ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್... ಸದ್ದಿಲ್ಲದೆ ಸ್ಥಗಿತವಾಯ್ತು ಈ ಅಗ್ಗದ ಪ್ಲ್ಯಾನ್!
ರಿಲಯನ್ಸ್ ಜಿಯೋ (Reliance Jio) ಇತರೆ ಟೆಲಿಕಾಂ ಗಳ ವಿರುದ್ಧ ತನ್ನದೇ ಆದ ರೀತಿಯಲ್ಲಿ ಸ್ಪರ್ಧೇ ನೀಡುತ್ತಿದೆ. ಅದರಲ್ಲೂ ರೀಚಾರ್ಜ್ ಪ್ಲ್ಯಾನ್ (Recharge Plan) ವಿಭಾಗದಲ್ಲಿ ಕಡಿಮೆ ದರದಲ್ಲಿ ಅತ್ಯಂತ ಹೆಚ್ಚಿನ ಸೌಲಭ್ಯ ನೀಡುವ ಟೆಲಿಕಾಂ ಸಂಸ್ಥೆ (telecom company) ಎಂಬ ಹೆಗ್ಗಳಿಗೆ ಪಡೆದಿತ್ತು. ಆದರೆ ಈಗ ಎಲ್ಲಾ ಜಿಯೋ ಬಳಕೆದಾರರು ಶಾಕ್ ಆಗುವ ಸುದ್ದಿ ನೀಡಿದೆ.
ಹೌದು, ಜಿಯೋ ತನ್ನ ಡೇಟಾ ಪ್ಲ್ಯಾನ್‌ಗಳ ಪಟ್ಟಿಯಿಂದ 119 ರೂ.ಗಳ ಪ್ಲ್ಯಾನ್ ಅನ್ನು ತೆಗೆದುಹಾಕಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ವರದಿ ಮಾಡಿರುವ ಟೆಲಿಕಾಂ ಟಾಕ್, ಜಿಯೋ ಆಪ್ ಹಾಗೂ ವೆಬ್‌ಸೈಟ್ ಎರಡನ್ನೂ ಪರಿಶೀಲನೆ ನಡೆಸಿದ್ದು, ಈ ಪ್ಲ್ಯಾನ್ ಸ್ಥಗಿತ ಆಗಿರುವ ಬಗ್ಗೆ ವರದಿ ಮಾಡಿದೆ. ಹಾಗಿದ್ರೆ, ಯಾವ ಕಾರಣಕ್ಕೆ ಈ ಪ್ಲ್ಯಾನ್ ತೆಗೆದುಹಾಕಲಾಗಿದೆ?, ಇದರಲ್ಲಿ ಬಳಕೆದಾರರು ಏನೆಲ್ಲಾ ಸೌಲಭ್ಯ ಪಡೆಯುತ್ತಿದ್ದರು ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

119 ರೂ.ಗಳ ಪ್ಲ್ಯಾನ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿದ್ದವು?
ಅಗ್ಗದ ದರ ಹೊದಿರುವ 119 ರೂ.ಗಳ ಯೋಜನೆಯಲ್ಲಿ ಬಳಕೆದಾರರು ನಿತ್ಯವೂ 1.5GB ಡೇಟಾ ಜೊತೆಗೆ ಅನಿಯಮಿತ ಕರೆ ಪ್ರಯೋಜನ ಪಡೆಯುತ್ತಿದ್ದರು. ಅಷ್ಟೇ ಅಲ್ಲ ದಿನಕ್ಕೆ 100 ಎಸ್ಎಮ್‌ಎಸ್ ಸೌಲಭ್ಯದೊಂದಿಗೆ 14 ದಿನಗಳ ಮಾನ್ಯತೆಯನ್ನು ಹೊಂದಿತ್ತು. ಈ ಮೂಲಕ ಹೆಚ್ಚಿನ ಡೇಟಾ ಅವಶ್ಯಕತೆ ಇರುವ ಹಲವಾರು ಬಳಕೆದಾರರು ಈ ಪ್ಲ್ಯಾನ್ ಬಳಕೆ ಮಾಡುತ್ತಿದ್ದರು.
ಯಾವ ಕಾರಣಕ್ಕೆ ಈ ಪ್ಲ್ಯಾನ್ ತೆಗೆದುಹಾಕಲಾಗಿದೆ?: 119 ರೂ.ಗಳ ಪ್ಲ್ಯಾನ್ ಸ್ಥಗಿತಗೊಳಿಸಿದ ನಂತರ, ರಿಲಯನ್ಸ್ ಜಿಯೋ ನೀಡುವ ಅಗ್ಗದ ಯೋಜನೆಯಾಗಿ 149 ರೂ.ಗಳ ಪ್ಲ್ಯಾನ್ ಗುರುತಿಸಿಕೊಳ್ಳಲಿದೆ. ಇನ್ನು ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯವನ್ನು (ARPU) ಹೆಚ್ಚಿಸುವ ಉದ್ದೇಶದಿಂದ ಕಂಪೆನಿಯು ಈ 119 ರೂ.ಗಳ ಪ್ಲ್ಯಾನ್ ಅನ್ನು ತೆಗೆದುಹಾಕಿದೆ ಎಂದು ತಿಳಿದುಬಂದಿದೆ.
ರಿಲಯನ್ಸ್ ಜಿಯೋ 149 ರೂ.ಗಳ ಪ್ಲ್ಯಾನ್‌ನಲ್ಲಿ ಏನೆಲ್ಲಾ ಸೌಲಭ್ಯ ಇದೆ?:
ಈಗ ಜಿಯೋದ ಆರಂಭಿಕ ರೀಚಾರ್ಜ್ ಪ್ಲ್ಯಾನ್ ಆಗಿ 149ರೂ.ಗಳ ಪ್ಲ್ಯಾನ್ ಗುರುತಿಸಿಕೊಳ್ಳಲಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ನಿತ್ಯವೂ 1GB ಡೇಟಾವನ್ನು ಪಡೆದುಕೊಳ್ಳಬಹುದಾಗಿದ್ದು, ಅನಿಯಮಿತ ಕರೆ ಹಾಗೂ ನಿತ್ಯವೂ 100 ಎಸ್‌ಎಮ್‌ಎಸ್ ಗಳ ಪ್ರಯೋಜನವನ್ನು ನೀಡಲಿದೆ.
ಇದರೊಂದಿಗೆ ಈ ಪ್ಲ್ಯಾನ್ 20 ದಿನಗಳ ಮಾನ್ಯತೆ ಹೊಂದಿದ್ದು, ಮೇಲೆ ತಿಳಿಸಿದ ಪ್ರಯೋಜನಗಳ ಜೊತೆಗೆ, ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಇನ್ನೂ ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಜಿಯೋ ಸ್ಯೂಟ್ ಆಪ್‌ಗಳಿಗೆ ಅಧಿಕೃತ ಎಂಟ್ರಿ ಸಹ ಸಿಗಲಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಅನಿಯಮಿತ 5G ಡೇಟಾ ಪ್ರಯೋಜನಗಳನ್ನು ನೀಡಲಾಗುವುದಿಲ್ಲ.
ಈ ನಡುವೆ ಜಿಯೋ ಕೆಲವು ದಿನಗಳ ಹಿಂದೆಯಷ್ಟೆ ಹೊಸ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳೆಂದರೆ 1,099ರೂ. ಮತ್ತು 1,499ರೂ.ಗಳ ಪ್ಲ್ಯಾನ್. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲಿದ್ದಾರೆ. ಈ ಹಿಂದೆ ಕೆಲವು ಜಿಯೋ ಪೋಸ್ಟ್‌ಪೇಯ್ಡ್ ಮತ್ತು ಜಿಯೋ ಫೈಬರ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಪ್ರವೇಶಿಸಬಹುದಾಗಿದ್ದರೂ, ಪ್ರಿಪೇಯ್ಡ್ ಪ್ಲ್ಯಾನ್‌ಗೆ ಇದು ಇರಲಿಲ್ಲ.
ಈ ಹೊಸ ಜಿಯೋ ಪ್ಲಾನ್‌ಗಳು 84 ದಿನಗಳವರೆಗೆ ಮಾನ್ಯತೆ ದಿನ ಹೊಂದಿದ್ದು, ಅನಿಯಮಿತ 5G ಡೇಟಾ, 2GB ದೈನಂದಿನ 4G ಡೇಟಾ ಮಿತಿ ಮತ್ತು ಅನಿಯಮಿತ ವಾಯ್ಸ್ ಕರೆ ಸೌಲಭ್ಯಗಳನ್ನು ಹೊಂದಿವೆ. ಇದರಲ್ಲಿ ಅಂದರೆ 1099 ರೂ.ಗಳ ಪ್ಲ್ಯಾನ್‌ನಲ್ಲಿ ನೆಟ್‌ಫ್ಲಿಕ್ಸ್ ಮೊಬೈಲ್ ಪ್ಲಾನ್ ಅನ್ನು ಬಂಡಲ್ ಮಾಡಲಾಗುತ್ತದೆ. ಆದರೆ 1499 ರೂ.ಗಳ ಪ್ಲ್ಯಾನ್‌ನಲ್ಲಿ ದೊಡ್ಡ್ ಡಿಸ್‌ಪ್ಲೇ ಆಯ್ಕೆಯ ಡಿವೈಸ್‌ಗಳಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಲಾಗುತ್ತದೆ.

ಈಗಾಗಲೇ ಸಾಕಷ್ಟು ಜನರು ಈ ಪ್ಲ್ಯಾನ್ ಮೊರೆ ಹೋಗಿದ್ದಾರೆ. ಇದಿಷ್ಟು ಮಾತ್ರವಲ್ಲದೆ ಈ ಪ್ಲ್ಯಾನ್‌ನಲ್ಲಿ ಇನ್ನೂ ಅನೇಕ ಜಿಯೋ ಸೇವೆಗಳು ಹಾಗೂ ಓಟಿಟಿ ಪ್ಲಾಟ್‌ಫಾರ್ಮ್ ಸೇವೆಗಳನ್ನು ನೀಡಲಾಗುತ್ತಿದ್ದು, ಈ ಮೂಲಕ ಬಳಕೆದಾರರು ಸಾಕು ಎನ್ನುವಷ್ಟು ಮನರಂಜನೆ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








