Home
ಸುದ್ದಿಜಾಲ

ಜಿಯೋ ಲಾಂಚ್ ಆಫರ್: ನಿಮಗೆ ಗೊತ್ತಿರದ ಬಹಳಷ್ಟು ಸೇವೆಗಳು ಇಲ್ಲಿವೆ

By Shwetha

ರಿಲಾಯನ್ಸ್ ಜಿಯೋ ಸಿಮ್‌ನ ಸೇವೆಗಳು ಸಾರ್ವಜನಿಕರಿಗೆ ಸಪ್ಟೆಂಬರ್ 5 ರಿಂದ ದೊರೆತಿದ್ದು ಮುಕೇಶ್ ಅಂಬಾನಿ ಈ ನಿರ್ಧಾರವನ್ನು ಖಾತ್ರಿಪಡಿಸಿದ್ದಾರೆ. ಟ್ರಯಲ್ ಫೇಸ್‌ನಲ್ಲಿ ರಿಲಾಯನ್ಸ್ ಜಿಯೋ ಈ ಮೊದಲು ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿತ್ತು, ಇದರಲ್ಲಿ ಬಳಕೆದಾರರಿಗೆ 90 ದಿನಗಳ ಉಚಿತ ಸೇವೆಗಳನ್ನು ಒದಗಿಸಲಾಗಿತ್ತು. ಆದರೀಗ, ಟ್ರಯಲ್ ಮಾದರಿಯನ್ನು 'ವೆಲ್‌ಕಮ್ ಆಫರ್' ಎಂಬುದಾಗಿ ಕರೆದಿದ್ದು ಡಿಸೆಂಬರ್ 31 ರವರೆಗೆ ಜಿಯೋನ ಎಲ್ಲಾ ಸೇವೆಗಳು ಉಚಿತವಾಗಿ ಬಳಕೆದಾರರಿಗೆ ಲಭ್ಯವಾಗಲಿದೆ.

ಓದಿರಿ: ರಿಲಾಯನ್ಸ್ ಜಿಯೋ ವೇಗವನ್ನು ವರ್ಧಿಸಿಕೊಳ್ಳುವುದು ಹೇಗೆ?

ಕಂಪೆನಿಯ ಮೀಟಿಂಗ್‌ನಲ್ಲಿ ಅಂಬಾನಿಯವರು ಕೆಲವೊಂದು ಆಕರ್ಷಕ ಜಿಯೋ ಪ್ಲಾನ್‌ಗಳನ್ನು ಘೋಷಿಸಿದ್ದು ಇದರಲ್ಲಿ ಹೆಚ್ಚಿನವು ಬಳಕೆದಾರರಿಗೆ ಬಂಪರ್ ಆಫರ್ ಎಂದೆನಿಸಲಿದೆ. ಟಾರಿಫ್ ಯೋಜನೆಗಳು ಪ್ರಿಪೈಡ್ ಮತ್ತು ಪೋಸ್ಟ್ ಪೇಡ್ ಇದೇ ಸಮಯದಲ್ಲಿ ಅನಾವರಣಗೊಳಿಸಲಾಗಿದೆ. ಇಂದಿನಿಂದ ಬಳಕೆದಾರರಿಗೆ ಯಾವೆಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ ಎಂಬುದನ್ನು ಈ ಕೆಳಗಿನ ಅಂಶಗಳ ಮೂಲಕ ತಿಳಿದುಕೊಳ್ಳೋಣ.

ರಿಲಾಯನ್ಸ್ ಜಿಯೋ ಸಿಮ್ ಕಾರ್ಡ್

ರಿಲಾಯನ್ಸ್ ಜಿಯೋ ಸಿಮ್ ಕಾರ್ಡ್

ಮಾನ್ಯವಾದ ಗುರತಿನ ದಾಖಲೆಗಳನ್ನು ಒದಗಿಸುವ ಮೂಲಕ ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಬಳಕೆದಾರರು ಸಿಮ್ ಅನ್ನು ಖರೀದಿಸಬಹುದಾಗಿದೆ. ಟೆಲಿಕಾಮ್ ಸೇವೆಗಳಿಗೆ ಕಂಪೆನಿಯು ಸಿಮ್ ಕಾರ್ಡ್‌ಗಳನ್ನು ಪೂರೈಕೆ ಮಾಡುತ್ತದೆಯೇ ಇಲ್ಲವೇ ಇಲ್ಲಾ ಇದು ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಮಾತ್ರವೇ ದೊರೆಯುತ್ತದೆಯೇ ಎಂಬುದು ತಿಳಿದು ಬಂದಿಲ್ಲ. ಇದರ ಬಗ್ಗೆ ನಿಖರ ಮಾಹಿತಿ ದೊರೆತ ತಕ್ಷಣವೇ ನಾವು ನಿಮಗೆ ತಿಳಿಸುತ್ತೇವೆ.

ಇ - ಕೆವೈಸಿ ಆಕ್ಟಿವೇಶನ್

ಇ - ಕೆವೈಸಿ ಆಕ್ಟಿವೇಶನ್

ನಿಮಗೆ ಜಿಯೋ ಸಿಮ್ ಕಾರ್ಡ್ ಅಷ್ಟು ಸುಲಭವಾಗಿ ದೊರೆಯುವುದಿಲ್ಲ, ಸ್ಟೋರ್ ಮುಂಭಾಗದಲ್ಲಿ ಸಾಕಷ್ಟು ಜನಸಂದಣಿ ಇದ್ದು ಸಿಮ್ ಕಾರ್ಡ್ ಪಡೆಯಲು ಜನರು ಪ್ರಯತ್ನಿಸುತ್ತಿದ್ದಾರೆ. ಏರ್‌ಟೆಲ್, ವೊಡಾಫೋನ್, ರಿಲಾಯನ್ಸ್ ಸಿಮ್ ಕಾರ್ಡ್ ಅನ್ನು ಇ - ಕೆವೈಸಿ ಪ್ರಕ್ರಿಯೆ ಮೂಲಕ ಆಕ್ಟಿವೇಟ್ ಮಾಡುತ್ತದೆ.
ನಿಮ್ಮ ಮೂಲ ಆಧಾರ್ ಕಾರ್ಡ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ನಿಮ್ಮೊಂದಿಗೆ ಅದನ್ನು ತೆಗೆದುಕೊಂಡು ಹೋಗಿ ಮತ್ತು 15 ನಿಮಿಷಗಳಲ್ಲಿ ನಿಮ್ಮ ಜಿಯೋ ಸಿಮ್ ಕಾರ್ಡ್ ಆಕ್ಟಿವೇಟ್ ಆಗುತ್ತದೆ.

ಜಿಯೋ ಟಾರಿಫ್ ಯೋಜನೆಗಳು

ಜಿಯೋ ಟಾರಿಫ್ ಯೋಜನೆಗಳು

ವಾಯ್ಸ್ ಕರೆಗಳು ಮತ್ತು ರಾಷ್ಟ್ರೀಯ ರೋಮಿಂಗ್ ಉಚಿತವಾಗಿದೆ. ಟಾರಿಫ್ ಯೋಜನೆಗಳು ರೂ 149 ರಿಂದ ಆರಂಭಗೊಳ್ಳಲಿದೆ. ಇದರಲ್ಲಿ ಬಳಕೆದಾರರಿಗೆ 300 ಎಮ್‌ಬಿ ಡೇಟಾ ದೊರೆಯಲಿದ್ದು ರಾತ್ರಿ ಡೇಟಾ ಅನಿಯಮಿತವಾಗಿದೆ. ಕೊನೆಯ ಯೋಜನೆ ರೂ 4,999 ಆಗಿದೆ. ಎಲ್ಲಾ ಜಿಯೋ ಯೋಜನೆಗಳು ಜಿಯೋನ ಪ್ರೀಮಿಯಮ್ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಪೋಸ್ಟ್ ಪೇಡ್, ಪ್ರಿಪೇಡ್‌ಗಳಿಗೆ ಒಂದೇ ಸಮನಾಗಿದೆ ಅಂತೆಯೇ ದರವೂ ಒಂದೇ ರೀತಿಯ ಸೌಲಭ್ಯವನ್ನು ಒಳಗೊಂಡು ಬಂದಿವೆ.

ಎಮ್‌ಎನ್‌ಪಿ

ಎಮ್‌ಎನ್‌ಪಿ

ರಿಲಾಯನ್ಸ್ ಜಿಯೋಗೆ ನೀವು ಪೋರ್ಟ್ ಕೂಡ ಮಾಡಿಕೊಳ್ಳಬಹುದಾಗಿದೆ. ಎಮ್‌ಎನ್‌ಪಿ ಸೇವೆಯು ಸಪ್ಟೆಂಬರ್ 5 ರಿಂದ ಆಕ್ಟಿವೇಟ್‌ಗೊಳ್ಳುತ್ತದೆ ಮತ್ತು ಪೋರ್ಟೆಡ್ ಬಳಕೆದಾರರು ಜಿಯೋದ ವೆಲ್‌ಕಮ್ ಆಫರ್‌ಗೆ ಅರ್ಹರಾಗಿರುತ್ತಾರೆ ಇದು ಡಿಸೆಂಬರ್ 31 ರವರೆಗೆ ಲಭ್ಯವಿದೆ.

ಬೆಂಬಲಿಸುವ ಫೋನ್‌ಗಳು

ಬೆಂಬಲಿಸುವ ಫೋನ್‌ಗಳು

ರಿಲಾಯನ್ಸ್ ಜಿಯೋ ಭಾರತದ ಎಲ್‌ಟಿಇ ಮಾತ್ರ ನೆಟ್‌ವರ್ಕ್ ಎಂದೆನಿಸಿದ್ದು ನಿಮ್ಮ ಪ್ರದೇಶದಲ್ಲಿ 4ಜಿ ನೆಟ್‌ವರ್ಕ್ ಇಲ್ಲವೆಂದಾದಲ್ಲಿ ಇದನ್ನು 2ಜಿ ಅಥವಾ 3ಜಿ ಗೆ ಬದಲಾಯಿಸಲಾಗುವುದಿಲ್ಲ. ನಿಮ್ಮ ಫೋನ್ ವೋಲ್ಟ್‌ಗೆ ಬೆಂಬಲವನ್ನು ನೀಡುವಂತಿರಬೇಕು ವಾಯ್ಸ್ ಕರೆಗಳನ್ನು ಮಾಡಲು ಸಾಧ್ಯವಾಗಿರಬೇಕು ಇಲ್ಲದಿದ್ದರೆ ಕರೆಗಳು ವೋಲ್ಟ್ ಫೀಚರ್‌ಗೆ ಸಂಪರ್ಕಗೊಳ್ಳುವುದಿಲ್ಲ.

ಜಿಯೋ ಪ್ರೀಮಿಯಮ್ ಅಪ್ಲಿಕೇಶನ್‌ಗಳು

ಜಿಯೋ ಪ್ರೀಮಿಯಮ್ ಅಪ್ಲಿಕೇಶನ್‌ಗಳು

ಎಲ್ಲಾ ಟಾರಿಫ್ ಯೋಜನೆಗಳು ಜಿಯೋದ ಪ್ರೀಮಿಯಮ್ ಅಪ್ಲಿಕೇಶನ್‌ಗಳಾದ ಜಿಯೋ ಪ್ಲೇ, ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್ ಮೊದಲಾದವುಗಳಿಗೆ ಪ್ರವೇಶವನ್ನು ನೀಡುತ್ತಿವೆ. ಡಿಸೆಂಬರ್ 31 ರವರೆಗೆ ಹೊಸ ಬಳಕೆದಾರರು ಜಿಯೋ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಬಳಸಲು ಸಾಧ್ಯವಿದೆ.

ರಿಲಾಯನ್ಸ್ ಜಿಯೋಫೈ

ರಿಲಾಯನ್ಸ್ ಜಿಯೋಫೈ

ನಿಮ್ಮ ಫೋನ್ 4ಜಿ ಗೆ ಬೆಂಬಲವನ್ನು ನೀಡುತ್ತಿಲ್ಲ ಎಂದಾದಲ್ಲಿ ನೀವು 4ಜಿ ಡಿವೈಸ್ ಅನ್ನು ಖರೀದಿಸುವ ಯೋಜನೆಯಲ್ಲಿ ಇಲ್ಲ ಎಂದಾದಲ್ಲಿ, ಕಂಪೆನಿಯ ಸಣ್ಣ ರೂಟರ್ ಆದ "ಜಿಯೋಫೈ" ಬಳಸಿಕೊಂಡು ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ. ಒಂದೇ ಸಮಯದಲ್ಲಿ ಜಿಯೋಫೈ 31 ಡಿವೈಸ್‌ಗಳಿಗೆ ಸಂಪರ್ಕವನ್ನು ನೀಡುತ್ತದೆ. ಈ ಮೊದಲು ಡಿವೈಸ್ ರೂ 2,899 ಕ್ಕೆ ಲಭ್ಯವಿತ್ತು. ಈಗ ರೂ 1,999 ಕ್ಕೆ ಯಾವುದೇ ರಿಲಾಯನ್ಸ್ ಸ್ಟೋರ್‌ನಿಂದ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Reliance Jio was previously available for limited users as a trial phase, where they offered free services for 90 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+