Subscribe to Gizbot

ಶಿಯೋಮಿಗೆ ಸೆಡ್ಡು: ರೂ.5000ಕ್ಕೆ ಆನ್‌ಲೈನಿನಲ್ಲಿ ಮಾತ್ರವೇ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಅಬ್ಬರವು ಹೆಚ್ಚಾಗಿದೆ. ಕಡಿಮೆ ಬೆಲೆಗೆ ಉತ್ತಮ ಫೋನ್‌ಗಳನ್ನು ನೀಡುವ ಕಂಪನಿಗಳು ಭಾರತೀಯರ ಮನಗೆಲ್ಲುತ್ತಿವೆ, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಸ್ಯಾಮ್‌ಸಂಗ್ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಮಾದರಿಯಲ್ಲಿಯೇ ಯೋಚನೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಶಿಯೋಮಿಗೆ ಸೆಡ್ಡು: ರೂ.5000ಕ್ಕೆ ಆನ್‌ಲೈನಿನಲ್ಲಿ ಮಾತ್ರವೇ ಸ್ಯಾಮ್‌ಸಂಗ್ ಫೋನ್

ಮೊದಲಿಗೆ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮಾತ್ರವೇ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ ಚೀನಾ ಮೂಲದ ಶಿಯೋಮಿ ಕಂಪನಿಯನ್ನು ಅನುಸರಿಸಲು ಮುಂದಾಗಿರುವ ಸ್ಯಾಮ್‌ಸಂಗ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸದೊಂದು ಪ್ರಯತ್ನವನ್ನು ಮಾಡಲು ಯೋಜನೆ ಸಿದ್ಧಪಡಿಸಿದೆ.

How to Activate UAN Number? KANNADA

ಓದಿರಿ: ಈ ಆಪ್‌ನಲ್ಲಿ ಫ್ಲೈಟ್ ಟಿಕೇಟ್ ಬುಕ್ ಮಾಡಿ: ಬೆಂಗಳೂರು-ಡೆಲ್ಲಿ ವಿಮಾನ ದರ ರೂ. 99 ಮಾತ್ರವೇ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ನಿಂದ ಆನ್‌ಲೈನ್‌ ಫೋನ್:

ಸ್ಯಾಮ್‌ಸಂಗ್‌ನಿಂದ ಆನ್‌ಲೈನ್‌ ಫೋನ್:

ಸ್ಯಾಮ್ ಸಂಗ್ ಆನ್‌ಲೈನಿನಲ್ಲಿ ಮಾತ್ರವೇ ದೊರೆಯುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಸ್ಯಾಮ್‌ಸಂಗ್ ಆನ್‌ಲೈನ್ ಮಾರುಕಟ್ಟೆಗೆ ಮಾತ್ರವೇ ಬಿಡುಗಡೆ ಮಾಡುವ ಫೋನ್‌ಗಳು ಆಫ್ ಲೈನ್ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ ಎನ್ನಲಾಗಿದೆ.

ಬೆಲೆ ಕಡಿಮೆ:

ಬೆಲೆ ಕಡಿಮೆ:

ಈಗಾಗಲೇ ಶಿಯೋಮಿ ಬೆಲೆಗಳಲ್ಲಿ ಆಟ ಆಡುವುದನ್ನು ಗಮನಿಸಿರುವ ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಅತೀ ಕಡಿಮೆ ಮಾಡಲು ಮುಂದಾಗಿದೆ. ರೂ.5000-15000ದ ಅಸುಪಾಸಿನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲಿದೆ.

ಮಾರುಕಟ್ಟೆಯಲ್ಲಿ ಹೊಸ ಸಂಚಲನ:

ಮಾರುಕಟ್ಟೆಯಲ್ಲಿ ಹೊಸ ಸಂಚಲನ:

ಕಡಿಮೆ ಬೆಲೆಗೆ ಕೇವಲ ಚೀನಾ ಫೋನ್‌ಗಳು ಮಾತ್ರವೇ ಲಭ್ಯವಿದ್ದು, ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಸ್ಯಾಮ್‌ಸಂಗ್ ಕಡಿಮೆ ಬೆಲೆಯ ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನವನ್ನು ಉಂಟು ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung to take on Xiaomi with new online-only smartphone range. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot