್ ಮಾಡಿದರೆ ರೂ.50 ಹಾಗೂ ಮೊಬಿಕ್ವಿಕ್‌ನಲ್ಲಿ ರೀಚಾರ್ಜ್ ಮಾಡಿದರೆ ರೂ.300 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇನ್ನು ಫೋನ್ ಪೇ ಬಳಕೆದಾರರಿಗೆ ರೂ.75 ಕ್ಯಾಷ್ ಬ್ಯಾಕ್ ದೊರೆಯಲಿದೆ ಎನ್ನಲಾಗಿದೆ.

ಜನವರಿ 31ರ ವರೆಗೆ ಮಾತ್ರ..!

ಜನವರಿ 31ರ ವರೆಗೆ ಮಾತ್ರ..!

ಜಿಯೋ ನೀಡುತ್ತಿರುವ ಈ ಭರ್ಜರಿ ಕ್ಯಾಷ್ ಬ್ಯಾಕ್ ಆಫರ್ ಕೇವಲ ಜನವರಿ 31ರ ವರೆಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಈ ಅವಧಿಯನ್ನು ಮೀರಿ ರಿಚಾರ್ಜ್ ಮಾಡಿಸಿದವರಿಗೆ ಯಾವುದೇ ಆಫರ್ ದೊರೆಯುವುದಿಲ್ಲ ಎನ್ನಲಾಗಿದೆ.

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ಬೇರೆಲ್ಲೂ ಇಲ್ಲವೇ ಇಲ್ಲ:

ಬೇರೆಲ್ಲೂ ಇಲ್ಲವೇ ಇಲ್ಲ:

ಜಿಯೋ ನೀಡಿರುವ ಈ ಕ್ಯಾಷ್ ಬ್ಯಾಕ್ ಆಫರ್ ಅನ್ನು ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ನೀಡಲು ಸಾಧ್ಯವಿಲ್ಲ ಮತ್ತು ಇದುವರೆಗೂ ನೀಡಿಲ್ಲ ಎನ್ನಲಾಗಿದೆ. ಇದು ಜಿಯೋ ಬಳಕೆದಾರರು ಮಾತ್ರವೇ ಬಳಕೆ ಮಾಡಿಕೊಳ್ಳಬಹುದಾಗಿದೆ. ನೀವು ಜಿಯೋ ಬಳಕೆದಾರರ ಹಾಗಿದ್ರೆ ನಿಮ್ಮ ಬೇಬಿಗೆ ಉಳಿತಾಯ ಪಕ್ಕಾ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio is Now Offering More Than 100% Cashback. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot