Home
ಸುದ್ದಿಜಾಲ

ಗೇಮಿಂಗ್ ಪ್ರಿಯರಿಗೆ..! 2GB ಡೇಟಾ.. ಉಚಿತ JioTV.. ಅಗ್ಗದ ಬೆಲೆ.. ಹೊಸ Jio ಪ್ಲಾನ್ ಬಿಡುಗಡೆ

ಜಿಯೋ ಗೇಮಿಂಗ್ ಪ್ರಿಯರಿಗೆ ಅದ್ಭುತ ಪ್ಲಾನ್ (Jio gaming plans) ಪರಿಚಯಿಸಿದೆ. ಅನ್‌ಲಿಮಿಟೆಡ್ 5G ಡೇಟಾ, ವಾಯ್ಸ್ ಕಾಲ್ (ಧ್ವನಿ ಕರೆಗಳು) ಮತ್ತು ದೈನಂದಿನ ಎಸ್‌ಎಂಎಸ್ (SMS) ಪ್ರಯೋಜನಗಳನ್ನು ನೀಡುವ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಜಿಯೋ (Jio) ಯೋಜನೆಗಳು ವಿಭಿನ್ನ ಬಳಕೆದಾರರ ಅಗತ್ಯಗಳನ್ನು ಪೂರೈಸುತ್ತವೆ. ಈ ಪ್ಲಾನ್‌ 14 ರಿಂದ 72 ದಿನಗಳವರೆಗೆ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

198 ರೂ. ನಿಂದ ಪ್ರಾರಂಭವಾಗುವ ಈ ಜಿಯೋ ಪ್ಲಾನ್, ನಿತ್ಯ 2GB ಡೇಟಾವನ್ನು ಒದಗಿಸುತ್ತದೆ. ನೀವು, ಡೇಟಾ ನಿರ್ಬಂಧಗಳಿಲ್ಲದೆ ಸುಗಮ ಆನ್‌ಲೈನ್ ಗೇಮಿಂಗ್ ಅನ್ನು ಮಾಡಬಹುದು. ಇದರಲ್ಲಿ ಅಲ್ಪಾವಧಿ ಯೋಜನೆಗಳು ಲಭ್ಯವಿದೆ. ನೀವು 198 ರೂ. ಮತ್ತು 349 ರೂ.ಗಳ ಅಲ್ಪಾವಧಿಯ ಪ್ಲಾನ್‌ ಹುಡುಕುತ್ತಿದ್ದರೆ, ಜಿಯೋ ನಿಮಗಾಗಿ ಇವುಗಳನ್ನು ತಂದಿದೆ.

ಗೇಮಿಂಗ್ ಪ್ರಿಯರಿಗೆ! 2GB ಡೇಟಾ, ಉಚಿತ JioTV.. ಅಗ್ಗದ ಬೆಲೆಗೆ ಹೊಸ Jio ಪ್ಲಾನ್

ಜಿಯೋ 198 ರೂ. ಯೋಜನೆ: ಜಿಯೋ 198 ರೂ. ಪ್ಲಾನ್ 14 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಪ್ರತಿದಿನ 2GB ಹೈ ಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ನಿತ್ಯ 100 SMS ಸೌಲಭ್ಯ ನೀಡುತ್ತದೆ. ದೈನಂದಿನ ಡೇಟಾ ಮಿತಿ ಮುಗಿದ ನಂತರ, ವೇಗವು 64 Kbps ಗೆ ಇಳಿಯುತ್ತದೆ.

ಜಿಯೋ 349 ರೂ. ಯೋಜನೆ: ಜಿಯೋ 349 ರೂ. ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. 198 ರೂ. ಯೋಜನೆಯಂತೆಯೇ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ನಿತ್ಯ 100 SMS ಪ್ರಯೋಜನಗಳನ್ನು ನೀಡುತ್ತದೆ.

ಈ ಸುದ್ದಿ ಓದಿದ್ದೀರಾ?: ಭಾರೀ ರಿಯಾಯಿತಿ! 24 ಇಂಚಿನ ಟಿವಿ 5999.. 32 ಇಂಚಿನ ಟಿವಿ 7999.. ಅಗ್ಗದ ಬೆಲೆಗೆ ಈ Smart TVಗಳು ಲಭ್ಯ

ಜಿಯೋ 629 ರೂ. ಪ್ಲಾನ್

ಇದು 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ 629 ರೂ. ಯೋಜನೆಯು ದೀರ್ಘ ಸಂಪರ್ಕದ ಅಗತ್ಯವಿರುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಇದು ನಿತ್ಯ 2GB ಹೈ ಸ್ಪೀಡ್ ಡೇಟಾ ಒದಗಿಸುತ್ತದೆ. ಜೊತೆಗೆ ಅನಿಯಮಿತ ಕರೆ ಮತ್ತು ನಿತ್ಯ 100 SMS ಸೌಲಭ್ಯ ಒಳಗೊಂಡಿದೆ. ಕೈಗೆಟುಕುವ ಬೆಲೆಯಲ್ಲಿ ಉತ್ತಮ ಪ್ಲಾನ್ ಬಯಸುವ ಗೇಮಿಂಗ್ ಪ್ರಿಯರಿಗೆ ಈ ಯೋಜನೆ ಸೂಕ್ತವಾಗಿದೆ.

ಜಿಯೋ 719 ರೂ. ಯೋಜನೆ

ಜಿಯೋ 719 ರೂ. ಮತ್ತು 749 ರೂ. ದೀರ್ಘಾವಧಿ ವ್ಯಾಲಿಡಿಟಿಯ ಯೋಜನೆಗಳು ಸುಮಾರು ಎರಡೂವರೆ ತಿಂಗಳವರೆಗೆ ತಡೆರಹಿತ ಡೇಟಾ ಮತ್ತು ಸಂಪರ್ಕವನ್ನು ಒದಗಿಸುತ್ತವೆ. ಜಿಯೋ 719 ರೂ. ಪ್ಲಾನ್ ಗೇಮಿಂಗ್, ಸ್ಟ್ರೀಮಿಂಗ್ ಮತ್ತು ಸಂವಹನಕ್ಕೆ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸುತ್ತದೆ. ಜೊತೆಗೆ, ಅದೇ 2GB ದೈನಂದಿನ ಡೇಟಾ ಕ್ಯಾಪ್‌ನೊಂದಿಗೆ 70 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ.

ಜಿಯೋ 749 ರೂ. ಯೋಜನೆ

ಜಿಯೋ 749 ರೂ. ಯೋಜನೆಯು 72 ದಿನಗಳ ವ್ಯಾಲಿಡಿಟಿಯೊಮದಿಗೆ ಬರುತ್ತದೆ. ನೀವು ನಿತ್ಯ ಮಿತಿಯಿಲ್ಲದೆ ಹೆಚ್ಚುವರಿಯಾಗಿ 20GB ಡೇಟಾವನ್ನು ಬಳಸಬಹುದು.

ಹೆಚ್ಚುವರಿ ಪ್ರಯೋಜನಗಳು: ಜಿಯೊ ಪರಿಚಯಿಸಿರುವ ಈ ಎಲ್ಲಾ ಯೋಜನೆಗಳು ಉಚಿತ ಅನಿಯಮಿತ ಧ್ವನಿ ಕರೆಗಳು (ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್) ಮತ್ತು ಜಿಯೋ ಟಿವಿ ಚಂದಾದಾರಿಕೆ ಪ್ರವೇಶದೊಂದಿಗೆ ಬರುತ್ತವೆ. ಬಳಕೆದಾರರು ತಮ್ಮ ಗೇಮಿಂಗ್ ಚಟುವಟಿಕೆಗಳ ಜೊತೆಗೆ ವಿಷಯವನ್ನು ಸ್ಟ್ರೀಮ್ ಮಾಡಲು ಅನುವು ಮಾಡಿಕೊಡುತ್ತದೆ.

ಹೊಸ ಜಿಯೋ ಗೇಮಿಂಗ್ ಪ್ರಿಪೇಯ್ಡ್ ಯೋಜನೆಗಳು ಈಗ ಭಾರತದಾದ್ಯಂತ ಜಿಯೋ ಸಿಮ್ ಬಳಕೆದಾರರಿಗೆ ಲಭ್ಯವಿದೆ. ಈ ಯೋಜನೆಗಳು ಲಭ್ಯವಿರುವಲ್ಲಿ ಅನಿಯಮಿತ 5G ಪ್ರವೇಶವನ್ನು ನೀಡುತ್ತವೆ. ಇದು ಸ್ಥಿರವಾದ ಹೈ-ಸ್ಪೀಡ್ ಇಂಟರ್ನೆಟ್ ಅಗತ್ಯವಿರುವ ಗೇಮರುಗಳಿಗಾಗಿ ಒಂದು ಉತ್ತಮ ಆಯ್ಕೆಯಾಗಿದೆ.

Best Mobiles in India

English summary
Reliance Jio Launches New Prepaid Plans for Gamers With 2GB Daily Data and Free Jio TV Access
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+