ಜಿಯೋದಿಂದ ಹೊಸ ಪ್ಲ್ಯಾನ್ : ಪ್ರತಿದಿನ 2GB ಡೇಟಾ, ಉಚಿತ ಕರೆ!
ಸದ್ಯ ಭಾರತೀಯ ಟೆಲಿಕಾಂ ವಲಯದಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಖಾಸಗಿ ಟೆಲಿಕಾಂ ಸಂಸ್ಥೆಗಳು ಪ್ರೀಪೇಡ್ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ್ದು, ಗ್ರಾಹಕರನ್ನು ಕಂಗಡೆಸಿದೆ. ಏರ್‌ಟೆಲ್ ಮತ್ತು ವೋಡಾಪೊನ್ ಸಂಸ್ಥೆಗಳು ಕರೆ ಮತ್ತು ಡೇಟಾ ಪ್ಲ್ಯಾನ್‌ಗಳ ಬೆಲೆಯಲ್ಲಿ ಹೆಚ್ಚಳ ಘೋಷಿಸಿದ್ದು, ಜಿಯೋ ಸಂಸ್ಥೆ ಸಹ ಇದೇ ಡಿಸೆಂಬರ್ 6ರಂದು ಆಲ್-ಒನ್-ಇನ್ ಪ್ಲ್ಯಾನ್‌ಗಳ ಬೆಲೆಯಲ್ಲಿ ಏರಿಕೆ ಮಾಡುವುದಾಗಿ ಸೂಚಿಸಿದೆ.

ಹೌದು, ದೇಶದ ಟೆಲಿಕಾಂ ವಲಯದಲ್ಲಿ ಅಗ್ಗದ ದರದಲ್ಲಿ ಹಲವು ಆಫರ್‌ಗಳನ್ನು ನೀಡಿದ್ದ ಜಿಯೋ ಸಹ ಇದೀಗ ಪ್ಲ್ಯಾನ್‌ಗಳ ಪ್ರೈಸ್ ಏರಿಕೆ ಮಾಡುವುದಾಗಿ ಹೇಳಿದೆ. ಇದೇ ಡಿ.6ರಿಂದ ಪ್ರಸ್ತುತ ಇರುವ ಪ್ಲ್ಯಾನ್‌ಗಳ ಬೆಲೆಯಲ್ಲಿ ಶೇ.40% ಷರ್ಸೆಂಟ್ ಹೆಚ್ಚಳ ಮಾಡಲಿದೆ. ಜನಪ್ರಿಯ 444ರೂ.ಗಳ ಆಲ್-ಇನ್-ಒನ್ ಪ್ಲ್ಯಾನಿನಂತೆ ಹೊಸ 1776ರೂ. ಪ್ಲ್ಯಾನ್ ಇರಲಿದೆ. ಬೆಲೆ ದುಪ್ಪಟ್ಟು ಮಾಡಿರುವ ಜೊತೆಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಿದೆ.

ಜಿಯೋ ಸಂಸ್ಥೆಯು ತನ್ನ 444ರೂ.ಗಳ ಆಲ್-ಇನ್-ಒನ್ ಪ್ಲ್ಯಾನ್ ಬೆಲೆಯನ್ನು ನಾಲ್ಕು ಪಟ್ಟು ಹೆಚ್ಚಳ ಮಾಡಿದ್ದು, 1776ರೂ.ಗಳ ಪ್ರೈಸ್‌ನಲ್ಲಿ ಲಭ್ಯ ಇರಲಿದೆ. ಈ ಹೊಸ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ, ಜಿಯೋದಿಂದ ಜಿಯೋ ನೆಟವರ್ಕ್‌ಗೆ ಅನಿಯಮಿತ ಉಚಿತ ಕರೆಗಳು, ಜಿಯೋದಿಂದ ಇತರೆ ನೆಟವರ್ಕಗಳಿಗೆ 1.000 ನಿಮಿಷ FUP ಲಿಮಿಟ್ ಇರಲಿದೆ. ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ಸಹ ಲಭ್ಯವಾಗಲಿದೆ. ಒಟ್ಟು 336 ದಿನಗಳ ವ್ಯಾಲಿಡಿಟಿ ಲಭ್ಯ ಇರಲಿದೆ.

ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 672GB ಡೇಟಾ ಲಭ್ಯವಾಗಲಿದೆ. ಈ ಪ್ರೀಪೇಡ್ ಪ್ಲ್ಯಾನ್ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಆಲ್-ಇನ್-ಒನ್ ರೀಚಾರ್ಜ್ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದೆ. ಗ್ರಾಹಕರು ಮೈ ಜಿಯೋ ಆಪ್ ಅಥವಾ ಜಿಯೋ ವೆಬ್‌ಸೈಟ್‌ನಲ್ಲಿಯೂ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಜಿಯೋ ನೆಟವರ್ಕ ಬಳಕೆಮಾಡುವ ಗ್ರಾಹಕರು ವಾರ್ಷಿಕ ಪ್ಲ್ಯಾನಗಾಗಿ ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

ಪ್ರಸ್ತುತ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂಗಳೂ ಸಹ ಪ್ರೀಪೇಡ್ ಪ್ಲ್ಯಾನ್ ದರ ಏರಿಕೆ ಮಾಡಿವೆ. ಇತರೆ ಟೆಲಿಕಾಂಗಳಿಗೆ ಕರೆ ಮಾಡುವ ಉಚಿತ ನಿಮಿಷಗಳ ಮಿತಿ ಮುಗಿದ ಬಳಿಕ ಹೆಚ್ಚುವರಿ ಟಾಕ್‌ಟೈಮ್ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಲು ಹಲವು ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಒಟ್ಟಾರೇ ಈ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ತುಪ್ಪದಂತೆ ಅನಿಸಿರುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications








