Subscribe to Gizbot

ದಿನಕ್ಕೆ 4ಜಿ ಡೇಟಾ: ರಿಲಯನ್ಸ್ ಜಿಯೋ ಆಫರ್

Written By:

ಹೆಚ್ಚು ಚರ್ಚಿತ ರಿಲಯನ್ಸ್ ಜಿಯೋ 4ಜಿ ಈಗ ಟೆಲಿಕಾಮ್ ಸಂಸ್ಥೆಗಳಿಗೆ ಒಂದು ರೀತಿಯ ಭರ್ಜರಿ ಪೈಪೋಟಿಯನ್ನೇ ನೀಡಿದೆ. ಉಚಿತ 4ಜಿ ಇಂಟರ್ನೆಟ್ ಅನ್ನು ಒದಗಿಸುವುದು ಮಾತ್ರವಲ್ಲದೆ ಇನ್ನಷ್ಟು ವಿಶಿಷ್ಟ ಆಫರ್‌ಗಳನ್ನು ಬಳಕೆದಾರರಿಗೆ ಪ್ರಸ್ತುತಪಡಿಸುವ ಮೂಲಕ ಮಾರುಕಟ್ಟೆಯ ಡಾನ್ ಎಂಬ ಹಿರಿಮೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದೋಡುತ್ತಿದೆ.

ಓದಿರಿ: 100% ಗ್ಯಾರಂಟಿ: ರಿಲಾಯನ್ಸ್ ಜಿಯೋ 4ಜಿ ಡೌನ್‌ಲೋಡ್ ವರ್ಧನೆಗೆ ಟಿಪ್ಸ್

ಈಗ ಜಿಯೋ ಹೆಚ್ಚು ವೇಗದ ಡೇಟಾದೊಂದಿಗೆ ಉಚಿತ ವಾಯ್ಸ್ ಕರೆಯನ್ನು ನೀಡಲಿದೆ. ಈಗ ಜಿಯೋ ಇನ್ನಷ್ಟು ಆಕರ್ಷಕ ಆಫರ್‌ಗಳೊಂದಿಗೆ ಬಂದಿದ್ದು ಇಂದಿನ ಲೇಖನದಲ್ಲಿ ಇದರ ಕುರಿತು ಮಾಹಿತಿಯನ್ನು ನೀಡಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋದಿಂದ ಹೊಸ ಆರಂಭ

ಜಿಯೋದಿಂದ ಹೊಸ ಆರಂಭ

ಎಲ್ಲಾ ಹಳೆಯ ಎಲ್‌ವೈಎಫ್ ಪ್ರಿವ್ಯೂ ಆಫರ್ ಅನ್ನು ಹೊಸದಾಗಿ ಲಾಂಚ್ ಮಾಡಿರುವ ವೆಲ್‌ಕಮ್ ಆಫರ್‌ಗೆ ಮೈಗ್ರೇಟ್ ಮಾಡುವುದು ಇವರ ಮುಂದಿನ ಹಂತವಾಗಿದೆ. ಈ ಹೊಸ ಹೆಜ್ಜೆಯಲ್ಲಿ, ಕೆಲವೊಂದು ನಿಯಮ ಮತ್ತು ನಿರ್ಬಂಧಗಳನ್ನು ಪ್ರಸ್ತುತಪಡಿಸುವ ಮೂಲಕ 'ಅನಿಯಮಿತ' ಹೆಚ್ಚು ವೇಗದ ಡೇಟಾವನ್ನು ಬಳಕೆದಾರರಿಗೆ ನೀಡಲಿದೆ.

ಜಿಯೋ ವೆಲ್‌ಕಮ್ ಆಫರ್: ಅವಲೋಕನ

ಜಿಯೋ ವೆಲ್‌ಕಮ್ ಆಫರ್: ಅವಲೋಕನ

ಜಿಯೋ 4ಜಿಬಿ ಹೈ ಸ್ಪೀಡ್‌ನೊಂದಿಗೆ ದೈನಂದಿನ ಡೇಟಾ ಮಿತಿಯನ್ನು ಬಳಕೆದಾರರಿಗೆ ನೀಡಲಿದೆ ಇದು ಅನಿಯಮಿತವಾಗಿರುವುದಿಲ್ಲ. ದಿನದಲ್ಲಿ 4ಜಿಬಿ ಡೇಟಾವನ್ನು ನೀವು ಬಳಸಿಕೊಂಡರೆ, ಇಂಟರ್ನೆಟ್ ವೇಗದಲ್ಲಿ ಇಳಿಕೆಯನ್ನು ನೀವು ಕಂಡುಕೊಳ್ಳಬಹುದಾಗಿದೆ. ಇದು 128kbps ವರೆಗೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. 4ಜಿಬಿ ಡೇಟಾವು ನಿಯಮಿತ ಇಂಟರ್ನೆಟ್ ಬಳಕೆದಾರರಿಗೆ ಪೂರಕವಾಗಿರುವುದಿಲ್ಲ, ತಮ್ಮ ಪ್ರತಿಯೊಂದು ಡಿವೈಸ್‌ಗೂ ಇಂಟರ್ನೆಟ್ ವ್ಯವಸ್ಥೆ ಬೇಕೆಂಬುದು ಇವರುಗಳ ಬೇಡಿಕೆಯಾಗಿರುತ್ತದೆ.

ಜಿಯೋ ಸಿಮ್ ಹೊಂದಿದ್ದೀರಾ? ಸಂದೇಶ ಸ್ವೀಕರಿಸಿದ್ದೀರಾ?

ಜಿಯೋ ಸಿಮ್ ಹೊಂದಿದ್ದೀರಾ? ಸಂದೇಶ ಸ್ವೀಕರಿಸಿದ್ದೀರಾ?

ಸಪ್ಟೆಂಬರ್ 5 ರ ಹಿಂದೆಯೇ ಸಿಮ್ ಕಾರ್ಡ್ ಖರೀದಿಸಿದವರು ಸ್ವಯಂಚಾಲಿತವಾಗಿ ವೆಲ್‌ಕಮ್ ಆಫರ್‌ಗೆ ಮೈಗ್ರೇಟ್ ಮಾಡಿಕೊಳ್ಳಬಹುದಾಗಿದೆ. ಈ ಸಂದೇಶವನ್ನು ಎಲ್ಲಾ 4ಜಿ ಸ್ಮಾರ್ಟ್‌ಫೋನ್ ಬಳಕೆದಾರರು ಪಡೆದುಕೊಳ್ಳುತ್ತಾರೆ. ನಿಮ್ಮ ಸಂದೇಶವನ್ನು ಫೋನ್ ಸ್ವೀಕರಿಸುತ್ತಿದ್ದಂತೆ, ತಮ್ಮ ಅನಿಯಮಿತ ಡೇಟಾ ಅನುಭವವನ್ನು ಬಳಕೆದಾರರು ಕಳೆದುಕೊಳ್ಳಲಿದ್ದಾರೆ, ಇದು 4ಜಿಬಿ ನಿಯಮಿತ ಬಳಕೆಗೆ ನಿರ್ಬಂಧನೆಯನ್ನು ಹೊಂದಿರುತ್ತದೆ.

ಇತರ ಪ್ರಯೋಜನಗಳು ಹಾಗೆಯೇ ಉಳಿದುಕೊಂಡಿರುತ್ತದೆ

ಇತರ ಪ್ರಯೋಜನಗಳು ಹಾಗೆಯೇ ಉಳಿದುಕೊಂಡಿರುತ್ತದೆ

ಅನಿಯಮಿತ ವಾಯ್ಸ್ ಕರೆಗಳು, ಯಾವುದೇ ನೆಟ್‌ವರ್ಕ್ ಬಾಧ್ಯತೆ ಇಲ್ಲದೆ, 100 ಎಸ್‌ಎಮ್‌ಎಸ್/ದಿನಕ್ಕೆ, ಜಿಯೋ ಪ್ರೀಯಮಿಯ್ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ಇದೆಲ್ಲವೂ ಒಂದೇ ಆಗಿರುತ್ತದೆ.

ಪ್ರಿವ್ಯೂನಿಂದ ವೆಲ್‌ಕಮ್ ಆಫರ್‌ಗೆ ಮೈಗ್ರೇಟ್ ಮಾಡಿಕೊಳ್ಳುವುದು ಹೇಗೆ

ಪ್ರಿವ್ಯೂನಿಂದ ವೆಲ್‌ಕಮ್ ಆಫರ್‌ಗೆ ಮೈಗ್ರೇಟ್ ಮಾಡಿಕೊಳ್ಳುವುದು ಹೇಗೆ

ಜಿಯೋ ವೆಲ್‌ಕಮ್ ಆಫರ್‌ಗೆ ಮೈಗ್ರೇಟ್ ಆಗಿರುವ ಎಸ್‌ಎಮ್‌ಎಸ್ ಅನ್ನು ನೀವು ಪಡೆದುಕೊಂಡಿಲ್ಲ ಎಂದಾದಲ್ಲಿ ನಿಮ್ಮ ಸಿಮ್‌ನ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಪ್ಲೇ ಸ್ಟೋರ್‌ನಿಂದ ಮೈಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಆಫರ್ ಕೋಡ್ ಅನ್ನು ಜನರೇಟ್ ಮಾಡಿಕೊಳ್ಳಿ. ಸಪ್ಟೆಂಬರ್ 5 ನಂತರದ ಎಲ್ಲಾ ಖರೀದಿಯೂ ಜಿಯೋ ವೆಲ್‌ಕಮ್ ಆಫರ್‌ಗೆ ಹೊಂದಿಕೊಂಡಿರುತ್ತದೆ ಇದು ಪ್ರಿವ್ಯೂ ಆಫರ್ ಆಗಿರುವುದಿಲ್ಲ.

ಜಿಯೋ ಬಳಕೆದಾರರಿಗೆ ಯಾವುದೇ ತೊಂದರೆ ಇಲ್ಲ

ಜಿಯೋ ಬಳಕೆದಾರರಿಗೆ ಯಾವುದೇ ತೊಂದರೆ ಇಲ್ಲ

ಯಾವುದೇ 4ಜಿ ಮೊಬೈಲ್ ಬಳಕೆದಾರರು, ಹೊಸ ಜಿಯೋ ಸಿಮ್ ಅನ್ನು ಖರೀದಿಸುವ ಆಸಕ್ತಿಯನ್ನು ಹೊಂದಿದ್ದೀರಿ ಎಂದಾದಲ್ಲಿ, ಈಗ ಅದನ್ನು ತೊಂದರೆ ಇಲ್ಲದೆ ಪಡೆದುಕೊಳ್ಳಬಹುದಾಗಿದೆ. ತಮ್ಮ ಮೈಜಿಯೋ ಅಪ್ಲಿಕೇಶನ್ ಮೂಲಕ ಕಂಪೆನಿ ಈಗ ಆಫರ್ ಬಾರ್‌ಕೋಡ್‌ಗಳನ್ನು ಜನರೇಟ್ ಮಾಡುತ್ತಿದೆ. 2016 ರ ಕೊನೆಯವರೆಗೂ ಜಿಯೋ ಬಳಕೆದಾರರು ವೆಲ್‌ಕಮ್ ಆಫರ್ ಅನ್ನು ಆನಂದಿಸಬಹುದಾಗಿದೆ. ಜಿಯೋ ಸಂಖ್ಯೆಗಳಿಗೆ ರಿಚಾರ್ಜ್ ಅನ್ನು ಮಾಡಿಕೊಂಡು ಇದರ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
With the whole new initiative that Ambani has announced, there seems to be a real doubt if Jio can live up to their promises to deliver high-speed data with free voice calls for life.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot