ಡಿಸೆಂಬರ್ 28'ಕ್ಕೆ ಜಿಯೋದಿಂದ ಬಹುದೊಡ್ಡ ಪ್ರಕಟಣೆ; ಅದೇನು ಗೊತ್ತಾ..?

Written By:

ರಿಲಾಯನ್ಸ್ ಜಿಯೋ 4G LTE ಸೇವೆ, ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ. ಜಿಯೋದ ವೆಲ್ಕಮ್‌ ಆಫರ್‌ ಅನ್ನು 3 ತಿಂಗಳುಗಳ ಕಾಲ ವಿಸ್ತರಣೆ ಮಾಡುವ ಬಗೆಗಿನ ರೂಮರ್ಸ್ ಸುದ್ದಿ ಮತ್ತಷ್ಟು ವೈರಲ್‌ ಆಗುತ್ತಲೇ ಇದೆ. ಆದರೆ ಈ ಬಗ್ಗೆ ರಿಲಾಯನ್ಸ್ ಜಿಯೋ ಮಾತ್ರ ಇದುವರೆಗೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಈ ಬಗ್ಗೆ ಬಹುದೊಡ್ಡ ಪ್ರಕಟಣೆ ಡಿಸೆಂಬರ್ 28 ರಂದು, ರಿಲಾಯನ್ಸ್ ಇಂಡಸ್ಟ್ರೀಸ್‌ನ ಸಂಸ್ಥಾಪಕರಾದ ಧೀರುಬಾಯ್‌ ಅಂಬಾನಿ'ರವರ ಹುಟ್ಟುಹಬ್ಬದ ದಿನದಂದು ಹೊರಬೀಳಲಿದೆ.

ಡಿಸೆಂಬರ್ 28'ಕ್ಕೆ ಜಿಯೋದಿಂದ ಬಹುದೊಡ್ಡ ಪ್ರಕಟಣೆ; ಅದೇನು ಗೊತ್ತಾ..?

ಡಿಸೆಂಬರ್ 28 ರಂದು ರಿಲಾಯನ್ಸ್ ಜಿಯೋ ಪ್ರಕಟಗೊಳಿಸಲಿರುವ ಬಹುದೊಡ್ಡ ಮಾಹಿತಿಗಳು ಏನಿರಬಹುದು ಎಂಬುದರ ಬಗ್ಗೆ ಮುಂದೆ ಓದಿರಿ ತಿಳಿಯಿರಿ.

ಇತ್ತೀಚಿನ ಸುದ್ದಿಗಳು ರಿಲಾಯನ್ಸ್ ಜಿಯೋ ಸ್ಕ್ಯಾಮ್: ರೂ.27,000 ಪಾವತಿಸಲು ಹೇಳಿದ ನಕಲಿ ಬಿಲ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವೆಲ್ಕಮ್ ಆಫರ್ ಯಾರಿಗೆ ಗೊತ್ತೇ?

ವೆಲ್ಕಮ್ ಆಫರ್ ಯಾರಿಗೆ ಗೊತ್ತೇ?

ಬ್ಯುಸಿನೆಸ್ ಇನ್‌ಸೈಡರ್, ತನಗೆ ದೊರೆತ ಮಾಹಿತಿ ಮೂಲಗಳಿಂದ ವರದಿ ಮಾಡಿರುವ ಪ್ರಕಾರ, ರಿಲಾಯನ್ಸ್ ಜಿಯೋ ಉಚಿತ 4G LTE ಡಾಟಾ ಮತ್ತು ವಾಯ್ಸ್ ಕರೆಗಳ ವೆಲ್ಕಮ್‌ ಆಫರ್‌ ಅನ್ನು ಹೊಸ ಗ್ರಾಹಕರಿಗೆ ಮಾರ್ಚ್‌ 2017 ವರೆಗೂ ವಿಸ್ತರಣೆ ಮಾಡಲಿದೆ ಎಂದು ಉಲ್ಲೇಖಿಸಿದೆ. ಜೊತೆಗೆ ಉಚಿತ 4G ಸೇವೆಯನ್ನು ಈಗಾಗಲೇ ಇರುವ ಜಿಯೋ ಗ್ರಾಹಕರಿಗೆ ವಿಸ್ತರಣೆ ಮಾಡುವ ನಿರೀಕ್ಷೆಗಳಿವೆ ಎಂದು ತಿಳಿಯಲಾಗಿದೆ.

ಆಫರ್ ಬಗ್ಗೆ ಖಚಿತತೆ ಇಲ್ಲ..!

ಆಫರ್ ಬಗ್ಗೆ ಖಚಿತತೆ ಇಲ್ಲ..!

ಆದರೆ ಲೇಟೆಸ್ಟ್‌ ಆಗಿ ದೊರೆತಿರುವ ಮಾಹಿತಿ ಪ್ರಕಾರ ಜಿಯೋ 4G ಉಚಿತ ಸೇವೆ, ಹೊಸದಾಗಿ ಜಿಯೋ ಸಿಮ್‌ ಖರೀದಿಸುವವರಿಗೆ ಮಾತ್ರ ವಿಸ್ತರಣೆ ಆಗಲಿದೆ ಎಂದು ತಿಳಿಯಲಾಗಿದೆ. ಆದರೆ ಈಗಾಗಲೇ ಜಿಯೋ ಗ್ರಾಹಕರಾಗಿರುವ ಎಲ್ಲರೂ ಡಿಸೆಂಬರ್ 31, 2016 ವರೆಗೂ ಯಾವುದೇ ಸಂಶಯವಿಲ್ಲದೇ 4G ಉಚಿತ ಸೇವೆಯನ್ನು ಎಂಜಾಯ್‌ ಮಾಡಬಹುದು. ವೆಲ್ಕಮ್ ಆಫರ್ ವಿಸ್ತರಣೆ ಬಗ್ಗೆ ಪ್ರಮುಖ ಸುದ್ದಿಯನ್ನು ತಿಳಿಯಲು ಜಿಯೋ ಪ್ರಿಯರು ಡಿಸೆಂಬರ್ 28 ರವರೆಗೆ ಕಾಯಲೇಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಸರಾಂತ ಸಂಸ್ಥೆಗಳ ವಿಶ್ಲೇಷಣಾಕಾರರು ಹೇಳಿದ್ದೇನು?

ಹೆಸರಾಂತ ಸಂಸ್ಥೆಗಳ ವಿಶ್ಲೇಷಣಾಕಾರರು ಹೇಳಿದ್ದೇನು?

ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್ ಕನಿಷ್ಠವಾಗಿ ಮಾರ್ಚ್ 2017 ರ ತನಕವಾದರೂ ವಿಸ್ತರಣೆ ಆಗಬೇಕು. ಹೆಸರಾಂತ ಸಂಸ್ಥೆಗಳ ವಿಶ್ಲೇಷಣಾಕಾರರು ಸಹ ಮುಕೇಶ್‌ ಅಂಬಾನಿ ಮಾಲೀಕತ್ವದ ಕಂಪನಿ ಜಿಯೋ ವೆಲ್ಕಮ್ ಆಫರ್ ವಿಸ್ತರಣೆಯನ್ನು ಕಡ್ಡಾಯವಾಗಿ ಅವಲಂಬಿಸಿದೆ ಎಂದು ಹೇಳಿದೆ.

100 ದಶಲಕ್ಷ ಚಂದಾದಾರರನ್ನು ಹೊಂದಲು ವೆಲ್ಕಮ್ ಆಫರ್ ವಿಸ್ತರಣೆ

100 ದಶಲಕ್ಷ ಚಂದಾದಾರರನ್ನು ಹೊಂದಲು ವೆಲ್ಕಮ್ ಆಫರ್ ವಿಸ್ತರಣೆ

"100 ದಶಲಕ್ಷ ಚಂದಾದಾರರನ್ನು ಹೊಂದಿ ಸೆಲೆಬ್ರೇಟ್ ಮಾಡಲು,ಮಾಸ್ ಗ್ರಾಹಕರನ್ನು ಆಕರ್ಷಿಸಲು ಕ್ಲಾಸ್ ಆಪರ್ ಆದ ವೆಲ್ಕಮ್ ಆಫರ್ ಅನ್ನು ಮಾರ್ಚ್‌ 2017 ರವರೆಗೆ ವಿಸ್ತರಣೆ ಮಾಡಬೇಕು" ಎಂದು ಮೋತಿಲಾಲ್ ಆಸ್‌ವಾಲ್‌ ವಿಶ್ಲೇಷಣೆ ಹೇಳಿದೆ. ಅಲ್ಲದೇ ಸಿಟಿ ಸಂಶೋಧಕ ವಿಶ್ಲೇಷಣೆಕಾರರು, ರಿಲಾಯನ್ಸ್ ಜಿಯೋ ಸಮರ್ಥವಾಗಿ ಹೊಸ ಗ್ರಾಹಕರನ್ನು ಪಡೆಯುವ ಸಲುವಾಗಿಯಾದರೂ ವೆಲ್ಕಮ್ ಆಫರ್ ಅನ್ನು ನೀಡಲೇಬೇಕು ಎಂದು ತನ್ನ ಅಭಿಪ್ರಾಯ ನೀಡಿದೆ.

ಉಚಿತ ವಾಯ್ಸ್ ಕರೆಯಲ್ಲಿ ಲಾಭವಿಲ್ಲ..!

ಉಚಿತ ವಾಯ್ಸ್ ಕರೆಯಲ್ಲಿ ಲಾಭವಿಲ್ಲ..!

ಎಸ್‌, ಟೆಲಿಕಾಂ ಇನ್‌ಸೈಡರ್ ಸಂಜಯ್‌ ಬಫ್ನ ತಿಳಿಸಿದಂತೆ, ರಿಲಾಯನ್ಸ್ ಜಿಯೋ ಉಚಿತ ವಾಯ್ಸ್ ಹೊರಕರೆಗಳನ್ನು 30 ನಿಮಿಷಗಳಿಗೆ ಮಾತ್ರ ಪರಿಮಿತಿ ನೀಡಿ, ನಂತರ ಕರೆ ಮುಂದುವರಿಸಲು ನಿರ್ಬಧಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio to make big announcement regarding free Jio 4G Welcome Offer on December 28. To know more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot