ರಿಲಾಯನ್ಸ್ ಜಿಯೋ 4ಜಿ ಹಾಟ್‌ಸ್ಪಾಟ್ ರೂ 1,999 ಕ್ಕೆ
ಹೆಚ್ಚಿನ ಬೇಡಿಕೆಯುಳ್ಳ ಸದ್ಯದ ಸಂದರ್ಭದಲ್ಲಿ ಸಿಮ್ ಪಡೆದುಕೊಳ್ಳಲು ಸಾಧ್ಯವಿಲ್ಲದವರು ಈಗ ತಾನೇ ಲಾಂಚ್ ಆಗಿರುವ ರಿಲಾಯನ್ಸ್ ಜಿಯೋಫೈ 4ಜಿ ವೈರ್‌ಲೆಸ್ ಹಾಟ್‌ಸ್ಪಾಟ್ ಅನ್ನು ಲಾಂಚ್ ಮಾಡಿದ್ದು ಇದು 1,999 ಕ್ಕೆ ನಿಮಗೆ ದೊರೆಯಲಿದೆ. ಭಾರತದಲ್ಲಿ ಕೆಲವೊಂದು ನಗರಗಳಲ್ಲಿ ಈ ಹಾಟ್‌ಸ್ಪಾಟ್ ಮಾರಾಟವನ್ನು ಕಂಡುಕೊಂಡಿದೆ. ಈ ಹಿಂದಿನ ಆವೃತ್ತಿಗಳಿಗಿಂತಲೂ ಇದು ದೊಡ್ಡದಾಗಿದ್ದು ಮೃದುವಾದ ಬದಿಗಳನ್ನು ಪಡೆದುಕೊಂಡಿದೆ. ಮೇಟ್ ಫಿನ್ನಿಶ್ ವಿನ್ಯಾಸವನ್ನು ಇದು ಹೊಂದಿದ್ದು, ಮೊಟ್ಟೆಯಾಕಾರದಲ್ಲಿದೆ.
ಓದಿರಿ: ದಿನಕ್ಕೆ 4ಜಿ ಡೇಟಾ: ರಿಲಯನ್ಸ್ ಜಿಯೋ ಆಫರ್

ಹಾಟ್‌ಸ್ಪಾಟ್
ಪವರ್ ಆನ್/ಆಫ್ ಆಗಿದೆಯೇ, ಖರ್ಚಾಗಿರುವ ಬ್ಯಾಟರಿ, 4ಜಿ ಸಿಗ್ನಲ್ ಸ್ಟ್ರೆಂತ್, ವೈಫೈ ಸಿಗ್ನಲ್ ಸ್ಟ್ರೆಂತ್ ಅನ್ನು ಈ ಹಾಟ್‌ಸ್ಪಾಟ್‌ನಲ್ಲಿ ನಿಮಗೆ ಕಂಡುಕೊಳ್ಳಬಹುದಾಗಿದೆ. ಇನ್ನು ಡಿವೈಸ್‌ನೊಳಗೆ 2600mAh ಬ್ಯಾಟರಿ ಇದೆ. ಈ ಮೊದಲಿನ ಹಾಟ್‌ಸ್ಪಾಟ್ 2300mAh ಬ್ಯಾಟರಿಯನ್ನು ಒಳಗೊಂಡಿದೆ.

ಲೋಗೋ
'ಡಿಸೈನ್ಡ್ ಇನ್ ಇಂಡಿಯಾ' ಎಂಬ ಲೋಗೋವನ್ನು ಈ ಡಿವೈಸ್ ಹೊಂದಿದೆ. ಈ ಹಿಂದೆ ಇದ್ದ ಹಾಟ್‌ಸ್ಪಾಟ್ 31 ಡಿವೈಸ್‌ಗಳಿಗೆ ಬೆಂಬಲವನ್ನು ನೀಡುತ್ತಿತ್ತು, ಈಗ 10 ಡಿವೈಸ್‌ಗಳಿಗೆ ನಿಂತಿದೆ. ಇದು ಹೆಚ್ಚಿನ ಜನರಿಗೆ ಭರ್ಜರಿ ಅವಕಾಶವನ್ನು ನೀಡಲಿದ್ದು ಮೈಕ್ರೋಎಸ್‌ಡಿ ಕಾರ್ಡ್ ಅನ್ನು ಇದು ಹೊಂದಿದೆ.

ಜಿಯೋಫೈ ಹೆಚ್ಚು ಪ್ರಯೋಜನಕಾರಿ
ನಿಮ್ಮ ಮನೆಯನ್ನು ಸಂಪೂರ್ಣ ವೈಫೈ ವಲಯವನ್ನಾಗಿ ನವೀಕರಿಸಬೇಕು ಎಂದಾದಲ್ಲಿ ಜಿಯೋಫೈ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಪೋರ್ಟೇಬಲ್ ಕೂಡ ಹೌದು. ಈ ನೆಟ್‌ವರ್ಕ್ ಅನ್ನು ನಿಮಗೆ ಎಲ್ಲಿ ಬೇಕೋ ಅಲ್ಲಿಗೆಲ್ಲಾ ಕೊಂಡೊಯ್ಯಬಹುದಾಗಿದೆ.

5 ಗಂಟೆಗಳ ಬಳಕೆ
ಇದು ರಿಚಾರ್ಜೇಬಲ್ ಬ್ಯಾಟರಿಯೊಂದಿಗೆ ಬಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 5 ಗಂಟೆಗಳ ಬಳಕೆಯನ್ನು ನೀಡಲಿದೆ. ರಿಲಾಯನ್ಸ್ ಜಿಯೋಫೈ 4ಜಿ ನಿಮ್ಮ ಫೋನ್‌ನಲ್ಲಿ 4ಜಿ ಎಲ್‌ಟಿಇ ಯನ್ನು ಬಳಸಲು ಸಹಕರಿಸಲಿದೆ.

ಜಿಯೋಫೈ
ಈ ಅಪ್ಲಿಕೇಶನ್ ಬಳಸಿಕೊಂಡು ಕರೆಗಳನ್ನು ಸಂದೇಶಗಳನ್ನು ಜಿಯೋಫೈ ಮೂಲಕ ನಿಮಗೆ ಮಾಡಬಹುದಾಗಿದೆ.

ಜಿಯೋಫೈಯನ್ನು ಹೊಂದಿಸುವುದೂ ತುಂಬಾ ಸುಲಭ
ಜಿಯೋಫೈಯನ್ನು ಹೊಂದಿಸುವುದೂ ತುಂಬಾ ಸುಲಭವಾಗಿದೆ. ಡಿವೈಸ್ ಅನ್ನು ಖರೀದಿಸಿದ ನಂತರ ಜಿಯೋ ಸಿಮ್ ಪಡೆದುಕೊಂಡು ಅದನ್ನು ಹಾಟ್‌ಸ್ಪಾಟ್ ಸಿಮ್ ಟ್ರೇಗೆ ಅಳವಡಿಸಿ

ಎಸ್‌ಎಸ್‌ಐಡಿ ಮತ್ತು ಯೂನಿಟ್‌ನ ಪಾಸ್‌ವರ್ಡ್
ನಂತರ, ಎಸ್‌ಎಸ್‌ಐಡಿ ಮತ್ತು ಯೂನಿಟ್‌ನ ಪಾಸ್‌ವರ್ಡ್ ಅನ್ನು ಬರೆದಿಟ್ಟುಕೊಳ್ಳಿ ಇದು ಸಿಮ್ ಟ್ರೇಯ ನಂತರದಲ್ಲಿ ಪಟ್ಟಿಯಾಗಿರುತ್ತದೆ. ಅದನ್ನು ಬರೆದಿಟ್ಟುಕೊಳ್ಳಿ.

ಚಾರ್ಜರ್‌ಗೆ ಪ್ಲಗಿನ್ ಮಾಡಿ ಮತ್ತು ಬ್ಯಾಟರಿಯನ್ನು ಡಿವೈಸ್‌ಗೆ ಹಾಕಿ
ಬ್ಯಾಟರಿ ಇನ್‌ಸರ್ಟ್ ಮಾಡಿ ಮತ್ತು ಹಿಂಭಾಗ ಕವರ್ ಅನ್ನು ಕ್ಲೋಸ್ ಮಾಡಿ. ಚಾರ್ಜರ್‌ಗೆ ಪ್ಲಗಿನ್ ಮಾಡಿ ಮತ್ತು ಬ್ಯಾಟರಿಯನ್ನು ಡಿವೈಸ್‌ಗೆ ಹಾಕಿ

ಪವರ್ ಬಟನ್ ಒತ್ತಿರಿ
ಜಿಯೋಫೈ ಮೇಲ್ಭಾಗದಲ್ಲಿ ಪವರ್ ಬಟನ್ ಒತ್ತಿರಿ, ಡಿಸ್‌ಪ್ಲೇ ಬೆಳಕು ಆನ್ ಆಗುವವರೆಗೆ ಹೀಗೆ ಮಾಡಿ.


Click it and Unblock the Notifications








