ಬಿಎಸ್ಎನ್‌ಎಲ್ ಹೊಸ ಆಫರ್ ವಿಶೇಷತೆ ಏನು?

Written By:

ಜಿಯೋ ಆಫರ್‌ಗಳು ಭಾರತದಲ್ಲಿ ಸದ್ದುಮಾಡುತ್ತಿರುವ ಈ ಸಮಯದಲ್ಲೇ ಇತರ ಟೆಲಿಕಾಮ್ ಕಂಪೆನಿಗಳೂ ಕೂಡ ತಮ್ಮ ಅತ್ಯುತ್ತಮ ಆಫರ್‌ಗಳ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಲೇ ಇವೆ. ಬಿಎಸ್‌ಎನ್‌ಎಲ್ ಕೂಡ ಈ ಸ್ಪರ್ಧೆಯಲ್ಲಿ ಹಿಂದುಳಿಯದೇ ತನ್ನ ಹಿಂದಿನ ಬಳಕೆದಾರರನ್ನು ಇನ್ನಷ್ಟು ಅಧಿಕ ಪ್ರಮಾಣದಲ್ಲಿ ತನ್ನತ್ತ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದು ಅದಕ್ಕಾಗಿ ಹೊಸ ಹೊಸ ಆಫರ್‌ಗಳ ಸಾಲನ್ನೇ ಮುಂದಿಡುತ್ತಿದೆ.

ಓದಿರಿ: ಜಿಯೋ ಸಿಮ್ ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ

ಪ್ರಸ್ತುತ ಪ್ರಿಪೈಡ್ ಬಳಕೆದಾರರು ಬಿಎಸ್‌ಎನ್‌ಎಲ್ ಯೋಜನೆಯನ್ನು ಆಸ್ವಾದಿಸಬಹುದಾಗಿದ್ದು, ಇದು ವಿಶೇಷ ಕೊಂಬೋ ವೋಚರ್‌ಗಳನ್ನು ಪಡೆದುಕೊಂಡು ಬಂದಿದೆ. ಬಿಎಸ್‌ಎನ್‌ಎಲ್ ಫ್ರೀಡಮ್ ಪ್ಲಾನ್ ಇದಾಗಿದ್ದು ಕೆಳಗೆ ಪ್ಲಾನ್‌ನ ವಿವರಗಳನ್ನು ನೀಡಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಲ್ ಇನ್ ಒನ್ ಪ್ಲಾನ್

ಆಲ್ ಇನ್ ಒನ್ ಪ್ಲಾನ್

ಬಿಎಸ್‌ಎನ್‌ಎಲ್ ಫ್ರೀಡಮ್ ಪ್ಲಾನ್ ಎಲ್ಲಾ ಆಫರ್‌ಗಳನ್ನು ತನಲ್ಲಿ ಒಳಗೊಂಡಿರುವ ಒಂದೇ ಪ್ಲಾನ್ ಎಂದೆನಿಸಿದ್ದು ವಾಯ್ಸ್ ಕರೆಗಳು, ಎಸ್‌ಎಮ್‌ಎಸ್, ಮತ್ತು ಡೇಟಾ ಪ್ಲಾನ್‌ಗಳನ್ನು ಇದು ಒಳಗೊಂಡಿದೆ. ಹೆಚ್ಚುವರಿ ಹಣವನ್ನು ಖರ್ಚು ಮಾಡದೆಯೇ ಬಳಕೆದಾರರು ತಮ್ಮ ಕುಟುಂಬದವರು ಮತ್ತು ಒಡನಾಡಿಗಳೊಂದಿಗೆ ಸಂಪರ್ಕವನ್ನು ಬೆಳೆಸಿಕೊಳ್ಳಬಹುದಾಗಿದೆ.

ವೋಚರ್‌ಗಳೊಂದಿಗೆ ಉಚಿತ ಡೇಟಾ

ವೋಚರ್‌ಗಳೊಂದಿಗೆ ಉಚಿತ ಡೇಟಾ

ರೂ 577 ರ ವೋಚರ್‌ನೊಂದಿಗೆ ಪ್ಲಾನ್ ಬಂದಿದ್ದು 1ಜಿಬಿ ಫ್ರಿ ಡೇಟಾವನ್ನು ಇದು ಪಡೆದುಕೊಂಡಿದೆ. ಈ ಯೋಜನೆಯು 730 ದಿನಗಳ ಪ್ರಯೋಜವನ್ನು ಹೊಂದಿದೆ. ಇನ್ನೊಂದು ವೋಚರ್ ಬೆಲೆ ರೂ 377 ಆಗಿದ್ದು ಇದು ಫುಲ್ ಟಾಕ್ ಟೈಮ್ ಅನ್ನು ನೀಡುವುದರ ಜೊತೆಗೆ 300 ಎಮ್‌ಬಿ ಫ್ರಿ ಡೇಟಾವನ್ನು ಒಳಗೊಂಡಿದೆ. ರೂ 178 ರ ವೋಚರ್ ಪೂರ್ಣ ಟಾಕ್‌ ಟೈಮ್ ಮತ್ತು 200 ಎಮ್‌ಬಿ ಅಂತೆಯೇ 10 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ.

ನಿಮಿಷಕ್ಕೆ 25 ಪೈಸೆ ಕರೆಯ ದರ

ನಿಮಿಷಕ್ಕೆ 25 ಪೈಸೆ ಕರೆಯ ದರ

ಬಿಎಸ್‌ಎನ್‌ಎಲ್ ಫ್ರೀಡಮ್ ಪ್ಲಾನ್ ಅನ್ನು ನೀವು ಪಡೆದುಕೊಳ್ಳುವುದರಿಂದ, 25 ಪೈಸೆಗೆ ಪ್ರತಿ ನಿಮಿಷಕ್ಕೆ ಕರೆಯ ದರವನ್ನು ಆಸ್ವಾದಿಸಬಹುದಾಗಿದೆ. ಇದು 30 ದಿನಗಳ ಕಾಲಾವಕಾಶವನ್ನು ಪಡೆದುಕೊಂಡಿದೆ. ಇದು ಲೋಕಲ್ ಮತ್ತು ಎಸ್‌ಟಿಡಿ ಕರೆಗಳಿಗೆ ಅನ್ವಯಿಸಿದ್ದು ನೆಟ್‌ವರ್ಕ್ ಹೊರಗೂ ಅನ್ವಯವಾಗಲಿದೆ.

1ಜಿಬಿ ಉಚಿತ ಡೇಟಾ ಪಡೆದುಕೊಳ್ಳಿ

1ಜಿಬಿ ಉಚಿತ ಡೇಟಾ ಪಡೆದುಕೊಳ್ಳಿ

ಫ್ರೀಡಮ್ ಪ್ಲಾನ್ ಬಳಕೆದಾರರು 1ಜಿಬಿ ಉಚಿತ ಡೇಟಾವನ್ನು ಪಡೆದುಕೊಳ್ಳಬಹುದಾಗಿದ್ದು ಪ್ಲಾನ್ ಅನ್ನು ಚಂದಾದಾರಿಕೆ ಮಾಡುವ 30 ದಿನಗಳಲ್ಲಿ ಬಳಸಿಕೊಳ್ಳಬಹುದಾಗಿದೆ.

ಒಂದು ತಿಂಗಳ ನಂತರ ಕಡಿಮೆ ಟಾರಿಫ್

ಒಂದು ತಿಂಗಳ ನಂತರ ಕಡಿಮೆ ಟಾರಿಫ್

ಒಂದು ತಿಂಗಳನ್ನು ಸಂಪೂರ್ಣಗೊಳಿಸಿದ ನಂತರ, ಕರೆಗಳನ್ನು ಮಾಡುವಲ್ಲಿ, ಸ್ಥಳೀಯ ಮತ್ತು ರೋಮಿಂಗ್ ಬೆಲೆಯಲ್ಲಿ 1.3 ಪೈಸೆಯನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ, ಟಾರಿಫ್ ಯೋಜನೆಗಳಲ್ಲಿ ಹಲವಾರು ಕಸ್ಟಮೈಸೇಶನ್ ಆಪ್ಶನ್‌ಗಳೂ ಕೂಡ ಇದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
There are special combo vouchers that are applicable especially for this plan. Both existing and new prepaid users of BSNL can enjoy this Freedom Plan.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot