Subscribe to Gizbot

ದೇಶದಲ್ಲಿ ಗೂಗಲ್ 'ಸ್ಟ್ರೀಟ್ ವ್ಯೂ' ಸೇವೆಯನ್ನು ತಿರಸ್ಕರಿತು ಭಾರತ ಸರ್ಕಾರ!!..ಏಕೆ ಗೊತ್ತಾ?

Written By:

360 ಡಿಗ್ರಿ ವಿಹಂಗಮ ರಸ್ತೆ ಮಟ್ಟದ ಚಿತ್ರಣದ ಮೂಲಕ ಸಾರ್ವಜನಿಕ ಪ್ರದೇಶವನ್ನು 3D ರೂಪದಲ್ಲಿ ವೀಕ್ಷಿಸುವ ಗೂಗಲ್‌ನ ಸ್ಟ್ರೀಟ್ ವೀಕ್ಷಣೆಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ಗೂಗಲ್‌ನ ಸ್ಟ್ರೀಟ್ ವ್ಯೂ' ಪ್ರಸ್ತಾಪವನ್ನು ಸರ್ಕಾರ ನಿರಾಕರಿಸಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಹಂಸರಾಜ್ ಗಂಗರಾಮ್ ಅಹಿರ್ ಅವರು ಮಂಗಳವಾರ ತಿಳಿಸಿದ್ದಾರೆ.!

ಗೂಗಲ್ 'ಸ್ಟ್ರೀಟ್ ವ್ಯೂ' ಎಂಬುದು ಗೂಗಲ್ ನಕ್ಷೆಗಳು ಮತ್ತು ಗೂಗಲ್ ಅರ್ಥ್‌ನಲ್ಲಿ ಕಾಣಿಸಿಕೊಂಡ ವಿಶೇಷ ತಂತ್ರಜ್ಞಾನವಾಗಿದ್ದು, ಯಾವುದೇ ಪ್ರೇಕ್ಷಣೀಯ ಸ್ಥಳಗಳನ್ನು 3D ರೂಪದಲ್ಲಿ ಮೊಬೈಲ್‌ನಲ್ಲಿಯೇ ನೋಡಬಹುದಾಗಿದೆ. ಹಾಗಾಗಿ, ದೃಷ್ಟಿಯಿಂದ ಗೂಗಲ್ 'ಸ್ಟ್ರೀಟ್ ವ್ಯೂ' ಅನ್ನು ಭಾರತ ಸರ್ಕಾರದಿಂದ ತಿರಸ್ಕೃತವಾಗಿದೆ ಎಂದು ಹೇಳಲಾಗಿದೆ.!

ದೇಶದಲ್ಲಿ ಗೂಗಲ್ 'ಸ್ಟ್ರೀಟ್ ವ್ಯೂ' ಸೇವೆಯನ್ನು ತಿರಸ್ಕರಿತು ಭಾರತ ಸರ್ಕಾರ!!..ಏಕೆ

ಪ್ರಪಂಚದ 82 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಗೂಗಲ್ 'ಸ್ಟ್ರೀಟ್ ವ್ಯೂ' ವ್ಯವಸ್ಥೆ ಯುಎಸ್, ಕೆನಡಾ ಮತ್ತು ಯುರೋಪಿಯನ್ ದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿದೆ. ಆದರೆ, ಪ್ರವಾಸೋದ್ಯಮ ಮತ್ತು ಇತರ ವಿಷಯಗಳ ದೃಷ್ಟಿಯಿಂದ ಭಾರೀ ಲಾಭದಾಯಕವಾಗಿರುವ ಈ ವ್ಯವಸ್ಥೆ ಸಮಸ್ಯೆಗಳನ್ನು ಕೂಡ ತರಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.!!

ಉಗ್ರಗಾಮಿಗಳೇನಾದರೂ ಗೂಗಲ್‌ ಈ 'ಸ್ಟ್ರೀಟ್ ವ್ಯೂ' ವ್ಯವಸ್ಥೆಯನ್ನು ಬಳಸಿ ಭಾರತದಲ್ಲಿ ಅಪಾಯಕಾರಿ ಚಟುವಟಿಕೆಗಳನ್ನು ನಡೆಸಬಹುದು ಎಂಬ ಎಚ್ಚರಿಕೆಯನ್ನು ಈ ಮೊದಲು ತಜ್ಞರು ನೀಡಿದ್ದರು. ಪ್ರೇಕ್ಷಣೀಯ ಸ್ಥಳಗಳನ್ನು 3D ರೂಪದಲ್ಲಿ ವೀಕ್ಷಿಸಿ ಉಗ್ರಗಾಮಿಗಳು ಬಳಹ ಸುಲಭವಾಗಿ ಅವುಗಳ ಮೇಲೆ ಟ್ಯಾಕ್ ಮಾಡಬಹುದು ಎಂಬುದು ಅವರ ವಾದವಾಗಿತ್ತು.!!

ದೇಶದಲ್ಲಿ ಗೂಗಲ್ 'ಸ್ಟ್ರೀಟ್ ವ್ಯೂ' ಸೇವೆಯನ್ನು ತಿರಸ್ಕರಿತು ಭಾರತ ಸರ್ಕಾರ!!..ಏಕೆ

ಇನ್ನು 2011 ರಲ್ಲಿಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಟ್ರೀಟ್ ವ್ಯೂ ಸೇವೆಗಳನ್ನು ಪಡೆಯಲು ಬೀದಿ-ಮಟ್ಟದ ಚಿತ್ರಣವನ್ನು ಸಂಗ್ರಹಿಸಲು ಗೂಗಲ್ ಪ್ರಾರಂಭಿಸಿತ್ತು. ಆದರೆ, ಭದ್ರತಾ ಕಾರಣಗಳನ್ನು ನೀಡಿ ಗೂಗಲ್ ಬೆಂಗಳೂರಿನಲ್ಲಿ ದಿ-ಮಟ್ಟದ ಚಿತ್ರಣವನ್ನು ಸಂಗ್ರಹಿಸಲು ಸ್ಥಳೀಯ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ ಎಂಬುದು ತಿಳಿದುಬಂದಿತ್ತು.!!

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಓದಿರಿ: ನಿಮ್ಮ ಫೋನ್ ಬ್ಯಾಟರಿ ಮಾತ್ರ ಬಹುಬೇಗ ಖಾಲಿಯಾಗುವ ಅನುಭವ ನಿಮಗಾಗುವುದೇ?..ಹಾಗಿದ್ರೆ ಇಲ್ಲಿ ನೋಡಿ!!

English summary
Google’s ‘Street View’ allows users to explore places around the world through 360-degree panoramic street level imagery and view public areas.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot