Home
ಸುದ್ದಿಜಾಲ

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಜಿಯೋದಿಂದ ಭರ್ಜರಿ ಕೊಡುಗೆ!

ದೇಶದ ಮುಂಚೂಣಿಯ ಟೆಲಿಕಾಂ ಎಂದು ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಗ್ರಾಹಕರಿಗೆ ಆಕರ್ಷಕ ಆಫರ್‌ ನೀಡುತ್ತಾ ಸಾಗಿದೆ. ಇದೀಗ ಆಗಷ್ಟ್‌ 15 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಯೋಫೈ 4G ವೈರ್‌ಲೆಸ್ ಹಾಟ್‌ಸ್ಪಾಟ್ ಖರೀದಿಯೊಂದಿಗೆ ಐದು ತಿಂಗಳ ಉಚಿತ ಡೇಟಾ ಮತ್ತು ಜಿಯೋ-ಟು-ಜಿಯೋ ಕರೆಗಳನ್ನು ನೀಡುತ್ತಿದೆ.

ದಿನಾಚರಣೆ

ಹೌದು, ಜಿಯೋ ಸಂಸ್ಥೆಯು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಗ್ರಾಹಕರಿಗೆ ಈ ವಿಶೇಷ ಕೊಡುಗೆಯನ್ನು ತಿಳಿಸಿದೆ. ಗ್ರಾಹಕರು ಜಿಯೋಫೈ ಹಾಟ್‌ಸ್ಪಾಟ್ ಡಿವೈಸ್‌ ಅನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ, ಗ್ರಾಹಕರು ಸಾಧನದಲ್ಲಿ ಸಕ್ರಿಯಗೊಳ್ಳಲು ಲಭ್ಯವಿರುವ ಮೂರು ಜಿಯೋಫೈ ಯೋಜನೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದಾಗಿದೆ.

ಜಿಯೋ

ಜಿಯೋಫೈ ಡಿವೈಸ್‌ನಲ್ಲಿ ಜಿಯೋ ಸಿಮ್‌ ಅನ್ನು ಆಕ್ಟಿವ್ ಮಾಡಿದ ನಂತರ, ಆಯ್ಕೆ ಮಾಡಿದ ಯೋಜನೆ ಪ್ರಾರಂಭವಾಗುತ್ತದೆ. ಯೋಜನೆಯ ಸಕ್ರಿಯಗೊಳಿಸುವ ಸ್ಥಿತಿಯನ್ನು ಮೈಜಿಯೊ ಆಪ್‌ ಮೂಲಕ ಪರಿಶೀಲಿಸಬಹುದು. ಇನ್ನು ಜಿಯೋಫೈ ಡಿವೈಸ್‌ ಅನ್ನು ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕವೂ ಖರೀದಿಸಬಹುದಾಗಿದೆ. ಅಂದಹಾಗೆ ಈ ಜಿಯೋಫೈ ಬೆಲೆ 1,999ರೂ. ಆಗಿದೆ.

ಜಿಯೋ 199ರೂ. ಪ್ಲ್ಯಾನ್

ಜಿಯೋ 199ರೂ. ಪ್ಲ್ಯಾನ್

ಜಿಯೋ ಆರಂಭಿಕ ಪ್ಲ್ಯಾನ್‌ 199ರೂ,ಆಗಿದ್ದು, ಇದು ಪ್ರತಿದಿನ 1.5 ಜಿಬಿ ಡೇಟಾವನ್ನು ನೀಡುತ್ತದೆ ಮತ್ತು ಹಾಗೆಯೇ 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಜಿಯೋ ಪ್ರೈಮ್ ಸದಸ್ಯತ್ವಕ್ಕೆ ಹೆಚ್ಚುವರಿ 99ರೂ. ಆಗಿದೆ. ಪ್ರತಿದಿನ 1.5 ಜಿಬಿ, ಅನಿಯಮಿತ ಜಿಯೋ ಟು ಜಿಯೋ ಕರೆಗಳು, 28 ದಿನಗಳ ಅವಧಿಗೆ ಜಿಯೋ ದಿಂದ ಇತರ ಮೊಬೈಲ್ ನೆಟ್‌ವರ್ಕ್ ಕರೆಗಳಿಗೆ 1000 ಉಚಿತ ನಿಮಿಷಗಳ ಮಿತಿ. ಹಾಗೆಯೇ 140 ದಿನಗಳವರೆಗೆ ದಿನಕ್ಕೆ 100 ರಾಷ್ಟ್ರೀಯ ಎಸ್‌ಎಂಎಸ್ ಲಭ್ಯ.

ಜಿಯೋ 249ರೂ. ಪ್ಲ್ಯಾನ್

ಜಿಯೋ 249ರೂ. ಪ್ಲ್ಯಾನ್

ಈ ಪ್ಲ್ಯಾನ್ ಎರಡನೇ ಕೊಡುಗೆಯಾಗಿದ್ದು, ಇದು ಪ್ರತಿದಿನ 2 ಜಿಬಿ ಡೇಟಾವನ್ನು 28 ದಿನಗಳವರೆಗೆ ಒದಗಿಸುತ್ತದೆ. ಜಿಯೋ ಪ್ರೈಮ್ ಸದಸ್ಯತ್ವಕ್ಕೆ ಹೆಚ್ಚುವರಿ 99ರೂ. ಆಗಿದೆ ಮತ್ತು ದಿನಕ್ಕೆ 2 ಜಿಬಿ, ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರ ಮೊಬೈಲ್ ನೆಟ್‌ವರ್ಕ್ ಕರೆಗಳಿಗೆ 1000 ನಿಮಿಷಗಳ ಕರೆ ಮಿತಿ ಪ್ರಯೋಜನ ಇದೆ. ಹಾಗೆಯೇ ದಿನಕ್ಕೆ 100 ರಾಷ್ಟ್ರೀಯ ಎಸ್‌ಎಂಎಸ್ 112 ದಿನಗಳವರೆಗೆ ಪಡೆಯಿರಿ.

ಜಿಯೋ 349ರೂ. ಪ್ಲ್ಯಾನ್

ಜಿಯೋ 349ರೂ. ಪ್ಲ್ಯಾನ್

ಜಿಯೋದ 349ರೂ. ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3 ಜಿಬಿ ನೀಡುತ್ತದೆ. ಜಿಯೋ ಪ್ರೈಮ್ ಸದಸ್ಯತ್ವಕ್ಕೆ ಹೆಚ್ಚುವರಿ 99ರೂ.ಆಗಿದೆ. ದಿನಕ್ಕೆ 3 ಜಿಬಿ ಡೇಟಾ, ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರ ಮೊಬೈಲ್ ನೆಟ್‌ವರ್ಕ್ ಕರೆಗಳಿಗೆ 1000 ನಿಮಿಷಗಳ ಕರೆ ಮಿತಿ. ಮತ್ತು 84 ದಿನಗಳವರೆಗೆ ದಿನಕ್ಕೆ 100 ರಾಷ್ಟ್ರೀಯ ಎಸ್‌ಎಂಎಸ್ ಪಡೆಯುತ್ತೀರಿ.

Best Mobiles in India

English summary
Jio is offering up to five months of free data and Jio-to-Jio calls with the purchase of its JioFi 4G Hotspot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+