ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ಲಾನ್: 500 ರೂಗೆ 600GB ಡಾಟಾ!

Written By:

ರಿಲಾಯನ್ಸ್ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಈಗ ಇತರೆ ಟೆಲಿಕಾಂಗಳಿಗಿಂತ ಡಾಮಿನೇಟ್ ಎಂಬುದು ಎಲ್ಲರಿಗೂ ತಿಳಿದಿದೆ. ಜಿಯೋ ಈ ಹಿಂದೆ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಬಹಿರಂಗಗೊಳಿಸಿತ್ತು. ಪ್ರಸ್ತುತದಲ್ಲಿ ರಿಲಾಯನ್ಸ್ ಜಿಯೋ, ಭಾರತದ ಇತರೆ ಟೆಲಿಕಾಂಗಳಿಗಿಂತ ಅತೀ ಕಡಿಮೆ ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ಲಾನ್‌ ಅನ್ನು ಶೀಘ್ರದಲ್ಲಿ ಪ್ರಕಟಗೊಳಿಸಲಿದೆ.

ರಿಲಾಯನ್ಸ್ ಜಿಯೋ(Reliance Jio) ಈಗಾಗಲೇ 90 ದಿನಗಳ ವೆಲ್ಕಮ್‌ ಆಫರ್‌ನಲ್ಲಿ ಉಚಿತ ಅತಿ ವೇಗದ ಇಂಟರ್ನೆಟ್‌ ಸೇವೆಯನ್ನು ಗ್ರಾಹಕರಿಗೆ ನೀಡಿದೆ. ಈ ಆಫರ್‌ನಲ್ಲಿ ಉಚಿತ ಅನ್‌ಲಿಮಿಟೆಡ್ 4G ಡಾಟಾ, ವಾಯ್ಸ್ ಕರೆ ಮತ್ತು ಉಚಿತ ಮೇಸೇಜ್‌ಗಳ ಸೇವೆಯನ್ನು ನೀಡಿದೆ. ಹಾಗೆಯೇ ರಿಲಾಯನ್ಸ್ ಜಿಯೋ ತನ್ನ ಪ್ರತಿಸ್ಪರ್ಧಿಗಳಿಗೆ ಉತ್ತಮ ಸ್ಪರ್ಧೆ ನೀಡಲು, ಈಗ ಹೊಸ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ಲಾನ್‌ಗಳನ್ನು, ಅತೀ ಕಡಿಮೆ ಬೆಲೆಯಲ್ಲಿ ಲಾಂಚ್‌ ಮಾಡುವ ನಿರೀಕ್ಷೆಯಲ್ಲಿದೆ.

ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್ ಪೋರ್ಟ್‌ ಮಾಡಲೇ? ಬೇಡವೇ? ಈ ಲೇಖನ ಓದಿ!

ರಿಲಾಯನ್ಸ್ ಜಿಯೋ ಬಿಡುಗಡೆ ಮಾಡಲಿರುವ ಬ್ರಾಡ್‌ಬ್ಯಾಂಡ್ ಕನೆಕ್ಷನ್‌ ಮೂರು ವಿಧಗಳಲ್ಲಿ ಲಭ್ಯವಾಗಲಿದ್ದು, ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಂ ವಿಧಗಳಲ್ಲಿ ಪ್ಲಾನ್‌ ಲಭ್ಯ ಎಂದು ಮಾಹಿತಿ ವರದಿಯಾಗಿದೆ. ಅಂದಹಾಗೆ ಜಿಯೋದ ಹೊಸ ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ .500 ರೂಗೆ 600GB ಡಾಟಾ ಕ್ರೆಡಿಟ್ ಆಗಲಿದ್ದು, 30 ದಿನಗಳ ವ್ಯಾಲಿಡಿಟಿ ಸಿಗಲಿದೆ. ಈ ಬಗ್ಗೆ ಇನ್ನಷ್ಟು ವಿಶೇಷ ಆಫರ್‌ಗಳನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
500 ರೂಗೆ 600GB ಡಾಟಾ

500 ರೂಗೆ 600GB ಡಾಟಾ

ರಿಲಾಯನ್ಸ್ ಜಿಯೋ ಬಿಡುಗಡೆ ಮಾಡಲಿರುವ ಬ್ರಾಡ್‌ಬ್ಯಾಂಡ್ ಕನೆಕ್ಷನ್‌ 3 ವಿಧಗಳಲ್ಲಿ ಲಭ್ಯವಾಗಲಿದ್ದು, ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಂ ವಿಧಗಳಲ್ಲಿ ಪ್ಲಾನ್‌ ಲಭ್ಯ. ಆದರೆ ಇಂಟರ್ನೆಟ್ ಸಂಪರ್ಕ ವೇಗ ಮತ್ತು ಡಾಟಾ ಲಿಮಿಟ್ ಬೆಲೆ ಆಧಾರಿತವಾಗಿದೆ. ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್‌ನ ವಿಶೇಷ ಆಫರ್‌ನಲ್ಲಿ 500 ರೂಗೆ 600GB ಡಾಟಾ ಕ್ರೆಡಿಟ್ ಆಗುತ್ತದೆ. ಈ ಡಾಟಾ 30 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಮೇಲಿನ ಚಾರ್ಟ್‌ ಗಮನಿಸಿ.

 ರಿಲಾಯನ್ಸ್ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್

ರಿಲಾಯನ್ಸ್ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್

ಚಾರ್ಟ್‌ನಲ್ಲಿ ತೋರಿಸಿದಂತೆ ಗಮನಿಸಬೇಕಾದ ಅಂಶವೆಂದರೆ, ರಿಲಾಯನ್ಸ್ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ 800 ರೂಗೆ ಅನ್‌ಲಿಮಿಟೆಡ್ ಡಾಟಾ ಆಕ್ಸೆಸ್‌ ಅನ್ನು 30 ದಿನಗಳಲ್ಲಿ ನೀಡುತ್ತದೆ. ಈ ಇಂಟರ್ನೆಟ್ ವೇಗ 8-10Mbps ಇರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋ ಡಾಟಾ ವೇಗ ಆಧಾರಿತ ಟ್ಯಾರಿಫ್‌ ಪ್ಲಾನ್

ಜಿಯೋ ಡಾಟಾ ವೇಗ ಆಧಾರಿತ ಟ್ಯಾರಿಫ್‌ ಪ್ಲಾನ್

ಮೊದಲ ಚಾರ್ಟ್‌ನಲ್ಲಿ ವಿಶೇಷ ಆಫರ್ ಅನ್ನು ತಿಳಿದಿರಿ. ಆದರೆ ಈ ಮೇಲಿನ ಚಾರ್ಟ್‌ನಲ್ಲಿ ಬ್ರಾಡ್‌ಬ್ಯಾಂಡ್ ಡಾಟಾ ವೇಗ ಆಧಾರಿತ ಟ್ಯಾರಿಫ್ ಯೋಜನೆಗಳನ್ನು ತಿಳಿಯಬಹುದು. ಈ ಚಾರ್ಟ್‌ನಲ್ಲಿ ತಿಳಿಸಿರುವಂತೆ ಬಳಕೆದಾರರು 50Mbps ವೇಗದಲ್ಲಿ 1500 ರೂಗೆ 2000GB ಡಾಟಾವನ್ನು ಪಡೆಯಬಹುದು. ಆದರೆ ಈ ಡಾಟಾ ಪ್ಲಾನ್‌ಗಳು ಜಿಯೋದಿಂದ ಮುಂದಿನ ದಿನಗಳಲ್ಲಿ ಸಿಗಲಿವೆ ಎಂದು ಹೇಳಲಾಗಿದೆ ಬಹಶಃ 2017 ರ ಆರಂಭಿಕ ದಿನಗಳ ನಂತರ ಈ ಪ್ಲಾನ್‌ಗಳು ಗ್ರಾಹಕರಿಗೆ ಲಭ್ಯವಾಗಬಹುದು.

ಬ್ರಾಡ್‌ಬ್ಯಾಂಡ್ ಸರ್ವೀಸ್ ಪ್ರೊವೈಡರ್‌ಗಳಿಗೆ ಕಠಿಣ ಸಂದರ್ಭ

ಬ್ರಾಡ್‌ಬ್ಯಾಂಡ್ ಸರ್ವೀಸ್ ಪ್ರೊವೈಡರ್‌ಗಳಿಗೆ ಕಠಿಣ ಸಂದರ್ಭ

ರಿಲಾಯನ್ಸ್ ಜಿಯೋ ಆಗಮನ ದಿನದಿಂದಲೇ ಇತರೆ ಟೆಲಿಕಾಂಗಳು ನಿದ್ರೆ ರಹಿತ ದಿನಗಳನ್ನು ಕಳೆಯುತ್ತಿವೆ. ಹೊಸ ಹೊಸ ಪ್ಲಾನ್‌ಗಳ ಹುಡುಕಾಟದಲ್ಲಿ ತೊಡಗಿವೆ. ಜಿಯೋ ನೀಡಲು ಯೋಜಿಸಿರುವ ಈ ಅತೀ ಕಡಿಮೆ ಬೆಲೆಯ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳಿಂದ, 'ಏರ್‌ಟೆಲ್‌, ಡಿಜಿಟಲ್ ಟಿವಿ, ಡಿಶ್ ಟಿವಿ, ಟಾಟಾ ಸ್ಕೈ, ವೀಡಿಯೊಕಾನ್ ಡಿ2ಎಚ್ ಮತ್ತು ಇತರೆ ಬ್ರಾಡ್‌ಬ್ಯಾಂಡ್ ಸರ್ವೀಸ್ ಪ್ರೊವೈಡರ್‌ಗಳು ಇತರೆ ಪ್ಲಾನ್ ಮಾಡುವುದರಿಂದ ರೆಸ್ಟ್‌ ಮಾಡಬಹುದು.

ಭಾರತದಲ್ಲಿ ಜಿಯೋದಿಂದ ಅತೀ ಕಡಿಮೆ ಬೆಲೆಗೆ ಡಿಟಿಎಚ್ ಸೇವೆ

ಭಾರತದಲ್ಲಿ ಜಿಯೋದಿಂದ ಅತೀ ಕಡಿಮೆ ಬೆಲೆಗೆ ಡಿಟಿಎಚ್ ಸೇವೆ

ಮಾರುಕಟ್ಟೆಯಲ್ಲಿ ಹಲವು ಡಿಟಿಎಚ್ ಸರ್ವೀಸ್ ಪ್ರೊವೈಡರ್‌ಗಳು ಇದ್ದಾರೆ. ಆದರೆ ನಿರೀಕ್ಷಿಸಿದಂತೆ ರಿಲಾಯನ್ಸ್ ಜಿಯೋ ಅತೀ ಕಡಿಮೆ ಬೆಲೆಗೆ ಬ್ರಾಡ್‌ಬ್ಯಾಂಡ್ ಪ್ಲಾನ್‌ ನೀಡಲಿದೆ.

ನಿರೀಕ್ಷಿಸಿದ ಬೆಲೆಗೆ ಡಿಟಿಎಚ್ ಪ್ಲಾನ್

ನಿರೀಕ್ಷಿಸಿದ ಬೆಲೆಗೆ ಡಿಟಿಎಚ್ ಪ್ಲಾನ್

ರಿಲಾಯನ್ಸ್ ಜಿಯೋ ಡಿಟಿಎಚ್ ಪ್ಲಾನ್ ರೂ.185 ರಿಂದ ಆರಂಭವಾಗಲಿದ್ದು, ಇತರೆ ಟೆಲಿಕಾಂಗಳು ಜಿಯೋ ನೀಡುವ ಸೇವೆಗೆ ರೂ.275-300 ಚಾರ್ಜ್‌ ಮಾಡುತ್ತಾರೆ. ಆದರೆ ರಿಲಾಯನ್ಸ್ ಜಿಯೋ ಅಧಿಕೃತ ಮಾಹಿತಿ ಪ್ರಕಟಗೊಳಿಸಿಲ್ಲ.

ರಿಲಾಯನ್ಸ್ ಜಿಯೋ V/S ಏರ್‌ಟೆಲ್ ಡಿಟಿಎಚ್‌

ರಿಲಾಯನ್ಸ್ ಜಿಯೋ V/S ಏರ್‌ಟೆಲ್ ಡಿಟಿಎಚ್‌

ಏರ್‌ಟೆಲ್‌ ಇತ್ತೀಚೆಗೆ ತನ್ನ ಪ್ರೀಪೇಡ್ ಬಳಕೆದಾರರಿಗೆ ಆರಂಭಿಕ ಹಂತದ ಪ್ಲಾನ್‌ಗಳಲ್ಲಿ ಆಫರ್ ನೀಡಿದೆ. ಭಾರತಿ ಏರ್‌ಟೆಲ್ ಇತ್ತೀಚೆಗೆ ವಿ-ಫೈಬರ್ ಬ್ರಾಡ್‌ಬ್ಯಾಂಡ್‌ ಅನ್ನು 100Mbps ವೇಗದಲ್ಲಿ ನೀಡಿದೆ. ಇದರೊಂದಿಗೆ ಏರ್‌ಟೆಲ್‌ ಡಿಟಿಎಚ್ ಬಳಕೆದಾರರು ಹೆಚ್ಚುವರಿ ಆಗಿ 5GB ಡಾಟಾವನ್ನು ಪಡೆಯಬಹುದು. ಆದರೆ ರಿಲಾಯನ್ಸ್ ಜಿಯೋ ಇದಕ್ಕಿಂತ ಹೆಚ್ಚಿನ ಮಟ್ಟದ ಆಫರ್‌ ಅನ್ನು ನೀಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio’s Broadband Internet Plans: 600GB Data for Rs.500. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot