Home
ಸುದ್ದಿಜಾಲ

ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ ಸಂಸ್ಥೆಯು ಇದೀಗ ಡೇಟಾ ಬಳಕೆಯಲ್ಲಿ ಹೊಸ ಜಾಗತಿಕ ದಾಖಲೆ ನಿರ್ಮಾಣ ಮಾಡಿದೆ. ರಿಲಯನ್ಸ್ ಜಿಯೋ ಡೇಟಾ ಟ್ರಾಫಿಕ್‌ನಲ್ಲಿ (ಟ್ರಾಫಿಕ್‌) ವಿಶ್ವದ ನಂಬರ್ ಒನ್ ಸಂಸ್ಥೆಯಾಗಿ ಕಾಣಿಸಿಕೊಂಡಿದೆ.

ಕಳೆದ ತ್ರೈಮಾಸಿಕದಲ್ಲಿ ಒಟ್ಟು ಡೇಟಾ ದಟ್ಟಣೆಯು 40.9 ಎಕ್ಸಾಬೈಟ್‌ಗಳಲ್ಲಿ ದಾಖಲಾಗಿದೆ. ಅದೇ ಸಮಯಕ್ಕೆ ಡೇಟಾ ಟ್ರಾಫಿಕ್‌ನಲ್ಲಿ ಇದುವರೆಗೆ ನಂಬರ್ ಒನ್ ಸಂಸ್ಥೆ ಆಗಿದ್ದ ಚೀನಾ ಮೊಬೈಲ್ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಅದರ ನೆಟ್‌ವರ್ಕ್‌ನಲ್ಲಿನ ಡೇಟಾ ಬಳಕೆ ತ್ರೈಮಾಸಿಕದಲ್ಲಿ 40 ಎಕ್ಸಾಬೈಟ್‌ಗಳಿಗಿಂತ ಕಡಿಮೆ ಇತ್ತು.

ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!

ಚೀನಾದ ಇನ್ನೊಂದು ಸಂಸ್ಥೆ ಆದ ಚೀನಾ ಟೆಲಿಕಾಂ ಡೇಟಾ ಬಳಕೆಯಲ್ಲಿ ತೃತೀಯ ಸ್ಥಾನದಲ್ಲಿ ಇದ್ದರೆ, ಭಾರತದ ಭಾರ್ತಿ ಏರ್‌ಟೆಲ್ ಟೆಲಿಕಾಂ ನಾಲ್ಕನೇ ಸ್ಥಾನದಲ್ಲಿ ಇದೆ. ವಿಶ್ವದಾದ್ಯಂತ ಟೆಲಿಕಾಂ ಕಂಪನಿಗಳ ಡೇಟಾ ದಟ್ಟಣೆ ಮತ್ತು ಗ್ರಾಹಕರ ನೆಲೆಯನ್ನು ಮೇಲ್ವಿಚಾರಣೆ ಮಾಡುವ ಟಿಎಫಿಶಿಯೆಂಟ್ ತನ್ನ ವರದಿಯಲ್ಲಿ ಈ ಮಾಹಿತಿ ಅನ್ನು ನೀಡಿದೆ.

5G ಸೇವೆಗಳ ಪ್ರಾರಂಭದ ನಂತರ, ರಿಲಯನ್ಸ್ ಜಿಯೊದ ಡೇಟಾ ಬಳಕೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 35.2 ರಷ್ಟು ಜಿಗಿತವನ್ನು ಕಂಡಿದೆ. ಈ ಹೆಚ್ಚಳಕ್ಕೆ ಮುಖ್ಯ ಕಾರಣವೆಂದರೆ ಜಿಯೋದ ಟ್ರೂ 5G ನೆಟ್‌ವರ್ಕ್ ಮತ್ತು ಜಿಯೋ ಏರ್ ಫೈಬರ್‌ನ ವಿಸ್ತರಣೆ.

ರಿಲಯನ್ಸ್ ಜಿಯೋ ತ್ರೈಮಾಸಿಕ ಫಲಿತಾಂಶಗಳ ಪ್ರಕಾರ, 10.8 ಕೋಟಿ ಗ್ರಾಹಕರನ್ನು ಜಿಯೋ ನೆಟ್‌ವರ್ಕ್ ಜಿಯೋ ಟ್ರೂ 5G ನೆಟ್‌ವರ್ಕ್‌ಗೆ ಸೇರಿಸಲಾಗಿದೆ ಮತ್ತು ಜಿಯೋದ ಒಟ್ಟು ಡೇಟಾ ದಟ್ಟಣೆ ಸುಮಾರು ಶೇ 28 ರಷ್ಟು ಈಗ 5G ನೆಟ್‌ವರ್ಕ್‌ನಿಂದ ಬರುತ್ತಿದೆ. ಮತ್ತೊಂದೆಡೆ, ಜಿಯೋ ಏರ್ ಫೈಬರ್ ದೇಶಾದ್ಯಂತ 5,900 ನಗರಗಳಲ್ಲಿ ತನ್ನ ಸೇವೆಗಳ ಅನ್ನು ಶುರು ಮಾಡಿದೆ.

ಜಿಯೋ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ತ್ರೈಮಾಸಿಕ ಫಲಿತಾಂಶಗಳಲ್ಲಿ ನೀಡಿದ ಮಾಹಿತಿಯ ಪ್ರಕಾರ, ಜಿಯೋ ನೆಟ್‌ವರ್ಕ್‌ನಲ್ಲಿ ಪ್ರತಿ ಗ್ರಾಹಕನ ಮಾಸಿಕ ಡೇಟಾ ಬಳಕೆ 28.7 ಜಿಬಿಗೆ (ಗಿಗಾಬೈಟ್) ಹೆಚ್ಚಾಗಿದ್ದು, ಇದು ಮೂರು ವರ್ಷಗಳ ಹಿಂದೆ ಕೇವಲ 13.3 ಜಿಬಿ ಆಗಿತ್ತು. 2018ರಲ್ಲಿ, ಭಾರತದಲ್ಲಿ ಒಂದು ತ್ರೈಮಾಸಿಕದಲ್ಲಿ ಒಟ್ಟು ಮೊಬೈಲ್ ಡೇಟಾ ಟ್ರಾಫಿಕ್ ಕೇವಲ 4.5 ಎಕ್ಸಾಬೈಟ್‌ಗಳು ಇತ್ತು ಎಂಬುದನ್ನು ಈ ಸಮಯದಲ್ಲಿ ನೆನಪು ಮಾಡಿಕೊಳ್ಳಬೇಕಿದೆ.

ಜಿಯೋ ಟೆಲಿಕಾಂನ ಕೆಲವು ಜನಪ್ರಿಯ ರೀಚಾರ್ಜ್‌ ಯೋಜನೆಗಳು
ಜಿಯೋ ಟೆಲಿಕಾಂನ 2999ರೂ. ಪ್ರೀಪೇಯ್ಡ್‌ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದೆ. ಆದ್ರೆ, ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಸಿಗಲಿದ್ದು, ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 912.5 GB ಡೇಟಾ ಲಭ್ಯ ಆಗಲಿದೆ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಇದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್‌ ಲಭ್ಯ.

ಜಿಯೋ ಟೆಲಿಕಾಂನ 1198ರೂ. ಪ್ರೀಪೇಯ್ಡ್‌ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದೆ. ಆದ್ರೆ, ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಸಿಗಲಿದ್ದು, ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 168 GB ಡೇಟಾ ಲಭ್ಯ ಆಗಲಿದೆ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಇದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಜೊತೆಗೆ ಜಿಯೋ ಆಪ್ಸ್‌ ಲಭ್ಯ.

Best Mobiles in India

English summary
Jio emerges world's largest mobile operator in data traffic surpassing China mobile. check other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+