Subscribe to Gizbot

ವೆಲ್ಕಮ್ ಆಫರ್‌ನಂತೆ ಜಿಯೋದಿಂದ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆ: ತಿಳಿಯಲೇಬೇಕಾದ ಅಂಶಗಳು

Written By:

ಯಾವುದೇ ಟೆಲಿಕಾಂಗಳು ಯಾವುದೇ ರೀತಿಯ ಆಫರ್‌ ನೀಡಿದರೂ ಈಗ ರಿಲಾಯನ್ಸ್ ಜಿಯೋ ಫೋರ್ಸ್‌ ಅನ್ನು ಸ್ಟಾಪ್‌ ಮಾಡಲು ಖಂಡಿತ ಆಗುವುದಿಲ್ಲ. ಆದ್ದರಿಂದಲೇ ಎಲ್ಲೆಲ್ಲೂ ಜಿಯೋ ಮಯವಾಗಿದೆ.

ವಿಶೇಷ ಅಂದ್ರೆ ಜಿಯೋ ದೇಶದಲ್ಲಿ ಶೀಘ್ರದಲ್ಲಿಯೇ ಬ್ರಾಡ್‌ಬ್ಯಾಂಡ್ ಸೇವೆಯನ್ನು 'ಜಿಯೋ ಗಿಗಾಫೈಬರ್' ಹೆಸರಿನಲ್ಲಿ ಆರಂಭಿಸುತ್ತಿದೆ. ಗಾಳಿಸುದ್ದಿ ಪ್ರಕಾರ ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಮೊದಲು ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷೆ ನಡೆಸಲಿದೆ ಎಂಬುದನ್ನು ತಿಳಿಯಲಾಗಿದೆ. ಎರಡು ತಿಂಗಳ ಹಿಂದೆಯಷ್ಟೆ ಜಿಯೋ ಬ್ರಾಡ್‌ಬ್ಯಾಂಡ್ ಪರೀಕ್ಷೆ ಚೆನ್ನೈನಲ್ಲಿ ನಡೆಯುತ್ತಿದೆ ಎಂದು ಫೋನ್‌ರೆಡಾರ್ ವರದಿ ಮಾಡಿತ್ತು. ಏನೇ ಆದರೂ ಜಿಯೋ(Jio) ಬ್ರಾಡ್‌ಬ್ಯಾಂಡ್ ಸೇವೆಯನ್ನು ಆರಂಭಿಸುವುದಂತೂ ನಿಶ್ಚಿತವಾಗಿದೆ. ಜಿಯೋದ 'ಜಿಯೋ ಗಿಗಾಫೈಬರ್' ಬ್ರಾಡ್‌ಬ್ಯಾಂಡ್ ಅಧಿಕೃತವಾಗಿ ಲಾಂಚ್ ಆದ ನಂತರ ದೊರೆಯುವ ಆಫರ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ಲಾನ್: 500 ರೂಗೆ 600GB ಡಾಟಾ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.500 ರಿಂದ ಪ್ಯಾಕ್‌ಗಳು ಆರಂಭ

ರೂ.500 ರಿಂದ ಪ್ಯಾಕ್‌ಗಳು ಆರಂಭ

ಲೀಕ್‌ ಆದ ಮಾಹಿತಿ ಪ್ರಕಾರ ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಪ್ಯಾಕ್‌ ದರ ರೂ.500 ಮತ್ತು ಅತಿ ಹೆಚ್ಚಿನ ಪ್ಯಾಕ್‌ ಬೆಲೆ 5.500 ಎಂದು ತಿಳಿಯಲಾಗಿದೆ. 500 ರೂ ಬ್ರಾಡ್‌ಬ್ಯಾಂಡ್ ಪ್ಯಾಕ್ 600GB ಡಾಟಾ ಆಫರ್ ನೀಡಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ರಿಲಾಯನ್ಸ್ ಜಿಯೋ ಡೇಪ್ಯಾಕ್‌ಗಳು

ರಿಲಾಯನ್ಸ್ ಜಿಯೋ ಡೇಪ್ಯಾಕ್‌ಗಳು

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುವ ಪ್ರಯತ್ನವನ್ನು ಜಿಯೋ ಕೈಗೊಡಿದೆ. ರಿಲಾಯನ್ಸ್ ಜಿಯೋ ದೈನಂದಿನ ಪ್ಯಾಕ್‌ಗಳನ್ನು ಆಫರ್‌ ಮಾಡುತ್ತಿದೆ. ದಿನದ ಪ್ಯಾಕ್ ದರ ರೂ.400 ಇದ್ದು, ಬಳಕೆದಾರರು ಈ ಪ್ಯಾಕ್‌ನೊಂದಿಗೆ ಅನ್‌ಲಿಮಿಟೆಡ್ ಡಾಟಾ ಬಳಸಬಹುದು.

ರೂ.5.500 ಪ್ಯಾಕ್ 600Mbps ವೇಗ ಆಫರ್ ಮಾಡಲಿದೆ

ರೂ.5.500 ಪ್ಯಾಕ್ 600Mbps ವೇಗ ಆಫರ್ ಮಾಡಲಿದೆ

ಎಲ್ಲಾ ಪ್ಯಾಕ್‌ಗಳಿಗೆ ಹೋಲಿಸಿದಲ್ಲಿ ಗರಿಷ್ಟ ದರದ ಪ್ಯಾಕ್‌ ಎಂದರೆ 5.500 ಆಗಿದ್ದು, ಈ ಪ್ಯಾಕ್‌ 600Mbps ವೇಗದಲ್ಲಿ 300GB ಡಾಟಾವನ್ನು ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ನೀಡಲಿದೆ. ಲೀಕ್ ಆದ ವರದಿಯಲ್ಲಿ ಪರಿಮಿತಿ ಮೀರಿದ ನಂತರ ಡಾಟಾ ವೇಗ ಹೇಗಿರುತ್ತದೆ ಎಂಬ ಮಾಹಿತಿ ನೀಡಿಲ್ಲ.

3 ತಿಂಗಳು ಉಚಿತ

3 ತಿಂಗಳು ಉಚಿತ

ಈಗಾಗಲೇ ದೊರೆತ ಮಾಹಿತಿ ಪ್ರಕಾರ ಚೆನ್ನೈನಲ್ಲಿ ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಸೇವೆ ಪರೀಕ್ಷೆ ನಡೆಸುತ್ತಿದೆ. 'ಜಿಯೋ ಗಿಗಾಫೈಬರ್' ವೆಲ್ಕಮ್ ಆಫರ್‌ ಅನ್ನು ಉಚಿತವಾಗಿ 3 ತಿಂಗಳು ನೀಡಲಿದೆ.

ಕೇವಲ ಮುಂಬೈ, ಚೆನ್ನೈ, ದೆಹಲಿಯಲ್ಲಿ ಮಾತ್ರ

ಕೇವಲ ಮುಂಬೈ, ಚೆನ್ನೈ, ದೆಹಲಿಯಲ್ಲಿ ಮಾತ್ರ

ರಿಲಾಯನ್ಸ್ ಜಿಯೋ ತನ್ನ ಬ್ರಾಡ್‌ಬ್ಯಾಂಡ್ ಸೇವೆ 'ಜಿಯೋ ಗಿಗಾಫೈಬರ್' ಅನ್ನು ಮುಂಬೈ, ಚೆನ್ನೈ, ದೆಹಲಿಯಲ್ಲಿ ಮೊದಲಿಗೆ ಆರಂಭಿಸುತ್ತಿದೆ. ನಂತರದಲ್ಲಿ ಇತರೆ ಸಿಟಿಗಳಲ್ಲಿ ಸೇವೆ ವಿಸ್ತರಿಸಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio to Offer GigaFiber Broadband Service as Welcome Offer: Everything You Need to Know. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot