ರಿಲಾಯನ್ಸ್ ಜಿಯೋ 'ವೆಲ್ಕಮ್ ಆಫರ್' ಮಾರ್ಚ್‌ 2017 ರವರೆಗೆ ವಿಸ್ತರಣೆ ಇಲ್ಲ!

By Suneel
|

ರಿಲಾಯನ್ಸ್ ಜಿಯೋ ಇತ್ತೀಚೆಗಷ್ಟೆ, ಅನ್‌ಲಿಮಿಟೆಡ್ ಇಂಟರ್ನೆಟ್ ಬ್ರೌಸಿಂಗ್ ಮತ್ತು ಉಚಿತ ವಾಯ್ಸ್ ಕರೆ ಆಫರ್‌ನ 'ವೆಲ್ಕಮ್‌ ಆಫರ್‌' ಅನ್ನು ಮಾರ್ಚ್‌ 2017 ರವರೆಗೆ ವಿಸ್ತರಣೆ ಮಾಡುವ ಬಗ್ಗೆ ಪ್ರಕಟಣೆ ಮಾಡಿತ್ತು.

ರಿಲಾಯನ್ಸ್ ಜಿಯೋ ಟ್ರಾಯ್‌ ಮತ್ತು ಇತರೆ ಟೆಲಿಕಾಂಗಳೊಂದಿಗೆ ಹಲವು ಸಭೆಗಳನ್ನು ತನ್ನ ನೆಟ್‌ವರ್ಕ್‌ ಅಭಿವೃದ್ದಿಗಾಗಿ ಕೈಗೊಂಡಿತ್ತು. ನಂತರ ತನ್ನ ವೆಲ್ಕಮ್‌ ಆಫರ್ ಅನ್ನು ಮಾರ್ಚ್‌ 2017 ರವರೆಗೆ ವಿಸ್ತರಣೆ ಮಾಡುವ ಬಗ್ಗೆ ಪ್ರಕಟಣೆ ಮಾಡಿತ್ತು . ಆದರ ಈ ಪ್ರಕಟಣೆಯನ್ನು ಟೆಲಿಕಾಂ ಆಪರೇಟರ್‌ ತಾನು ಕರೆ ಸ್ಥಗಿತ ಸಮಸ್ಯೆ ಬಗೆಹರಿಸಲು ವಿಫಲವಾದರೆ ಮಾತ್ರ ವೆಲ್ಕಮ್ ಆಫರ್‌ ಅನ್ನು ವಿಸ್ತರಿಸುವ ಬಗ್ಗೆ ಹೇಳಿತ್ತು.

ರಿಲಾಯನ್ಸ್ ಜಿಯೋ ಭಾರತದಲ್ಲಿ ಶೀಘ್ರದಲ್ಲೇ ಲಾಂಚ್ ಮಾಡುವ ಸೇವೆಗಳಿವು!

ರಿಲಾಯನ್ಸ್ ಜಿಯೋ(Reliance Jio) ತಾನು ಹೇಳಿದಂತೆ ನೆಟ್‌ವರ್ಕ್‌ ಗುಣಮಟ್ಟ, ಕರೆ ಸ್ಥಗಿತ ಸಮಸ್ಯೆ ಗುಣಪಡಿಸಿದಲ್ಲಿ, ವೆಲ್ಕಮ್‌ ಆಫರ್ ಅನ್ನು ಗ್ರಾಹಕರು ಕೇವಲ ಡಿಸೆಂಬರ್ ಅಂತ್ಯದವರೆಗೆ ಮಾತ್ರ ಪಡೆಯಲಿದ್ದರೆ. ಈ ಬಗ್ಗೆ ಹೆಚ್ಚಿನ ಮಾಹಿತಿನ್ನು ತಿಳಿಯಲು ಮುಂದೆ ಓದಿರಿ.

ಕರೆ ಸ್ಥಗಿತ ದರ ಶೇ.28 ಕಡಿಮೆ

ಕರೆ ಸ್ಥಗಿತ ದರ ಶೇ.28 ಕಡಿಮೆ

ನವೆಂಬರ್ ವರದಿ ಪ್ರಕಾರ ರಿಲಾಯನ್ಸ್ ಜಿಯೋ ವೆಬ್‌ಸೈಟ್‌ನಲ್ಲಿ, ಟೆಲಿಕಾಂ ಆಪರೇಟರ್ ಶೇ.28 ಕರೆ ಸ್ಥಗಿತ ಸಮಸ್ಯೆ ಕಡಿಮೆ ಮಾಡಲು ಸಾಮರ್ಥ್ಯ ಹೊಂದಿದೆ. ವರದಿ ಪ್ರಕಾರ, ಗರಿಷ್ಟ ಕರೆ ಸ್ಥಗಿತ ಸಮಸ್ಯೆ ಜಿಯೋ-ಏರ್‌ಟೆಲ್‌, ಜಿಯೋ-ವೊಡಾಫೋನ್ ಮತ್ತು ಐಡಿಯಾ ಸೆಲ್ಯೂಲಾರ್ ನಡುವೆ ಜರುಗುತ್ತಿದೆ ಎಂದು ಹೇಳಲಾಗಿದೆ.

ಎಕಾನಾಮಿಕ್ ಟೈಮ್ಸ್ ಪ್ರಕಾರ, ಜಿಯೋ ಅಧಿಕೃತವಾಗಿ ತನ್ನ ನೆಟ್‌ವರ್ಕ್‌ ಅನ್ನು ಅಭಿವೃದ್ದಿ ಪಡಿಸಿಕೊಂಡು, ಕರೆ ಸ್ಥಗಿತ ದರ ಕಡಿಮೆ ಮಾಡಿಕೊಳ್ಳುವುದಾಗಿ ಹೇಳಿದೆ.

ಕರೆ 30 ನಿಮಿಷಗಳವರೆಗೆ ಪರಿಮಿತಿ

ಕರೆ 30 ನಿಮಿಷಗಳವರೆಗೆ ಪರಿಮಿತಿ

ಜಿಯೋ ಇತ್ತೀಚೆಗೆ ವಾಯ್ಸ್ ಕರೆ ಅನ್ನು ಕೇವಲ 30 ನಿಮಿಷಗಳಿಗೆ ಪರಿಮಿತಿಗೊಳಿಸಿದೆ. ಆದರೆ ಬಳಕೆದಾರರು ಉಚಿತವಾಗಿ ಗಂಟೆಗಟ್ಟಲೆ ಮಾತನಾಡಬಹುದು. ಜಿಯೋ ನೆಟ್‌ವರ್ಕ್‌ ದಟ್ಟಣೆ ಕಡಿಮೆ ಮಾಡಲು ಈ ರೀತಿಯ ಒಂದು ಕ್ರಮವನ್ನು ಕೈಗೊಳ್ಳಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಪ್ರಕಟಗೊಂಡಿಲ್ಲ.

 ಜಿಯೋ ಹೆಚ್ಚುವರಿ ಪೋಲ್ಸ್‌ಗಳಿಗೆ ಕೇಳಿಕೊಂಡಿದೆ

ಜಿಯೋ ಹೆಚ್ಚುವರಿ ಪೋಲ್ಸ್‌ಗಳಿಗೆ ಕೇಳಿಕೊಂಡಿದೆ

ಜಿಯೋ ಕರೆ ಸ್ಥಗಿತ ದರವು, ತೀವ್ರ ರೀತಿಯಲ್ಲಿ ಏರ್‌ಟೆಲ್‌, ವೊಡಾಫೋನ್ ಮತ್ತು ಐಡಿಯಾ ಟೆಲಿಕಾಂಗಳು ಹೆಚ್ಚುವರಿ ಪೋಲ್‌ಗಳಾದಾಗ ಮಾತ್ರ ಕಡಿಮೆ ಆಗಲಿದೆ. ಏರ್‌ಟೆಲ್‌ 17,000 ಪೋಲ್‌ಗಳನ್ನು ನೀಡುತ್ತಿದ್ದು, ಜಿಯೋ ಇದರಿಂದ ಕರೆ ಸ್ಥಗಿತ ದರ ಕಡಿಮೆ ಮಾಡಿಕೊಳ್ಳಲಿದೆ. ಈ ಕ್ರಮ ಯಶಸ್ವಿ ಆದಲ್ಲಿ ವೆಲ್ಕಮ್ ಆಫರ್ ಡಿಸೆಂಬರ್‌ಗೆ ಕೊನೆಗೊಳ್ಳಲಿದೆ.

 ರಿಲಾಯನ್ಸ್ ಜಿಯೋ ಮತ್ತು ಸಿಓಎಐ ನಡುವೆ ಸಭೆ

ರಿಲಾಯನ್ಸ್ ಜಿಯೋ ಮತ್ತು ಸಿಓಎಐ ನಡುವೆ ಸಭೆ

ಇತ್ತೀಚೆಗೆ ರಿಲಾಯನ್ಸ್ ಜಿಯೋ ಮತ್ತು ಸೆಲ್ಯೂಲಾರ್ ಆಪರೇಟರ್ಸ್ ಸಂಘದ ನಡುವೆ ಸಂಸತ್ತು ಸಭೆ ಕರೆದಿತ್ತು. ಈ ಸಭೆಯ ಉದ್ದೇಶ ಕರೆ ಸ್ಥಗಿತ ದರ ಕಡಿಮೆಗೊಳಿಸುವುದಾಗಿತ್ತು. ಈ ಸಭೆಯಲ್ಲಿ ಟೆಲಿಕಾಂ ಆಪರೇಟರ್ ಕರೆ ಸ್ಥಗಿತಕ್ಕೆ ಕಾರಣಗಳೇನು ಮತ್ತು ಇತರೆ ನೆಟ್‌ವರ್ಕ್‌ಗಳ ಸ್ಪರ್ಧೆ ಬಗ್ಗೆ ಅಂದಾಜು ಕುರಿತು ಚರ್ಚಿಸಲಾಯಿತು.

45,000 ಮೊಬೈಲ್ ಟವರ್‌ಗಳ ನಿರ್ಮಾಣ

45,000 ಮೊಬೈಲ್ ಟವರ್‌ಗಳ ನಿರ್ಮಾಣ

ರಿಲಾಯನ್ಸ್ ಜಿಯೋ ಮುಂಬರುವ ತಿಂಗಳುಗಳಲ್ಲಿ ದೇಶದಾದ್ಯಂತ ಒಟ್ಟಾರೆ 45,000 ಮೊಬೈಲ್‌ ಟವರ್‌ಗಳನ್ನು ನಿರ್ಮಿಸುವುದಾಗಿ ಮಾಹಿತಿ ಪ್ರಕಟಗೊಳಿಸಿದೆ. ಅಲ್ಲದೇ ಈ ಟವರ್‌ಗಳ ಮೂಲಕ 4G ನೆಟ್‌ವರ್ಕ್ ಅಭಿವೃದ್ದಿ ಉದ್ದೇಶಹೊಂದಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Attention! Reliance Jio May Not Extend its Welcome Offer Until March 2017. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X