ಜಿಯೋ ಯಕ್ಷಪ್ರಶ್ನೆಗೆ ಉತ್ತರ!..ಇದು ವೆಲ್‌ಕಮ್ ಆಫರ್ ಅಲ್ಲ ವೆಲ್‌ಕಮ್ ಆಫರ್ 2!!
ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್ ಅನ್ನು 2017 ರ ಮಾರ್ಚ್ ವರೆಗೂ ಮುಂದುವರಿಸುವುದಿಲ್ಲ! ಆದರೆ, ವೆಲ್‌ಕಮ್ 2 ಆಫರ್ ಪರಿಚಯಿಸುತ್ತಿದೆ!!
ರಿಲಾಯನ್ಸ್ ಜಿಯೋ ತನ್ನ ವೆಲ್‌ಕಮ್ ಆಫರ್ ಸಮಯವನ್ನು 2017 ರ ಮಾರ್ಚ್‌ವರೆಗೂ ಹೆಚ್ಚಿಸುತ್ತದೆಯೇ ಎಂಬ ಯಕ್ಷಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ! ಹೌದು,ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್ ಅನ್ನು 2017 ರ ಮಾರ್ಚ್ ವರೆಗೂ ಮುಂದುವರಿಸುವುದಿಲ್ಲ! ಆದರೆ, ವೆಲ್‌ಕಮ್ 2 ಆಫರ್ ಪರಿಚಯಿಸುತ್ತಿದೆ.!!

2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್ ಆಫರ್ ನೀಡಲು ರಹಸ್ಯ ಕಾರಣಗಳೇನು?
ನಂಬಿಕಾರ್ಹ ಮೂಲಗಳಿಂದ ಹೊರಬಿದ್ದಿರುವ ಸುದ್ದಿ ಪ್ರಕಾರ ಈ ಹಿಂದೆ ನೀಡಿದ್ದ ಜಿಯೋ ವೆಲ್ಕಮ್ ಆಫರ್ ಮುಂದುವರೆಸಲು ಜಿಯೋಗೆ ಅಡೆತಡೆಗಳು ಇದ್ದು, ಅದಕ್ಕಾಗಿ ವೆಲ್‌ಕಮ್ ಆಫರ್ 2ಎಂದು ಹೊಸ ಆಫರ್ ಹೊರತರುತ್ತಿದೆ ಎನ್ನಲಾಗಿದೆ. ಹಾಗಾದರೆ ವೆಲ್‌ಕಮ್ ಆಫರ್ 2 ಎಂದರೇನು? ಮೊದಲಿದ್ದ ವೆಲ್‌ಕಮ್ ಆಫರ್‌ಗೂ ಇದಕ್ಕೂ ಏನು ವ್ಯತ್ಯಾಸ ಎಂಬುದನ್ನು ಕೆಳಗಿನ ಸ್ಲೈಡರ್ಸ್ ಮೂಲಕ ತಿಳಿಯಿರಿ.

ವೆಲ್‌ಕಮ್ ಆಫರ್ 2 ಯಾಕೆ?
ಜಿಯೋ ವೆಲ್ಕಮ್ ಆಫರ್ ಹೆಚ್ಚಿಸಲು ಈ ಮೊದಲೇ ನಿರ್ಧರಿಸಿತ್ತು!. ಆದರೆ, ಇದಕ್ಕಿದ್ದ ಸಮಸ್ಯೆ ಎಂದರೆ ಭಾರತೀಯ ಟೆಲಿಕಾಂ ನಿಯಮಗಳ ಪ್ರಕಾರ ಟೆಲಿಕಾಂ ಕಂಪೆನಿಗಳು 90 ದಿವಸಗಳಿಗಿಂತ ಹೆಚ್ಚು ಯಾವುದೇ ಆಫರ್ ನೀಡುವಂತಿಲ್ಲ. ಹಾಹಾಗಿ ಈ ವೆಲ್‌ಕಮ್ ಆಫರ್ 2 ಹೊರಬಂದಿದೆ.

ಮತ್ತೆ 90 ದಿವಸಗಳು ವೆಲ್‌ಕಮ್ ಆಫರ್ 2 !!
ಜಿಯೋ ನೀಡಲಿರುವ ವೆಲ್‌ಕಮ್ ಆಫರ್ 2 ಮತ್ತೆ 90 ದಿವಸಗಳ ವ್ಯಾಲಿಡಿಟಿ ಹೊಂದಿರುತ್ತದೆ. ಅಂದರೆ ಮಾರ್ಚ್‌ವರೆಗೂ ಎಲ್ಲಾ ಫ್ರೀ!!
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋಗೆ ಮತ್ತೆ ವೆಲ್‌ಕಮ್?
100 ಮಿಲಿಯನ್ ಬಳಕೆದಾರರನ್ನು ಹೊಂದಿರುವುದು ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಗುರಿ ಅದಕ್ಕಾಗಿ ಈ ಜಿಯೋ ವೆಲ್‌ಕಮ್ 2

ಜಿಯೋ ವೆಲ್‌ಕಮ್ 2 ಹೊಸ ಗ್ರಾಹಕರಿಗೆ ಮಾತ್ರ!
ಜಿಯೋ ವೆಲ್‌ಕಮ್ 2 ಇಂದ ಹಳೆ ಜಿಯೋ ಗ್ರಾಹಕರು ಹೆಚ್ಚು ಖುಷಿಪಡಬೇಕಿಲ್ಲ. ಯಾಕೆಂದರೆ ಜಿಯೋ ವೆಲ್‌ಕಮ್ 2 ಹೊಸ ಗ್ರಾಹಕರಿಗೆ ಮಾತ್ರ ಲಭ್ಯ. ಈಗಾಗಲೇ ರಿಜಿಸ್ಟಾರ್ ಆದ ID ಗಳಿಂದ ಜಿಯೋ ಖರೀದಿಸಲು ಸಾಧ್ಯವಿಲ್ಲಾ.

ಹಳೆ ವೆಲ್‌ಕಮ್ ಈ ವರ್ಷ ಲಾಸ್ಟ್!
ನೂತನ ವರ್ಷಕ್ಕೆ ನೂತನ ಗ್ರಾಹಕರಿಗೆ ಮಾತ್ರ ಈ ವೆಲ್‌ಕಮ್!. ಹಾಗಾಗಿ ಹಳೆ ವೆಲ್‌ಕಮ್ ಈ ವರ್ಷ ಮುಗಿಯುತ್ತದೆ.


Click it and Unblock the Notifications








