Home
ಸುದ್ದಿಜಾಲ

ಜಿಯೋ ಗ್ರಾಹಕರಿಗೆ ಈ ಪ್ಲ್ಯಾನ್‌ಗಳು ಇನ್ನು ಅಲಭ್ಯ!..ಆದ್ರು, ಖುಷಿ ಸಮಾಚಾರ ಇದೆ!

ಭಾರತೀಯ ಟೆಲಿಕಾಂ ವಲಯದಲ್ಲಿ ಹೊಸ ಅಲೆಯನ್ನೇ ಸೃಷ್ಠಿಸಿದ ರಿಲಾಯನ್ಸ್‌ ಜಿಯೋ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ (IUC) ಇತರೆ ನೆಟವರ್ಕ್‌ ಕರೆಗಳಿಗೆ ಶುಲ್ಕವಿಧಿಸಿ ಗ್ರಾಹಕರಿಗೆ ನಿರಾಸೆ ಉಂಟುಮಾಡಿದೆ. ಆದರೆ ತನ್ನ ಗ್ರಾಹಕರಿಗೆ ಹೊರೆಯಾಗಬಾರದೆಂದು ಜಿಯೋ ಸಂಸ್ಥೆಯು ಹೊಸದಾಗಿ IUC ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಇದರಿಂದ ದರ ಕಡಿತದಿಂದ ಬೇಸರಗೊಂಡ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಹಾಗೆಯೇ ಎರಡು ಪ್ಲ್ಯಾನ್‌ಗಳನ್ನು ಸ್ಟಾಪ್ ಮಾಡಿ ಶಾಕ್ ನೀಡಿದೆ.

IUC ಪ್ರೀಪೇಡ್‌

ಹೌದು, ಜಿಯೋ ಟೆಲಿಕಾಂ ಸಂಸ್ಥೆಯು ಕೆಲವು ಅತ್ಯುತ್ತಮ IUC ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಸಂಸ್ಥೆಯು ತನ್ನ 19ರೂ ಮತ್ತು 52ರೂ.ಗಳ ಸ್ಕ್ರಾಚ್‌ ಪ್ಯಾಕ್ಸ್‌ ಪ್ಲ್ಯಾನ್‌ಗಳನ್ನು ಅಲಭ್ಯ ಮಾಡಿದ್ದು, ಅದರ ಬದಲಾಗಿ ಹೊಸ IUC ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಗ್ರಾಹಕರಿಗೆ ನೀಡಿದೆ. IUC ಪ್ರೀಪೇಡ್‌ ಪ್ಲ್ಯಾನ್‌ಗಳ ಆರಂಭಿಕ ಪ್ಲ್ಯಾನ್‌ ದರವು 10ರೂ.ಗಳಾಗಿದ್ದು, ಈ ಪ್ಲ್ಯಾನುಗಳ ರೀಚಾರ್ಜ್‌ನಿಂದ ಗ್ರಾಹಕರಿಗೆ ಅಗತ್ಯ ಡೇಟಾ ಸೌಲಭ್ಯ ಮತ್ತು ಕರೆಗಳ ಅನುಕೂಲ ಲಭ್ಯವಾಗಲಿದೆ. ಹಾಗಾದರೇ ಜಿಯೋ ಬಿಡುಗಡೆ ಮಾಡಿರುವ IUC ಪ್ರೀಪೇಡ್‌ ಪ್ಲ್ಯಾನ್‌ಗಳ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಕಾಂಬೊ ಪ್ರೀಪೇಡ್ ಪ್ಲ್ಯಾನ್

ಕಾಂಬೊ ಪ್ರೀಪೇಡ್ ಪ್ಲ್ಯಾನ್

ರಿಲಾಯನ್ಸ್‌ ಜಿಯೋ 98ರೂ.ಗಳ ಕಾಂಬೊ ಪ್ರೀಪೇಡ್ ಪ್ಲ್ಯಾನ್‌ ಪರಿಚಯಿಸಿದೆ. IUC ಟಾಪ್‌ಅಪ್‌ ಸೌಲಭ್ಯದ ಜೊತೆಗೆ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 2GB ಡೇಟಾ ಲಭ್ಯವಾಗಲಿದೆ. ಜಿಯೋದಿಂದ ಜಿಯೋ ಅನಿಯಮಿತ ಕರೆಗಳು ಲಭ್ಯವಾಗಲಿವೆ. ಹಾಗೆಯೇ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ.

IUC ಪ್ಲ್ಯಾನ್

IUC ಪ್ಲ್ಯಾನ್

ಜಿಯೋದಿಂದ ಇತರೆ ನೆಟವರ್ಕ್‌ಗಳಿಗೆ ಕರೆ ಮಾಡಿದರೇ ಗ್ರಾಹಕರಿಗೆ ಶುಲ್ಕ ಕಡಿತವಾಗುವುದನ್ನು ತಪ್ಪಿಸಲು ಅದಕ್ಕೆ ಪೂರಕವಾಗಿ IUC ಪ್ರೀಪೇಡ್‌ ರಿಚಾರ್ಜ್ ಪ್ಲ್ಯಾನ್‌ಗಳನ್ನು ನೀಡಿದೆ. ಈ IUC ಪ್ಲ್ಯಾನ್‌ಗಳು ಅಗ್ಗದ ಬೆಲೆಯಲ್ಲಿದ್ದು, ಹೆಚ್ಚು ಅನುಕೂಲವಾಗಲಿವೆ. ಈ IUC ಪ್ಲ್ಯಾನ್‌ಗಳ ಆರಂಭಿಕ ಬೆಲೆಯು 10ರೂ. ಆಗಿದ್ದು, 1000ರೂ.ವರೆಗೂ ವಿವಿಧ ಪ್ಲ್ಯಾನ್‌ಗಳು ಲಭ್ಯ ಇವೆ.

IUC-10ರೂ ಮತ್ತು 20.ರೂ ಪ್ಲ್ಯಾನ್

IUC-10ರೂ ಮತ್ತು 20.ರೂ ಪ್ಲ್ಯಾನ್

ಗ್ರಾಹಕರಿಗೆ ಇತರೆ ನೆಟವರ್ಕ್‌ಗಳಿಗೆ ಹೊರಹೋಗುವ ಕರೆಗಳು ಉಚಿತವಾಗಲಿ ಎನ್ನುವುದಕ್ಕಾಗಿ IUC ಪ್ಲ್ಯಾನ್‌ಗಳನ್ನು ಜಿಯೋ ರಿಲೀಸ್‌ ಮಾಡಿದೆ. ಈ ಪ್ಲ್ಯಾನಿನಲ್ಲಿ 124 ನಿಮಿಷಗಳ ಉಚಿತ IUC ಕರೆಗಳ ಸೌಲಭ್ಯವು ದೊರೆಯಲಿದ್ದು, ಜೊತೆಗೆ 1GB ಹೆಚ್ಚುವರಿ ಡೇಟಾ ಸಹ ಸಿಗಲಿದೆ. ಹಾಗೆಯೇ IUC 20.ರೂ ಪ್ಲ್ಯಾನಿನಲ್ಲಿ 249 ನಿಮಿಷಗಳ ಉಚಿತ IUC (ಇತರೆ ನೆಟವರ್ಕ್‌) ಕರೆಗಳ ಸೌಲಭ್ಯ ಮತ್ತು ಹೆಚ್ಚುವರಿ 2GB ಡೇಟಾ ಸಿಗಲಿದೆ.

IUC-50ರೂ ಮತ್ತು 100.ರೂ ಪ್ಲ್ಯಾನ್

IUC-50ರೂ ಮತ್ತು 100.ರೂ ಪ್ಲ್ಯಾನ್

jiyO IUC-50ರೂ.ಪ್ಲ್ಯಾನಿನಲ್ಲಿ ಗ್ರಾಹಕರಿಗೆ 656 ನಿಮಿಷಗಳ (IUC) ಉಚಿತ ಇತರೆ ನೆಟವರ್ಕ್‌ ಕರೆಗಳ ಸೌಲಭ್ಯವು ದೊರೆಯಲಿದ್ದು, ಜೊತೆಗೆ 5GB ಹೆಚ್ಚುವರಿ ಡೇಟಾ ಸಹ ದೊರೆಯಲಿದೆ. ಹಾಗೆಯೇ IUC 100.ರೂ ಪ್ಲ್ಯಾನಿನಲ್ಲಿ 1362 ನಿಮಿಷಗಳ IUC (ಇತರೆ ನೆಟವರ್ಕ್‌) ಉಚಿತ ಕರೆಗಳ ಸೌಲಭ್ಯವಿದ್ದು, ಇದರೊಂದಿಗೆ ಹೆಚ್ಚುವರಿ 10GB ಡೇಟಾ ಉಚಿತವಾಗಿ ಸಿಗಲಿದೆ.

Best Mobiles in India

English summary
Reliance Jio‘s IUC plans start from Rs 10 and go all the way up to Rs 1,000. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+