Just In
- 5 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 5 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
- 7 hrs ago
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- 8 hrs ago
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
Don't Miss
- News
Republic Day 2023: ಕರ್ನಾಟಕದ 20 ಮಂದಿಗೆ ಪೊಲೀಸ್ ಪದಕಕ್ಕೆ ಆಯ್ಕೆ
- Movies
'ಸಿಂಹಪ್ರಿಯ'ಗೆ ಮದುವೆ ಸಂಭ್ರಮ: ಸ್ಯಾಂಡಲ್ವುಡ್ ಜೋಡಿಗೆ ಅರಿಶಿನ ಶಾಸ್ತ್ರ!
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಿಯೋದಿಂದ 'ಅಮರನಾಥ ಯಾತ್ರಾ' ಪ್ಲ್ಯಾನ್'!..ಅನಿಯಮಿತ ಉಚಿತ ಕರೆಗಳು!
ಮಾರುಕಟ್ಟೆಗೆ ಬಂದ ಆರಂಭದಿಂದಲೂ ಗ್ರಾಹಕರಿಗೆ ಆಫರ್‌ಗಳ ಮೂಲಕ ಮೋಡಿ ಮಾಡಿರುವ ಜಿಯೋ ಟೆಲಿಕಾಂ ಸಂಸ್ಥೆಯು ಸದ್ಯ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮಿಂಚುತ್ತಾ ಮುಂಚೂಣಿಯಲ್ಲಿ ಸಾಗುತ್ತಿದೆ. ವಿಶೇಷ ಸಂದರ್ಭಗಳಲ್ಲಿ ಬಳಕೆದಾರರನ್ನು ಆಕರ್ಷಿಸಲು ಬೆಸ್ಟ್ ಪ್ಲ್ಯಾನ್‌ಗಳನ್ನು ಘೋಷಿಸುತ್ತ ಬಂದಿರುವ ಸಂಸ್ಥೆಯು ಈ ಬಾರಿಯು ಮತ್ತೆ ಅಂಥಹ ಪ್ರಯತ್ನಕ್ಕೆ ಕೈಹಾಕಿದೆ. ಈಗ ಅಮರನಾಥ ಯಾತ್ರೆ ಶುರುವಾಗಿದ್ದು, ಈ ನಿಟ್ಟಿನಲ್ಲಿ ಜಿಯೋ ಒಂದು ಭರ್ಜರಿ ರೀಚಾರ್ಜ್ ಪ್ಯಾಕ್ ಬಿಡುಗಡೆ ಮಾಡಿದೆ.

ಹೌದು, ಭಾರತದಲ್ಲಿ ಸದ್ಯ ಅಮರನಾಥ ದರ್ಶನದ ಯಾತ್ರೆ ಆರಂಭವಾಗಿದ್ದು, ಈ ವಿಶೇಷ ಸಂದರ್ಭಕ್ಕ ಜಿಯೋ ಟೆಲಿಕಾಂ ಸಂಸ್ಥೆಯು 102ರೂ.ಗಳ ಅಮರನಾಥ ಯಾತ್ರಾ ಪ್ರೀಪೇಡ್ ಪ್ಲ್ಯಾನ್ ಲಾಂಚ್ ಮಾಡಿ ಭಕ್ತರಿಗೆ ಖುಷಿ ನೀಡಿದೆ. ಅನಿಯಮಿತ ಉಚಿತ ಕರೆಗಳು, ಪ್ರತಿ ದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಸೇರಿದಂತೆ ಪ್ರತಿದಿನ ಉಚಿತ ಡೇಟಾ ಸೌಲಭ್ಯಗಳು ಈ ರೀಚಾರ್ಜ್ ಪ್ಯಾಕ್‌ನಲ್ಲಿ ಗ್ರಾಹಕರಿಗೆ ಲಭ್ಯ. ಹಾಗಾದರೇ ಜಿಯೋ ಅಮರನಾಥ ಯಾತ್ರಾ ಪ್ಲ್ಯಾನಿನ ಅಂಶಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಕರೆ, ಎಸ್‌ಎಮ್‌ಎಸ್, ಡೇಟಾ ಉಚಿತ
ಅಮರನಾಥ ಯಾತ್ರೆಯ ಪ್ರಯುಕ್ತ ಜಿಯೋದ ಈ ವಿಶೇಷ ಪ್ಲ್ಯಾನ್ ಅನ್ನು ಲಾಂಚ್ ಆಗಿದ್ದು, ಇದರಲ್ಲಿ ಅನಿಯಮಿತ ಲೋಕಲ್ ಮತ್ತು ನ್ಯಾಶನಲ್ ಉಚಿತ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಮತ್ತು ಪ್ರತಿದಿನ 500MB ಉಚಿತ ಡೇಟಾದ ಪ್ರಯೋಜನವು ಗ್ರಾಹಕರಿಗೆ ಲಭ್ಯವಾಗಲಿದೆ. ಗ್ರಾಹಕರಿಗೆ ಉಚಿತ ರೋಮಿಂಗ್ ಸೌಲಭ್ಯವು ದೊರೆಯಲಿದೆ.

ಶಾರ್ಟ್‌ಟರ್ಮ್ ವ್ಯಾಲಿಡಿಟಿ
ಜಿಯೋ ಬಿಡುಗಡೆ ಮಾಡಿರುವ ಅಮರನಾಥ ಯಾತ್ರೆಯ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್ ಶಾರ್ಟ್‌ಟರ್ಮ್ ಅವಧಿಯ ಪ್ಲ್ಯಾನ್ ಆಗಿದೆ. ಈ ಪ್ಯಾಕ್‌ನ ದರವು 102ರೂ.ಗಳು ಆಗಿದ್ದು, 7 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಇಂಟರ್ನೆಟ್ 64 Kbps ವೇಗದಲ್ಲಿ ಕೆಲಸ ಮಾಡಲಿದ್ದು, ಈ ಪ್ಲ್ಯಾನ್ ಜಿಯೋ ಪ್ರೈಮ್ ಸದಸ್ಯತ್ವದ ಅಡಿಯಲ್ಲಿ ಬರುವುದಿಲ್ಲ.

ರೋಮಿಂಗ್ ಪ್ರಾಬ್ಲಂ ಇರಲ್ಲ
ಅಮರನಾಥ ದರ್ಶನ ಯಾತ್ರೆಯ ಪ್ರಯುಕ್ತ ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಜಮ್ಮು ಕಾಶ್ಮೀರಕ್ಕೆ ಬರುತ್ತಾರೆ. ಅಲ್ಲಿ ಭಕ್ತಿಗೆ ರೋಮಿಂಗ್ ಸಮಸ್ಯೆಯನ್ನು ಎದುರಿಸುವುದು ಸಾಧ್ಯತೆಗಳು ಹೆಚ್ಚಿರುತ್ತದೆ. ಜಿಯೋದ ಅಮರನಾಥ ಯಾತ್ರಾ ಪ್ಲ್ಯಾನ್ ದರ್ಶನಕ್ಕೆ ತೆರೆಳುವ ಭಕ್ತರಿಗೆ ಉಪಯುಕ್ತವಾಗಲಿದ್ದು, ರೋಮಿಂಗ್ ಸಮಸ್ಯೆ ಎದುರಾಗುವುದಿಲ್ಲ ಎನ್ನಲಾಗಿದೆ.

ಹೊಸ ಸಿಮ್‌ಗೂ ಆಫರ್ ಲಭ್ಯ
ಅಮರನಾಥ ಯಾತ್ರೆಗೆ ತೆರೆಳಿರುವ ಭಕ್ತರಲ್ಲಿ ಜಿಯೋ ಸಿಮ್ ಇಲ್ಲದಿದ್ದರೇ ಚಿಂತೆ ಇಲ್ಲ. ಜಮ್ಮು ಕಾಶ್ಮೀರದಲ್ಲಿಯೇ ಹೊಸ ಜಿಯೋ ಸಿಮ್ ಖರೀದಿಸಬಹುದಾಗಿದ್ದು, ಆ ನಂತರ ಜಿಯೋ ಅಮರನಾಥ ಯಾತ್ರಾ ಪ್ರೀಪೇಡ್ ಪ್ಲ್ಯಾನ್ ರೀಚಾರ್ಜ್ ಮಾಡಿಕೊಂಡು ಈ ಪ್ಲ್ಯಾನಿನ ಪ್ರಯೋಜನಗಳನ್ನು ಭಕ್ತರು ಪಡೆಯಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470