Home
ಸುದ್ದಿಜಾಲ

ಜಿಯೋಗಿಂತಲೂ ಏರ್‌ಟೆಲ್ ಆಫರ್ ಭರ್ಜರಿಯಂತೆ ಏಕೆ?

ಇತರ ಟೆಲಿಕಾಮ್ ಕಂಪೆನಿಗಳೂ ಕೂಡ ಅತ್ಯದ್ಭುತ ಆಫರ್‌ಗಳನ್ನು ಬಳಕೆದಾರರಿಗೆ ನೀಡುತ್ತಿದ್ದು, ಏರ್‌ಟೆಲ್ ಜಿಯೋವನ್ನು ತನ್ನ ಆಫರ್‌ಗಳು ಮೂಲಕ ಹಿಂದಿಕ್ಕಿದೆ ಬನ್ನಿ ಅದೇನು ಎಂಬುದನ್ನು ಕಂಡುಕೊಳ್ಳೋಣ.

By Shwetha

ಐದು ತಿಂಗಳುಗಳ ಹಿಂದೆ ಜಿಯೋ ಭಾರತೀಯ ಟೆಲಿಕಾಮ್ ಮಾರುಕಟ್ಟೆಯನ್ನು ಪ್ರವೇಶಿಸಿತು, ತನ್ನ ಆಕರ್ಷಕ ಆಫರ್‌ಗಳ ಮೂಲಕ ಸ್ಯಾಮ್‌ಸಂಗ್ ವೋಲ್ಟ್ ಸ್ಮಾರ್ಟ್‌ಫೋನ್‌ಗಳನ್ನು ಜಿಯೋ ತನ್ನ ಆಫರ್‌ಗಳಿಗಾಗಿ ಬಳಸಿಕೊಂಡಿತು. ನಂತರ ಕೆಲವು ತಿಂಗಳುಗಳ ನಂತರ ಇತರ 4ಜಿ ಸಕ್ರಿಯವಾಗಿರುವ ಮೊಬೈಲ್‌ಗಳಲ್ಲಿ ತನ್ನ ಆಫರ್‌ಗಳನ್ನು ಸಂಸ್ಥೆ ಪ್ರಾಯೋಜಿಸಿತು.

ಓದಿರಿ: ಬಿಎಸ್ಎನ್‌ಎಲ್ ಹೊಸ ಆಫರ್ ವಿಶೇಷತೆ ಏನು?

ಪ್ರಸ್ತುತ ದಾಖಲೆಗಳ ಪ್ರಕಾರ ಸೇವೆಯು 24 ಮಿಲಿಯನ್ ಬಳಕೆದಾರರನ್ನು ತಲುಪಿದೆ ಎಂಬುದಾಗಿ ಮಾಹಿತಿ ಇದ್ದು ಅದು ಬರೇ ಎರಡು ತಿಂಗಳುಗಳಲ್ಲಿ ಈ ಸಾಧನೆಯನ್ನು ಮಾಡಿದೆ. ಮುಕೇಶ್ ಅಂಬಾನಿ ಆಡಳಿತದ ಕಂಪೆನಿಯ ಇರಾದೆ ಈ ವರ್ಷದ ಅಂತ್ಯದಲ್ಲಿ 100 ಮಿಲಿಯನ್ ಬಳಕೆದಾರರನ್ನು ತಲುಪುವುದಾಗಿದೆ. ಅದಾಗ್ಯೂ ಇತರ ಟೆಲಿಕಾಮ್ ಕಂಪೆನಿಗಳೂ ಕೂಡ ಅತ್ಯದ್ಭುತ ಆಫರ್‌ಗಳನ್ನು ಬಳಕೆದಾರರಿಗೆ ನೀಡುತ್ತಿದ್ದು, ಏರ್‌ಟೆಲ್ ಜಿಯೋವನ್ನು ತನ್ನ ಆಫರ್‌ಗಳು ಮೂಲಕ ಹಿಂದಿಕ್ಕಿದೆ ಬನ್ನಿ ಅದೇನು ಎಂಬುದನ್ನು ಕಂಡುಕೊಳ್ಳೋಣ.

ಓದಿರಿ: ಜಿಯೋ ಸಿಮ್ ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ

ಎಲ್‌ಟಿಇ ಮಾತ್ರ ನೆಟ್‌ವರ್ಕ್

ಎಲ್‌ಟಿಇ ಮಾತ್ರ ನೆಟ್‌ವರ್ಕ್

ಭಾರತೀಯ ಟೆಲಿಕಾಮ್ ಸೆಕ್ಟರ್ ಅನ್ನೇ ಬದಲಾಯಿಸುವ ಇರಾದೆಯನ್ನು ಕಂಪೆನಿ ಹೊಂದಿದ್ದು ಪ್ರಸ್ತುತ ಸೇವೆಯು 4ಜಿ ಡಿವೈಸ್‌ಗಳಿಗೆ ಮಾತ್ರ ದೊರೆಯುತ್ತಿದೆ. ಇದು ಇತರ ನೆಟ್‌ವರ್ಕ್‌ಗಳಾದ 3ಜಿ ಮತ್ತು 2ಜಿ ಗೆ ತನ್ನ ಸೇವೆಯನ್ನು ನೀಡುತ್ತಿಲ್ಲ. 4ಜಿ ಅಲ್ಲದ ಸ್ಮಾರ್ಟ್‌ಫೋನ್‌ಗಳಲ್ಲಿ ಜಿಯೋ 4ಜಿ ಸಿಮ್ ಕಾರ್ಡ್ ಅನ್ನು ಬಳಸುವಂತಿಲ್ಲ ಎಂದಾಗಿದೆ.

ವೋಲ್ಟ್ ಕರೆಗಳು

ವೋಲ್ಟ್ ಕರೆಗಳು

4ಜಿ ಸಿಮ್ ಅನ್ನು 4ಜಿ ಸಕ್ರಿಯವಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಬಳಸಬಹುದಾಗಿದ್ದು, ನಿಮ್ಮ ಫೋನ್ ವೋಲ್ಟ್‌ಗೆ ಕರೆಗಳನ್ನು ಮಾಡಲು ಬೆಂಬಲಿಸುವಂತೆ ಇರಬೇಕು. ಏರ್‌ಟೆಲ್‌ನಲ್ಲಿ ಹೀಗಿಲ್ಲ. ಯಾವುದೇ ಉಚಿತ ಲೈಫ್‌ಟೈಮ್ ಕರೆಗಳನ್ನು ಈ ಕಂಪೆನಿ ನೀಡುತ್ತಿಲ್ಲ, ಅದಾಗ್ಯೂ ನೀಡಿದಲ್ಲಿ ಅದು ಜಿಯೋಗಿಂತಲೂ ಅತ್ಯುತ್ತಮವಾಗಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಲ್ ಡ್ರಾಪ್ಸ್

ಕಾಲ್ ಡ್ರಾಪ್ಸ್

ಪ್ರಸ್ತುತ ಜಿಯೋ ಅತಿ ದೊಡ್ಡ ಕಾಲ್ ಡ್ರಾಪ್ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಂಜೆ 6 ರಿಂದ ರಾತ್ರಿ 10 ರವರೆಗೆ ಕರೆಗಳು ಸಂಪರ್ಕಗೊಳ್ಳುತ್ತಿಲ್ಲ, ನೀವು ಎಷ್ಟೇ ಡಯಲ್ ಮಾಡಿದರೂ ಕರೆಗಳನ್ನು ಮಾಡುವಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತಿವೆ.

ವೇಗದ ಡೇಟಾ ಇನ್ನಿಲ್ಲ

ವೇಗದ ಡೇಟಾ ಇನ್ನಿಲ್ಲ

ಅಧಿಕೃತ ಲಾಂಚ್ ಆಗುವ ಮುನ್ನ, ಡೇಟಾ ವೇಗವು 40Mbps ಇತ್ತು. ಆದರೆ 24 ಮಿಲಿಯನ್ ಬಳಕೆದಾರರು ಒಮ್ಮೆಲೇ ಬಳಸುವ ಈ ಸಮಯದಲ್ಲಿ ಡೇಟಾ ವೇಗವು ಇಳಿಮುಖವಾಗಿದ್ದು ಈಗ ಬಳಕೆದಾರರು 500Kbps ವೇಗವನ್ನು ಮಾತ್ರವೇ ಬಳಸಿಕೊಳ್ಳುವಂತಾಗಿದೆ.

ದುರ್ಬಲ ಗ್ರಾಹಕ ಬೆಂಬಲ

ದುರ್ಬಲ ಗ್ರಾಹಕ ಬೆಂಬಲ

ಜಿಯೋ ದುರ್ಬಲ ಗ್ರಾಹಕ ಬೆಂಬಲವನ್ನು ಪಡೆದುಕೊಂಡಿದೆ. ಹೊಸ ಸಿಮ್ ಕಾರ್ಡ್ ಅನ್ನು ಆಕ್ಟಿವೇಟ್ ಮಾಡಲು ಕಂಪೆನಿ ಒಂದು ವಾರದ ಸಮಯವನ್ನು ತೆಗೆದುಕೊಳ್ಳುತ್ತಿದೆ, ಆದರೆ ಮುಕೇಶ್ ಅಂಬಾನಿ ಕೆವೈಸಿ ಆಕ್ಟಿವೇಶನ್ ವಿಧಾನದ ಮೂಲಕ ಒಂದು ಗಂಟೆಯಲ್ಲಿ ಆಕ್ಟಿವೇಶನ್ ಅನ್ನು ಮಾಡುವುದಾಗಿ ತಿಳಿಸಿದ್ದರು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
However, Reliance Jio is way behind the India's largest telecom network, Bharti Airtel. Here's why.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+